Virat Kohli: ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಸಾಧ್ಯತೆ; ಎಬಿ ಡಿವಿಲಿಯರ್ಸ್ ಅಚ್ಚರಿ ಹೇಳಿಕೆ
ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಏಕದಿನ ಮಾದರಿಯ ಕ್ರಿಕೆಟ್‌ಗೆ ಗುಡ್ ಬೈ ಹೇಳುತ್ತಾರಾ? ಟೆಸ್ಟ್ ಮತ್ತು ಐಪಿಎಲ್ ಮೇಲೆ ಮಾತ್ರ ಗಮನ ಹರಿಸುತ್ತಾರಾ? ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸಿದ್ದಾರಾ? ಈ ಎಲ್ಲಾ ಪ್ರಶ್ನೆಗಳಿಗೆ ಕಿಂಗ್ ಕೊಹ್ಲಿ ಅವರ ಆಪ್ತ ಸ್ನೇಹಿತ ಎಬಿ ಡಿವಿಲಿಯರ್ಸ್ ಉತ್ತರಿಸಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ 2023 (ICC ODI World Cup 2023) ಮಹಾ ಸಮರ ಭಾರತದಲ್ಲಿ ಅಕ್ಟೋಬರ್ 5 ರಿಂದ ಆರಂಭವಾಗುತ್ತಿದೆ. ವಿಶ್ವಕಪ್ ಗೆಲ್ಲಲೇಬೇಕೆಂಬ ಗುರಿಯೊಂದಿಗೆ ಟೀಂ ಇಂಡಿಯಾ (Team India) ಈ ಬಾರಿ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದೆ.
ಒಟ್ಟು 10 ತಂಡಗಳು ಹಣಾಹಣಿಯ ಭಾಗವಹಿಸುತ್ತಿದ್ದು, ವಿಶ್ವಕಪ್ ಬಳಿಕ ಕೆಲ ಕ್ರಿಕೆಟಿಗರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಾರೆ ಎಂಬ ಮಾತುಗಳು ಕೆಲವು ದಿನಗಳಿಂದ ಕೇಳಿಬರುತ್ತಿದೆ. ಇದರಲ್ಲಿ ಟೀಂ ಇಂಡಿಯಾದ ಕೆಲ ಆಟಗಾರರು ಇರಲಿದ್ದಾರೆ ಎಂಬ ಚರ್ಚೆಗಳ ಬೆನ್ನಲ್ಲೇ ವಿರಾಟ್ ಕೊಹ್ಲಿ (Virat Kohli) ಬಗ್ಗೆ ಅವರ ಆಪ್ತಮಿತ್ರರೊಬ್ಬರು ಹೇಳಿಕೆ ಅಚ್ಚರಿ ಮೂಡಿಸಿದೆ.
ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಏಕದಿನ ಮಾದರಿಯ ಕ್ರಿಕೆಟ್‌ಗೆ ಗುಡ್ ಬೈ ಹೇಳುತ್ತಾರಾ? ಟೆಸ್ಟ್ ಮತ್ತು ಐಪಿಎಲ್ ಮೇಲೆ ಮಾತ್ರ ಗಮನ ಹರಿಸುತ್ತಾರಾ? ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸಿದ್ದಾರಾ? ಈ ಎಲ್ಲಾ ಪ್ರಶ್ನೆಗಳಿಗೆ ಕಿಂಗ್ ಕೊಹ್ಲಿ ಅವರ ಆಪ್ತ ಸ್ನೇಹಿತ ಎಬಿ ಡಿವಿಲಿಯರ್ಸ್ (AB De Villiers) ಉತ್ತರಿಸಿದ್ದಾರೆ.
ಏಕದಿನ ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ನಿವೃತ್ತಿಯಾಗಬಹುದು
34ರ ಹರೆಯದ ವಿರಾಟ್ ಕೊಹ್ಲಿ 2027ರಲ್ಲಿ ನಡೆಯಲಿರುವ ಮತ್ತೊಂದು ಏಕದಿನ ವಿಶ್ವಕಪ್ ಆಡುತ್ತಾರೆ ಎಂದು ನಿರೀಕ್ಷಿಸಲಾಗದು. ಆದರೆ ಈ ವರ್ಷ ವಿಶ್ವಕಪ್ ಮುಗಿದ ಬಳಿಕ ಅವರು ಏಕದಿನ ವಿಶ್ವಕಪ್‌ಗೆ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎಂದು ಎಬಿ ಡಿಲಿವಿಯರ್ಸ್ ಭವಿಷ್ಯ ನುಡಿದಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಎಬಿಡಿ, ಐಸಿಸಿ ಏಕದಿನ ವಿಶ್ವಕಪ್‌ಅನ್ನು ಭಾರತ ತಂಡ ಗೆದ್ದರೇ ವಿರಾಟ್ ಏಕದಿನ ಮಾದರಿಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಬಹುದು. 2027ರ ವಿಶ್ವಕಪ್‌ಗಾಗಿ ದಕ್ಷಿಣ ಆಫ್ರಿಕಾಗೆ ಬರಲು ಅವರು ಇಷ್ಟಪಡುತ್ತಾರೆ ಎಂದು ನನಗೆ ಗೊತ್ತು. ಆದರೆ ಅದನ್ನು ಹೇಳೋದು ಕಷ್ಟ ಎಂದಿದ್ದಾರೆ.
ಇನ್ನೂ ಸಾಕಷ್ಟು ಸಮಯವಿದೆ. ಆದ್ದರಿಂದ ಮೊದಲು 2023ರ ವಿಶ್ವಕಪ್ ಬಗ್ಗೆ ಗಮನ ಹರಿಸೋಣ. ವಿರಾಟ್ ಕೊಹ್ಲಿ ಕೂಡ ಅದನ್ನೇ ಹೇಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಭಾರತ ವಿಶ್ವಕಪ್ ಗೆದ್ದರೆ ಅವರು ನಿವೃತ್ತಿ ಘೋಷಿಸಲು ಇದು ಸರಿಯಾದ ಸಮಯ. ತುಂಬಾ ಧನ್ಯವಾದಗಳು.
ವಿರಾಟ್ ಕೊಹ್ಲಿ ಅವರೇ ಹೀಗೆ ಹೇಳುವ ಸಾಧ್ಯತೆ
ಇನ್ನು ಮುಂದೆ ನಾನು ಟೆಸ್ಟ್ ಕ್ರಿಕೆಟ್ ಮತ್ತು ಸ್ವಲ್ಪ ಐಪಿಎಲ್ ಮಾತ್ರ ಆಡುತ್ತೇನೆ. ನನ್ನ ವೃತ್ತಿ ಜೀವನದ ಕೊನೆಯ ದಿನಗಳನ್ನು ಎಂಜಾಯ್ ಮಾಡುತ್ತೇನೆ. ಕುಟುಂಬದೊಂದಿಗೆ ಸಲ್ಪ ಸಮಯ ಕಳೆಯುತ್ತೇನೆ. ಹೀಗಾಗಿ ನಿಮೆಲ್ಲರಿಗೂ ಗುಡ್ ಬೈ ಹೇಳುತ್ತೇನೆ ಎಂದು ವಿರಾಟ್ ಕೊಹ್ಲಿ ಅವರೇ ಹೇಳಬಹುದೆಂದು ಡಿವಿಲಿಯರ್ಸ್ ತಿಳಿಸಿದ್ದಾರೆ.
ಸದ್ಯ ವಿರಾಟ್ ಸಖತ್ ಫಿಟ್ ಆಗಿದ್ದು, ಮಧ್ಯ ವಿಶ್ರಾಂತಿ ನೀಡುವುದು ಒಳ್ಳೆಯದು ಎಂದು ಎಬಿಡಿ ಹೇಳಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಈವರೆಗೆ 47 ಶತಕಗಳನ್ನು ಸಿಡಿಸಿದ್ದಾರೆ. ಎರಡು ಶತಕಗಳನ್ನು ಬಾರಿಸಿದರೆ ಸಚಿನ್ ಅವರ ದಾಖಲೆಯನ್ನು ಸರಿಗಟ್ಟುತ್ತಾರೆ. ಮುಂಬರುವ ವಿಶ್ವಕಪ್‌ನಲ್ಲಿ ಇದು ಸಾಧ್ಯವಾಗಲಿದೆ ಎಂಬುದು ಅಭಿಮಾನಿಗಳ ಆಶಯ. ಆ ಐತಿಹಾಸಿಕ ಸಂದರ್ಭಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
ಭಾರತವನ್ನ ವಿಶ್ವಕಪ್ ಚಾಂಪಿಯನ್ಸ್ ಮಾಡುವುದೇ ಕೊಹ್ಲಿ ಗುರಿ
ಇದಕ್ಕೂ ಡಿವಿಲಿಯರ್ಸ್ ಪ್ರತಿಕ್ರಿಯಿಸಿದ್ದು, ಅವರು ಆ ಬಗ್ಗೆ ಗಮನಹರಿಸುತ್ತಿಲ್ಲ ಎಂದು ನನಗೆ ತಿಳಿದಿದೆ. ಅದು ಅವರ ಮುಖ್ಯ ಗುರಿಯಲ್ಲ. ಅವರು ತಮ್ಮ ತಂಡಕ್ಕೆ ವಿಶ್ವಕಪ್ ಗೆಲ್ಲಲು ಬಯಸುತ್ತಾರೆ. ಅವರು ಎಲ್ಲಾ ಸ್ವರೂಪಗಳಲ್ಲೂ ಯಶಸ್ವಿಯಾಗಲು ಬಯಸುತ್ತಾರೆ. ಮೈದಾನದಲ್ಲಿ ನಾವು ಅವರಿಂದ ಎಲ್ಲಾ ರೀತಿಯ ಭಾವನೆಗಳನ್ನು ನೋಡುತ್ತೇವೆ. ಇದು ಅವರಿಗೆ ಗೆಲುವು ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತದೆ ಎಂದು ಎಬಿಡಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಕ್ರಿಕೆಟ್ ಅಂಕಿ ಅಂಶಗಳು
ವಿರಾಟ್ ಕೊಹ್ಲಿ ಈವರೆಗೆ 111 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 55.23 ಸ್ಟ್ರೈಕ್ ರೇಟ್‌ನೊಂದಿಗೆ 8,676 ರನ್ ಗಳಿಸಿದ್ದಾರೆ. ಇದರಲ್ಲಿ 2 ದ್ವಿಶತಕ, 29 ಶತಕಗಳು ಸೇರಿವೆ. 280 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 93.79 ಸ್ಟ್ರೈಕ್ ರೇಟ್‌ನೊಂದಿಗೆ 13,027 ರನ್ ಸಿಡಿಸಿದ್ದಾರೆ. ಇದರಲ್ಲಿ 47 ಶತಕಗಳು ಸೇರಿವೆ. 115 ಟಿ20 ಪಂದ್ಯಗಳಿಂದ 137.97 ಸ್ಟ್ರೈಕ್ ರೇಟ್‌ನೊಂದಿಗೆ 1 ಶತಕ ಸೇರಿ 4,008 ರನ್ ಗಳಿಸಿದ್ದಾರೆ. ಇತ್ತ ಐಪಿಎಲ್‌ನಲ್ಲಿ 237 ಪಂದ್ಯಗಳನ್ನು ಆಡಿದ್ದು, 7 ಶತಕಗಳೊಂದಿಗೆ 130.02 ಸ್ಟ್ರೈಕ್ ರೇಟ್‌ನೊಂದಿಗೆ 7,263 ರನ್ ಸಿಡಿಸಿದ್ದಾರೆ.