Yashasvi Jaiswal: ಆಸ್ಟ್ರೇಲಿಯಾ ನೆಲದಲ್ಲಿ ಅಮೋಘ ಶತಕದ ದಾಖಲೆ ಬರೆದ ಯಶಸ್ವಿ ಜೈಸ್ವಾಲ್; ಟೆಸ್ಟ್ ನಲ್ಲಿ 1500 ರನ್ ಪೂರೈಕೆ
ಕನ್ನಡ ಸುದ್ದಿ  /  ಕ್ರಿಕೆಟ್  /  Yashasvi Jaiswal: ಆಸ್ಟ್ರೇಲಿಯಾ ನೆಲದಲ್ಲಿ ಅಮೋಘ ಶತಕದ ದಾಖಲೆ ಬರೆದ ಯಶಸ್ವಿ ಜೈಸ್ವಾಲ್; ಟೆಸ್ಟ್ ನಲ್ಲಿ 1500 ರನ್ ಪೂರೈಕೆ

Yashasvi Jaiswal: ಆಸ್ಟ್ರೇಲಿಯಾ ನೆಲದಲ್ಲಿ ಅಮೋಘ ಶತಕದ ದಾಖಲೆ ಬರೆದ ಯಶಸ್ವಿ ಜೈಸ್ವಾಲ್; ಟೆಸ್ಟ್ ನಲ್ಲಿ 1500 ರನ್ ಪೂರೈಕೆ

ಆಸ್ಟ್ರೇಲಿಯಾ ವಿರುದ್ಧದ ಪರ್ತ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ 161 ರನ್ ಗಳ ಅಮೋಘ ಶತಕ ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ 1500 ರನ್ ಗಳನ್ನು ಪೂರೈಸಿದ್ದಾರೆ. ಯಶಸ್ವಿ ಜೈಸ್ವಾಲ್ ಅವರ ದಾಖಲೆಗಳ ವಿವರ ಇಲ್ಲಿದೆ.

ಆಸ್ಟ್ರೇಲಿಯಾ ವಿರುದ್ಧ ಪರ್ತ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 161 ರನ್ ಗಳ ಶತಕ ಬಾರಿಸಿ ಸಂಭ್ರಮಿಸಿದ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್  (ಫೋಟೊ-AFP)
ಆಸ್ಟ್ರೇಲಿಯಾ ವಿರುದ್ಧ ಪರ್ತ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 161 ರನ್ ಗಳ ಶತಕ ಬಾರಿಸಿ ಸಂಭ್ರಮಿಸಿದ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (ಫೋಟೊ-AFP)

ಪರ್ತ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾದ ಇಂಡಿಯಾದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ 161 ರನ್ ಅದ್ಭುತ ಶತಕವನ್ನು ಬಾರಿಸಿದ್ದಾರೆ. ಇದರೊಂದಿಗೆ ಜೈಸ್ವಾಲ್ ವಿಶೇಷ ಪಟ್ಟಿಯಲ್ಲಿ ಗೌತಮ್ ಗಂಭೀರ್ ಮತ್ತು ಮುರಳಿ ವಿಜಯ್ ಅವರನ್ನು ಸರಿಗಟ್ಟಿದ್ದಾರೆ.

ಯಶಸ್ವಿ ಜೈಸ್ವಾಲ್ ಆಸ್ಟ್ರೇಲಿಯಾದಲ್ಲಿ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿ ಮೆಚ್ಚುಗೆಯ ಪ್ರದರ್ಶನ ನೀಡಿದ್ದಾರೆ. ಕಠಿಣ ಪಿಚ್ ಹೊಂದಿರುವ ಪರ್ತ್ ನಲ್ಲಿ ಶತಕ ಬಾರಿಸಿ ತಮ್ಮ ಆಟದ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟಾಗಿದ್ದ ಜೈಸ್ವಾಲ್ ಕೇವಲ್ 24 ಗಂಟೆಗಳಲ್ಲಿ ಬಿಗ್ ಕಂಬ್ಯಾಕ್ ಮಾಡಿದರು. ಈ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದ ನಾಲ್ಕನೇ ಶತಕವನ್ನು ಪೂರೈಸಿದರು.

ಮೊದಲ ಇನ್ನಿಂಗ್ಸ್ ನಲ್ಲಿ ಆದ ತಪ್ಪನ್ನು ತಿದ್ದಿಕೊಂಡು ಎರಡನೇ ಇನ್ನಿಂಗ್ಸ್ ನಲ್ಲಿ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸುತ್ತಾ ಕ್ರೀಸ್ ನಲ್ಲಿ ಭದ್ರವಾಗಿ ನಿಂತು ದಾಖಲೆ ಬರೆದರು. ತಮ್ಮ ಪ್ರತಿಯೊಂದು ಶಾಟ್ ಗಳನ್ನು ವರ್ಕೌಟ್ ಆಸೀಸ್ ಬೌಲರ್ ಗಳ ಮೇಲೆ ಪ್ರಯೋಗಿಸಿ ಯಶಸ್ಸು ಕಂಡುಕೊಂಡರು.

ಆಸ್ಟ್ರೇಲಿಯಾ ಪರ್ತ್ ಪಿಚ್ ತುಂಬಾ ಕಠಿಣವಾಗಿರುತ್ತದೆ. ಇಲ್ಲಿ ಬ್ಯಾಟಿಂಗ್ ಮಾಡುವುದೇ ದೊಡ್ಡ ಸವಾಲಾಗಿರುತ್ತದೆ. ಇಂತದ ಸಂದರ್ಭದಲ್ಲಿ ಜೈಸ್ವಾಲ್ ತಮ್ಮ ಬ್ಯಾಟಿಂಗ್ ನಲ್ಲಿ ರನ್ ಮಳೆ ಹರಿಸಿದ್ದಾರೆ. 297 ಎಸೆತಗಳನ್ನು ಎದುರಿಸಿ 15 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಸಹಿತ 54.21 ಸ್ಟ್ರೈಕ್ ರೇಟ್ ನಲ್ಲಿ 161 ರನ್ ಚಚ್ಚಿದರು. ಈ ಶತಕದ ಮೂಲಕ ಇತಿಹಾಸವನ್ನು ನಿರ್ಮಿಸಿದರು. ಎಂಎಲ್ ಜೈಸಿಂಹ ಮತ್ತು ಸುನೀಲ್ ಗವಾಸ್ಕರ್ ನಂತರ ಇಲ್ಲಿ ಮೊದಲ ಟೆಸ್ಟ್ ನಲ್ಲಿ ಶತಕ ಸಿಡಿಸಿದ ಮೂರನೇ ಭಾರತೀಯ ಎನಿಸಿಕೊಂಡರು. ಜೊತೆಗೆ ಆಸ್ಟ್ರೇಲಿಯಾ ನೆಲದಲ್ಲಿ ಶತಕ ಸಿಡಿಸಿದ 4ನೇ ಕಿರಿಯ ಭಾರತೀಯ ಕ್ರಿಕೆಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಆಸ್ಟ್ರೇಲಿಯಾ ನೆಲದಲ್ಲಿ ಗಳಿಸಿದ ವೃತ್ತಿಜೀವನದ ಮೊದಲ ಶತಕ ಇದಾಗಿದ್ದು, ವಿದೇಶಿ ನೆಲದಲ್ಲಿ ಎರಡನೇ ಶತಕ ಎನಿಸಿದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ನಲ್ಲಿ ಶತಕ ದಾಖಲಿಸಿದ್ದರು.

ಟೆಸ್ಟ್ ಕ್ರಿಕೆಟ್ ನಲ್ಲಿ 1500 ರನ್ ಪೂರೈಸಿದ ಯಶಸ್ವಿ ಜೈಸ್ವಾಲ್

ಆಸ್ಟ್ರೇಲಿಯಾ ಪರ್ತ್ ನಲ್ಲಿನ ಟೆಸ್ಟ್ ನಲ್ಲಿ ಆಸೀಸ್ ಬೌಲರ್ ಗಳನ್ನು ದಿಟ್ಟವಾಗಿ ಎದುರಿಸಿ ಎರಡನೇ ಇನ್ನಿಂಗ್ಸ್ ನಲ್ಲಿ 161 ರನ್ ಗಳ ಶತಕ ಬಾರಿಸಿದ ಯಶಸ್ವಿ ಜೈಸ್ವಾಲ್ ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ 1500 ರನ್ ಪೂರೈಸಿದ್ದಾರೆ. ಆಸೀಸ್ ವಿರುದ್ಧದ ಪರ್ತ್ ಟೆಸ್ಟ್ ಪಂದ್ಯ ಸೇರಿದಂತೆ ಈವರೆಗೆ ಒಟ್ಟು 15 ಪಂದ್ಯಗಳು ಹಾಗೂ 28 ಇನ್ನಿಂಗ್ಸ್ ಗಳಿಂದ 1568 ರನ್ ಗಳಿಸಿದ್ದಾರೆ. ವೈಯಕ್ಕಿತಕ ಗರಿಷ್ಠ ಮೊತ್ತ ಔಟಾಗದೆ 214 ರನ್. ಇದರಲ್ಲಿ 8 ಅರ್ಧ ಶತಕಗಳು ಹಾಗೂ 4 ಶತಕಗಳು ಸೇರಿವೆ.

ಬ್ರೆಂಡನ್ ಮೆಕಲಮ್ ದಾಖಲೆ ಮುರಿದ ಟೀಂ ಇಂಡಿಯಾದ ಆಟಗಾರ

ಟೆಸ್ಟ್ ಕ್ರಿಕೆಟ್ ನಲ್ಲಿ ಶತಕ ಬಾರಿಸಿದಾಗಲೆಲ್ಲಾ ಎರಡು ದ್ವಿಶತಕಗಳು ಸೇರಿದಂತೆ 150 ರನ್ ಗಳ ಗಡಿಯನ್ನು ದಾಟಿದ್ದಾರೆ. ಇದು ಯಶಸ್ವಿ ಎಷ್ಟು ಸ್ಥಿರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಪರ್ತ್ ಟೆಸ್ಟ್ ನಲ್ಲಿ 3 ಸಿಕ್ಸರ್ ಬಾರಿಸಿದ್ದಾರೆ. ಇದರೊಂದಿಗೆ ಕ್ಯಾಲೆಂಡರ್ ವರ್ಷದಲ್ಲಿ ಟೆಸ್ಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳನ್ನು ಬಾರಿಸಿದ ವಿಶ್ವ ದಾಖಲೆಯನ್ನು ನಿರ್ಮಿಸಿದರು. ಈ ಹಿಂದೆ 2014ರಲ್ಲಿ ಬ್ರೆಂಡನ್ ಮೆಕಲಮ್ 33 ಸಿಕ್ಸರ್ ಬಾರಿಸಿದ್ದರು. ಯಶಸ್ವಿ ಈಗ 2024 ರಲ್ಲಿ ಅವರನ್ನು ಮೀರಿಸಿದ್ದಾರೆ.

Whats_app_banner