ಐಪಿಎಲ್ ಹರಾಜು: ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದ ಆಟಗಾರರ ಸಂಪೂರ್ಣ ಪಟ್ಟಿ, ಹೀಗಿದೆ ಸಿಎಸ್‌ಕೆ ತಂಡ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ ಹರಾಜು: ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದ ಆಟಗಾರರ ಸಂಪೂರ್ಣ ಪಟ್ಟಿ, ಹೀಗಿದೆ ಸಿಎಸ್‌ಕೆ ತಂಡ

ಐಪಿಎಲ್ ಹರಾಜು: ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದ ಆಟಗಾರರ ಸಂಪೂರ್ಣ ಪಟ್ಟಿ, ಹೀಗಿದೆ ಸಿಎಸ್‌ಕೆ ತಂಡ

CSK Full Player list: ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಸೇರಿದಂತೆ ಕೆಲವು ಬಲಿಷ್ಠ ಆಟಗಾರರನ್ನು ಸಿಎಸ್‌ಕೆ ತಂಡ ಖರೀದಿಸಿದೆ. ಐಪಿಎಲ್‌ 2025ರ ಮೆಗಾ ಹರಾಜಿನಲ್ಲಿ ತಂಡ ಬಿಡ್‌ ಮಾಡಿದ ಆಟಗಾರರ ಪಟ್ಟಿ ಇಲ್ಲಿದೆ. ಇದರೊಂದಿಗೆ ರಿಟೈನ್‌ ಆದ ಆಟಗಾರರ ವಿವರವೂ ಇದೆ.

ಐಪಿಎಲ್ ಹರಾಜು: ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದ ಆಟಗಾರರ ಸಂಪೂರ್ಣ ಪಟ್ಟಿ
ಐಪಿಎಲ್ ಹರಾಜು: ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದ ಆಟಗಾರರ ಸಂಪೂರ್ಣ ಪಟ್ಟಿ (PTI)

ಸೌದಿ ಅರೇಬಿಯಾದ ಜೆದ್ದಾದಲ್ಲಿ ಪೂರ್ಣಗೊಂಡ ಐಪಿಎಲ್ 2025ರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಲವು ಆಟಗಾರರನ್ನು ಖರೀದಿ ಮಾಡಿದೆ. ಮೊದಲ ದಿನದ ಹರಾಜು ಪ್ರಕ್ರಿಯೆಯ ಅಂತ್ಯಕ್ಕೆ ತಂಡವು ಬಲಿಷ್ಠ ಆಟಗಾರರನ್ನು ತೆಕ್ಕೆಗೆ ಹಾಕಿಕೊಂಡಿದ್ದು, ಎರಡನೇ ದಿನದಾಟದಲ್ಲೂ ಇನ್ನಷ್ಟು ಆಟಗಾರರನ್ನು ಖರೀದಿ ಮಾಡಿ ಯೆಲ್ಲೋ ಬಳಗವನ್ನು ಮತ್ತಷ್ಟು ಬಲಿಷ್ಠವಾಗಿಸಿದೆ. ಮೊದಲ ದಿನವೇ ಅನುಭವಿ ಹಾಗೂ ಮಾಜಿ ಸ್ಪಿನ್ನರ್‌ ಆರ್ ಅಶ್ವಿನ್ ಅವರನ್ನು 9.75 ಕೋಟಿ ರೂ.ಗೆ ತಂಡ ಮರಳಿ ಖರೀದಿಸಿತ್ತು. ಇದೇ ವೇಳೆ ಕಳೆದ ಬಾರಿ ತಂಡದಲ್ಲಿದ್ದ ಡಿವೊನ್ ಕಾನ್ವೇ ಅವರನ್ನು 6.25 ಕೋಟಿಗೆ ಬಳಗ ಸೇರಿಸಿಕೊಂಡರೆ, ರಚಿನ್ ರವೀಂದ್ರ ಕೂಡಾ ಆರ್‌ಟಿಎಂ ಮೂಲಕ ಮತ್ತೆ ತಂಡಕ್ಕೆ ಬಂದರು.

ವಿಕೆಟ್ ಕೀಪರ್ ಹಾಗೂ ಬ್ಯಾಟರ್ ರಾಹುಲ್ ತ್ರಿಪಾಠಿ ಅವರನ್ನು 3.4 ಕೋಟಿ ರೂಪಾಯಿಗೆ ಖರೀದಿಸಿತು. ಉಳಿದಂತೆ ನೂರ್ ಅಹ್ಮದ್, ಖಲೀಲ್ ಅಹ್ಮದ್, ವಿಜಯ್ ಶಂಕರ್ ಕೂಡಾ ಯೆಲ್ಲೋ ಆರ್ಮಿ ಸೇರಿಕೊಂಡರು. ಆರ್‌ ಅಶ್ವಿನ್ ಎರಡನೇ ಅವಧಿಗೆ ಸಿಎಸ್‌ಕೆ ಪರ ಆಡುತ್ತಿದ್ದಾರೆ. 2009 ತಂಡಕ್ಕೆ ಸೇರಿಕೊಂಡ ಅವರು, 2010 ಮತ್ತು 2011ರಲ್ಲಿ ಐಪಿಎಲ್‌ ಪ್ರಶಸ್ತಿ ಗೆದ್ದ ತಂಡದ ಭಾಗವಾಗಿದ್ದರು. ಎರಡನೇ ದಿನದ ಹರಾಜಿನಲ್ಲಿ ಸ್ಯಾಮ್‌ ಕರನ್‌, ದೀಪಕ್‌ ಹೂಡಾ, ನಾಥನ್ ಎಲ್ಲಿಸ್ ಸೇರಿದಂತೆ ಹಲವು ಆಟಗಾರರನ್ನು ಖರೀದಿಸಿದೆ,

ಐಪಿಎಲ್‌ 2025 ಹರಾಜಿನಲ್ಲಿ ಸಿಎಸ್‌ಕೆ ಖರೀದಿಸಿದ ಆಟಗಾರರ ಪಟ್ಟಿ

  • ಡೆವೊನ್ ಕಾನ್ವೇ (6.25 ಕೋಟಿ)
  • ರಾಹುಲ್ ತ್ರಿಪಾಠಿ (3.40 ಕೋಟಿ)
  • ರಚಿನ್ ರವೀಂದ್ರ (4 ಕೋಟಿ)
  • ಆರ್ ಅಶ್ವಿನ್ (9.75 ಕೋಟಿ ರೂ.)
  • ನೂರ್ ಅಹ್ಮದ್ (10 ಕೋಟಿ)
  • ಖಲೀಲ್ ಅಹ್ಮದ್ (4.8 ಕೋಟಿ)
  • ವಿಜಯ್ ಶಂಕರ್ (1.2 ಕೋಟಿ)
  • ಸ್ಯಾಮ್‌ ಕರನ್‌ (2.40 ಕೋಟಿ)
  • ಶೇಕ್ ರಶೀದ್ (30 ಲಕ್ಷ ರೂ.)
  • ಅನ್ಶುಲ್ ಕಾಂಬೋಜ್ (3.40 ಕೋಟಿ ರೂ.)
  • ಮುಖೇಶ್ ಚೌಧರಿ (30 ಲಕ್ಷ ರೂ.)
  • ದೀಪಕ್ ಹೂಡಾ (1.70 ಕೋಟಿ ರೂ.)
  • ಗುರ್ಜಪ್ನೀತ್ ಸಿಂಗ್ (2.20 ಕೋಟಿ ರೂ.)
  • ನಾಥನ್ ಎಲ್ಲಿಸ್ (ರೂ. 2 ಕೋಟಿ)
  • ಜೇಮಿ ಓವರ್ಟನ್ (ರೂ. 1.50 ಕೋಟಿ)
  • ಕಮಲೇಶ್ ನಾಗರಕೋಟಿ (30 ಲಕ್ಷ ರೂ.)
  • ರಾಮಕೃಷ್ಣ ಘೋಷ್ (30 ಲಕ್ಷ ರೂ.)
  • ಶ್ರೇಯಸ್ ಗೋಪಾಲ್ (30 ಲಕ್ಷ ರೂ.)
  • ವಂಶ್ ಬೇಡಿ (55 ಲಕ್ಷ ರೂ.)
  • ಅಂದ್ರೆ ಸಿದ್ದಾರ್ಥ್ (30 ಲಕ್ಷ ರೂ.).

ಇದನ್ನೂ ಓದಿ | ಯಪ್ಪಾ, ಚಹಲ್​ಗಿಂತಲೂ ಕಡಿಮೆ ಮೊತ್ತ ಪಡೆದ ಕೆಎಲ್ ರಾಹುಲ್, ಸ್ಟಾರ್​ ಆಟಗಾರರ ಖರೀದಿಸದೆ ಟ್ರೋಲ್ ಆಗ್ತಿದೆ RCB

ಹರಾಜಿಗೂ ಮುನ್ನ ತಂಡ ಉಳಿಸಿಕೊಂಡಿದ್ದ ಆಟಗಾರರು

  • ಋತುರಾಜ್ ಗಾಯಕ್ವಾಡ್ (18 ಕೋಟಿ)
  • ರವೀಂದ್ರ ಜಡೇಜಾ (18 ಕೋಟಿ)
  • ಮಥೀಶಾ ಪತಿರಾನಾ (13 ಕೋಟಿ)
  • ಶಿವಂ ದುಬೆ (13 ಕೋಟಿ)
  • ಎಂಎಸ್ ಧೋನಿ (4 ಕೋಟಿ)

ಐಪಿಎಲ್‌ ಹರಾಜು ಲೈವ್‌ ಅಪ್ಡೇಟ್‌ಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ | ಐಪಿಎಲ್‌ 2025 ಹರಾಜಿನಲ್ಲಿ ಮಾರಾಟವಾದ ಮತ್ತು ಅನ್‌ಸೋಲ್ಡ್ ಆಟಗಾರರ ಸಂಪೂರ್ಣ ಪಟ್ಟಿ

Whats_app_banner