ಕನ್ನಡ ಸುದ್ದಿ  /  ಕ್ರಿಕೆಟ್  /  ಕೆಕೆಆರ್​ Vs ಪಿಬಿಕೆಎಸ್ ಪಂದ್ಯದಲ್ಲಿ ಬ್ಯಾಟರ್​ಗಳ ಆರ್ಭಟ; ಹಲವು ವಿಶ್ವದಾಖಲೆಗಳು ದಾಖಲು, ಇಲ್ಲಿದೆ ನೋಡಿ ಪಟ್ಟಿ

ಕೆಕೆಆರ್​ vs ಪಿಬಿಕೆಎಸ್ ಪಂದ್ಯದಲ್ಲಿ ಬ್ಯಾಟರ್​ಗಳ ಆರ್ಭಟ; ಹಲವು ವಿಶ್ವದಾಖಲೆಗಳು ದಾಖಲು, ಇಲ್ಲಿದೆ ನೋಡಿ ಪಟ್ಟಿ

KKR vs PBKS World Records : ಐಪಿಎಲ್​ನ 42ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವು ಹಲವು ವಿಶ್ವದಾಖಲೆಗಳಿಗೆ ಸಾಕ್ಷಿಯಾಗಿದೆ. ಅವುಗಳ ಪಟ್ಟಿಯನ್ನು ಈ ಮುಂದೆ ನೋಡೋಣ.

ಕೆಕೆಆರ್​ vs ಪಿಬಿಕೆಎಸ್ ಪಂದ್ಯದಲ್ಲಿ ಬ್ಯಾಟರ್​ಗಳ ಆರ್ಭಟ; ಹಲವು ವಿಶ್ವದಾಖಲೆಗಳು ದಾಖಲು, ಇಲ್ಲಿದೆ ನೋಡಿ ಪಟ್ಟಿ
ಕೆಕೆಆರ್​ vs ಪಿಬಿಕೆಎಸ್ ಪಂದ್ಯದಲ್ಲಿ ಬ್ಯಾಟರ್​ಗಳ ಆರ್ಭಟ; ಹಲವು ವಿಶ್ವದಾಖಲೆಗಳು ದಾಖಲು, ಇಲ್ಲಿದೆ ನೋಡಿ ಪಟ್ಟಿ

ಸೀಸನ್​-17ರ ಐಪಿಎಲ್​ನ 42ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ಪಂಜಾಬ್​ ಕಿಂಗ್ಸ್​ ದಾಖಲೆಯ 262 ರನ್​ಗಳ ಗುರಿಯನ್ನು ಬೆನ್ನಟ್ಟಿ ಗೆಲ್ಲುವ ಮೂಲಕ ಐಪಿಎಲ್ ಮತ್ತು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ಚರಿತ್ರೆ ಸೃಷ್ಟಿಸಿದೆ. ಕೋಲ್ಕತ್ತಾದ ನೈಟ್​ ರೈಡರ್ಸ್ ಮೊದಲು ಬ್ಯಾಟಿಂಗ್ ನಡೆಸಿ 20 ಓವರ್​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 261 ರನ್ ಕಲೆ ಹಾಕಿತ್ತು. ಈ ಗುರಿ ಚೇಸ್ ಮಾಡಿದ ಪಂಜಾಬ್ 18.4 ಓವರ್​​ಗಳಲ್ಲಿ ಗೆದ್ದು ಇತಿಹಾಸ ನಿರ್ಮಿಸಿತು. ಆ ಮೂಲಕ ಹಲವು ವಿಶ್ವದಾಖಲೆಗಳು ನಿರ್ಮಾಣಗೊಂಡಿವೆ.

ಟ್ರೆಂಡಿಂಗ್​ ಸುದ್ದಿ

ಕೆಕೆಆರ್​ ಪರ ಸುನಿಲ್ ನರೇನ್ 71 ಮತ್ತು ಫಿಲ್ ಸಾಲ್ಟ್ 75 ರನ್ ಬಾರಿಸಿದರೆ, ಪಂಜಾಬ್ ಪರ ಜಾನಿ ಬೈರ್​ಸ್ಟೋ 108*, ಶಶಾಂಕ್ ಸಿಂಗ್ 68* ಮತ್ತು ಪ್ರಭುಸಿಮ್ರಾನ್ ಸಿಂಗ್ 54 ರನ್ ಗಳಿಸಿ ಎದುರಾಳಿ ಬೌಲರ್​​ಗಳ ಮೇಲೆ ದಂಡಯಾತ್ರೆ ನಡೆಸಿದರು. ಎರಡೂ ತಂಡಗಳ ಪರ ಆರಂಭಿಕರಿಬ್ಬರು ಅರ್ಧಶತಕ ಸಿಡಿಸಿರುವ ಘಟನೆ ಐಪಿಎಲ್​​ನಲ್ಲಿ ಇದೇ ಮೊದಲ ಬಾರಿಗೆ. ಪಂದ್ಯದಲ್ಲಿ ದಾಖಲಾದ ವಿಶ್ವದಾಖಲೆಗಳ ಪಟ್ಟಿ ಇಲ್ಲಿದೆ.

ಟಿ20 ಇತಿಹಾಸದ ರನ್ ಚೇಸ್‌ನಲ್ಲಿ ದಾಖಲಾದ ಅತ್ಯಧಿಕ ಸ್ಕೋರ್‌

262/2 - ಪಿಬಿಕೆಎಸ್ vs ಕೆಕೆಆರ್​​, ಕೋಲ್ಕತ್ತಾ, ಐಪಿಎಲ್ 2024 (ಹೊಸ ಸೇರ್ಪಡೆ)

262/7 - ಆರ್​​ಸಿಬಿ vs ಎಸ್​​ಆರ್​​ಹೆಚ್, ಬೆಂಗಳೂರು, ಐಪಿಎಲ್ 2024

259/4 - ಸೌತ್ ಆಫ್ರಿಕಾ vs ವೆಸ್ಟ್ ಇಂಡೀಸ್, ಸೆಂಚೂರಿಯನ್, 2023

254/3 - ಮಿಡಲ್​ಸೆಕ್ಸ್ vs ಸರ್ರೆ, ದಿ ಓವಲ್​, ಟಿ20 ಬ್ಲಾಸ್ಟ್ 2023

253/8 - ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಮುಲ್ತಾನ್ ಸುಲ್ತಾನ್, ರಾವಲ್ಪಿಂಡಿ, ಪಿಎಸ್​ಎಲ್​ 2023

ಐಪಿಎಲ್ ಇನ್ನಿಂಗ್ಸ್‌ನಲ್ಲಿ ದಾಖಲಾದ ಅತಿ ಹೆಚ್ಚು ಸಿಕ್ಸರ್‌ಗಳು

24 - ಪಿಬಿಕೆಎಸ್​ vs ಕೆಕೆಆರ್, ಕೋಲ್ಕತ್ತಾ, 2024 (ಹೊಸ ಸೇರ್ಪಡೆ)

22 - ಎಸ್​​ಆರ್​ಹೆಚ್ vs ಆರ್​ಸಿಬಿ, ಬೆಂಗಳೂರು, 2024

22 - ಎಸ್​ಆರ್​ಹೆಚ್ vs ಡಿಸಿ, ದೆಹಲಿ, 2024

21 - ಆರ್​ಸಿಬಿ vs ಪಿಡಬ್ಲ್ಯುಐ, ಬೆಂಗಳೂರು, 2013

ಏಷ್ಯನ್ ಗೇಮ್ಸ್​​ನಲ್ಲಿ ನೇಪಾಳ ತಂಡವು ಮಂಗೋಲಿಯಾ ವಿರುದ್ಧ 314 ರನ್ ಬಾರಿಸಿದ್ದ ಅವಧಿಯಲ್ಲಿ 26 ಸಿಕ್ಸರ್​ ಸಿಡಿಸಿ ದಾಖಲೆ ಬರೆದಿದೆ. 

ಪುರುಷರ ಟಿ20 ಪಂದ್ಯವೊಂದರಲ್ಲಿ ಸಿಡಿಸಿದ ಅತ್ಯಧಿಕ ಸಿಕ್ಸರ್ಸ್

42 - ಕೆಕೆಆರ್ vs ಪಿಬಿಕೆಎಸ್​, ಕೋಲ್ಕತ್ತಾ, ಐಪಿಎಲ್ 2024 (ಹೊಸ ಸೇರ್ಪಡೆ)

38 - ಎಸ್​​ಆರ್​ಹೆಚ್ vs ಎಂಐ, ಹೈದರಾಬಾದ್, ಐಪಿಎಲ್ 2024

38 - ಆರ್​​ಸಿಬಿ vs ಎಸ್​​ಆರ್​ಹೆಚ್ , ಬೆಂಗಳೂರು, ಐಪಿಎಲ್ 2024

37 - ಬಾಲ್ಖ್ ಲೆಜೆಂಡ್ಸ್ vs ಕಾಬೂಲ್ ಜ್ವಾನನ್, ಶಾರ್ಜಾ, ಎಪಿಎಲ್ 2018/19

37 - ಎಸ್​​ಕೆಎನ್​​ಪಿ vs ಜೆಟಿ, ಬಾಸ್ಸೆಟೆರೆ, ಸಿಪಿಎಲ್ 2019

ಐಪಿಎಲ್ ಪಂದ್ಯವೊಂದರಲ್ಲಿ ದಾಖಲಾದ ಅತ್ಯಧಿಕ ಮೊತ್ತ

549 - ಆರ್​ಸಿಬಿ vs ಎಸ್​​ಆರ್​ಹೆಚ್, ಬೆಂಗಳೂರು, 2024 

523 - ಎಸ್​​ಆರ್​ಹೆಚ್ vs ಎಂಐ, ಹೈದರಾಬಾದ್, 2024

523 - ಕೆಕೆಆರ್​ vs ಪಿಬಿಕೆಎಸ್, ಕೋಲ್ಕತ್ತಾ, 2024 (ಹೊಸ ಸೇರ್ಪಡೆ)

469 - ಸಿಎಸ್​ಕೆ vs ಆರ್​ಆರ್​​, ಚೆನ್ನೈ, 2010

465 - ಡಿಸಿ vs ಎಸ್​​ಆರ್​ಹೆಚ್, ದೆಹಲಿ, 2024

ಐಪಿಎಲ್‌ನಲ್ಲಿ ದಾಖಲಾದ ಯಶಸ್ವಿ ಗರಿಷ್ಠ ಚೇಸಿಂಗ್

262 - ಪಿಬಿಕೆಎಸ್ vs ಕೆಕೆಆರ್​, ಕೋಲ್ಕತ್ತಾ, 2024 (ಹೊಸ ಸೇರ್ಪಡೆ)

224 - ಆರ್​​ಆರ್​​ vs ಪಿಬಿಕೆಎಸ್, ಶಾರ್ಜಾ, 2020

224 - ಆರ್​​​ಆರ್ vs ಕೆಕೆಆರ್​, ಕೋಲ್ಕತ್ತಾ, 2024

219 - ಎಂಐ vs ಸಿಎಸ್​ಕೆ, ದೆಹಲಿ, 2021

ಪುರುಷರ ಟಿ20 ಕ್ರಿಕೆಟ್‌ನಲ್ಲಿ ದಾಖಲಾದ ಗರಿಷ್ಠ ಚೇಸಿಂಗ್

262 - ಪಂಜಾಬ್ ಕಿಂಗ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್, ಕೋಲ್ಕತ್ತಾ, ಐಪಿಎಲ್ 2024 (ಹೊಸ ಸೇರ್ಪಡೆ)

259 - ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್ ಇಂಡೀಸ್, ಸೆಂಚುರಿಯನ್, 2023

253 - ಮಿಡಲ್‌ಸೆಕ್ಸ್ ವಿರುದ್ಧ ಸರ್ರೆ, ದಿ ಓವಲ್, T20 ಬ್ಲಾಸ್ಟ್

ಆಸ್ಟ್ರೇಲಿಯಾ ವಿರುದ್ಧ 24423 , ಆಕ್ಲೆಂಡ್, 2018

243 - ಬಲ್ಗೇರಿಯಾ vs ಸೆರ್ಬಿಯಾ, ಸೋಫಿಯಾ, 2022

243 - ಮುಲ್ತಾನ್ ಸುಲ್ತಾನ್ಸ್ ವಿರುದ್ಧ ಪೇಶಾವರ್ ಝಲ್ಮಿ, ರಾವಲ್ಪಿಂಡಿ, PSL 2023

ಮತ್ತಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

IPL_Entry_Point