ಕನ್ನಡ ಸುದ್ದಿ  /  ಕ್ರಿಕೆಟ್  /  ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್ ತಂಡ ಘೋಷಣೆ; ಹೆನ್ರಿಚ್ ಕ್ಲಾಸೆನ್ ಸೇರಿ ಹಿಟ್ಟರ್​​ಗಳಿಗೇ ಮಣೆ, ಟೆಂಬಾ ಬವುಮಾಗಿಲ್ಲ ಸ್ಥಾನ!

ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್ ತಂಡ ಘೋಷಣೆ; ಹೆನ್ರಿಚ್ ಕ್ಲಾಸೆನ್ ಸೇರಿ ಹಿಟ್ಟರ್​​ಗಳಿಗೇ ಮಣೆ, ಟೆಂಬಾ ಬವುಮಾಗಿಲ್ಲ ಸ್ಥಾನ!

South Africa announce T20 World Cup 2024 squad : 2024ರ ಟಿ20 ವಿಶ್ವಕಪ್ ಟೂರ್ನಿಗೆ ಸೌತ್ ಆಫ್ರಿಕಾ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಏಡನ್ ಮಾರ್ಕ್ರಮ್ ನಾಯಕನಾಗಿದ್ದು, ಟೆಸ್ಟ್ ಮತ್ತು ಏಕದಿನ ತಂಡದ ಕ್ಯಾಪ್ಟನ್ ಟೆಂಬಾ ಬವುಮಾ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ.

ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್ ತಂಡ ಘೋಷಣೆ; ಹೆನ್ರಿಚ್ ಕ್ಲಾಸೆನ್ ಸೇರಿ ಹಿಟ್ಟರ್​​ಗಳಿಗೇ ಮಣೆ, ಟೆಂಬಾ ಬವುಮಾಗಿಲ್ಲ ಸ್ಥಾನ!
ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್ ತಂಡ ಘೋಷಣೆ; ಹೆನ್ರಿಚ್ ಕ್ಲಾಸೆನ್ ಸೇರಿ ಹಿಟ್ಟರ್​​ಗಳಿಗೇ ಮಣೆ, ಟೆಂಬಾ ಬವುಮಾಗಿಲ್ಲ ಸ್ಥಾನ!

ಐಸಿಸಿ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ 2024ರ ಟೂರ್ನಿಗೆ (T20 World Cup 2024) ದಕ್ಷಿಣ ಆಫ್ರಿಕಾ (South Africa Cricket Team) ತನ್ನ 15 ಸದಸ್ಯರ ಬಲಿಷ್ಠ ತಂಡವನ್ನು ಘೋಷಿಸಿದೆ. ಇದೇ ಮೊದಲ ಬಾರಿಗೆ ಏಡನ್ ಮಾರ್ಕ್ರಮ್ (Aiden Markram) ಅವರು ಐಸಿಸಿ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಜೂನ್ 1ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್​ನಲ್ಲಿ ನಡೆಯುವ ಟಿ20 ವಿಶ್ವಕಪ್​ಗೆ ಪ್ರೊಟೀಸ್ ತನ್ನ ತಂಡದಲ್ಲಿ ಹಿಟ್ಟರ್​​ಗಳನ್ನೇ ಆಯ್ಕೆ ಮಾಡಿದೆ. ದರೆ ಟೆಸ್ಟ್ ಮತ್ತು ಏಕದಿನ ಮಾದರಿಯ ನಾಯಕ ತೆಂಬಾ ಬಾವುಮಾ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಟ್ರೆಂಡಿಂಗ್​ ಸುದ್ದಿ

ಇತ್ತೀಚೆಗೆ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಹೊರಗಿಡಲಾದ ಕ್ವಿಂಟನ್ ಡಿ ಕಾಕ್ ಮತ್ತು ಆನ್ರಿಚ್ ನೋಕಿಯಾ ಅವರನ್ನೂ ತಂಡಕ್ಕೆ ಆಯ್ಕೆ ಮಾಡಲಾಗಿದೆ. 2023ರ ಸೆಪ್ಟೆಂಬರ್​​ನಿಂದ ಬೆನ್ನುನೋವಿನ ಕಾರಣ ಆನ್ರಿಚ್ ನೋಕಿಯಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಹೊರಗುಳಿದಿದ್ದಾರೆ. ಮತ್ತೊಂದೆಡೆ ಡಿ ಕಾಕ್ ಏಕದಿನ ವಿಶ್ವಕಪ್ ನಂತರ ಡಿ ಕಾಕ್ ಒಡಿಐ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಅದಕ್ಕೂ ಮುನ್ನ 2022ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಪ್ರಸ್ತುತ ತಂಡದಲ್ಲಿ ಐಪಿಎಲ್ ಆಡುತ್ತಿರುವ 10 ಆಟಗಾರರಿದ್ದಾರೆ.

ಇತ್ತೀಚಿನ ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ತಮ್ಮ ಅದ್ಭುತ ಪ್ರದರ್ಶನ ನೀಡಿದ್ದ ರಿಯಾನ್ ರಿಕೆಲ್ಟನ್ ಮತ್ತು ಒಟ್ನಿಯೆಲ್ ಬಾರ್ಟ್‌ಮ್ಯಾನ್ ಅವರಿಗೂ ಮಣೆ ಹಾಕಲಾಗಿದೆ. ಇಬ್ಬರು ಸಹ ಟಿ20ಐ ಅನ್​ಕ್ಯಾಪ್ಡ್​ ಪ್ಲೇಯರ್​ಗಳಾಗಿದ್ದಾರೆ. ಎಂಐ ಕೇಪ್ ಟೌನ್ ಪರ ರಿಕೆಲ್ಟನ್ 58.88ರ ಸರಾಸರಿ ಮತ್ತು ಸ್ಟ್ರೈಕ್ ರೇಟ್ 173.77 ನೊಂದಿಗೆ 530 ರನ್ ಗಳಿಸಿದ್ದರು. ಬಾರ್ಟ್‌ಮ್ಯಾನ್ ಹಾಲಿ ಚಾಂಪಿಯನ್ ಸನ್‌ರೈಸರ್ಸ್ ಈಸ್ಟರ್ನ್ ಕೇಪ್‌ ತಂಡದ ಪರ ಎಂಟು ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದರು.

ಏಡನ್ ಮಾರ್ಕ್ರಾಮ್, ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್ ಮತ್ತು ಟ್ರಿಸ್ಟಾನ್ ಸ್ಟಬ್ಸ್‌ ಅವರಂತಹ ಬಲವಾದ ಬ್ಯಾಟಿಂಗ್ ಕೋರ್ ಅನ್ನು ಹೊಂದಿರುವ ದಕ್ಷಿಣ ಆಫ್ರಿಕಾ, ಬೌಲಿಂಗ್​ ವಿಭಾಗದದಲ್ಲಿ ಅನುಭವಿಗಳಿಗೆ ಸ್ಥಾನ ನೀಡಿದೆ. ಕಗಿಸೋ ರಬಾಡ, ಆನ್ರಿಚ್ ನೋಕಿಯಾ, ಮಾರ್ಕೋ ಜಾನ್ಸೆನ್ ಮತ್ತು ಜೆರಾಲ್ಡ್ ಕೊಯೆಟ್ಜಿ ಅಬ್ಬರಿಸಲು ಸಜ್ಜಾಗಿದ್ದಾರೆ. ಜಾರ್ನ್ ಫೋರ್ಚುಯಿನ್, ಕೇಶವ್ ಮಹಾರಾಜ್ ಮತ್ತು ತಬ್ರೈಜ್ ಶಮ್ಸಿ ಅವರು ಮುಂಚೂಣಿಯ ಸ್ಪಿನ್ನರ್‌ಗಳೂ ತಂಡದಲ್ಲಿದ್ದಾರೆ.

ಟಿ20 ವಿಶ್ವಕಪ್​ಗೆ ದಕ್ಷಿಣ ಆಫ್ರಿಕಾ 15 ಸದಸ್ಯರ ತಂಡ

ಏಡೆನ್ ಮಾರ್ಕ್ರಾಮ್ (ನಾಯಕ), ಒಟ್ನಿಯೆಲ್ ಬಾರ್ಟ್‌ಮ್ಯಾನ್, ಜೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿ ಕಾಕ್, ಜಾರ್ನ್ ಫೋರ್ಚುಯಿನ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಆನ್ರಿಚ್ ನೋಕಿಯಾ, ಕಗಿಸೊ ರಬಾಡ, ರಿಯಾನ್ ರಿಕೆಲ್ಟನ್, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್.

ಮೀಸಲು ಆಟಗಾರರು: ನಾಂಡ್ರೆ ಬರ್ಗರ್ ಮತ್ತು ಲುಂಗಿ ಎನ್ಗಿಡಿ.

ತಂಡದ ಕುರಿತು ಮಾತನಾಡಿದ ಕೋಚ್ ರಾಬ್ ವಾಲ್ಟರ್, ಇತ್ತೀಚೆಗೆ ಆಡಿದ ಟಿ20 ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ಮತ್ತು ಫಾರ್ಮ್ ಅನ್ನು ಪರಿಗಣಿಸಿ ಈ ತಂಡವನ್ನು ಆಯ್ಕೆ ಮಾಡಲಾಗಿದೆ. ಆದರೆ ತಂಡದ ಆಯ್ಕೆ ಅತ್ಯಂತ ಕಠಿಣವಾಗಿತ್ತು. ಯುಎಸ್ಎ ಮತ್ತು ವೆಸ್ಟ್ ಇಂಡೀಸ್​ನಲ್ಲಿ ಯಶಸ್ಸಿನ ಎಲ್ಲಾ ಅವಕಾಶಗಳನ್ನು ಹೊಂದಿರುವ ಬಲಿಷ್ಠ ತಂಡವನ್ನು ಹೆಸರಿಸಿದ್ದೇವೆ ಮತ್ತು ವಿಶ್ವಾಸ ಇದೆ ಎಂದು ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ತನ್ನ ಟಿ20 ವಿಶ್ವಕಪ್ ಅಭಿಯಾನವನ್ನು ಜೂನ್ 3 ರಂದು ನ್ಯೂಯಾರ್ಕ್‌ನಲ್ಲಿ ಶ್ರೀಲಂಕಾ ವಿರುದ್ಧ ಪ್ರಾರಂಭಿಸುತ್ತದೆ.

2024ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ 20 ತಂಡಗಳು

ಭಾರತ, ಯುಎಸ್ಎ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಇಂಗ್ಲೆಂಡ್, ನೆದರ್ಲೆಂಡ್ಸ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಐರ್ಲೆಂಡ್, ಸ್ಕಾಟ್ಲೆಂಡ್, ಪಪುವಾ ನ್ಯೂಜಿನಿಯಾ, ಕೆನಡಾ, ನೇಪಾಳ, ಓಮನ್, ನಮೀಬಿಯಾ ಮತ್ತು ಉಗಾಂಡಾ.

ಮತ್ತಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

IPL_Entry_Point