ಕನ್ನಡ ಸುದ್ದಿ  /  Cricket  /  Devdutt Padikkal To Debut Lucknow Super Giants Predicted Playing Eleven Against Rajasthan Royals For Ipl 2024 Lsg Jra

RR vs LSG: ಮತೋರ್ವ ಕನ್ನಡಿಗನ ಪದಾರ್ಪಣೆ; ರಾಜಸ್ಥಾನ ವಿರುದ್ಧ ಲಕ್ನೋ ಸೂಪರ್‌ ಜೈಂಟ್ಸ್‌ ಸಂಭಾವ್ಯ ತಂಡ

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್‌ ಪಂದ್ಯಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಸಂಭಾವ್ಯ ತಂಡ ಹೇಗಿರಲಿದೆ ಎಂಬುದನ್ನು ನೋಡೋಣ. ಕೆಎಲ್‌ ರಾಹುಲ್‌ ಬಳಗದಲ್ಲಿ ಬಲಿಷ್ಠ ಆಟಗಾರರಿದ್ದಾರೆ. ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ನೀಡಬಲ್ಲ ಆಟಗಾರರು ಹೀಗಿದ್ದಾರೆ.

ರಾಜಸ್ಥಾನ ವಿರುದ್ಧ ಲಕ್ನೋ ಸೂಪರ್‌ ಜೈಂಟ್ಸ್‌ ಸಂಭಾವ್ಯ ತಂಡ
ರಾಜಸ್ಥಾನ ವಿರುದ್ಧ ಲಕ್ನೋ ಸೂಪರ್‌ ಜೈಂಟ್ಸ್‌ ಸಂಭಾವ್ಯ ತಂಡ

ಐಪಿಎಲ್ 2024ರ ಆವೃತ್ತಿಗೆ ಅದ್ಧೂರಿ ಆರಂಭ ಸಿಕ್ಕಿದೆ. ಪ್ರಸಕ್ತ ಆವೃತ್ತಿಯು ಇದೀಗ ಮೂರನೇ ದಿನಕ್ಕೆ ದಿನಕ್ಕೆ ಕಾಲಿಟ್ಟಿದ್ದು, ವಾರಂತ್ಯದ ಭಾನುವಾರ (ಮಾರ್ಚ್‌ 24) ಎರಡು ಪಂದ್ಯಗಳು ನಡೆಯುತ್ತಿವೆ. ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಿನದ ಮೊದಲನೇ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ್ ರಾಯಲ್ಸ್ (Rajasthan Royals) ಮತ್ತು ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡಗಳು ಪರಸ್ಪರ ಸೆಣಸಾಡಲಿವೆ. ಉಭಯ ತಂಡಗಳಲ್ಲೂ ಬಲಿಷ್ಠ ಆಟಗಾರರಿದ್ದಾರೆ. ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ನೀಡಬಲ್ಲ ಸಮರ್ಥ ಆಟಗಾರರಿದ್ದು, ಕೆಎಲ್‌ ರಾಹುಲ್‌ ನೇತೃತ್ವದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಸಂಭಾವ್ಯ ಆಡುವ 11ರ ಬಳಗ ಹೀಗಿರಲಿದೆ.

ಲಕ್ನೋ ತಂಡವು ಅನುಭವಿ ಆಟಗಾರರು ಮಾತ್ರವಲ್ಲದೆ, ಸ್ಫೋಟಕ ಹಾಗೂ ಕ್ರೀಸ್‌ಕಚ್ಚಿ ಆಡಬಲ್ಲ ಸಾಮರ್ಥ್ಯವಿರುವ ಆಟಗಾರರಿರುವ ಆಲ್‌ರೌಂಡ್ ತಂಡವಾಗಿದೆ. ಈ ಬಾರಿಯ ಹರಾಜಿಗೂ ಮುನ್ನ ರಾಜಸ್ಥಾನ್‌ ರಾಯಲ್ಸ್ ಹಾಗೂ ಲಕ್ನೋ ತಂಡಗಳ ನಡುವೆ ಆಟಗಾರರ ಬದಲಾವಣೆಯ ಟ್ರೇಡಿಂಗ್‌ ನಡೆದಿದೆ. ದೇವದತ್ ಪಡಿಕ್ಕಲ್ ಅವರನ್ನು ರಾಜಸ್ಥಾನದಿಂದ ತನ್ನ ಬತ್ತಳಿಕೆಗೆ ಸೇರಿಸಿಕೊಂಡಿರುವ ಲಕ್ನೋ, ಆವೇಶ್ ಖಾನ್ ಅವರನ್ನು ರಾಜಸ್ಥಾನಕ್ಕೆ ಕಳುಹಿಸಿದೆ.

ಕಳೆದ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ ಸತತ ಶತಕಗಳೊಂದಿಗೆ ಅಬ್ಬರಿಸಿದ್ದ ಕ್ವಿಂಟನ್‌ ಡಿಕಾಕ್‌, ಈ ಬಾರಿಯೂ ಲಕ್ನೋ ಪರ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಇವರೊಂದಿಗೆ ಕನ್ನಡಿಗ ಹಾಗೂ ತಂಡದ ಹೊಸ ಆಟಗಾರ ದೇವದತ್ ಪಡಿಕ್ಕಲ್ ಆರಂಭಿಕನಾಗುವ ಸಾಧ್ಯತೆ ಇದೆ. ಮೂರನೇ ಕ್ರಮಾಂಕದಲ್ಲಿ ದೀಪಕ್ ಹೂಡಾ ಕ್ರೀಸ್‌ಕಚ್ಚಿ ಆಡಿದರೆ, ನಾಯಕ ಕೆಎಲ್ ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ವಿಂಡೀಸ್‌ ಸ್ಫೋಟಕ ಆಟಗಾರ ಪೂರನೇ ಐದನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಲಿದ್ದಾರೆ. ಇವರೊಂದಿಗೆ ಬದೋನಿ ಫಿನಿಶಿಂಗ್‌ ಪಾತ್ರ ನಿಭಾಯಿಸಲಿದ್ದಾರೆ.

ಇದನ್ನೂ ಓದಿ | ಹಾರ್ದಿಕ್ ಪಾಂಡ್ಯ ನಾಯಕ, ರೋಹಿತ್-ಇಶಾನ್ ಆರಂಭಿಕರು; ಗುಜರಾತ್ ಟೈಟಾನ್ಸ್ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI

ಸ್ಟೋಯ್ನಿಸ್‌ ಹಾಗೂ ಕೃನಾಲ್‌ ಪಾಂಡ್ಯ ತಂಡದ ಪ್ರಮುಖ ಆಲ್‌ರೌಂಡರ್‌ಗಳಾಗಿದ್ದು, ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ನೆರವಾಗಲಿದ್ದಾರೆ. ನವೀನ್‌ ಹಾಗೂ ಯಶ್‌ ತಂಡದ ಪ್ರಮುಖ ವೇಗಿಗಳಾಗಿದ್ದು, ಇತ್ತೀಚೆಗಷ್ಟೇ ಐಸಿಸಿ ಶ್ರೇಯಾಂಕದಲ್ಲಿ ನಂಬರ್‌ ವನ್‌ ಸ್ಥಾನ ಪಡೆದಿದ್ದ ರವಿ ಬಿಷ್ಣೋಯ್‌, ಸ್ಪಿನ್ನರ್‌ ಆಗಿ ಜವಾಬ್ದಾರಿ ವಹಿಸಲಿದ್ದಾರೆ.

ಲಕ್ನೋ ತಂಡವನ್ನು ಈ ಬಾರಿಯೂ ಕೆಎಲ್ ರಾಹುಲ್ ಮುನ್ನಡೆಸಲಿದ್ದು, ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿ ಆಡಲಿದ್ದಾರೆ. ಅತ್ತ, ಜಸ್ಟಿನ್ ಲ್ಯಾಂಗರ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ ಗೌತಮ್ ಗಂಭೀರ್ ಈ ಸ್ಥಾನ ತುಂಬಿದ್ದಾರೆ.

ಲಕ್ನೋ ಸೂಪರ್‌ ಜೈಂಟ್ಸ್‌ ಸಂಭಾವ್ಯ ಆಡುವ ಬಳಗ

ಕ್ವಿಂಟನ್ ಡಿ ಕಾಕ್ (ವಿಕೆಟ್‌ ಕೀಪರ್), ದೇವದತ್ ಪಡಿಕ್ಕಲ್, ದೀಪಕ್ ಹೂಡಾ, ಕೆಎಲ್ ರಾಹುಲ್ (ನಾಯಕ), ನಿಕೋಲಸ್ ಪೂರನ್, ಆಯುಷ್ ಬದೋನಿ, ಮಾರ್ಕಸ್ ಸ್ಟೋಯ್ನಿಸ್, ಕೃನಾಲ್ ಪಾಂಡ್ಯ, ನವೀನ್ ಉಲ್ ಹಕ್, ಯಶ್ ಠಾಕೂರ್, ರವಿ ಬಿಷ್ಣೋಯ್.

ರಾಜಸ್ಥಾನ್‌ ರಾಯಲ್ಸ್‌ ಸಂಭಾವ್ಯ ತಂಡ

ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್‌ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ಧ್ರುವ್ ಜುರೆಲ್, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಆವೇಶ್ ಖಾನ್, ಟ್ರೆಂಟ್ ಬೋಲ್ಟ್.

IPL_Entry_Point