7 ಪಂದ್ಯಗಳಲ್ಲಿ 6 ಸೋತು ಎಲಿಮಿನೇಷನ್ ಭೀತಿಗೆ ಸಿಲುಕಿದ ಆರ್ಸಿಬಿಗೆ ಇನ್ನೂ ಇದೆ ಪ್ಲೇಆಫ್ ಅವಕಾಶ; ಹೇಗಂತೀರಾ?
RCB Playoff : 17ನೇ ಆವೃತ್ತಿಯ ಐಪಿಎಲ್ನಲ್ಲಿ ಆಡಿರುವ 7 ಪಂದ್ಯಗಳಲ್ಲಿ 6 ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇನ್ನೂ ಇದೆ ಪ್ಲೇಆಫ್ ಪ್ರವೇಶಿಸಲು ಅವಕಾಶ? ಹೇಗಂತೀರಾ ಇಲ್ಲಿದೆ ವಿವರ.
17ನೇ ಆವೃತ್ತಿಯ ಐಪಿಎಲ್ ಸೀಸನ್ನಲ್ಲಿ ಆರ್ಸಿಬಿ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದೆ. ಫಾಫ್ ಡು ಪ್ಲೆಸಿಸ್ ನೇತೃತ್ವದ ಬೆಂಗಳೂರು ತಂಡವು ತನ್ನ ಮೊದಲ ಗೆಲುವಿನ ನಂತರ ಸತತ 5 ಪಂದ್ಯಗಳಲ್ಲಿ ಹೀನಾಯ ಸೋಲನುಭವಿಸಿದೆ. ಒಟ್ಟಾರೆ 7ರಲ್ಲಿ 6 ಪಂದ್ಯಗಳಲ್ಲಿ ಮುಗ್ಗರಿಸಿದೆ. ಏಪ್ರಿಲ್ 15ರ ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧವೂ ಆರ್ಸಿಬಿ ಶರಣಾಯಿತು. ಇದರಿಂದ ಪ್ಲೇಆಫ್ ಕನಸು ಮತ್ತಷ್ಟು ಕಠಿಣವಾಗುವಂತೆ ಮಾಡಿದೆ. ಒಂದೊಂದು ಪಂದ್ಯವು ಸೆಮಿಫೈನಲ್ ಆಗಿದೆ.
ಆಡಿರುವ 7 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಸೋತರೂ ಆರ್ಸಿಬಿಗೆ ಇನ್ನೂ ಪ್ಲೇಆಫ್ ಪ್ರವೇಶಿಸಲು ಅವಕಾಶ ಇದೆ. 2024ರ ಶ್ರೀಮಂತ ಲೀಗ್ನಲ್ಲಿ ಒಂದು ಪಂದ್ಯವನ್ನಷ್ಟೇ ಗೆದ್ದಿರುವ ಆರ್ಸಿಬಿ, ಪಾಯಿಂಟ್ಸ್ ಟೇಬಲ್ನಲ್ಲಿ 10ನೇ ಸ್ಥಾನ ಪಡೆದಿದೆ. ತಂಡ ಕೊನೆಯಲ್ಲಿದ್ದರೂ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಿರುವುದು ವಿಶೇಷ. ಅಲ್ಲದೆ, ಆರೆಂಜ್ ಕ್ಯಾಪ್ ಹೋಲ್ಡರ್ ಕೂಡ ಆಗಿದ್ದಾರೆ. ಸದ್ಯ ಆರ್ಸಿಬಿ ಪ್ಲೇಆಫ್ ಕನಸು ಗಗನಕುಸುಮವಾಗಿದ್ದರೂ ಇನ್ನೂ ಅವಕಾಶ ಇದೆ. ಎಲಿಮೇಷನ್ ಭೀತಿಗೆ ಸಿಲುಕಿರುವ ಆರ್ಸಿಬಿಗೆ ಪ್ಲೇಆಫ್ ಅವಕಾಶ ಹೇಗಿದೆ ಎಂಬುದನ್ನು ಈ ಮುಂದೆ ನೋಡೋಣ.
ರಾಯಲ್ ಚಾಲೆಂಜರ್ಸ್ ಇನ್ನೂ 7 ಪಂದ್ಯಗಳನ್ನು ಆಡಬೇಕಿದೆ. ತನ್ನ ಅಂಕಪಟ್ಟಿಯಲ್ಲಿ 2 ಅಂಕ ಮಾತ್ರ ಪಡೆದಿದೆ. ನೆಟ್ರನ್ ರೇಟ್ -1.185 ಹೊಂದಿದೆ. ತಾನು ಪ್ಲೇಆಫ್ ಪ್ರವೇಶಿಸಲು 16 ಅಂಕ ಸಂಪಾದಿಸಬೇಕು. ಅಲ್ಲದೆ, ನೆಟ್ ರನ್ ರೇಟ್ ಅನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕು. ಸದ್ಯದ ಮಟ್ಟಿಗೆ ಡೇಂಜರ್ಝೋನ್ನಲ್ಲಿರುವ ಆರ್ಸಿಬಿ, ಉಳಿದ ಎಲ್ಲಾ ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿಬೇಕು. ಒಂದು ಪಂದ್ಯ ಸೋತರೂ 17ನೇ ಆವೃತ್ತಿಯ ಐಪಿಎಲ್ನಲ್ಲಿ ಎಲಿಮಿನೇಷನ್ ಆಗುವ ಮೊದಲ ತಂಡ ಎಂಬ ಕುಖ್ಯಾತಿಗೆ ಒಳಗಾಗಲಿದೆ. 7ಕ್ಕೆ 7 ಗೆಲ್ಲಲೇಬೇಕು ಮತ್ತು ನೆಟ್ ರನ್ ರೇಟ್ ಅನ್ನೂ ಹೆಚ್ಚಿಸಿಕೊಳ್ಳುವುದು ಆರ್ಸಿಬಿ ಮುಂದಿರುವ ದೊಡ್ಡ ಸವಾಲಾಗಿದೆ. ಆದರೆ ಇದು ಅಸಾಧ್ಯವೂ ಅಲ್ಲ.
ಆರ್ಸಿಬಿ ಮುಂದಿನ ಪಂದ್ಯಗಳು | ಸ್ಥಳ | ದಿನಾಂಕ |
---|---|---|
ಕೆಕೆಆರ್ VS ಆರ್ಸಿಬಿ | ಕೋಲ್ಕತ್ತಾ | ಏಪ್ರಿಲ್ 21 |
ಎಸ್ಆರ್ಹೆಚ್ VS ಆರ್ಸಿಬಿ | ಹೈದರಾಬಾದ್ | ಏಪ್ರಿಲ್ 25 |
ಜಿಟಿ VS ಆರ್ಸಿಬಿ | ಅಹಮದಾಬಾದ್ | ಏಪ್ರಿಲ್ 28 |
ಆರ್ಸಿಬಿ VS ಜಿಟಿ | ಬೆಂಗಳೂರು | ಮೇ 4 |
ಪಿಬಿಕೆಎಸ್ VS ಆರ್ಸಿಬಿ | ಧರ್ಮಶಾಲಾ | ಮೇ 9 |
ಆರ್ಸಿಬಿ VS ಡಿಸಿ | ಬೆಂಗಳೂರು | ಮೇ 12 |
ಆರ್ಸಿಬಿ VS ಸಿಎಸ್ಕೆ | ಬೆಂಗಳೂರು | ಮೇ 18 |
ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಅಬ್ಬರಿಸಿದ ರೀತಿಯಲ್ಲೇ ಟೂರ್ನಿಯ ಆರಂಭದಿಂದಲೂ ಆಡಿದ್ದರೆ, ಕನಿಷ್ಠ ಪಕ್ಷ ಮೂರು ಪಂದ್ಯಗಳನ್ನಾದರೂ ಜಯದ ನಗೆ ಬೀರುತ್ತಿದ್ದರು. ಆಗ ಪ್ಲೇಆಫ್ಗೆ ಹೆಚ್ಚು ಸಂಕಷ್ಟಕ್ಕೆ ಸಿಲುಕುವ ಫಜೀತಿಗೆ ಸಿಲುಕುತ್ತಿರಲಿಲ್ಲ. ಆದರೀಗ ತನ್ನ ಗೆಲುವುಗಳ ಜೊತೆಗೆ ಇತರೆ ತಂಡಗಳ ಸೋಲುಗಳಿಗಾಗಿ ಪ್ರಾರ್ಥನೆ ನಡೆಸಬೇಕಿದೆ. ನೆಟ್ ರನ್ ರೇಟ್ ಸುಧಾರಿಸಬೇಕಿದೆ. ಆರ್ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ಏಪ್ರಿಲ್ 21ರಂದು ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಬೇಕಿದೆ.
ಕ್ರ.ಸಂ | ತಂಡ | ಪಂದ್ಯ | ಗೆಲುವು | ಸೋಲು | ಅಂಕ | NRR |
---|---|---|---|---|---|---|
1 | ರಾಜಸ್ಥಾನ್ ರಾಯಲ್ಸ್ | 7 | 6 | 1 | 12 | +0.677 |
2 | ಕೋಲ್ಕತ್ತಾ ನೈಟ್ ರೈಡರ್ಸ್ | 6 | 4 | 2 | 8 | +1.399 |
3 | ಚೆನ್ನೈ ಸೂಪರ್ ಕಿಂಗ್ಸ್ | 6 | 4 | 2 | 8 | +0.726 |
4 | ಸನ್ ರೈಸರ್ಸ್ ಹೈದರಾಬಾದ್ | 6 | 4 | 2 | 8 | +0.502 |
5 | ಲಕ್ನೋ ಸೂಪರ್ ಜೈಂಟ್ಸ್ | 6 | 3 | 3 | 6 | +0.038 |
6 | ಡೆಲ್ಲಿ ಕ್ಯಾಪಿಟಲ್ಸ್ | 7 | 3 | 4 | 6 | -0.074 |
7 | ಗುಜರಾತ್ ಟೈಟಾನ್ಸ್ | 7 | 3 | 4 | 6 | -1.303 |
8 | ಪಂಜಾಬ್ ಕಿಂಗ್ಸ್ | 6 | 2 | 4 | 4 | -0.218 |
8 | ಮುಂಬೈ ಇಂಡಿಯನ್ಸ್ | 6 | 2 | 4 | 4 | -0.234 |
10 | ರಾಯಲ್ ಚಾಲೆಂಜರ್ಸ್ ಬೆಂಗಳೂರು | 7 | 1 | 6 | 2 | -1.185 |