ಹೀಗೆ ಮಾಡಿದ್ರೆ ಮಾತ್ರ ಭಾರತ ತಂಡವನ್ನು ಸೋಲಿಸಹುದು; ಅಮೆರಿಕ ವಿರುದ್ಧ ಸೋತ ಪಾಕಿಸ್ತಾನಕ್ಕೆ ಕಮ್ರಾನ್ ಅಕ್ಮಲ್ ಸಲಹೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಹೀಗೆ ಮಾಡಿದ್ರೆ ಮಾತ್ರ ಭಾರತ ತಂಡವನ್ನು ಸೋಲಿಸಹುದು; ಅಮೆರಿಕ ವಿರುದ್ಧ ಸೋತ ಪಾಕಿಸ್ತಾನಕ್ಕೆ ಕಮ್ರಾನ್ ಅಕ್ಮಲ್ ಸಲಹೆ

ಹೀಗೆ ಮಾಡಿದ್ರೆ ಮಾತ್ರ ಭಾರತ ತಂಡವನ್ನು ಸೋಲಿಸಹುದು; ಅಮೆರಿಕ ವಿರುದ್ಧ ಸೋತ ಪಾಕಿಸ್ತಾನಕ್ಕೆ ಕಮ್ರಾನ್ ಅಕ್ಮಲ್ ಸಲಹೆ

India vs Pakistan: ಜೂನ್ 9ರಂದು ನಡೆಯುವ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಹೇಗೆ ಸೋಲಿಸಬೇಕು ಎಂದು ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಅವರು ಪಾಕಿಸ್ತಾನ ತಂಡಕ್ಕೆ ಸಲಹೆ ನೀಡಿದ್ದಾರೆ.

ಭಾರತ ತಂಡವನ್ನ ಸೋಲಿಸಲು ಅಮೆರಿಕ ವಿರುದ್ಧ ಮುಗ್ಗರಿಸಿದ ಪಾಕಿಸ್ತಾನಕ್ಕೆ ಕಮ್ರಾನ್ ಅಕ್ಮಲ್ ಸಲಹೆ
ಭಾರತ ತಂಡವನ್ನ ಸೋಲಿಸಲು ಅಮೆರಿಕ ವಿರುದ್ಧ ಮುಗ್ಗರಿಸಿದ ಪಾಕಿಸ್ತಾನಕ್ಕೆ ಕಮ್ರಾನ್ ಅಕ್ಮಲ್ ಸಲಹೆ

ಜೂನ್ 6ರಂದು ಯುನೈಟೆಡ್ ಸ್ಟೇಟ್ಸ್​ ವಿರುದ್ಧ ಸೂಪರ್ ಓವರ್​​ನಲ್ಲಿ ಸೋತು ವಿಶ್ವ ಮಟ್ಟದಲ್ಲಿ ತೀವ್ರ ಮುಖಭಂಗಕ್ಕೆ ಒಳಗಾದ ಪಾಕಿಸ್ತಾನ ತಂಡ (Pakistan Team), ಇದೀಗ ತನ್ನ 2ನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಟೀಮ್ ಇಂಡಿಯಾ (Team India) ವಿರುದ್ಧ ಬಲಿಷ್ಠವಾಗಿ ಪುನರಾಗಮನ ಮಾಡಲು ಕಸರತ್ತು ನಡೆಸುತ್ತಿದೆ. ಆ ಮೂಲಕ ಸೂಪರ್​-8 ಸ್ಪರ್ಧೆಯಲ್ಲಿ ನಿಲ್ಲಲು ಬಾಬರ್​ ಪಡೆ ಸಿದ್ಧತೆ ನಡೆಸುತ್ತಿದೆ. ಜೂನ್ 9ರಂದು ನ್ಯೂಯಾರ್ಕ್​​​ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.

ಪಂದ್ಯಕ್ಕೂ ಮುನ್ನಾದಿನ ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್​ ಬ್ಯಾಟರ್​ ಕಮ್ರಾನ್ ಅಕ್ಮಲ್ ಅವರು ಭಾರತ ತಂಡವನ್ನು ಹೇಗೆ ಮಣಿಸಬೇಕು ಎಂದು ಬಾಬರ್​​​ ಪಡೆಗೆ ಸಲಹೆ ನೀಡಿದ್ದಾರೆ. ಸಹ-ಆತಿಥೇಯ ಯುನೈಟೆಡ್ ಸ್ಟೇಟ್ಸ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಸೋಲಿನ ನಂತರ ಪಾಕಿಸ್ತಾನ ತಂಡದ ನೈತಿಕತೆಯು ಪ್ರಸ್ತುತ ಕಡಿಮೆ ಎಂದು ಹೇಳಿದ್ದಾರೆ. ಪಾಕಿಸ್ತಾನಕ್ಕೆ ಸಲಹೆ ನೀಡಿರುವ ಜೊತೆಗೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕವನ್ನೂ ಅಕ್ಮಲ್ ಸೂಚಿಸಿದ್ದಾರೆ.

ಭಾರತದ ವಿರುದ್ಧ ಗೆಲ್ಲಲು ಏನು ಮಾಡಬೇಕು?

ಟೀಮ್ ಇಂಡಿಯಾ ವಿರುದ್ಧ ಗೆಲುವು ದಾಖಲಿಸಬೇಕೆಂದರೆ, ನೀವು ಆ ತಂಡಕ್ಕಿಂತ ಉತ್ತಮ ತಂಡವನ್ನು ಕಟ್ಟಬೇಕು. ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎನ್ನುವುದರ ಚಿಂತನೆ ನಡೆಸಬೇಕು. ಫಾರ್ಮ್​​ನಲ್ಲಿರುವ ಆಟಗಾರರನ್ನೇ ಮೈದಾನಕ್ಕಿಳಿಸಬೇಕು. ಆದರೆ, ಸದ್ಯಕ್ಕೆ ತಂಡದ ಆತ್ಮವಿಶ್ವಾಸ ಕಡಿಮೆಯಾಗಿದ್ದು, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು ಎಂದು ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ. ಇದೇ ವೇಳೆ ಭಾರತ ತಂಡದ ತಪ್ಪುಗಳ ಬಗ್ಗೆಯೂ ಹೇಳಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸುತ್ತಿರುವುದು ಟೀಮ್ ಇಂಡಿಯಾ ಮಾಡುತ್ತಿರುವ ದೊಡ್ಡ ತಪ್ಪಾಗಿದೆ ಎಂದು ಅಕ್ಮಲ್ ಹೇಳಿದ್ದಾರೆ. ಐರ್ಲೆಂಡ್ ವಿರುದ್ಧದ ಭಾರತದ ಆರಂಭಿಕ ಪಂದ್ಯದಲ್ಲಿ ಆರಂಭಿಕರಾಗಿ ಕೊಹ್ಲಿ 5 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ನೀರಸ ಮೂಡಿಸಿದರು. ಇದರ ಹೊರತಾಗಿಯೂ ಪಾಕಿಸ್ತಾನದ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಕೊಹ್ಲಿಯೇ ಆರಂಭಿಕರಾಗಿ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಕೊಹ್ಲಿ 3ನೇ ಸ್ಥಾನದಲ್ಲಿ ಕಣಕ್ಕಿಳಿಯಬೇಕು ಎಂದ ಕಮ್ರಾನ್

ಟೀಮ್ ಇಂಡಿಯಾ ಬ್ಯಾಟಿಂಗ್ ಕ್ರಮಾಂಕ ಸರಿಯಾಗಿಲ್ಲ ಎಂದು ಭಾವಿಸುತ್ತೇನೆ. ವಿರಾಟ್ ಕೊಹ್ಲಿ ನಂಬರ್​ 3ರಲ್ಲಿ ಬ್ಯಾಟಿಂಗ್ ನಡೆಸಿದರೆ ಉತ್ತಮ. ಅವರೇ ಪಾತ್ರವೇ ಭಾರತ ತಂಡಕ್ಕೆ ಬಹಳ ಮುಖ್ಯವಾಗಿದೆ. ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್​ ಆರಂಭಿಸಬೇಕು. ಕೊಹ್ಲಿ 3ಕ್ಕೆ ಬರಬೇಕು ಎಂದು ಸಲಹೆ ನೀಡಿದ್ದಾರೆ. ಕೊಹ್ಲಿ ಐಪಿಎಲ್​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕರಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 154 ಸ್ಟ್ರೈಕ್ ರೇಟ್‌ನಲ್ಲಿ 741 ರನ್ ಗಳಿಸಿದ್ದರು.

ಭಾರತ ತಂಡವು ಆತ್ಮವಿಶ್ವಾಸದಿಂದ ಕೂಡಿದೆ. ಬುಮ್ರಾ, ಸಿರಾಜ್ ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಕೂಡ ವಿಕೆಟ್ ಪಡೆದಿದ್ದಾರೆ. ಬೌಲಿಂಗ್ ವಿಭಾಗ ಭರ್ಜರಿ ಲಯದಲ್ಲಿದೆ ಎಂದು ಪಾಕ್ ತಂಡಕ್ಕೆ ಪರೋಕ್ಷ ಸಲಹೆ ನೀಡಿದ್ದಾರೆ. ಇದೇ ವೇಳೆ ನ್ಯೂಯಾರ್ಕ್‌ನ ಪಿಚ್‌ಗಳ ಗುಣಮಟ್ಟವನ್ನು ಅಕ್ಮಲ್​ ಟೀಕಿಸಿದ್ದಾರೆ. ಉತ್ತಮ ಆಟದ ಮೇಲ್ಮೈಗಳನ್ನು ಸಿದ್ಧಪಡಿಸಬೇಕು ಐಸಿಸಿಗೆ ಕರೆ ನೀಡಿದ್ದಾರೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Whats_app_banner