2ನೇ ಏಕದಿನದಲ್ಲಿ ಭಾರತದ ಸೋಲಿಗೆ ಬ್ಯಾಟಿಂಗ್ ಮಾತ್ರವಲ್ಲ, ಪಂದ್ಯದಲ್ಲಿ ನೀವು ಇದನ್ನು ಗಮನಿಸಿದ್ರಾ?-ind vs sl 2nd odi did you notice that it was not only batting that led to team indias defeat in the match vbt ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  2ನೇ ಏಕದಿನದಲ್ಲಿ ಭಾರತದ ಸೋಲಿಗೆ ಬ್ಯಾಟಿಂಗ್ ಮಾತ್ರವಲ್ಲ, ಪಂದ್ಯದಲ್ಲಿ ನೀವು ಇದನ್ನು ಗಮನಿಸಿದ್ರಾ?

2ನೇ ಏಕದಿನದಲ್ಲಿ ಭಾರತದ ಸೋಲಿಗೆ ಬ್ಯಾಟಿಂಗ್ ಮಾತ್ರವಲ್ಲ, ಪಂದ್ಯದಲ್ಲಿ ನೀವು ಇದನ್ನು ಗಮನಿಸಿದ್ರಾ?

IND vs SL 2nd ODI: ಶ್ರೀಲಂಕಾ ವಿರುದ್ಧದ ಎರಡೂ ಪಂದ್ಯಗಳಲ್ಲಿ, ಸ್ಪಿನ್ನರ್‌ಗಳ ಮುಂದೆ ವಿಫಲರಾದ ಟೀಮ್ ಇಂಡಿಯಾ ಬ್ಯಾಟರ್​​ಗಳು ನಿರಾಸೆ ಮೂಡಿಸಿದರು. ಆದರೆ ಎರಡೂ ಪಂದ್ಯಗಳಲ್ಲಿ, ವಿಶೇಷವಾಗಿ 2ನೇ ಏಕದಿನದಲ್ಲಿ ಬ್ಯಾಟಿಂಗ್ ವೈಫಲ್ಯ ಮಾತ್ರವಲ್ಲ ಇವು ಕೂಡ ಭಾರತದ ಸೋಲಿಗೆ ಕಾರಣವಾಯಿತು.

2ನೇ ಏಕದಿನದಲ್ಲಿ ಭಾರತದ ಸೋಲಿಗೆ ಬ್ಯಾಟಿಂಗ್ ಮಾತ್ರವಲ್ಲ, ಪಂದ್ಯದಲ್ಲಿ ನೀವು ಇದನ್ನು ಗಮನಿಸಿದ್ರಾ?
2ನೇ ಏಕದಿನದಲ್ಲಿ ಭಾರತದ ಸೋಲಿಗೆ ಬ್ಯಾಟಿಂಗ್ ಮಾತ್ರವಲ್ಲ, ಪಂದ್ಯದಲ್ಲಿ ನೀವು ಇದನ್ನು ಗಮನಿಸಿದ್ರಾ?

ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಅಬ್ಬರಿಸಿದ್ದ ಟೀಮ್ ಇಂಡಿಯಾ ಇದೀಗ ಏಕದಿನದಲ್ಲಿ ಎಲ್ಲರ ನಿರೀಕ್ಷೆಯನ್ನು ಸುಳ್ಳಾಗಿಸಿದ್ದು, ಸರಣಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದೆ. ಮೂರು ಪಂದ್ಯಗಳ ಏಕದಿನ ಸರಣಿಯ 2 ಪಂದ್ಯಗಳು ಮುಗಿದ ನಂತರ ರೋಹಿತ್ ಶರ್ಮಾ ತಂಡವು 0-1 ರಿಂದ ಹಿನ್ನಡೆಯಲ್ಲಿದೆ. ಮೊದಲ ಪಂದ್ಯದಲ್ಲಿ ತಂಡ 231 ರನ್ ಗಳಿಸಲು ಸಾಧ್ಯವಾಗದೆ ಟೈ ಆಯಿತು. ಎರಡನೇ ಪಂದ್ಯದಲ್ಲಿ 241 ರನ್ ಗಳಿಸಲು ಸಾಧ್ಯವಾಗದೆ 32 ರನ್ ಗಳಿಂದ ಸೋತಿದೆ. ಎರಡೂ ಪಂದ್ಯಗಳಲ್ಲಿ, ಸ್ಪಿನ್ನರ್‌ಗಳ ಮುಂದೆ ವಿಫಲರಾದ ತಂಡದ ಬ್ಯಾಟ್ಸ್‌ಮನ್‌ಗಳು ನಿರಾಸೆ ಮೂಡಿಸಿದರು. ಆದರೆ ಎರಡೂ ಪಂದ್ಯಗಳಲ್ಲಿ, ವಿಶೇಷವಾಗಿ ಎರಡನೇ ಏಕದಿನದಲ್ಲಿ ಬ್ಯಾಟಿಂಗ್ ವೈಫಲ್ಯ ಮಾತ್ರವಲ್ಲ ಇವು ಕೂಡ ಭಾರತದ ಸೋಲಿಗೆ ಕಾರಣವಾಯಿತು.

ಟೀಮ್ ಇಂಡಿಯಾದ ಕಳಪೆ ಫೀಲ್ಡಿಂಗ್

ಈ ಪಂದ್ಯದಲ್ಲಿ ಭಾರತ ತಂಡದ ಫೀಲ್ಡಿಂಗ್ ಕಳಪೆಯಾಗಿತ್ತು. ಕೊನೆಯ ಓವರ್‌ನಲ್ಲಿ ಶ್ರೇಯಸ್ ಅಯ್ಯರ್ ಡೈರೆಕ್ಟ್ ಹಿಟ್‌ನಲ್ಲಿ ರನ್ ಔಟ್ ಮಾಡಿದರು. ಅದು ಖಂಡಿತವಾಗಿಯೂ ಅದ್ಭುತವಾಗಿತ್ತು. ಆದರೆ ಅದಕ್ಕಿಂತ ಮುಂಚೆ ಫೀಲ್ಡಿಂಗ್​ನಲ್ಲಿ ನೀಡಿದ ಪ್ರದರ್ಶನ ಚೆನ್ನಾಗಿರಲಿಲ್ಲ. ಶ್ರೀಲಂಕಾ ಇನಿಂಗ್ಸ್​ನ 40ನೇ ಓವರ್​ನಲ್ಲಿ ಕುಲ್ದೀಪ್ ಯಾದವ್ ಎಸೆತದಲ್ಲಿ ಕಮಿಂದು ಮೆಂಡಿಸ್ ಅವರ ಸರಳ ಕ್ಯಾಚ್ ಅನ್ನು ಶಿವಂ ದುಬೆ ಕೈಬಿಟ್ಟರು. ನಂತರ ಮೆಂಡಿಸ್ 29 ರನ್ ಸೇರಿಸಿ 40 ರನ್ ಗಳಿಸಿದರು. ಅಷ್ಟೇ ಅಲ್ಲ, ಈ ಕ್ಯಾಚ್‌ ಕೈಬಿಟ್ಟ ಬಳಿಕ ದುನಿತ್‌ ವೆಲ್ಲಾಲಗೆ ಜೊತೆಗೂಡಿ 47 ರನ್‌ ಸೇರಿಸಿದರು. ಅವರು ಕ್ಯಾಚ್ ಪಡೆದಿದ್ದರೆ, ಶ್ರೀಲಂಕಾ 200 ರನ್‌ಗಳಿಗೆ ಆಲೌಟ್ ಆಗಬಹುದಿತ್ತು.

ಅತ್ತ ಶ್ರೀಲಂಕಾ 2 ಅತ್ಯುತ್ತಮ ಕ್ಯಾಚ್‌ಗಳನ್ನು ಪಡೆದು ಭಾರತದ ವಿಕೆಟ್ ಪತನದಲ್ಲಿ ದೊಡ್ಡ ಪಾತ್ರ ವಹಿಸಿತು. ಮೊದಲನೆಯದಾಗಿ, ಪಾಥುಮ್ ನಿಸ್ಸಾಂಕಾ ಅವರು ಬ್ಯಾಕ್‌ ವರ್ಡ್ ಪಾಯಿಂಟ್‌ನಲ್ಲಿ ಓಡಿ ಬಂದು ನಾಯಕ ರೋಹಿತ್ ಶರ್ಮಾ ಅವರ ಕ್ಯಾಚ್ ಅನ್ನು ಡೈವ್ ಬಿದ್ದು ಹಿಡಿದರು. ನಂತರ ಸ್ಲಿಪ್ಸ್‌ನಲ್ಲಿ ಒಂದೇ ಕೈಯಿಂದ ಶುಭ್ಮನ್ ಗಿಲ್ ಅವರ ಆಘಾತಕಾರಿ ಕ್ಯಾಚ್ ಪಡೆಯುವ ಮೂಲಕ ಬ್ರೇಕ್ ನೀಡಿದರು.

ಕೆಳ ಕ್ರಮಾಂಕದ ಕಳಪೆ ಬೌಲಿಂಗ್

ಮೊದಲ ಮತ್ತು 2ನೇ ಪಂದ್ಯಗಳಲ್ಲಿ ಟೈ ಹೊರತುಪಡಿಸಿ ಉಳಿದೆಲ್ಲವೂ ನೋಡಲು ಬಹುತೇಕ ಒಂದೇ ಆಗಿದ್ದವು. ಎರಡೂ ಪಂದ್ಯಗಳಲ್ಲಿ ಶ್ರೀಲಂಕಾ 150 ರನ್‌ಗಳ ಮುನ್ನವೇ 6 ವಿಕೆಟ್ ಕಳೆದುಕೊಂಡಿತ್ತು. ಮೊದಲ ಏಕದಿನ ಪಂದ್ಯದಲ್ಲಿ 6 ವಿಕೆಟ್‌ಗಳು 142 ರನ್‌ಗಳಿಗೆ (34.2 ಓವರ್‌ಗಳು) ಪತನಗೊಂಡವು. 2ನೇ ಪಂದ್ಯದಲ್ಲು ಕೂಡ ಲಂಕಾದ 6 ವಿಕೆಟ್‌ಗಳು 136 ರನ್‌ಗಳಿಗೆ (34.5 ಓವರ್‌ಗಳು) ಪತನಗೊಂಡವು. ಇದರ ಹೊರತಾಗಿಯೂ ಶ್ರೀಲಂಕಾ 50 ಓವರ್‌ಗಳನ್ನು ಪೂರ್ಣವಾಗಿ ಆಡಿದ್ದು ಮಾತ್ರವಲ್ಲದೆ, ತಂಡವೂ ಆಲೌಟ್ ಆಗಲಿಲ್ಲ. ಎರಡೂ ಬಾರಿ ದುನಿತ್ ವೆಲ್ಲಾಲಗೆ ಭಾರತೀಯ ಬೌಲರ್ಸ್​ ಕಾಡಿದರು. ಮತ್ತೊಂದು ತುದಿಯಿಂದ ಉತ್ತಮ ಬೆಂಬಲ ನೀಡಿದರು.

ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾದ ಕೆಳ ಕ್ರಮಾಂಕ 2 ವಿಕೆಟ್ ಕಳೆದುಕೊಂಡು 88 ರನ್ ಸೇರಿಸಿದರೆ, 2ನೇ ಪಂದ್ಯದಲ್ಲಿ 3 ವಿಕೆಟ್ ಕಳೆದುಕೊಂಡು 104 ರನ್ ಸೇರಿಸಿತು. ಒಂದೆಡೆ ಶ್ರೀಲಂಕಾದ ಕೆಳ ಕ್ರಮಾಂಕವನ್ನು ಔಟ್ ಮಾಡಲು ಭಾರತೀಯ ಬೌಲರ್‌ಗಳು ವಿಫಲರಾದರೆ, ಮತ್ತೊಂದೆಡೆ ಭಾರತದ ಕೆಳ ಕ್ರಮಾಂಕದ ಬ್ಯಾಟರ್​​ಗಳು ಲಯದಲ್ಲೇ ಇರಲಿಲ್ಲ. ಸದ್ಯ ಏಕದಿನ ಸರಣಿಯಲ್ಲಿ ಕೊನೆಯ ಒಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಇದು ಆಗಸ್ಟ್ 7 ರಂದು ಕೊಲಂಬೊದಲ್ಲಿ ಆಯೋಜಿಸಲಾಗಿದೆ. ಈ ಪಂದ್ಯದಲ್ಲಾದರು ಗೆದ್ದು ರೋಹಿತ್ ಪಡೆ ಸರಣಿಯಲ್ಲಿ ಸಮಬಲ ಸಾಧಿಸಿ ಮಾನ ಉಳಿಸಿಕೊಳ್ಳಬೇಕಾಗಿದೆ.