ಸೋಲು ತುಂಬಾ ನೋವು ತರಿಸಿದೆ; ಪಂದ್ಯದ ನಡುವೆ ನಗುತ್ತಿದ್ದ ರೋಹಿತ್ ಶರ್ಮಾ ಪೋಸ್ಟ್ ಮ್ಯಾಚ್ ವೇಳೆ ಫುಲ್ ಗರಂ-everything hurts rohit sharma gives honest insights about indias loss to sri lanka in 2nd odi in colombo prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಸೋಲು ತುಂಬಾ ನೋವು ತರಿಸಿದೆ; ಪಂದ್ಯದ ನಡುವೆ ನಗುತ್ತಿದ್ದ ರೋಹಿತ್ ಶರ್ಮಾ ಪೋಸ್ಟ್ ಮ್ಯಾಚ್ ವೇಳೆ ಫುಲ್ ಗರಂ

ಸೋಲು ತುಂಬಾ ನೋವು ತರಿಸಿದೆ; ಪಂದ್ಯದ ನಡುವೆ ನಗುತ್ತಿದ್ದ ರೋಹಿತ್ ಶರ್ಮಾ ಪೋಸ್ಟ್ ಮ್ಯಾಚ್ ವೇಳೆ ಫುಲ್ ಗರಂ

Rohit Sharma: ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದ ಮಧ್ಯೆ ನಗುತ್ತಾ ಬೌಲರ್​ಗಳಿಗೆ ಪ್ರೋತ್ಸಾಹಿಸುತ್ತಿದ್ದ ರೋಹಿತ್ ಶರ್ಮಾ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಗರಂ ಆದರು. ಮಧ್ಯಮ ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳು ಆಡಿದ ರೀತಿಯ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಿದ್ದಾರೆ.

ಸೋಲು ತುಂಬಾ ನೋವು ತರಿಸಿದೆ; ಪಂದ್ಯದ ನಡುವೆ ನಗುತ್ತಿದ್ದ ರೋಹಿತ್ ಶರ್ಮಾ ಪೋಸ್ಟ್ ಮ್ಯಾಚ್ ವೇಳೆ ಫುಲ್ ಗರಂ
ಸೋಲು ತುಂಬಾ ನೋವು ತರಿಸಿದೆ; ಪಂದ್ಯದ ನಡುವೆ ನಗುತ್ತಿದ್ದ ರೋಹಿತ್ ಶರ್ಮಾ ಪೋಸ್ಟ್ ಮ್ಯಾಚ್ ವೇಳೆ ಫುಲ್ ಗರಂ

ಆಗಸ್ಟ್​ 4ರ ಭಾನುವಾರ ನಡೆದ ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ತೀರಾ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆರಂಭದಲ್ಲಿ ಕೊಂಚ ರನ್ ಕಲೆ ಹಾಕಿದ್ದು ಬಿಟ್ಟರೆ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡು ಇದೀಗ ಸರಣಿ ಸೋಲಿನ ಭೀತಿಗೆ ಸಿಲುಕಿದೆ. 32 ರನ್‌ಗಳ ಸೋಲಿನಿಂದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೋಪಗೊಂಡಿದ್ದಾರೆ. ಕಳಪೆ ಬ್ಯಾಟಿಂಗ್​​ ಕುರಿತು ಬೇಸರಗೊಂಡಿದ್ದಾರೆ.

ಪಂದ್ಯದ ಮಧ್ಯೆ ನಗುತ್ತಾ ಬೌಲರ್​ಗಳಿಗೆ ಪ್ರೋತ್ಸಾಹಿಸುತ್ತಿದ್ದ ಹಿಟ್​ಮ್ಯಾನ್ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಗರಂ ಆದರು. ಮಧ್ಯಮ ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳು ಆಡಿದ ರೀತಿಯ ಬಗ್ಗೆ ಚರ್ಚೆ ನಡೆಯಲಿದೆ ಎಂದು ರೋಹಿತ್ ಹೇಳಿದ್ದಾರೆ. 241 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡವು ಲಂಕಾದ ಲೆಗ್ ಸ್ಪಿನ್ನರ್ ಜೆಫ್ರಿ ವಾಂಡರ್ಸೆ ಅವರ 6 ವಿಕೆಟ್‌ಗಳಿಂದಾಗಿ 208 ರನ್‌ಗಳಿಗೆ ಕುಸಿಯಿತು. ಇದು ಮತ್ತೊಮ್ಮೆ ಸ್ಪಿನ್ ವಿರುದ್ಧ ತಮ್ಮ ಭಾರತದ ದೌರ್ಬಲ್ಯವನ್ನು ಬಹಿರಂಗಪಡಿಸಿತು.

ನಾವು ಚೆನ್ನಾಗಿ ಆಡಲಿಲ್ಲ ಎಂದ ರೋಹಿತ್​

‘ನಾವು ಕೇವಲ 10 ಓವರ್‌ಗಳಲ್ಲಿ 50 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡದ್ದು ಮಾತ್ರವಲ್ಲ, ಪಂದ್ಯವನ್ನು ಸೋತಿದ್ದೇವೆ, ಇದು ತುಂಬಾ ನೋವಾಗುತ್ತದೆ. ನೀವು ಸ್ಥಿರವಾದ ಕ್ರಿಕೆಟ್ ಆಡಬೇಕು. ಆದರೆ, ನಾವು ಅದನ್ನು ಮಾಡಲು ವಿಫಲರಾಗಿದ್ದೇವೆ. ನಿರಾಶೆ ಆಗಿದೆ, ಆದರೆ ಈ ರೀತಿಯ ಸಂಗತಿಗಳು ಸಂಭವಿಸುತ್ತವೆ. ನಾವು ಚೆನ್ನಾಗಿ ಆಡಲಿಲ್ಲ. ಮಧ್ಯಮ ಓವರ್‌ಗಳಲ್ಲಿ ನಮ್ಮ ಬ್ಯಾಟಿಂಗ್ ಬಗ್ಗೆ ಚರ್ಚೆ ನಡೆಸಬೇಕಿದೆ’ ಎಂದು ಹೇಳಿದ್ದಾರೆ.

ಮಾತು ಮುಂದುವರೆಸಿದ ರೋಹಿತ್, ಇಲ್ಲಿನ ಪಿಚ್‌ಗಳಿಗೆ ತಕ್ಕಂತೆ ಭಾರತದ ಬ್ಯಾಟ್ಸ್‌ಮನ್‌ಗಳು ತಮ್ಮನ್ನು ತಾವು ಹೊಂದಿಕೊಳ್ಳಬೇಕಾಗುತ್ತದೆ ಎಂದು ಸೂಚಿಸಿದ್ದಾರೆ. ಎಡ ಮತ್ತು ಬಲಗೈ ಬ್ಯಾಟ್ಸ್‌ಮನ್‌ಗಳ ಸಂಯೋಜನೆಯೊಂದಿಗೆ, ಸ್ಟ್ರೈಕ್ ಅನ್ನು ತಿರುಗಿಸುವುದು ಸುಲಭ ಎಂದು ನಾವು ಭಾವಿಸಿದ್ದೆವು. ಆದರೆ ಕ್ರೆಡಿಟ್ ಜೆಫ್ರಿ ಅವರಿಗೆ ಸಲ್ಲುತ್ತದೆ, ಅವರು 6 ವಿಕೆಟ್ ಪಡೆದರು ಎಂದು ಲಂಕಾನ್ನರನ್ನು ಕೂಡ ಹೊಗಳಿದರು.

ಅಲಸಂಕಾ ಹೇಳಿದ್ದೇನು?

ಇನ್ನು ಪರಿಸ್ಥಿತಿಗೆ ಅನುಗುಣವಾಗಿ 240 ರನ್ ಗಳಿಸಿದರೆ ಸಾಕು ಎಂದು ಶ್ರೀಲಂಕಾ ನಾಯಕ ಚರಿತ್ ಅಸಲಂಕಾ ಹೇಳಿದ್ದಾರೆ. 240 ಉತ್ತಮ ಸ್ಕೋರ್ ಆಗಿತ್ತು. ನಾಯಕನಾಗಿ, ನಾನು ಈ ರೀತಿಯ ಆಟವನ್ನು ಇಷ್ಟಪಡುತ್ತೇನೆ. ವಾಂಡರ್ಸೆಯ ಲೆಕ್ಕಾಚಾರ ಅದ್ಭುತವಾಗಿತ್ತು. ತಂಡದ ಮೇಲೆ ಸಾಕಷ್ಟು ಒತ್ತಡವಿತ್ತು. ನಾನು ವಿಶ್ರಾಂತಿಯ ನಂತರ ಹಿಂತಿರುಗುತ್ತಿದ್ದೆ. ಆದರೆ 240 ರನ್ ಗಳಿಸಿದ ನಮ್ಮ ಬ್ಯಾಟ್ಸ್‌ಮನ್‌ಗಳಿಗೆ ಕ್ರೆಡಿಟ್ ನೀಡಲು ನಾನು ಬಯಸುತ್ತೇನೆ ಎಂಬುದು ಅಸಲಂಕಾ ಮಾತು.

ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಟೀಮ್ ಇಂಡಿಯಾಗೆ 241 ರನ್​ಗಳ ಗುರಿ ನೀಡಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಭಾರತ 42.2 ಓವರ್‌ಗಳಲ್ಲಿ 208 ರನ್‌ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಮತ್ತೊಮ್ಮೆ ಬಲಿಷ್ಠ ಆರಂಭ ನೀಡಿದರೂ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಇದರ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಭಾರತ ತಂಡ ಇದೀಗ ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ. ಕೊನೆಯ ಪಂದ್ಯ ಆಗಸ್ಟ್ 7 ರಂದು ನಡೆಯಲಿದೆ.