IND vs WI 5th T20: ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ; 7ನೇ ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಹಾರ್ದಿಕ್ ಪಡೆ
IND vs WI 5th T20: ವೆಸ್ಟ್ ಇಂಡೀಸ್ ಎದುರಿನ ಅಂತಿಮ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದಿದ್ದು, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ವೆಸ್ಟ್ ಇಂಡೀಸ್ ಎದುರಿನ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ. ಸರಣಿ ನಿರ್ಧರಿಸುವ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಬೃಹತ್ ಮೊತ್ತ ಕಲೆ ಹಾಕುವ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ, ತವರಿನಲ್ಲಿ ಟೆಸ್ಟ್, ಏಕದಿನ ಸರಣಿ ಕಳೆದುಕೊಂಡಿರುವ ವೆಸ್ಟ್ ಇಂಡೀಸ್, ಟಿ20 ಸರಣಿಯನ್ನಾದರೂ ಗೆದ್ದು ಮುಖಭಂಗದಿಂದ ಪಾರಾಗಲು ಯೋಜನೆ ರೂಪಿಸಿದೆ.
ನಿರ್ಣಾಯಕ ನಾಲ್ಕನೇ ಪಂದ್ಯದಲ್ಲಿ 9 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, ಅಂತಿಮ ಟಿ20ಯಲ್ಲೂ ಜಯಭೇರಿ ಬಾರಿಸಿ ಸರಣಿ ಗೆಲುವಿಗೆ ಮುತ್ತಿಕ್ಕುವ ಲೆಕ್ಕಾಚಾರ ಹಾಕಿಕೊಂಡಿದೆ. ಇದೇ ಕಾರಣಕ್ಕೆ ಗೆಲುವಿನ ತಂಡವನ್ನೇ ಕಣಕ್ಕಿಳಿಸಿದೆ. ಆದರೆ, ವೆಸ್ಟ್ ಇಂಡೀಸ್ ಅಲ್ಜಾರಿ ಜೋಸೆಫ್ ಜಾಗದಲ್ಲಿ ಒಬೆಬ್ ಮೆಕಾಯ್ಗೆ ಮತ್ತೆ ಮಣೆ ಹಾಕಿದೆ. ಮೆಕಾಯ್ಗೆ ಕಳೆದ ಪಂದ್ಯದಲ್ಲಿ ಬೆಂಚ್ ಕಾದಿದ್ದರು.
ಭಾರತ ಗೆದ್ದರೆ 7ನೇ ಸರಣಿ
ಉಭಯ ತಂಡಗಳು ಇಲ್ಲಿಯವರೆಗೂ 8 ಟಿ20 ಸರಣಿಗಳನ್ನು ಆಡಿವೆ. ಈ ಪೈಕಿ ಟೀಮ್ ಇಂಡಿಯಾವೇ 6 ಬಾರಿ ಗೆಲುವು ಸಾಧಿಸಿದೆ. ಉಳಿದ ಎರಡರಲ್ಲಿ ವೆಸ್ಟ್ ಇಂಡೀಸ್ ಜಯಿಸಿದೆ. ಮತ್ತೊಂದು ವಿಶೇಷ ಅಂದರೆ, ಕೊನೆಯ ಐದು ಸರಣಿಗಳಲ್ಲಿ ಭಾರತವೇ ಜಯಿಸಿದೆ. 2017ರಲ್ಲಿ ಕೊನೆಯದಾಗಿ ವಿಂಡೀಸ್ ಸರಣಿ ಗೆದ್ದುಕೊಂಡಿದೆ.
ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಸರಣಿ 2-2ರಲ್ಲಿ ಸಮಬಲಗೊಂಡಿದೆ. ಭಾರತ ಗೆದ್ದರೆ, 7ನೇ ಸರಣಿ ಗೆದ್ದು ದಾಖಲೆ ಬರೆಯಲಿದೆ. ಮೊದಲ ಎರಡು ಪಂದ್ಯಗಳಲ್ಲಿ ಸೋತಿದ್ದ ಭಾರತ ಉಳಿದ ಎರಡೂ ಪಂದ್ಯಗಳಲ್ಲಿ ಸ್ಟ್ರಾಂಗ್ ಕಂಬ್ಯಾಕ್ ಮಾಡಿದೆ. ಯುವ ಆಟಗಾರರು ಭರ್ಜರಿ ಫಾರ್ಮ್ನಲ್ಲಿದ್ದು, ಗೆಲುವಿನ ನಿರೀಕ್ಷೆ ಮಾಡಲಾಗಿದೆ.
ಸ್ಥಳ: ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಂ ಟರ್ಫ್ ಗ್ರೌಂಡ್, ಲಾಡರ್‌ಹಿಲ್, ಫ್ಲೋರಿಡಾ.
ವೆಸ್ಟ್ ಇಂಡೀಸ್ ಆಡುವ 11ರ ಬಳಗ
ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ಶಾಯ್ ಹೋಪ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ರಸ್ಟನ್ ಚೇಸ್, ರೊಮಾರಿಯೊ ಶೆಫರ್ಡ್, ಅಕೇಲ್ ಹೋಸೇನ್, ಒಬೆಬ್ ಮೆಕಾಯ್.
ಭಾರತ ಆಡುವ 11ರ ಬಳಗ
ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಒರ್), ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಅರ್ಷ್ದೀಪ್ ಸಿಂಗ್, ಯುಜ್ವೇಂದ್ರ ಚಹಲ್, ಮುಕೇಶ್ ಕುಮಾರ್.