ಸ್ವಿಂಗ್ ಕಿಂಗ್ ಭುವನೇಶ್ವರ್ ಖರೀದಿಸಿ ಬೌಲಿಂಗ್ ಬಲಿಷ್ಠಗೊಳಿಸಿದ ಆರ್​ಸಿಬಿ; ಕಡಿಮೆ ಮೊತ್ತಕ್ಕೆ ಡು ಪ್ಲೆಸಿಸ್ ಡೆಲ್ಲಿ ಪಾಲು
ಕನ್ನಡ ಸುದ್ದಿ  /  ಕ್ರಿಕೆಟ್  /  ಸ್ವಿಂಗ್ ಕಿಂಗ್ ಭುವನೇಶ್ವರ್ ಖರೀದಿಸಿ ಬೌಲಿಂಗ್ ಬಲಿಷ್ಠಗೊಳಿಸಿದ ಆರ್​ಸಿಬಿ; ಕಡಿಮೆ ಮೊತ್ತಕ್ಕೆ ಡು ಪ್ಲೆಸಿಸ್ ಡೆಲ್ಲಿ ಪಾಲು

ಸ್ವಿಂಗ್ ಕಿಂಗ್ ಭುವನೇಶ್ವರ್ ಖರೀದಿಸಿ ಬೌಲಿಂಗ್ ಬಲಿಷ್ಠಗೊಳಿಸಿದ ಆರ್​ಸಿಬಿ; ಕಡಿಮೆ ಮೊತ್ತಕ್ಕೆ ಡು ಪ್ಲೆಸಿಸ್ ಡೆಲ್ಲಿ ಪಾಲು

IPL 2025 Mega Auction: ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆಯುತ್ತಿರುವ ಐಪಿಎಲ್ 2025 ಮೆಗಾ ಹರಾಜು ಎರಡನೇ ದಿನದಂದು ಆರ್​ಸಿಬಿ ಊಟದ ವಿರಾಮಕ್ಕೂ ಮುನ್ನ ಪ್ರಮುಖ ಆಟಗಾರರನ್ನು ಖರೀದಿಸಿದೆ. ಈ ಪೈಕಿ ಭುವನೇಶ್ವರ್ ಕುಮಾರ್ ಒಬ್ಬರು.

ಸ್ವಿಂಗ್ ಕಿಂಗ್ ಭುವನೇಶ್ವರ್ ಖರೀದಿಸಿ ಬೌಲಿಂಗ್ ಬಲಿಷ್ಠಗೊಳಿಸಿದ ಆರ್​ಸಿಬಿ; ಕಡಿಮೆ ಮೊತ್ತಕ್ಕೆ ಡು ಪ್ಲೆಸಿಸ್ ಡೆಲ್ಲಿ ಪಾಲು
ಸ್ವಿಂಗ್ ಕಿಂಗ್ ಭುವನೇಶ್ವರ್ ಖರೀದಿಸಿ ಬೌಲಿಂಗ್ ಬಲಿಷ್ಠಗೊಳಿಸಿದ ಆರ್​ಸಿಬಿ; ಕಡಿಮೆ ಮೊತ್ತಕ್ಕೆ ಡು ಪ್ಲೆಸಿಸ್ ಡೆಲ್ಲಿ ಪಾಲು

ಐಪಿಎಲ್ 2025 ಮೆಗಾ ಹರಾಜು (IPL 2025 Mega Auction) 2ನೇ ದಿನದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭಾರತ ತಂಡದ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ (Bhuvneshwar Kumar) ಅವರನ್ನು 10.75 ಕೋಟಿ ರೂಪಾಯಿಗೆ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಭುವಿ ಖರೀದಿಗೆ ಎಲ್​ಎಸ್​ಜಿ ಮತ್ತು ಮುಂಬೈ ತಂಡಗಳು ಜಿದ್ದಿಗೆ ಬಿದ್ದವು. 2 ಕೋಟಿ ಮೂಲ ಬೆಲೆ ಹೊಂದಿದ್ದ ವೇಗಿ ಬಿಡ್ 10 ಕೋಟಿ ಆಗುತ್ತಿದ್ದಂತೆ ಮುಂಬೈ ಹಿಂದೆ ಸರಿಯಿತು. ಆಗ ಮಧ್ಯ ಪ್ರವೇಶಿಸಿದ ಆರ್​​ಸಿಬಿ, 10.75 ಕೋಟಿಗೆ ಪ್ರಮುಖ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು.

ಆ ಮೂಲಕ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸಿತು. ಜೋಶ್ ಹೇಜಲ್​ವುಡ್ ಮತ್ತು ಯಶ್ ದಯಾಳ್ ಅವರೊಂದಿಗೆ ಎದುರಾಳಿ ತಂಡಗಳಿಗೆ ಕಾಡಲಿದ್ದಾರೆ. ಭುವಿ ಅವರು ಈ ಹಿಂದೆ ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದರು. ಅದಕ್ಕೂ ಮುನ್ನ ಆರ್​ಸಿಬಿ ತಂಡದ ಪರ ಆಡಿದ್ದರು. ಇದೀಗ ಮತ್ತೊಮ್ಮೆ ರೆಡ್ ಆರ್ಮಿ ಸೇರಿದ್ದಾರೆ.

ಆರ್​ಸಿಬಿ ಸೇರಿದ ಕೃನಾಲ್ ಪಾಂಡ್ಯ

ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದ ಆಲ್​ರೌಂಡರ್​ ಕೃನಾಲ್ ಪಾಂಡ್ಯ ಅವರು 5.75 ಕೋಟಿ ರೂಪಾಯಿಗೆ ಆರ್​​ಸಿಬಿ ಸೇರಿದ್ದಾರೆ. ಲಕ್ನೋಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಿದ್ದರು. ಎಂಐ 5 ಬಾರಿ ಐಪಿಎಲ್ ಚಾಂಪಿಯನ್ ಆಗುವಲ್ಲಿ ಕೃನಾಲ್ ಕೂಡ ಪ್ರಮುಖ ಪಾತ್ರವಹಿಸಿದ್ದಾರೆ. ಕೃನಾಲ್ ಖರೀದಿಯೊಂದಿಗೆ ಸ್ಪಿನ್​ ಆಲ್​ರೌಂಡರ್​ಗಳ ಕೊರತೆಯನ್ನು ಆರ್​ಸಿಬಿ ನೀಗಿಸಿದೆ. ಬ್ಯಾಟಿಂಗ್​ನಲ್ಲೂ ಕೃನಾಲ್​ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮೂಲಬೆಲೆ 2 ಕೋಟಿಯಿಂದ ಭಾರಿ ಮೊತ್ತಕ್ಕೆ ಸೇಲ್‌ ಆಗಿದ್ದಾರೆ.

ಡೆಲ್ಲಿ ಪಾಲಾದ ಆರ್​ಸಿಬಿ ಮಾಜಿ ನಾಯಕ

ಆರ್​ಸಿಬಿ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಅವರನ್ನು ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಮೂಲ ಬೆಲೆ 2 ಕೋಟಿಗೆ ಖರೀದಿಸಿದೆ. ಕಳೆದ ಮೂರು ಸೀಸನ್​ಗಳಲ್ಲಿ ಆರ್​​ಸಿಬಿ ನಾಯಕನಾಗಿದ್ದ ಫಾಫ್, ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ಅವರ ನಾಯಕತ್ವದಲ್ಲಿ ಆರ್​​ಸಿಬಿ ಎರಡು ಬಾರಿ ಪ್ಲೇಆಫ್ ಪ್ರವೇಶಿಸಿತ್ತು.

ಆರ್​ಸಿಬಿ ಖರೀದಿಸಿದ ಆಟಗಾರರ ಪಟ್ಟಿ: ಜೋಶ್ ಹೇಜಲ್​ವುಡ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್​ಸ್ಟನ್, ರಸಿಖ್ ಸಲಾಮ್ ದಾರ್, ಸುಯಾಶ್ ಶರ್ಮಾ, ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ.

ಆರ್​ಸಿಬಿ ಉಳಿಸಿಕೊಂಡ ಆಟಗಾರರು: ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಯಶ್ ದಯಾಳ್.

ಎರಡನೇ ದಿನದ ಹರಾಜು ಹೈಲೈಟ್ಸ್

ಅಜಿಂಕ್ಯಾ ರಹಾನೆ, ಕನ್ನಡಿಗ ಮಯಾಂಕ್‌ ಅಗರ್ವಾಲ್ ಹಾಗೂ ಪೃಥ್ವಿ ಶಾ ಅನ್‌ಸೋಲ್ಡ್ ಆಗಿದ್ದಾರೆ.

ಆಲ್‌ರೌಂಡರ್‌ಗಳ ಪೈಕಿ ಶಾರ್ದುಲ್‌ ಠಾಕೂರ್‌ ಅನ್‌ಸೋಲ್ಡ್ ಆದರೆ, ವಾಷಿಂಗ್ಟನ್‌ ಸುಂದರ್‌ 3.20 ಕೋಟಿಗೆ ಗುಜರಾತ್‌ ಟೈಟಾನ್ಸ್‌ ಪಾಲಾಗಿದ್ದಾರೆ.

ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್‌ ಕರನ್‌ 2.40 ಕೋಟಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಿಕೊಂಡಿದ್ದಾರೆ.

ಮಾರ್ಕೊ ಜಾನ್ಸೆನ್​ಗೆ 7 ಕೋಟಿ ಕೊಟ್ಟು ಪಂಜಾಬ್‌ ಕಿಂಗ್ಸ್‌ ತಂಡ ಸೇರಿಸಿಕೊಂಡಿದೆ. ಡೇರಿಲ್‌ ಮಿಚೆಲ್‌ ಅನ್‌ಸೋಲ್ಡ್‌ ಆಗಿದ್ದಾರೆ.

ಸಿಎಸ್‌ಕೆ ಮಾಜಿ ವೇಗಿ ತುಷಾರ್‌ ದೇಶಪಾಂಡೆಯನ್ನು ರಾಜಸ್ಥಾನ್‌ ರಾಯಲ್ಸ್‌ ತಂಡವು 6.5 ಕೋಟಿಗೆ ಖರೀದಿಸಿದೆ.

ದಕ್ಷಿಣ ಆಫ್ರಿಕಾ ವೇಗಿ ಗೆರಾಲ್ಡ್‌ ಕೊಯೆಟ್ಜಿ ಅವರನ್ನು 2.40 ಕೋಟಿಗೆ ಗುಜರಾತ್‌ ಟೈಟಾನ್ಸ್‌ ತಂಡ ಸೇರಿಕೊಂಡಿದ್ದಾರೆ.

ನಿತೀಶ್‌ ರಾಣಾ (ರಾಜಸ್ಥಾನ್‌ ರಾಯಲ್ಸ್)‌ -4.2 ಕೋಟಿ

ಶಾಯ್‌ ಹೋಪ್‌ -ಅನ್‌ಸೋಲ್ಡ್‌

ಕೆಎಸ್‌ ಭರತ್‌ -ಅನ್‌ಸೋಲ್ಡ್‌

ಜೋಶ್‌ ಇಂಗ್ಲಿಸ್‌ -(ಪಂಜಾಬ್‌ ಕಿಂಗ್ಸ್)‌ -2.60 ಕೋಟಿ‌

ಅಲೆಕ್ಸ್‌ ಕ್ಯಾರಿ -ಅನ್‌ಸೋಲ್ಡ್

ದೀಪಕ್‌ ಚಹಾರ್ 9.25 ರೂ.ಗೆ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸೇಲ್‌ ಆಗಿದ್ದಾರೆ.

ಆಕಾಶ್‌ ದೀಪ್ 8 ಕೋಟಿಗೆ ಲಕ್ನೋ ಸೂಪರ್‌ ಜೈಂಟ್ಸ್‌ ಪಾಲಾಗಿದ್ದಾರೆ.

ಲಾಕಿ ಫರ್ಗುಸನ್‌ 2 ಕೋಟಿಗೆ ಪಂಜಾಬ್‌ ಕಿಂಗ್ಸ್‌ ಪಾಲು

ಮುಜೀಬ್‌ ಉರ್‌ ರೆಹ್ಮಾನ್‌ -ಅನ್‌ಸೋಲ್ಡ್‌

ಅಲ್ಲಾಹ್‌ ಘಜಾನ್ಫರ್‌ -4.80 ಕೋಟಿಗೆ ಮುಂಬೈ ಇಂಡಿಯನ್ಸ್‌ ಪಾಲು

Whats_app_banner