ಹೊಸ ತಂಡ ಕಟ್ಟಿದ ಸನ್‌ರೈಸರ್ಸ್‌ ಹೈದರಾಬಾದ್; ಮೊದಲ ದಿನದ ಹರಾಜಿನಲ್ಲಿ ಯಾರಿಗೆ ಎಷ್ಟು, ಹೊಸದಾಗಿ ಸೇರಿದ ಆಟಗಾರರ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಹೊಸ ತಂಡ ಕಟ್ಟಿದ ಸನ್‌ರೈಸರ್ಸ್‌ ಹೈದರಾಬಾದ್; ಮೊದಲ ದಿನದ ಹರಾಜಿನಲ್ಲಿ ಯಾರಿಗೆ ಎಷ್ಟು, ಹೊಸದಾಗಿ ಸೇರಿದ ಆಟಗಾರರ ವಿವರ ಇಲ್ಲಿದೆ

ಹೊಸ ತಂಡ ಕಟ್ಟಿದ ಸನ್‌ರೈಸರ್ಸ್‌ ಹೈದರಾಬಾದ್; ಮೊದಲ ದಿನದ ಹರಾಜಿನಲ್ಲಿ ಯಾರಿಗೆ ಎಷ್ಟು, ಹೊಸದಾಗಿ ಸೇರಿದ ಆಟಗಾರರ ವಿವರ ಇಲ್ಲಿದೆ

ಜೆದ್ದಾದಲ್ಲಿನ ಐಪಿಎಲ್ 2025 ಹರಾಜಿನ ಮೊದಲ ದಿನ ಹರಾಜಿನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಇಶಾನ್ ಕಿಶನ್ ಅವರನ್ನು 11.25 ಕೋಟಿ ರೂ.ಗೆ ಖರೀದಿಸಿದೆ. ಇದೀಗ ಎಸ್ಆರ್ ಎಚ್ ತಂಡದ ಬಲ ಹೇಗಿದೆ, ಯಾರಿಗೆ ಎಷ್ಟು ಮೊತ್ತವನ್ನು ನೀಡಲಾಗಿದೆ ಎಂಬುದರ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ.

ಐಪಿಎಲ್ ಹರಾಜಿನ ಮೊದಲ ದಿನ ಬಳಿಕ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಬಲ ಹೇಗಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ಐಪಿಎಲ್ ಹರಾಜಿನ ಮೊದಲ ದಿನ ಬಳಿಕ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಬಲ ಹೇಗಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

2025ರ ಐಪಿಎಲ್ ಗೆ ಸನ್‌ರೈಸರ್ಸ್‌ ಹೈದರಾಬಾದ್ ಬಲಿಷ್ಠ ತಂಡವನ್ನೇ ಕಟ್ಟಿದೆ. ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆದ ಐಪಿಎಲ್ ಹರಾಜಿನ ಮೊದಲ ದಿನ (ನವೆಂಬರ್ 24, ಭಾನುವಾರ) ದೊಡ್ಡ ದೊಡ್ಡ ಆಟಗಾರರನ್ನು ಖರೀದಿ ಮಾಡಿದೆ. 2 ಕೋಟಿ ಮೂಲ ಬೆಲೆ ಹೊಂದಿದ್ದ ವಿಕೆಟ್ ಕೀಪರ್ ಕಂ ಬ್ಯಾಟರ್ ಇಶಾನ್ ಕಿಶನ್ ಅವರಿಗೆ 11.25 ಕೋಟಿ ರೂಪಾಯಿ ನೀಡಿ ತಂಡಕ್ಕೆ ಸೇರಿಸಿಕೊಂಡಿೆ . ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಹರ್ಷಲ್ ಪಟೇಲ್ ಅವರನ್ನು ಕ್ರಮವಾಗಿ 10 ಮತ್ತು 8 ಕೋಟಿ ರೂ.ಗೆ ಖರೀದಿಸಲಾಗಿದೆ. ಸ್ಪಿನ್ನರ್ ರಾಹುಲ್ ಚಹರ್ ಕೂಡ ಎಸ್ಆರ್ ಎಚ್ ತಂಡಕ್ಕೆ 3.2 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. ಇವರ ಜೊತೆಗೆ ಅಭಿನವ್ ಮನೋಹರ್ (3.2 ಕೋಟಿ ರೂ.), ಆಡಮ್ ಜಂಪಾ (2.4 ಕೋಟಿ ರೂ.) ಮತ್ತು ಅಥರ್ವ ತೈಡೆ (30 ಲಕ್ಷ ರೂ.) ಅವರನ್ನು ಖರೀದಿಸಿದೆ.

ಮೊಹಮ್ಮದ್ ಶಮಿ ಅವರಿಗೆ ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿ ದೊಡ್ಡ ಬಿಡ್ ಮಾಡಿದ್ದು ವಿಶೇಷವಾಗಿ ಅನೇಕರಿಗೆ ಆಶ್ಚರ್ಯಕರವಾಗಿತ್ತು. ಹರಾಜಿಗೆ ಮುಂಚಿತವಾಗಿ, ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಅವರು ಶಮಿ ಅವರು ದೊಡ್ಡ ಮೊತ್ತಕ್ಕೆ ಖರೀದಿಯಾಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು, ಆದರೆ ಮಂಜ್ರೇಕರ್ ಅವರ ಭವಿಷ್ಯ ಸುಳ್ಳಾಯಿತು.

ಶಮಿ ಅವರಿಗೆ ಕೋಲ್ಕತಾ ನೈಟ್ ರೈಡರ್ಸ್ ಮೊದಲು ಬಿಡ್ಡಿಂಗ್ ಪ್ರಾರಂಭಿಸಿತು, ಚೆನ್ನೈ ಸೂಪರ್ ಕಿಂಗ್ಸ್ ಕಣಕ್ಕೆ ಇಳಿಯಿತು. ಈ ಫ್ರಾಂಚೈಸಿ 8.25 ಕೋಟಿ ರೂಪಾಯಿ ವರಿಗೆ ಬಿಡ್ ಮಾಡಿತು. ನಂತರ ಸಿಎಸ್ ಕೆ ಹಿಂದೆ ಸರಿಯಿತು. ಆ ಬಳಿಕ ಲಕ್ನೋ ಸೂಪರ್ ಜೈಂಟ್ಸ್ 9.75 ಕೋಟಿಗೆ ಬಿಡ್ಡಿಂಗ್ ನಡೆಸಿತು. ಜಿಟಿಯನ್ನು ಆರ್ ಟಿಎಂಗೆ ಕೇಳುವ ಮೊದಲು ಎಸ್ ಆರ್ ಎಚ್ 10 ಕೋಟಿ ರೂಪಾಯಿಗಳ ಬಿಡ್ ನೊಂದಿಗೆ ಟಾಪ್ ನಲ್ಲಿತ್ತು.

ಈ ವೇಗಿಯನ್ನು ಹರಾಜಿಗೆ ಮುಂಚಿತವಾಗಿ ಗುಜರಾತ್ ಟೈಟಾನ್ಸ್ ಬಿಡುಗಡೆ ಮಾಡಿತು. ಗಾಯದಿಂದಾಗಿ 2024 ರ ಋತುವನ್ನು ಸಹ ತಪ್ಪಿಸಿಕೊಂಡಿದ್ದರು. ಶಮಿ 2023 ರ ವಿಶ್ವಕಪ್ ನಲ್ಲಿ ಭಾರತದ ಪ್ರಮುಖ ವಿಕೆಟ್ ಟೇಕರ್ ಆಗಿ ಎನಿಸಿದ್ದರು. ಪಂದ್ಯಾವಳಿಯ 48 ವರ್ಷಗಳ ಇತಿಹಾಸದಲ್ಲಿ 13 ಆವೃತ್ತಿಗಳನ್ನು ಒಳಗೊಂಡ ವೇಗದ 50 ವಿಕೆಟ್ ಗಳನ್ನು ಪಡೆದ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಾಯಕ ಪ್ಯಾಟ್ ಕಮಿನ್ಸ್ ಅವರೊಂದಿಗೆ ಎಸ್ಆರ್ ಎಚ್ ಬೌಲಿಂಗ್ ವಿಭಾಗವನ್ನು ಮುನ್ನಡೆಸುವ ನಿರೀಕ್ಷೆಯಿದೆ.

ಸನ್‌ರೈಸರ್ಸ್‌ ಹೈದರಾಬಾದ್ ಐಪಿಎಲ್ ಹರಾಜು 2025

ಇಶಾನ್ ಕಿಶನ್ (11.25 ಕೋಟಿ),

ರಾಹುಲ್ ಚಹರ್ (3.20 ಕೋಟಿ),

ಮೊಹಮ್ಮದ್ ಶಮಿ (10 ಕೋಟಿ),

ಹರ್ಷಲ್ ಪಟೇಲ್ (8 ಕೋಟಿ),

ಅಭಿನವ್ ಮನೋಹರ್ (3.2 ಕೋಟಿ),

ಆಡಮ್ ಜಂಪಾ (2.4 ಕೋಟಿ),

ಸಿಮರ್ಜೀತ್ ಸಿಂಗ್ (1.5 ಕೋಟಿ),

ಅಥರ್ವ ತೈಡೆ (30 ಲಕ್ಷ)

ಅಭಿಷೇಕ್ ಶರ್ಮಾ (14 ಕೋಟಿ),

ಟ್ರಾವಿಸ್ (1 ಕೋಟಿ)

ಪ್ಯಾಟ್ ಕಮಿನ್ಸ್ (23 ಕೋಟಿ)

ನಿತೀಶ್ ಕುಮಾರ್ ರೆಡ್ಡಿ (6 ಕೋಟಿ)

ಹೆನ್ರಿಚ್ ಕ್ಲಾಸೆನ್ (23 ಕೋಟಿ)

Whats_app_banner