Jio Mock Auction: ಕೆಎಲ್ ರಾಹುಲ್ 29.5 ಕೋಟಿಗೆ ಆರ್​​ಸಿಬಿ ಪಾಲು, ಇದೇ ನಿಜವಾಗಲಿ ಎಂದ ಫ್ಯಾನ್ಸ್
ಕನ್ನಡ ಸುದ್ದಿ  /  ಕ್ರಿಕೆಟ್  /  Jio Mock Auction: ಕೆಎಲ್ ರಾಹುಲ್ 29.5 ಕೋಟಿಗೆ ಆರ್​​ಸಿಬಿ ಪಾಲು, ಇದೇ ನಿಜವಾಗಲಿ ಎಂದ ಫ್ಯಾನ್ಸ್

Jio Mock Auction: ಕೆಎಲ್ ರಾಹುಲ್ 29.5 ಕೋಟಿಗೆ ಆರ್​​ಸಿಬಿ ಪಾಲು, ಇದೇ ನಿಜವಾಗಲಿ ಎಂದ ಫ್ಯಾನ್ಸ್

IPL 2025 Mock Auction: ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಸಿನಿಮಾ ನಡೆಸಿದ ಅಣಕು ಹರಾಜಿನಲ್ಲಿ ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಬೃಹತ್ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಅದರಲ್ಲೂ ಫ್ಯಾನ್ಸ್ ಆಸೆ ಪಟ್ಟಿರುವಂತೆ ರಾಹುಲ್, ಆರ್​​ಸಿಬಿ ಪಾಲಾಗಿದ್ದಾರೆ.

ಜಿಯೋ ಅಣಕು ಹರಾಜಿನಲ್ಲಿ ಕೆಎಲ್ ರಾಹುಲ್ 29.5 ಕೋಟಿಗೆ ಆರ್​​ಸಿಬಿ ಪಾಲು; ಇವತ್ತು ಯಾರ ಪಾಲಾಗ್ತಾರೆ ಕನ್ನಡಿಗ?
ಜಿಯೋ ಅಣಕು ಹರಾಜಿನಲ್ಲಿ ಕೆಎಲ್ ರಾಹುಲ್ 29.5 ಕೋಟಿಗೆ ಆರ್​​ಸಿಬಿ ಪಾಲು; ಇವತ್ತು ಯಾರ ಪಾಲಾಗ್ತಾರೆ ಕನ್ನಡಿಗ?

ಇಂಡಿಯನ್​​ ಪ್ರೀಮಿಯರ್ ಲೀಗ್​ 2025 ಮೆಗಾ ಹರಾಜು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ನವೆಂಬರ್ 24 ಮತ್ತು 25 ರಂದು 574 ಆಟಗಾರರ ಭವಿಷ್ಯ ನಿರ್ಧಾರವಾಗಲಿದೆ. ಸ್ಟಾರ್​ ಆಟಗಾರರು ಕೋಟಿ ಕೋಟಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಅದಕ್ಕೂ ಮುನ್ನವೇ ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಸಿನಿಮಾ ಅಣಕು ಹರಾಜು ನಡೆಸಿದ್ದು, ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಬೃಹತ್ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಯಾವ ಆಟಗಾರ ಯಾವ ತಂಡಕ್ಕೆ ಖರೀದಿಯಾಗಿದ್ದಾರೆ ಎಂಬುದರ ವಿವರ ಇಲ್ಲಿದೆ ನೋಡಿ.

ಆರ್​ಸಿಬಿಗೆ ಕೆಎಲ್ ರಾಹುಲ್

ಐಪಿಎಲ್​ ಹರಾಜು ದಿನಾಂಕ ಪ್ರಕಟವಾದಾಗಿನಿಂದಲೂ ಕೆಎಲ್ ರಾಹುಲ್ ಆರ್​ಸಿಬಿ ತಂಡವನ್ನು ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಈ ಹಿಂದೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಪ್ರತಿನಿಧಿಸಿದ್ದ ರಾಹುಲ್, ಯಾವ ತಂಡದ ಪಾಲಾಗಲಿದ್ದಾರೆ ಎಂಬುದು ಎಲ್ಲರ ಕುತೂಹಲ. ಅಭಿಮಾನಿಗಳು ಸಹ ಕೆಎಲ್ ಖರೀದಿಗೆ ಒತ್ತಾಯ ಮಾಡಿದ್ದಾರೆ. ಇದೀಗ ಅಣಕು ಹರಾಜಿನಲ್ಲೂ ಕೆಎಲ್ ರಾಹುಲ್ 29.5 ಕೋಟಿಗೆ ರೆಡ್​ ಆರ್ಮಿಯ ಪಾಲಾಗಿದ್ದಾರೆ. ನಾಯಕನಾಗಿ, ವಿಕೆಟ್ ಕೀಪರ್​, ಆರಂಭಿಕನಾಗಿ, ಅತ್ಯುತ್ತಮ ಫೀಲ್ಡರ್ ಆಗಿರುವ ಕೆಎಲ್, ಹರಾಜಿನಲ್ಲಿ ಯಾವ ತಂಡದ ಪಾಲಾಗಲಿದ್ದಾರೆ ಎಂಬುದು ಕಾದುನೋಡಬೇಕಿದೆ.

ರಿಷಭ್ ಪಂತ್​ಗೆ ಸಿಕ್ತು 33 ಕೋಟಿ

ಮಾರ್ಕ್ಯೂ ಆಟಗಾರರ ಮೊದಲ ಸೆಟ್‌ನಲ್ಲಿ ಬರುತ್ತಿರುವ ರಿಷಭ್ ಪಂತ್ ಅವರನ್ನು ಪಂಜಾಬ್ ಕಿಂಗ್ಸ್ 33 ಕೋಟಿ ರೂಪಾಯಿಗಳಿಗೆ ಖರೀದಿಸಿತು. ಕ್ರಿಕೆಟ್ ತಜ್ಞರು ಸಹ ಪಂತ್ ಪಿಬಿಕೆಎಸ್ ಪಾಲಾಗಲಿದ್ದಾರೆ ಎಂದೇ ಭವಿಷ್ಯ ನುಡಿದಿದ್ದಾರೆ. ಏಕೆಂದರೆ ತಂಡದ ಪರ್ಸ್​ನಲ್ಲಿ 110.5 ಕೋಟಿ ರೂಪಾಯಿ ಇದೆ. ಹೀಗಾಗಿ, ಬೃಹತ್ ಮೊತ್ತವನ್ನು ಪೇರಿಸಿ ಪ್ರಮುಖ ಆಟಗಾರರನ್ನು ಖರೀದಿಸುವ ನಿರೀಕ್ಷೆಯಲ್ಲಿದೆ. ಅಲ್ಲದೆ, ಪಿಬಿಕೆಎಸ್​ ಕೋಚ್ ರಿಕಿ ಪಾಂಟಿಂಗ್, ಪಂತ್​ ಖರೀದಿಗೆ ಹೆಚ್ಚು ಒಲವು ತೋರಿದ್ದಾರೆ. ನಾಯಕ, ವಿಕೆಟ್ ಕೀಪರ್, ಮಧ್ಯಮ ಕ್ರಮಾಂಕದ ಬ್ಯಾಟರ್​ ಆಗಿರುವ ಪಂತ್​ರನ್ನು ಯಾರು ಖರೀದಿಸುತ್ತಾರೆ ಎಂಬುದನ್ನು ನೋಡಬೇಕಿದೆ.

ಅಣಕು ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಖರೀದಿಯಾದವರು

ರಿಷಭ್ ಪಂತ್: 33 ಕೋಟಿ ರೂಪಾಯಿ - ಪಂಜಾಬ್ ಕಿಂಗ್ಸ್​

ಕೆಎಲ್ ರಾಹುಲ್: 29.5 ಕೋಟಿ ರೂಪಾಯಿ - ಆರ್​ಸಿಬಿ

ಮಿಚೆಲ್ ಸ್ಟಾರ್ಕ್: 18 ಕೋಟಿ ರೂಪಾಯಿ - ಮುಂಬೈ ಇಂಡಿಯನ್ಸ್

ಅರ್ಷದೀಪ್ ಸಿಂಗ್: 16.5 ಕೋಟಿ - ಪಂಜಾಬ್ ಕಿಂಗ್ಸ್

ಯುಜುವೇಂದ್ರ ಚಹಲ್: 15 ಕೋಟಿ ರೂಪಾಯಿ - ಸನ್‌ರೈಸರ್ಸ್ ಹೈದರಾಬಾದ್

ಇಶಾನ್ ಕಿಶನ್: 15.5 ಕೋಟಿ ರೂಪಾಯಿ - ಡೆಲ್ಲಿ ಕ್ಯಾಪಿಟಲ್ಸ್

ಐಪಿಎಲ್ ತಂಡಗಳ ಪರ್ಸ್

ಮುಂಬೈ ಇಂಡಿಯನ್ಸ್ - 45 ಕೋಟಿ ರೂಪಾಯಿ

ಕೋಲ್ಕತ್ತಾ ನೈಟ್ ರೈಡರ್ಸ್ - 51 ಕೋಟಿ ರೂಪಾಯಿ

ಚೆನ್ನೈ ಸೂಪರ್ ಕಿಂಗ್ಸ್ - 55 ಕೋಟಿ ರೂಪಾಯಿ

ರಾಜಸ್ಥಾನ್ ರಾಯಲ್ಸ್ - 41 ಕೋಟಿ ರೂಪಾಯಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು - 83 ಕೋಟಿ ರೂಪಾಯಿ

ದೆಹಲಿ ರಾಜಧಾನಿಗಳು - 73 ಕೋಟಿ ರೂಪಾಯಿ

ಗುಜರಾತ್ ಟೈಟಾನ್ಸ್ - 69 ಕೋಟಿ ರೂಪಾಯಿ

ಲಕ್ನೋ ಸೂಪರ್ ಜೈಂಟ್ಸ್ - 69 ಕೋಟಿ ರೂಪಾಯಿ

ಪಂಜಾಬ್ ಕಿಂಗ್ಸ್ - 110.5 ಕೋಟಿ ರೂಪಾಯಿ

ಸನ್ ರೈಸರ್ಸ್ ಹೈದರಾಬಾದ್ - 45 ಕೋಟಿ ರೂಪಾಯಿ

Whats_app_banner