ಹೆಡ್​ಕೋಚ್ ಗೌತಮ್ ಗಂಭೀರ್​ 16 ವರ್ಷಗಳ​ ದಾಖಲೆಯನ್ನೇ ಪುಡಿಗಟ್ಟಿದ ಯಶಸ್ವಿ ಜೈಸ್ವಾಲ್; ಸಿಕ್ಸರ್​ನಲ್ಲೂ ಈ ಎಡಗೈ ಆಟಗಾರನೇ ಕಿಂಗ್
ಕನ್ನಡ ಸುದ್ದಿ  /  ಕ್ರಿಕೆಟ್  /  ಹೆಡ್​ಕೋಚ್ ಗೌತಮ್ ಗಂಭೀರ್​ 16 ವರ್ಷಗಳ​ ದಾಖಲೆಯನ್ನೇ ಪುಡಿಗಟ್ಟಿದ ಯಶಸ್ವಿ ಜೈಸ್ವಾಲ್; ಸಿಕ್ಸರ್​ನಲ್ಲೂ ಈ ಎಡಗೈ ಆಟಗಾರನೇ ಕಿಂಗ್

ಹೆಡ್​ಕೋಚ್ ಗೌತಮ್ ಗಂಭೀರ್​ 16 ವರ್ಷಗಳ​ ದಾಖಲೆಯನ್ನೇ ಪುಡಿಗಟ್ಟಿದ ಯಶಸ್ವಿ ಜೈಸ್ವಾಲ್; ಸಿಕ್ಸರ್​ನಲ್ಲೂ ಈ ಎಡಗೈ ಆಟಗಾರನೇ ಕಿಂಗ್

Yashasvi Jaiswal: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಹೆಡ್​ಕೋಚ್ ಗೌತಮ್ ಗಂಭೀರ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಹೆಡ್​ಕೋಚ್ ಗೌತಮ್ ಗಂಭೀರ್​ 16 ವರ್ಷಗಳ​ ದಾಖಲೆಯನ್ನೇ ಪುಡಿಗಟ್ಟಿದ ಯಶಸ್ವಿ ಜೈಸ್ವಾಲ್; ಸಿಕ್ಸರ್​ನಲ್ಲೂ ಈ ಎಡಗೈ ಆಟಗಾರನೇ ಕಿಂಗ್
ಹೆಡ್​ಕೋಚ್ ಗೌತಮ್ ಗಂಭೀರ್​ 16 ವರ್ಷಗಳ​ ದಾಖಲೆಯನ್ನೇ ಪುಡಿಗಟ್ಟಿದ ಯಶಸ್ವಿ ಜೈಸ್ವಾಲ್; ಸಿಕ್ಸರ್​ನಲ್ಲೂ ಈ ಎಡಗೈ ಆಟಗಾರನೇ ಕಿಂಗ್

ಬಾರ್ಡರ್ ಗವಾಸ್ಕರ್​ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಪರ್ತ್​​ನ ಆಪ್ಟಸ್​ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ. ಮೊದಲ ಇನ್ನಿಂಗ್ಸ್​​ನಲ್ಲಿ 150 ರನ್​ಗಳಿಗೆ ಆಲೌಟ್ ಆಗಿದ್ದ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್​ನಲ್ಲಿ 172 ರನ್ ಗಳಿಸುವ ಮೂಲಕ 218 ರನ್​ಗಳ ಮುನ್ನಡೆ ಪಡೆದಿದೆ. ಆ ಮೂಲಕ ಬೃಹತ್ ಗುರಿ ನೀಡುವ ಲೆಕ್ಕಾಚಾರ ಹಾಕಿಕೊಂಡಿದೆ. ಅದೇ ರೀತಿ ಮೊದಲ ಇನ್ನಿಂಗ್ಸ್​​ನಲ್ಲಿ ಡಕೌಟ್ ಆಗಿದ್ದ ಯಶಸ್ವಿ ಜೈಸ್ವಾಲ್, 2ನೇ ಇನ್ನಿಂಗ್ಸ್​ನಲ್ಲಿ 90 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಇದರೊಂದಿಗೆ ಪ್ರಸ್ತುತ ಹೆಡ್​ಕೋಚ್ ಆಗಿರುವ ಗೌತಮ್ ಗಂಭೀರ್ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಯಾವುದು ಆ ದಾಖಲೆ? ಇಲ್ಲಿದೆ ವಿವರ.

ಆಸ್ಟ್ರೇಲಿಯಾ ನೆಲದಲ್ಲಿ ಎರಡನೇ ಇನ್ನಿಂಗ್ಸ್ ಆಡಿರುವ ಯಶಸ್ವಿ ಜೈಸ್ವಾಲ್ ಕ್ಲಾಸಿಕ್ ಇನ್ನಿಂಗ್ಸ್ ಕಟ್ಟಿದರು. 193 ಎಸೆತಗಳನ್ನು ಎದುರಿಸಿದ ಆರಂಭಿಕ ಆಟಗಾರ, 7 ಬೌಂಡರಿ, 2 ಸಿಕ್ಸರ್​ಗಳ ಸಹಿತ 90 ರನ್ ಸಿಡಿಸಿ ಅಜೇಯರಾಗಿ ಉಳಿದಿದ್ದು, ಇತಿಹಾಸ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಕೆತ್ತಿದ್ದಾರೆ. ಗೌತಮ್ ಗಂಭೀರ್ ಅವರ 16 ವರ್ಷಗಳ ಹಳೆಯ ದಾಖಲೆ ಮುರಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ರನ್ ಗಳಿಸಿ ಎಡಗೈ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಯಶಸ್ವಿ ಜೈಸ್ವಾಲ್ ಪಾತ್ರರಾಗಿದ್ದಾರೆ. ಈ ದಾಖಲೆ ಗಂಭೀರ್ ಹೆಸರಿನಲ್ಲಿತ್ತು. ಗೌತಿ 2008ರಲ್ಲಿ 8 ಟೆಸ್ಟ್​ಗಳಲ್ಲಿ 70.87 ಸರಾಸರಿಯೊಂದಿಗೆ 3 ಶತಕ ಮತ್ತು 6 ಅರ್ಧಶತಕ ಸಹಿತ 1134 ರನ್​ ಪೇರಿಸಿದ್ದರು. ಈಗ ಈ ದಾಖಲೆ ಜೈಸ್ವಾಲ್ ಪಾಲಾಗಿದೆ.

ಕ್ಯಾಲೆಂಡರ್ ವರ್ಷದಲ್ಲಿ ಸಾವಿರಕ್ಕೂ ಅಧಿಕ ರನ್ ಸಿಡಿಸಿದ ಎಡಗೈ ಬ್ಯಾಟರ್​ಗಳು ಕೂಡ ಇವರಿಬ್ಬರೇ ಎಂಬುದು ವಿಶೇಷ. ಯಶಸ್ವಿ ಜೈಸ್ವಾಲ್ ಈ ವರ್ಷ 1209 ರನ್ ಸಿಡಿಸಿದ್ದಾರೆ. 2024ರಲ್ಲಿ 12 ಪಂದ್ಯಗಳ 23 ಇನ್ನಿಂಗ್ಸ್​ಗಳಲ್ಲಿ 2 ಶತಕ, 8 ಅರ್ಧಶತಕ ಸಹಿತ 57.57ರ ಬ್ಯಾಟಿಂಗ್ ಸರಾರಿಯಲ್ಲಿ 1209 ರನ್ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ 214. ಜೈಸ್ವಾಲ್ ಅವರ ಟೆಸ್ಟ್ ವೃತ್ತಿಜೀವನ ನೋಡುವುದಾದರೆ... ಪ್ರಸ್ತುತ ಅವರು ಭಾರತ ತಂಡದ ಪರ ತಮ್ಮ 15ನೇ ಟೆಸ್ಟ್ ಪಂದ್ಯ ಆಡುತ್ತಿದ್ದಾರೆ. ತಮ್ಮ ಬ್ಯಾಟಿಂಗ್‌ನಿಂದ 28 ಇನ್ನಿಂಗ್ಸ್‌ಗಳಲ್ಲಿ 55.58 ಸರಾಸರಿಯಲ್ಲಿ 1445 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ದ್ವಿಶತಕ, ಮೂರು ಶತಕ ಮತ್ತು 8 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಜೈಸ್ವಾಲ್ 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ರೊಸ್ಸೌದಲ್ಲಿ ಟೆಸ್ಟ್​ಗೆ ಡೆಬ್ಯೂ ಮಾಡಿದರು.

ಆಸ್ಟ್ರೇಲಿಯಾದಲ್ಲಿ ಭಾರತೀಯ ಆರಂಭಿಕರಿಂದ ಅತಿ ಹೆಚ್ಚು ರನ್​ ಜೊತೆಯಾಟ

ಸುನಿಲ್ ಗವಾಸ್ಕರ್, ಕ್ರಿಸ್ ಶ್ರೀಕಾಂತ್- 191 ರನ್

ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್- 172* ರನ್

ಚೇತನ್ ಚೌಹಾಣ್, ಸುನಿಲ್ ಗವಾಸ್ಕರ್- 165 ರನ್

ಆಕಾಶ್ ಚೋಪ್ರಾ, ವೀರೇಂದ್ರ ಸೆಹ್ವಾಗ್- 141 ರನ್

ವಿನೂ ಮಂಕಡ್, ಚಂದು ಸರ್ವತೆ- 124 ರನ್

ಆಕಾಶ್ ಚೋಪ್ರಾ, ವೀರೇಂದ್ರ ಸೆಹ್ವಾಗ್- 123 ರನ್

(ಇನ್ನು 20 ರನ್ ಗಳಿಸಿದರೆ ಜೈಸ್ವಾಲ್-ರಾಹುಲ್ ಜೋಡಿ ಅಗ್ರಸ್ಥಾನಕ್ಕೇರಲಿದೆ. ಆ ಮೂಲಕ 38 ವರ್ಷಗಳ ದಾಖಲೆ ಮುರಿಯಲಿದೆ)

ಯಶಸ್ವಿ ಜೈಸ್ವಾಲ್ ಸಿಕ್ಸರ್ ದಾಖಲೆ

ಯಶಸ್ವಿ ಜೈಸ್ವಾಲ್ (ಭಾರತ)- 34 ಸಿಕ್ಸರ್​ (2024)

ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್)- 33 ಸಿಕ್ಸರ್ (2014)

ಬೆನ್ ಸ್ಟೋಕ್ಸ್ (ಇಂಗ್ಲೆಂಡ್)- 26 ಸಿಕ್ಸರ್ (2022)

ಆಡಮ್ ಗಿಲ್‌ಕ್ರಿಸ್ಟ್ (ಆಸ್ಟ್ರೇಲಿಯಾ)- 22 ಸಿಕ್ಸರ್ (2005)

ವೀರೇಂದ್ರ ಸೆಹ್ವಾಗ್ (ಭಾರತ)- 22 ಸಿಕ್ಸರ್ (2008)

(ಟೆಸ್ಟ್​ ಕ್ರಿಕೆಟ್​ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ದಾಖಲೆ ಜೈಸ್ವಾಲ್ ಪಾಲಾಗಿದೆ. ಆ ಮೂಲಕ ಬ್ರೆಂಡನ್ ಮೆಕಲಮ್ ದಾಖಲೆಯನ್ನು ಮುರಿದಿದ್ದಾರೆ)

Whats_app_banner