ಭಾರತ ತಂಡಕ್ಕೆ ಮರಳಲು ಮಹತ್ವದ ನಿರ್ಧಾರ ತೆಗೆದುಕೊಂಡ ಇಶಾನ್ ಕಿಶನ್; ಕೆಟ್ಟ ಮೇಲೆ ಬುದ್ದಿ ಬಂತು!-ishan kishan makes u turn after word with bcci selectors to return to domestic cricket amid team india absence prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ ತಂಡಕ್ಕೆ ಮರಳಲು ಮಹತ್ವದ ನಿರ್ಧಾರ ತೆಗೆದುಕೊಂಡ ಇಶಾನ್ ಕಿಶನ್; ಕೆಟ್ಟ ಮೇಲೆ ಬುದ್ದಿ ಬಂತು!

ಭಾರತ ತಂಡಕ್ಕೆ ಮರಳಲು ಮಹತ್ವದ ನಿರ್ಧಾರ ತೆಗೆದುಕೊಂಡ ಇಶಾನ್ ಕಿಶನ್; ಕೆಟ್ಟ ಮೇಲೆ ಬುದ್ದಿ ಬಂತು!

Ishan Kishan: ಅವಕಾಶ ವಂಚಿತವಾಗಿರುವ ವಿಕೆಟ್ ಕೀಪರ್​ ಬ್ಯಾಟರ್ ಇಶಾನ್ ಕಿಶನ್ ಭಾರತ ತಂಡಕ್ಕೆ ಮರಳಲು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ರಣಜಿ ಆಡಲು ಮುಂದಾಗಿದ್ದಾರೆ.

ಭಾರತ ತಂಡಕ್ಕೆ ಮರಳಲು ಮಹತ್ವದ ನಿರ್ಧಾರ ತೆಗೆದುಕೊಂಡ ಇಶಾನ್ ಕಿಶನ್; ಕೆಟ್ಟ ಮೇಲೆ ಬುದ್ದಿ ಬಂತು!
ಭಾರತ ತಂಡಕ್ಕೆ ಮರಳಲು ಮಹತ್ವದ ನಿರ್ಧಾರ ತೆಗೆದುಕೊಂಡ ಇಶಾನ್ ಕಿಶನ್; ಕೆಟ್ಟ ಮೇಲೆ ಬುದ್ದಿ ಬಂತು!

ರಣಜಿ ಟ್ರೋಫಿ ಆಡುವಂತೆ ಸೂಚಿಸಿದ ಆದೇಶವನ್ನು ನಿರ್ಲಕ್ಷಿಸಿ ರಹಸ್ಯವಾಗಿ ಐಪಿಎಲ್​ಗೆ ಸಿದ್ಧತೆ ನಡೆಸಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ವಿಕೆಟ್ ಕೀಪರ್​-ಬ್ಯಾಟರ್​ ಇಶಾನ್ ಕಿಶನ್, ಈಗ ಭಾರತ ತಂಡಕ್ಕೆ ಮರಳಲು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಪ್ರಸ್ತುತ ಭಾರತ ತಂಡದಲ್ಲಿ ಅವಕಾಶ ವಂಚಿತರಾಗಿರುವ ಕಿಶನ್​, ತನ್ನ ತಪ್ಪು ತಿದ್ದಿಕೊಂಡು ಸರಿ ದಾರಿ ಬರಲು ಹೆಜ್ಜೆ ಇಟ್ಟಿದ್ದು, ದೇಶೀಯ ಕ್ರಿಕೆಟ್​ ಆಡಲು ನಿರ್ಧರಿಸಿದ್ದಾರೆ.

2023ರ ಕ್ಯಾಲೆಂಡರ್ ವರ್ಷದ ಅಂತ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನ ​ ಮಾನಸಿಕ ವಿಶ್ರಾಂತಿ ಪಡೆಯುವುದಾಗಿ ಸುಳ್ಳು ಹೇಳಿ ಭಾರತ ತಂಡದಿಂದ ಹಿಂದೆ ಸರಿದಿದ್ದ ಇಶಾನ್​, ದುಬೈನಲ್ಲಿ ಬರ್ತ್​ಡೇ ಪಾರ್ಟಿಯೊಂದಕ್ಕೆ ಹೋಗಿದ್ದರು. ಬಳಿಕ ಶೋ ಕೌನ್​ ಬನೇಗಾ ಕರೌಡ್ ಪತಿ ಕಾರ್ಯಕ್ರಮಕ್ಕೂ ಹಾಜರಾಗಿದ್ದರು. ಈ ವೇಳೆ ತಂಡಕ್ಕೆ ಮರಳಬೇಕೆಂದರೆ ರಣಜಿ ಆಡುವುದು ಕಡ್ಡಾಯ ಎಂದು ಬಿಸಿಸಿಐ ತಿಳಿಸಿತ್ತು.

ಅಂದಿನ ಹೆಡ್​ಕೋಚ್ ರಾಹುಲ್ ದ್ರಾವಿಡ್, ಚೀಫ್ ಸೆಲೆಕ್ಟರ್​ ಅಜಿತ್ ಅಗರ್ಕರ್​ ಮತ್ತು ಬಿಸಿಸಿಐ ಅಧಿಕಾರಿಗಳು ಇಶಾನ್​ಗೆ ಜಾರ್ಖಂಡ್ ಪರ ರಣಜಿ ಟ್ರೋಫಿ ಆಡುವಂತೆ ಸಲಹೆ ನೀಡಿದ್ದರು. ಆದರೆ ಯಾರನ್ನೂ ಲೆಕ್ಕಿಸದ ಇಶಾನ್​ 2024ರ ಐಪಿಎಲ್​ಗೆ ಹಾರ್ದಿಕ್ ಪಾಂಡ್ಯ ಜತೆಗೆ ಸಿದ್ಧತೆ ನಡೆಸಿದ್ದರು. ಹೀಗಾಗಿ ಆತನನ್ನು ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕಿತ್ತು ಹಾಕಿತು. ಭಾರತ ತಂಡದಲ್ಲಿ ಅವಕಾಶ ನೀಡದೆ ಶಿಕ್ಷೆ ನೀಡಿತು.

ರಣಜಿ ಟ್ರೋಫಿಯಲ್ಲಿ ಭಾಗವಹಿಸುವಂತೆ ನಾಯಕ ರೋಹಿತ್ ಶರ್ಮಾ ಒತ್ತಾಯಿಸಿದ ಹೊರತಾಗಿಯೂ ರಾಜ್ಯ ತಂಡವಾದ ಜಾರ್ಖಂಡ್  ಪ್ರತಿನಿಧಿಸದಿರಲು ನಿರ್ಧರಿಸಿದ್ದರು. ಆದರೂ ಬರೋಡಾದಲ್ಲಿ ಐಪಿಎಲ್​​ಗೆ ಅಭ್ಯಾಸ ನಡೆಸುತ್ತಿದ್ದರು. ಮುಂಬೈ ಇಂಡಿಯನ್ಸ್ ಪರ 14 ಪಂದ್ಯಗಳಲ್ಲಿ 320 ರನ್ ಗಳಿಸಿ ಕಳಪೆ ಪ್ರದರ್ಶನ ನೀಡಿದ್ದರು. ಇದೀಗ ಕೆಟ್ಟ ಮೇಲೆ ಬುದ್ದಿ ಬಂದಿದ್ದು ರಾಷ್ಟ್ರೀಯ ತಂಡಕ್ಕೆ ಮರಳಲು ಯು-ಟರ್ನ್ ಹೊಡೆದಿದ್ದಾರೆ.

ನಾನು ರಣಜಿ ಆಡುತ್ತೇನೆ ಎಂದ ಇಶಾನ್ ಕಿಶನ್

ಕ್ರಿಕ್​ಬಜ್ ವರದಿ ಮಾಡಿದ್ದು, 26 ವರ್ಷದ ವಿಕೆಟ್ ಕೀಪರ್-ಬ್ಯಾಟರ್​ ದೇಶೀಯ ಕ್ರಿಕೆಟ್​ಗೆ ಮರಳಲು ಸಜ್ಜಾಗಿದ್ದಾರೆ. ಬಿಸಿಸಿಐ ಆಯ್ಕೆದಾರರೊಂದಿಗಿನ ಚರ್ಚೆಯ ಬಳಿಕ ಇಶಾನ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಅಂತಾರಾಷ್ಟ್ರೀಯ ಅವಕಾಶಗಳನ್ನು ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಿದ್ದೀರಿ ಎಂದು ಸೆಲೆಕ್ಟರ್ಸ್​ ಒತ್ತಿ ಹೇಳಿದ ನಂತರ ರಣಜಿ ಸೇರಿದಂತೆ ದೇಶೀಯ ಕ್ರಿಕೆಟ್​​​​ ಟೂರ್ನಿಗಳಲ್ಲಿ ಜಾರ್ಖಂಡ್​ ಪರ ಕಣಕ್ಕಿಳಿಯಲು ಇಶಾನ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದೆ.

ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಅವರನ್ನು ಜಾರ್ಖಂಡ್ ತಂಡದ ನಾಯಕನನ್ನಾಗಿ ನೇಮಿಸಲು ಚಿಂತನೆ ನಡೆಯುತ್ತಿದೆ. 2023ರ ನವೆಂಬರ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಯಲ್ಲಿ ಕಿಶನ್ ಕೊನೆಯ ಬಾರಿಗೆ ಭಾರತ ಪರ ಆಡಿದ್ದರು. ಸೆಪ್ಟೆಂಬರ್ 5 ರಂದು ಆಂಧ್ರಪ್ರದೇಶದ ಅನಂತಪುರದಲ್ಲಿ ದುಲೀಪ್ ಟ್ರೋಫಿ ಪ್ರಥಮ ದರ್ಜೆ ರೆಡ್ ಬಾಲ್ ಸ್ಪರ್ಧೆಯೊಂದಿಗೆ ದೇಶೀಯ ಟೂರ್ನಮೆಂಟ್ ಪ್ರಾರಂಭವಾಗಲಿದೆ. 

ಇಶಾನ್ ಕಿಶನ್ ಮಾತ್ರವಲ್ಲ, ಶ್ರೇಯಸ್ ಅಯ್ಯರ್ ಅವರನ್ನೂ ಭಾರತ ತಂಡದಿಂದ ಹೊರಗಿಡಲಾಗಿತ್ತು. ಅಲ್ಲದೆ, ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಿಂದಲೂ ಅಯ್ಯರ್​ನನ್ನು ಕಿತ್ತು ಹಾಕಲಾಗಿತ್ತು. ಏಕೆಂದರೆ ಶ್ರೇಯಸ್ ಅಹ ರಣಜಿ ಆಡುವಂತೆ ಸೂಚಿಸಿದ್ದರೂ ನಿರ್ಲಕ್ಷಿಸಿದ್ದರು. ಹಾಗಾಗಿ, ಇಬ್ಬರಿಗೂ ಒಟ್ಟಿಗೆ ಶಿಕ್ಷೆ ನೀಡಿತ್ತು. ಇದೀಗ ಅಯ್ಯರ್​ ಮತ್ತೆ ಭಾರತ ತಂಡಕ್ಕೆ ಮರಳಿದ್ದಾರೆ. ಆದರೆ ಅವರು ಉತ್ತಮ ಪ್ರದರ್ಶನ ನೀಡಿದರಷ್ಟೇ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಸಾಧ್ಯ. ಅದೇ ರೀತಿ ಇಶಾನ್ ಕಿಶನ್ ಕೂಡ ದೇಶೀಯ ಕ್ರಿಕೆಟ್​ನಲ್ಲಿ ಸ್ಥಿರ ಪ್ರದರ್ಶನ ನೀಡಿದರೆ ಭಾರತ ತಂಡಕ್ಕೆ ಮರಳುವ ಸಾಧ್ಯತೆ ಇದೆ.