ಜಸ್ಪ್ರೀತ್ ಬುಮ್ರಾ ಬೌಲಿಂಗ್ ವಿಧಾನ ಸರಿಯಿಲ್ಲ; ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಿದ ಚರ್ಚೆ, ಹಿರಿಯ ಕ್ರಿಕೆಟಿಗರು ಹೇಳೋದೇನು?
ಕನ್ನಡ ಸುದ್ದಿ  /  ಕ್ರಿಕೆಟ್  /  ಜಸ್ಪ್ರೀತ್ ಬುಮ್ರಾ ಬೌಲಿಂಗ್ ವಿಧಾನ ಸರಿಯಿಲ್ಲ; ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಿದ ಚರ್ಚೆ, ಹಿರಿಯ ಕ್ರಿಕೆಟಿಗರು ಹೇಳೋದೇನು?

ಜಸ್ಪ್ರೀತ್ ಬುಮ್ರಾ ಬೌಲಿಂಗ್ ವಿಧಾನ ಸರಿಯಿಲ್ಲ; ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಿದ ಚರ್ಚೆ, ಹಿರಿಯ ಕ್ರಿಕೆಟಿಗರು ಹೇಳೋದೇನು?

ಟೀಮ್ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಬೌಲಿಂಗ್ ವಿಧಾನ ಸರಿ ಇಲ್ಲ ಎಂಬ ಆರೋಪ ಕೇಳಿ ಬಂದಿದೆ. ಬುಮ್ರಾ ಚೆಂಡನ್ನು ಎಸೆಯುತ್ತಿದ್ದಾರೆ (chucking) ಎಂದು ಸೋಷಿಯಲ್‌ ಮೀಡಿಯಾದಲ್ಲಿ ಹಲವರು ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ಮಾಜಿ ಆಟಗಾರ ಸ್ಪಷ್ಟನೆ ನೀಡಿದ್ದಾರೆ.

ಜಸ್ಪ್ರೀತ್ ಬುಮ್ರಾ ಬೌಲಿಂಗ್ ವಿಧಾನ ಸರಿಯಿಲ್ಲ; ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಿದ ಚರ್ಚೆ
ಜಸ್ಪ್ರೀತ್ ಬುಮ್ರಾ ಬೌಲಿಂಗ್ ವಿಧಾನ ಸರಿಯಿಲ್ಲ; ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಿದ ಚರ್ಚೆ (AFP)

ಬಾರ್ಡರ್‌-ಗವಾಸ್ಕರ್ ಟ್ರೋಫಿಯ ಪರ್ತ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡ ಕೇವಲ 104 ರನ್‌ಗಳಿಗೆ ಆಲೌಟ್‌ ಆಯ್ತು. ಭಾರತ ಕ್ರಿಕೆಟ್ ತಂಡದ ನಾಯಕ ಜಸ್ಪ್ರೀತ್ ಬುಮ್ರಾ, ಮಾರಕ ಬೌಲಿಂಗ್‌ ದಾಳಿಯೊಂದಿಗೆ 5 ಪ್ರಮುಖ ವಿಕೆಟ್‌ಗಳನ್ನು ಪಡೆದರು. ಪರಿಣಾಮ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಭಾರತವು ಭರ್ಜರಿ ಕಂಬ್ಯಾಕ್‌ ಮಾಡಿತು. ಟೀಮ್‌ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್‌ಗಳಿಗೆ ಆಲೌಟ್ ಆಗಿತ್ತು. ಆದರೆ ಆಸೀಸ್‌ ಇನ್ನಿಂಗ್ಸ್‌ ವೇಳೆ ಮ್ಯಾಜಿಕ್ ಮಾಡಿದ ಬುಮ್ರಾ, ಅಭಿಮಾನಿಗಳನ್ನು ನಿರಾಸೆಗೊಳಿಸಲಿಲ್ಲ. ಪ್ರಮುಖ 5 ವಿಕೆಟ್‌ ಕಿತ್ತು ಆಸೀಸ್‌ ತಂಡವನ್ನು ಬೇಗ ಆಲೌಟ್‌ ಮಾಡಲು ನೆರವಾದರು.

ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾದ ಅಗ್ರ ಕ್ರಮಾಂಕವನ್ನೇ ಬುಮ್ರಾ ಅಲುಗಾಡಿಸಿದರು. ಆರಂಭಿಕರಾದ ನಾಥನ್ ಮೆಕ್‌ಸ್ವೀನಿ ಹಾಗೂ ಉಸ್ಮಾನ್ ಖವಾಜಾ ಬಳಿಕ ಅನುಭವಿ ಆಟಗಾರ ಸ್ಟೀವ್ ಸ್ಮಿತ್ ಅವರನ್ನು ಡಕೌಟ್‌ ಮಾಡಿದರು. ನಂತರ ಪ್ಯಾಟ್ ಕಮಿನ್ಸ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.

ಬುಮ್ರಾ 5 ವಿಕೆಟ್

ಮೊದಲ ಇನ್ನಿಂಗ್ಸ್‌ನಲ್ಲಿ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಕಬಳಿಸಿದರು. 18 ಓವರ್‌ಗಳಲ್ಲಿ 30 ರನ್ ನೀಡಿ 5 ವಿಕೆಟ್ ಪಡೆದರು. ಇದರಿಂದಾಗಿ ಕಾಂಗರೂ ತಂಡ ಮೊದಲ ಇನಿಂಗ್ಸ್‌ನಲ್ಲಿ 104 ರನ್‌ಗಳಿಗೆ ಆಲೌಟ್ ಆಯ್ತು.

ಬುಮ್ರಾ ಬೌಲಿಂಗ್‌ ಬಗ್ಗೆ ಹಲವು ಪ್ರಶ್ನೆಗಳು

ಟೀಮ್ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಅವರ ಅದ್ಭುತ ಪ್ರದರ್ಶನವು‌ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ್ದು ಒಂದೆಡೆಯಾದರೆ, ಕೆಲವು ಕಡೆ ಸಾಮಾಜಿಕ ಜಾಲತಾಣಗಳಲ್ಲಿ ಬುಮ್ರಾ ಅಕ್ರಮವಾಗಿ ಬೌಲಿಂಗ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಬುಮ್ರಾ ಅವರ ಬೌಲಿಂಗ್ ವಿಧಾನವು ವಿವಾದಾಸ್ಪದವಾಗಿದೆ ಎಂದು ಹೇಳಲಾಗಿದೆ. ಬುಮ್ರಾ ಚೆಂಡನ್ನು ಎಸೆಯುತ್ತಿದ್ದಾರೆ (chucking) ಎಂದು ಹಲವರು ಪೋಸ್ಟ್‌ ಮಾಡಿದ್ದಾರೆ.

ದಿಗ್ಗಜ ಆಟಗಾರನ ಸ್ಪಷ್ಟನೆ

ಮಾಜಿ ಇಂಗ್ಲಿಷ್ ಬೌಲಿಂಗ್ ಕೋಚ್ ಇಯಾನ್ ಪಾಂಟ್, ಬುಮ್ರಾ ಅವರ ಬೌಲಿಂಗ್‌ ಕ್ರಮ ಏಕೆ ಕಾನೂನುಬದ್ಧವೆಂದು ಪರಿಗಣಿಸಲಾಗಿದೆ ಎಂದು ವಿವರಿಸಿದ್ದಾರೆ. “ಅವರ ಮಣಿಕಟ್ಟಿನಿಂದ ಮೊಣಕೈವರೆಗೆ ಕೈ ನೇರವಾಗಿರುವುದನ್ನು ನೋಡಬಹುದು” ಎಂದು ಅವರು ಹೇಳಿದರು. "ಮೊಣಕೈ 15 ಡಿಗ್ರಿಗಿಂತ ಹೆಚ್ಚು ಬಾಗಬಾರದು ಎಂಬುದು ನಿಯಮ. ಅವರ ತೋಳಿನಲ್ಲಿ ಮುಂದಕ್ಕೆ ಬೆಂಡ್ ಅನ್ನು ನೀವು ಸ್ಪಷ್ಟವಾಗಿ ನೋಡಬಹುದು. ಇದು ಹೈಪರ್ ಎಕ್ಸ್‌ಟೆನ್ಷನ್ ಆಗಿದೆ. ಕೀಲುಗಳಲ್ಲಿ ಅತಿಯಾದ ನಮ್ಯತೆ ಹೊಂದಿರುವವರಿಗೆ ಮುಂದಕ್ಕೆ ಬಾಗುವುದನ್ನು ಅನಮತಿಸಲಾಗಿದೆ" ಎಂದು ಅವರು ಹೇಳಿದ್ದಾರೆ.

ಪರ್ತ್‌ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತವು 6 ವಿಕೆಟ್‌ ಕಳೆದುಕೊಂಡು 487 ರನ್‌ ಕಲೆ ಹಾಕಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿದೆ. 533 ರನ್‌ಗಳ ಮುನ್ನಡೆ ಸಾಧಿಸುವ ಮೂಲಕ ಆಸ್ಟ್ರೇಲಿಯಾ ಗೆಲುವಿಗೆ 533 ರನ್‌ಗಳ ಬೃಹತ್‌ ಗುರಿ ನೀಡಿದೆ. ನಾಲ್ಕನೇ ದಿನದಾಟದಲ್ಲಿ‌ 33 ಓವರ್‌ಗಳವರೆಗೆ ಆಸೀಶ್‌ 5 ವಿಕೆಟ್‌ ಕಳೆದುಕೊಂಡು 126 ರನ್‌ ಗಳಿಸಿದೆ. ಭಾರತದ ಗೆಲವಿಗೆ ಕೇವಲ 5 ವಿಕೆಟ್‌ ಅಗತ್ಯವಿದೆ. ಪರ್ತ್‌ ಟೆಸ್ಟ್‌ ಗೆಲ್ಲುವುದು ಬಹುತೇಕ ಖಚಿತ.

Whats_app_banner