Rinku Singh: ರಿಂಕು ಸಿಂಗ್‌ಗೆ ಒಲಿದ ಮತ್ತೊಂದು ಅದೃಷ್ಟ: ಮಹತ್ವದ ನಿರ್ಧಾರ ತೆಗೆದುಕೊಂಡ ಕೆಕೆಆರ್
ಕನ್ನಡ ಸುದ್ದಿ  /  ಕ್ರಿಕೆಟ್  /  Rinku Singh: ರಿಂಕು ಸಿಂಗ್‌ಗೆ ಒಲಿದ ಮತ್ತೊಂದು ಅದೃಷ್ಟ: ಮಹತ್ವದ ನಿರ್ಧಾರ ತೆಗೆದುಕೊಂಡ ಕೆಕೆಆರ್

Rinku Singh: ರಿಂಕು ಸಿಂಗ್‌ಗೆ ಒಲಿದ ಮತ್ತೊಂದು ಅದೃಷ್ಟ: ಮಹತ್ವದ ನಿರ್ಧಾರ ತೆಗೆದುಕೊಂಡ ಕೆಕೆಆರ್

ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ನಾಯಕ ಶ್ರೇಯಸ್ ಅಯ್ಯರ್ ಅಚ್ಚರಿ ಎಂಬಂತೆ ತಂಡದಿಂದ ಕೈಬಿಟ್ಟಿತು. ಅಯ್ಯರ್ ನಾಯಕತ್ವದಲ್ಲಿ ಕೆಕೆಆರ್ ಕಳೆದ ಸೀಸನ್​ನಲ್ಲಿ ಚಾಂಪಿಯನ್ ಕೂಡ ಆಯಿತು. ಇದೀಗ ಅಯ್ಯರ್ ಔಟ್ ಆಗಿದ್ದು, ಮುಂದಿನ ನಾಯಕ ಯಾರು ಎಂಬುದು ಮ್ಯಾನೇಜ್ ಮೆಂಟ್ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ.

Rinku Singh: ರಿಂಕು ಸಿಂಗ್‌ಗೆ ಒಲಿದ ಮತ್ತೊಂದು ಅದೃಷ್ಟ: ಮಹತ್ವದ ನಿರ್ಧಾರ ತೆಗೆದುಕೊಂಡ ಕೆಕೆಆರ್
Rinku Singh: ರಿಂಕು ಸಿಂಗ್‌ಗೆ ಒಲಿದ ಮತ್ತೊಂದು ಅದೃಷ್ಟ: ಮಹತ್ವದ ನಿರ್ಧಾರ ತೆಗೆದುಕೊಂಡ ಕೆಕೆಆರ್ (PC: HT File Photo)

ರಿಂಕು ಸಿಂಗ್ ಅವರಿಗೆ ಕಳೆದ ಕೆಲವು ತಿಂಗಳುಗಳಿಂದ ಭರ್ಜರಿ ಅದೃಷ್ಟ ಒಲಿದುಬರುತ್ತಿದೆ. ಇತ್ತೀಚೆಗಷ್ಟೇ ಕೆಕೆಆರ್ ಅವರನ್ನು 13 ಕೋಟಿ ರೂ. ಗೆ ತನ್ನಲ್ಲಿ ಉಳಿಸಿಕೊಂಡಿತು. ಇದೀಗ ರಿಂಕು ಸಿಂಗ್ ಐಪಿಎಲ್ 2025 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನೂತನ ನಾಯಕನಾಗಬಹುದು ಎಂಬ ವರದಿಗಳಿವೆ. ಕಳೆದ ಐಪಿಎಲ್ ಸೀಸನ್ ನಲ್ಲಿ ನಾಯಕರಾಗಿದ್ದ ಅಯ್ಯರ್ ಅವರನ್ನು ಈ ಬಾರಿ ಕೆಕೆಆರ್ ಉಳಿಸಿಕೊಂಡಿಲ್ಲ. ಇದೀಗ ಅಯ್ಯರ್ ಬದಲಿಗೆ ರಿಂಕುಗೆ ನಾಯಕತ್ವ ನೀಡಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜೋರು ಚರ್ಚೆ ನಡೆಯುತ್ತಿದೆ.

ಕೆಕೆಆರ್ ನಾಯಕನಾಗಿ ರಿಂಕು ಸಿಂಗ್?

ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ನಾಯಕ ಶ್ರೇಯಸ್ ಅಯ್ಯರ್ ಅಚ್ಚರಿ ಎಂಬಂತೆ ತಂಡದಿಂದ ಕೈಬಿಟ್ಟಿತು. ಅಯ್ಯರ್ ನಾಯಕತ್ವದಲ್ಲಿ ಕೆಕೆಆರ್ ಕಳೆದ ಸೀಸನ್​ನಲ್ಲಿ ಚಾಂಪಿಯನ್ ಕೂಡ ಆಯಿತು. ಇದೀಗ ಅಯ್ಯರ್ ಔಟ್ ಆಗಿದ್ದು, ಮುಂದಿನ ನಾಯಕ ಯಾರು ಎಂಬುದು ಮ್ಯಾನೇಜ್ ಮೆಂಟ್ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ. ಇದರಲ್ಲಿ ರಿಂಕು ಸಿಂಗ್ ರೇಸ್ ನಲ್ಲಿದ್ದಾರೆ ಎಂಬ ವರದಿಗಳಿವೆ.

ರಿಂಕು ಸಿಂಗ್ ನಾಯಕತ್ವದ ಗುಣಗಳನ್ನು ಹೊಂದಿದ್ದಾರೆಯೇ?

ರಿಂಕು ಸಿಂಗ್ ಬಹಳ ಸಮಯದಿಂದ ದೇಶೀಯ ಕ್ರಿಕೆಟ್ ಆಡುತ್ತಿದ್ದಾರೆ. ಇದೀಗ ಐಪಿಎಲ್ ಹಾಗೂ ಟೀಂ ಇಂಡಿಯಾ ಎರಡರಲ್ಲೂ ಉತ್ತಮ ಹೆಸರು ಗಳಿಸಿದ್ದಾರೆ. ರಿಂಕು ಹೈವೋಲ್ಟೇಜ್ ಮ್ಯಾಚ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಮ್ಯಾಚ್ ಫಿನಿಶರ್ ಕೂಡ ಆಗಿದ್ದಾರೆ. ಮುಖ್ಯವಾಗಿ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಅವರಲ್ಲಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಹಾಗಾಗಿ ನಾಯಕನಾಗಿ ರಿಂಕು ಸಿಂಗ್ ಮಿಂಚಬಹುದು. ರಿಂಕು ಯುಪಿ ಟಿ20 ಲೀಗ್‌ನಲ್ಲಿ ಮೀರತ್ ಮೇವರಿಕ್ಸ್ ನಾಯಕತ್ವವನ್ನೂ ವಹಿಸಿದ್ದರು. ಆ ತಂಡ ಚಾಂಪಿಯನ್ ಆಗಿತ್ತು.

KKR ನಲ್ಲಿ ರಿಂಕು ಅನುಭವ?

ರಿಂಕು ಸಿಂಗ್ ಅವರು ಕೆಕೆಆರ್‌ನಲ್ಲಿ ಬಹಳ ಸಮಯದಿಂದ ಇದ್ದಾರೆ, ಆದ್ದರಿಂದ ಅವರು ತಂಡದ ನಿರ್ವಹಣೆಯನ್ನು ಚೆನ್ನಾಗಿ ತಿಳಿದಿದ್ದಾರೆ. ಅವರು ತಂಡದ ಬಗ್ಗೆ ಹಾಗೂ ಪ್ರತಿಯೊಬ್ಬ ಆಟಗಾರನ ಬಗ್ಗೆ ತಿಳಿದುಕೊಂಡಿದ್ದಾರೆ. ರಿಂಕು ಸಿಂಗ್ ಕೂಡ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಯಾವುದೇ ಆಟಗಾರನನ್ನು ನಾಯಕನನ್ನಾಗಿ ಮಾಡುವ ಮೊದಲು ತಂಡವು ಈ ಗುಣಗಳನ್ನು ಹುಡುಕುತ್ತದೆ. ರಿಂಕುಗೆ ಈ ಗುಣಗಳಿವೆ ಎಂದು ನೇರವಾಗಿ ಹೇಳಬಹುದು.

ಮತ್ತೊಂದೆಡೆ ತಂಡದಲ್ಲಿ ಅನುಭವಿ ಆಟಗಾರರಾಗಿ ಸುನಿಲ್ ನರೈನ್, ಆ್ಯಂಡ್ರೆ ರಸೆಲ್ ಸೇರಿದಂತೆ ಅನೇಕರಿದ್ದಾರೆ. ಹೀಗಾಗಿ ಇವರ ಮಾರ್ಗದರ್ಶನದಲ್ಲಿ ಐಪಿಎಲ್ 2025 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ರಿಂಕು ಸಿಂಗ್ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ. ಐಪಿಎಲ್ ಮೆಗಾ ಹರಾಜಿಗೂ ಮುನ್ನ ಕೆಕೆಆರ್ ಒಟ್ಟು 6 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಇಲ್ಲಿ ರಿಂಕು ಸಿಂಗ್​ಗೆ 13 ಕೋಟಿ ರೂ. ನೀಡಿದರೆ, ವರುಣ್ ಚಕ್ರವರ್ತಿ, ಸುನಿಲ್ ನರೈನ್ ಹಾಗೂ ಆ್ಯಂಡ್ರೆ ರಸೆಲ್​ಗೆ ತಲಾ 12 ಕೋಟಿ ರೂ., ಹರ್ಷಿತ್ ರಾಣಾ ಹಾಗೂ ರಮಣ್​ದೀಪ್ ಸಿಂಗ್​ಗೆ ತಲಾ 4 ಕೋಟಿ ರೂ. ನೀಡಿದೆ.

Whats_app_banner