ವಿರಾಟ್ ಕೊಹ್ಲಿಗೆ ಗ್ರ್ಯಾಂಡ್ ವೆಲ್​ಕಮ್ ನೀಡಿದ ಆಸ್ಟ್ರೇಲಿಯಾದ ಪತ್ರಿಕೆಗಳು; ಕ್ಯಾಪ್ಟನ್ಸಿ ಬಿಟ್ರೂ, ಫ್ಲಾಪ್ ಆಗಿದ್ದರೂ ಏನ್ ಕ್ರೇಜ್ ಗುರು!
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿಗೆ ಗ್ರ್ಯಾಂಡ್ ವೆಲ್​ಕಮ್ ನೀಡಿದ ಆಸ್ಟ್ರೇಲಿಯಾದ ಪತ್ರಿಕೆಗಳು; ಕ್ಯಾಪ್ಟನ್ಸಿ ಬಿಟ್ರೂ, ಫ್ಲಾಪ್ ಆಗಿದ್ದರೂ ಏನ್ ಕ್ರೇಜ್ ಗುರು!

ವಿರಾಟ್ ಕೊಹ್ಲಿಗೆ ಗ್ರ್ಯಾಂಡ್ ವೆಲ್​ಕಮ್ ನೀಡಿದ ಆಸ್ಟ್ರೇಲಿಯಾದ ಪತ್ರಿಕೆಗಳು; ಕ್ಯಾಪ್ಟನ್ಸಿ ಬಿಟ್ರೂ, ಫ್ಲಾಪ್ ಆಗಿದ್ದರೂ ಏನ್ ಕ್ರೇಜ್ ಗುರು!

Virat Kohli: ಬಾರ್ಡರ್​ ಗವಾಸ್ಕರ್ ಟ್ರೋಫಿ ಪರ್ತ್​ ತಲುಪಿರುವ ವಿರಾಟ್ ಕೊಹ್ಲಿ ಅವರನ್ನು ಆಸ್ಟ್ರೇಲಿಯಾದ ಪತ್ರಿಕೆಯೊಂದು ಹಿಂದಿ ಮತ್ತು ಪಂಜಾಬಿ ಭಾಷೆಗಳಲ್ಲಿ ಹೆಡ್​ಲೈನ್ ಹಾಕಿ ಗ್ರ್ಯಾಂಡ್ ವೆಲ್​ಕಮ್ ಮಾಡಿಕೊಂಡಿದೆ.

ವಿರಾಟ್ ಕೊಹ್ಲಿಗೆ ಗ್ರ್ಯಾಂಡ್ ವೆಲ್​ಕಮ್ ನೀಡಿದ ಆಸ್ಟ್ರೇಲಿಯಾದ ಪತ್ರಿಕೆಗಳು; ಕ್ಯಾಪ್ಟನ್ಸಿ ಬಿಟ್ರೂ, ಫ್ಲಾಪ್ ಆಗಿದ್ದರೂ ಏನ್ ಕ್ರೇಜ್ ಗುರು!
ವಿರಾಟ್ ಕೊಹ್ಲಿಗೆ ಗ್ರ್ಯಾಂಡ್ ವೆಲ್​ಕಮ್ ನೀಡಿದ ಆಸ್ಟ್ರೇಲಿಯಾದ ಪತ್ರಿಕೆಗಳು; ಕ್ಯಾಪ್ಟನ್ಸಿ ಬಿಟ್ರೂ, ಫ್ಲಾಪ್ ಆಗಿದ್ದರೂ ಏನ್ ಕ್ರೇಜ್ ಗುರು!

Virat Kohli: ವಿರಾಟ್ ಕೊಹ್ಲಿ, ವಿಶ್ವ ಕ್ರಿಕೆಟ್​ನ ಸೂಪರ್​ ಸ್ಟಾರ್ ಕ್ರಿಕೆಟಿಗ. ರನ್ ಗಳಿಸಲಿ, ಫ್ಲಾಪ್ ಆಗಲಿ, ಕೊಹ್ಲಿ ಕ್ರೇಜ್ ಒಂಚೂರು ಕುಗ್ಗಿಲ್ಲ. ಬ್ಯಾಟಿಂಗ್​​ಗೆ ಬ್ರಾಂಡ್ ಅಂಬಾಸಿಡರ್ ಆಗಿರುವ ಕಿಂಗ್ ಕೊಹ್ಲಿ, ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಸಜ್ಜಾಗುತ್ತಿದ್ದಾರೆ. ಈ ಸರಣಿ ಆರಂಭವಾಗುವ 2 ವಾರಗಳ ಮೊದಲೇ ಪರ್ತ್​ಗೆ ಆಗಮಿಸಿರುವ ಕೊಹ್ಲಿಗೆ ಆಸೀಸ್​ನ ಪತ್ರಿಕೆಗಳಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. 3 ವರ್ಷಗಳ ಹಿಂದೆ ನಾಯಕತ್ವ ತ್ಯಜಿಸಿದ್ದರೂ ಕ್ರಿಕೆಟ್​ನಲ್ಲಿ ಡಾಮಿನೇಟ್ ಮಾಡುತ್ತಿರುವ ವಿರಾಟ್ ಕ್ರೇಜ್ ಇನ್ನೂ ಕುಗ್ಗಿಲ್ಲ ಎಂಬುದಕ್ಕೆ ಇದೇ ಉತ್ತಮ ಉದಾಹರಣೆ.

ಹೌದು ಆಸ್ಟ್ರೇಲಿಯಾದ ನ್ಯೂಸ್​ ಪೇಪರ್​​ಗಳ ಮುಖಪುಟಗಳಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಕೊಹ್ಲಿ ಫೋಟೋವನ್ನು ಫ್ರಂಜ್​ ಪೇಜ್​ನಲ್ಲಿ ಪ್ರಕಟಿಸಿ ಆತನ ಕ್ರಿಕೆಟ್ ರೆಕಾರ್ಡ್ಸ್ ಹಾಕಿದ್ದಾರೆ. ಅಲ್ಲದೆ, ಆತನ ಹಿಂದೆ ಭಾರತ ತ್ರಿವರ್ಣ ಧ್ವಜ ಹಾಕಿದ್ದಾರೆ. ಆ ಮೂಲಕ ನವೆಂಬರ್ 22ರಿಂದ ಪ್ರಾರಂಭವಾಗುವ ಉಭಯ ತಂಡಗಳ ನಡುವಿನ 5 ಟೆಸ್ಟ್ ಸರಣಿಗೂ ಮುನ್ನ ಮತ್ತಷ್ಟು ಹೈಪ್ ನೀಡಲಾಗಿದೆ. ಸ್ಟಾರ್ ಕ್ರಿಕೆಟಿಗನಿಗೆ ಹಿಂದಿ ಮತ್ತು ಪಂಜಾಬಿ ಭಾಷೆಗಳಲ್ಲೂ ಬರೆಯಲಾಗಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪತ್ರಿಕೆಯ ಮುಖಪುಟದ ಚಿತ್ರಗಳನ್ನು ಮತ್ತು ‘ಯುಗನ್ ಕಿ ಲಡಾಯಿ’ (ಯುಗಗಳಿಗಾಗಿ ಹೋರಾಡಿದ) ಎಂಬ ಶೀರ್ಷಿಕೆಯನ್ನು ಹಂಚಿಕೊಂಡಿದ್ದಾರೆ.

ಅದೇ ಪತ್ರಿಕೆಯು ಪಂಜಾಬಿ ಭಾಷೆಯಲ್ಲಿ ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಒಂದು ವಿಭಾಗದಲ್ಲಿ ಲೇಖನ ಪ್ರಕಟಿಸಿದೆ. ಅದರ ಶೀರ್ಷಿಕೆ ಹೀಗಿತ್ತು ‘ನವಂ ರಾಜಾ’ (ಹೊಸ ರಾಜ).

ವಿರಾಟ್ ಕೊಹ್ಲಿಗೆ ಹೊಸ ಸವಾಲು

ಒಂದು ವಾರದ ಹಿಂದೆ ತಮ್ಮ 36ನೇ ಹುಟ್ಟುಹಬ್ಬ ಆಚರಿಸಿಕೊಂಡ ಕೊಹ್ಲಿ ಅವರು ನವೆಂಬರ್​ 10ರ ಭಾನುವಾರ ಪರ್ತ್​​ಗೆ ಆಗಮಿಸಿದ ಮೊದಲ ಭಾರತೀಯ ಆಟಗಾರ. ಆ ಬಳಿಕ 5 ಆಟಗಾರರ ಪ್ರತ್ಯೇಕ ತಂಡ ಭಾನುವಾರವೇ ಆಸ್ಟ್ರೇಲಿಯಾಕ್ಕೆ ತೆರಳಿತು. ಉಳಿದವರು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಸೋಮವಾರ ಮುಂಬೈನಿಂದ ಹೊರಟರು. ಆದಾಗ್ಯೂ, ಸರಣಿಯ ಆರಂಭಿಕ ಪಂದ್ಯಕ್ಕೆ ಭಾರತದ ನಾಯಕ ರೋಹಿತ್ ಶರ್ಮಾ ಲಭ್ಯತೆಯ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಪ್ರಸ್ತುತ ಈ ಸರಣಿ ವಿರಾಟ್ ಕೊಹ್ಲಿ ಪಾಲಿಗೆ ನಿರ್ಣಾಯಕವಾಗಿದೆ. ಇಲ್ಲಿ ಅಬ್ಬರಿಸಿದರೆ ಮಾತ್ರ ಟೆಸ್ಟ್ ಭವಿಷ್ಯ ನಿರ್ಧಾರವಾಗಲಿದೆ. ಆಸೀಸ್ ನೆಲದಲ್ಲಿ ಹೊಸ ಸವಾಲು ಗೆಲ್ಲುವುದು ವಿರಾಟ್​ಗೆ ಅನಿವಾರ್ಯವಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಕೊಹ್ಲಿ, ತೀವ್ರ ಟೀಕೆಗೆ ಗುರಿಯಾದರು. ಇದರೊಂದಿಗೆ ಭಾರತ ತವರಿನಲ್ಲಿ 0-3 ಅಂತರದಿಂದ ವೈಟ್​ವಾಶ್ ಮುಖಭಂಗಕ್ಕೆ ಒಳಗಾದರು. ಕೊಹ್ಲಿ, 15.50 ಸರಾಸರಿಯಲ್ಲಿ 93 ರನ್ ಗಳಿಸಿದ್ದರು. ಇದು ಕಳೆದ 7 ವರ್ಷಗಳಲ್ಲಿ ತವರು ಸರಣಿಯಲ್ಲಿ ಕನಿಷ್ಠ ಸರಾಸರಿಯಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅಬ್ಬರಿಸಿದರೆ ಕೊಹ್ಲಿಯ ವೃತ್ತಿಜೀವನಕ್ಕೆ ತಿರುವು ಸಿಗಲಿದೆ. ಆಸೀಸ್ ವಿರುದ್ಧ ಬ್ಯಾಟಿಂಗ್ ಮಾಡಲು ಇಷ್ಟಪಡುವ ಕೊಹ್ಲಿ, 25 ಟೆಸ್ಟ್ ಪಂದ್ಯಗಳಿಂದ 2000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಆ ಮೂಲಕ ಉತ್ತಮ ದಾಖಲೆ ಹೊಂದಿದ್ದಾರೆ. ಇದೀಗ ಆಸ್ಟ್ರೇಲಿಯಾ ನ್ಯೂಸ್​ ಪೇಪರ್​​ಗಳಲ್ಲಿ ಕೊಹ್ಲಿ ಫೋಟೋ ಮುಖಪುಟದಲ್ಲಿ ಹಾಕಿ ಗ್ರ್ಯಾಂಡ್ ವೆಲ್​ಕಮ್ ಮಾಡಿಕೊಂಡಿದ್ದಕ್ಕೆ ಅವರ ಅಭಿಮಾನಿಗಳು ಪ್ರತಿಕ್ರಿಯಿಸಿ, ಕ್ಯಾಪ್ಟನ್ಸಿ ಬಿಟ್ರೂ, ಫ್ಲಾಪ್ ಆಗಿದ್ದರೂ ಏನ್ ಕ್ರೇಜ್ ಗುರು ಅಂತಿದ್ದಾರೆ.

Whats_app_banner