ಆ ಒಂದು ಕಾರಣಕ್ಕೆ ಮೊಹಮ್ಮದ್ ಶಮಿ 19ನೇ ಮಹಡಿಯಿಂದ ಆತ್ಮಹತ್ಯೆಗೆ ಮುಂದಾಗಿದ್ದ; ಸ್ಫೋಟಕ ಸತ್ಯ ಬಿಚ್ಚಿಟ್ಟ ಸ್ನೇಹಿತ
ಕನ್ನಡ ಸುದ್ದಿ  /  ಕ್ರಿಕೆಟ್  /  ಆ ಒಂದು ಕಾರಣಕ್ಕೆ ಮೊಹಮ್ಮದ್ ಶಮಿ 19ನೇ ಮಹಡಿಯಿಂದ ಆತ್ಮಹತ್ಯೆಗೆ ಮುಂದಾಗಿದ್ದ; ಸ್ಫೋಟಕ ಸತ್ಯ ಬಿಚ್ಚಿಟ್ಟ ಸ್ನೇಹಿತ

ಆ ಒಂದು ಕಾರಣಕ್ಕೆ ಮೊಹಮ್ಮದ್ ಶಮಿ 19ನೇ ಮಹಡಿಯಿಂದ ಆತ್ಮಹತ್ಯೆಗೆ ಮುಂದಾಗಿದ್ದ; ಸ್ಫೋಟಕ ಸತ್ಯ ಬಿಚ್ಚಿಟ್ಟ ಸ್ನೇಹಿತ

Mohammed Shami: ತನ್ನ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದ್ದ ಕಾರಣ ಮಾನಸಿಕವಾಗಿ ಕುಗ್ಗಿದ್ದ ವೇಗಿ ಮೊಹಮ್ಮದ್ ಶಮಿ ಅವರು ಆತ್ಮಹತ್ಯೆಗೆ ಮುಂದಾಗಿದ್ದರು ಎಂದು ಅವರ ಸ್ನೇಹಿತ ಉಮೇಶ್ ಕುಮಾರ್ ಸ್ಫೋಟಕ ಸಂಗತಿ ಬಹಿರಂಗಪಡಿಸಿದ್ದಾರೆ.

ಆ ಒಂದು ಕಾರಣಕ್ಕೆ ಮೊಹಮ್ಮದ್ ಶಮಿ 19ನೇ ಮಹಡಿಯಿಂದ ಆತ್ಮಹತ್ಯೆಗೆ ಮುಂದಾಗಿದ್ದ; ಸ್ಫೋಟಕ ಸತ್ಯ ಬಿಚ್ಚಿಟ್ಟ ಸ್ನೇಹಿತ
ಆ ಒಂದು ಕಾರಣಕ್ಕೆ ಮೊಹಮ್ಮದ್ ಶಮಿ 19ನೇ ಮಹಡಿಯಿಂದ ಆತ್ಮಹತ್ಯೆಗೆ ಮುಂದಾಗಿದ್ದ; ಸ್ಫೋಟಕ ಸತ್ಯ ಬಿಚ್ಚಿಟ್ಟ ಸ್ನೇಹಿತ

ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ವೇಗಿ ಮೊಹಮ್ಮದ್ ಶಮಿ ಮರಳಲಿದ್ದಾರೆ ಎಂದು ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಅದರಂತೆ ಭಾರತ ತಂಡಕ್ಕೆ ಮರಳಲು ಸಜ್ಜಾಗುತ್ತಿರುವ ಶಮಿ ಕುರಿತು ಅವರ ಗೆಳೆಯ ಉಮೇಶ್ ಕುಮಾರ್ ಎಂಬವರು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಅಲ್ಲದೆ, ಹಿರಿಯ ಬೌಲರ್​ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದರು ಎಂದು ಬಹಿರಂಗಪಡಿಸಿದ್ದಾರೆ.

2023ರ ಏಕದಿನ ವಿಶ್ವಕಪ್​​​ನಲ್ಲಿ ಕಾಲು ಗಾಯವಾಗಿದ್ದರೂ ಭರ್ಜರಿ ಪ್ರದರ್ಶನ ನೀಡಿದ್ದ ಶಮಿ, ಫೈನಲ್ ಪಂದ್ಯದ ನಂತರ ಇಂಗ್ಲೆಂಡ್​​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ವಿಶ್ವಕಪ್​​ ನಂತರ ಮೆನ್ ಇನ್ ಬ್ಲ್ಯೂ ತಂಡದಲ್ಲಿ ಕಾಣಿಸಿಕೊಳ್ಳದ ವೇಗಿ, ಇದೀಗ ಎನ್​ಸಿಎನಲ್ಲಿ ತರಬೇತಿ ಪಡೆಯುತ್ತಿದ್ದು, ಶೀಘ್ರದಲ್ಲೇ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಏಕದಿನ ವಿಶ್ವಕಪ್​ನಲ್ಲಿ ಭಾರತದ ಪರ ಅಧಿಕ ವಿಕೆಟ್ ಪಡೆದ ಬೌಲರ್ ಆಗಿರುವ ಶಮಿ, ಆತ್ಮಹತ್ಯೆಗೆ ಮುಂದಾಗಿದ್ದೇಕೆ? ಇಲ್ಲಿದೆ ವಿವರ.

ಏಕದಿನ ಕ್ರಿಕೆಟ್​ನಲ್ಲಿ ವೇಗವಾಗಿ 100 ವಿಕೆಟ್ ಪೂರೈಸಿದ ಮೊದಲ ಭಾರತೀಯ ಎನಿಸಿರುವ ಮೊಹಮ್ಮದ್ ಶಮಿ ಅವರು ತಮ್ಮ ಜೀವನದಲ್ಲಿ ಹಲವು ಬಾರಿ ಕಠಿಣ ದಿನಗಳನ್ನು ಎದುರಿಸಿದ್ದಾರೆ. ಮೈದಾನದಲ್ಲಿ ಪದೆಪದೇ ಗಾಯಗೊಂಡಿದ್ದು ಮಾತ್ರವಲ್ಲ, ಅವರ ಪತ್ನಿ ಹಸಿನ್ ಜಹಾನ್ ಅವರೊಂದಿಗೆ ವಿಚ್ಛೇದನ ಪಡೆದರು. ಹಸೀನ್ ಶಮಿ ವಿರುದ್ಧವೇ ಪ್ರಕರಣ ದಾಖಲಿಸಿ ಕೌಟುಂಬಿಕ ದೌರ್ಜನ್ಯದ ಕೇಸ್ ದಾಖಲಿಸಿದ್ದರು. ಅಲ್ಲದೆ, ಮ್ಯಾಚ್ ಫಿಕ್ಸಿಂಗ್​ ಆರೋಪಗಳನ್ನೂ ಎದುರಿಸಿದ್ದರು. ಇದು ಶಮಿ ಅವರ ವೃತ್ತಿಜೀವನದ ಕರಾಳ ಹಂತವಾಗಿತ್ತು.

ಇದು ಮಾನಸಿಕವಾಗಿ ಕುಗ್ಗುವಂತೆ ಮಾಡಿತು. ಹೆಚ್ಚು ಒತ್ತಡವನ್ನೂ ತರಿಸಿತ್ತು. ನೆಮ್ಮದಿಯಿಂದ ಜೀವಿಸುವುದೂ ಕಷ್ಟಕರವಾಗಿತ್ತು. ಶಮಿ ಬದಲು ಹೋರಾಟ ನಡೆಸುತ್ತಿದ್ದರು. ಈ ಹಂತದಲ್ಲಿ ಅವರು ಸಾಕಷ್ಟು ಹಿಂಸೆ ಅನುಭವಿಸಿದರು. ಇದೇ ಕಾರಣಕ್ಕೆ ಶಮಿ ತನ್ನ ಜೀವನ ಕೊನೆಗೊಳಿಸುವ ನಿರ್ಧಾರಕ್ಕೆ ಬಂದಿದ್ದರಂತೆ. ಇದೆಲ್ಲದರಿಂದ ಮುಕ್ತಿ ಪಡೆಯಲು ಶಮಿ ಆತ್ಮಹತ್ಯೆಗೆ ಮುಂದಾಗಿದ್ದರು ಎಂದು ವೇಗಿಯ ಸ್ನೇಹಿತ ಉಮೇಶ್ ಕುಮಾರ್ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ದೇಶ ದ್ರೋಪ ಆರೋಪ ಸಹಿಸಲ್ಲ ಎಂದಿದ್ರಂತೆ ಶಮಿ

ಶಮಿ ತಮ್ಮ ಕಠಿಣ ದಿನಗಳಲ್ಲಿ ನನ್ನೊಂದಿಗೆ ನನ್ನ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಪಾಕಿಸ್ತಾನದೊಂದಿಗಿನ ಫಿಕ್ಸಿಂಗ್ ಆರೋಪಗಳು ಭುಗಿಲೆದ್ದಾಗ ಮಾನಸಿಕವಾಗಿ ಕುಗ್ಗಿ ಹೋದರು. ನಿದ್ದೆಯೂ ಮಾಡಿರಲಿಲ್ಲ. ಈ ವೇಳೆ ನಾನು ಎಲ್ಲವನ್ನೂ ಸಹಿಸಬಲ್ಲೆ. ಆದರೆ ನನ್ನ ದೇಶಕ್ಕೆ ದ್ರೋಹ ಬಗೆದ ಆರೋಪಗಳನ್ನು ಸಹಿಸುವುದಿಲ್ಲ ಎಂದು ಹೇಳಿದ್ದರು ಎಂದು ಶುಭಂಕರ್ ಮಿಶ್ರಾ ಪಾಡ್​ಕಾಸ್ಟ್​ನಲ್ಲಿ 'ಅನ್​ಪ್ಲಗ್ಡ್​ನಲ್ಲಿ ಉಮೇಶ್ ಹೇಳಿದ್ದಾರೆ. ಈ ಆರೋಪದಿಂದ ಕುಗ್ಗಿದ್ದ ಶಮಿ, ಆತ್ಮಹತ್ಯೆಗೂ ನಿರ್ಧರಿಸಿದ್ದರು.

ಮುಂಜಾನೆ 4 ಗಂಟೆಗೆ ಆತ್ಮಹತ್ಯೆಗೆ ಯತ್ನ

ದೇಶ ದ್ರೋಹದ ಆರೋಪ ಕೇಳಿದ ಬೆನ್ನಲ್ಲೇ ಅಂದು ರಾತ್ರಿ ಏನಾದರೂ ಮಾಡಿಕೊಳ್ಳಲು ನಿರ್ಧರಿಸಿದ್ದರು. ನಾನು ಮುಂಜಾನೆ 4 ಗಂಟೆಗೆ ನೀರು ಕುಡಿಯಲು ಎದ್ದು ಅಡುಗೆ ಮನೆಗೆ ಹೋಗುವ ವೇಳೆ ಶಮಿ ಬಾಲ್ಕನಿಯಲ್ಲಿ ಇರುವುದನ್ನು ನೋಡಿದೆ. ಅದು ನಾವಿದ್ದ 19ನೇ ಮಹಡಿಯಾಗಿತ್ತು. ಆದರೆ ಪರಿಸ್ಥಿತಿಯನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಬಳಿಕ ಶಮಿ ಭವಿಷ್ಯದ ಕುರಿತು ಸುದೀರ್ಘ ಚರ್ಚೆ ನಡೆಸಿದೆವು. ಒಂದು ದಿನ ನಾವು ಮಾತನಾಡುತ್ತಿದ್ದ ಸಂದರ್ಭದಲ್ಲಿ ತನಿಖಾ ತಂಡದಿಂದ ಕ್ಲೀನ್ ಚಿಟ್ ಸಿಕ್ಕಿದೆ ಎಂದು ಅವರಿಗೆ ಮೆಸೇಜ್​ ಬಂದಿತ್ತು. ಆಗವರು ವಿಶ್ವಕಪ್ ಗೆದ್ದಿದ್ದರೆ ಹೇಗಿರುತ್ತಿದ್ದರೋ ಅದಕ್ಕಿಂತ ಹೆಚ್ಚು ಸಂತೋಷವಾಗಿದ್ದರು ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ಏಕದಿನ ವಿಶ್ವಕಪ್ ವೇಳೆ ಪಾದದ ಗಾಯಕ್ಕೆ ತುತ್ತಾಗಿದ್ದ ಶಮಿ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶ ಅಥವಾ ನ್ಯೂಜಿಲೆಂಡ್ ವಿರುದ್ಧದ ತವರು ಟೆಸ್ಟ್ ಸರಣಿಯಲ್ಲಿ ಅವರು ಪುನರಾಗಮನ ಮಾಡುವ ನಿರೀಕ್ಷೆಯಿದೆ.

Whats_app_banner