ಐಪಿಎಲ್ ಮೆಗಾ ಹರಾಜಿಗೆ ಜಸ್ಪ್ರೀತ್ ಬುಮ್ರಾ? ಬರೋಬ್ಬರಿ 30 ಕೋಟಿಗೆ ಖರೀದಿಸಲು ಆರ್​ಸಿಬಿ ಚಿಂತನೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ ಮೆಗಾ ಹರಾಜಿಗೆ ಜಸ್ಪ್ರೀತ್ ಬುಮ್ರಾ? ಬರೋಬ್ಬರಿ 30 ಕೋಟಿಗೆ ಖರೀದಿಸಲು ಆರ್​ಸಿಬಿ ಚಿಂತನೆ

ಐಪಿಎಲ್ ಮೆಗಾ ಹರಾಜಿಗೆ ಜಸ್ಪ್ರೀತ್ ಬುಮ್ರಾ? ಬರೋಬ್ಬರಿ 30 ಕೋಟಿಗೆ ಖರೀದಿಸಲು ಆರ್​ಸಿಬಿ ಚಿಂತನೆ

Jasprit bumrah: 18ನೇ ಆವೃತ್ತಿಯ ಐಪಿಎಲ್​ಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡವನ್ನು ಜಸ್ಪ್ರೀತ್ ಬುಮ್ರಾ ತೊರೆಯಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.

ಐಪಿಎಲ್ ಮೆಗಾ ಹರಾಜಿಗೆ ಜಸ್ಪ್ರೀತ್ ಬುಮ್ರಾ? ಬರೋಬ್ಬರಿ 30 ಕೋಟಿಗೆ ಖರೀದಿಸಲು ಆರ್​ಸಿಬಿ ಚಿಂತನೆ
ಐಪಿಎಲ್ ಮೆಗಾ ಹರಾಜಿಗೆ ಜಸ್ಪ್ರೀತ್ ಬುಮ್ರಾ? ಬರೋಬ್ಬರಿ 30 ಕೋಟಿಗೆ ಖರೀದಿಸಲು ಆರ್​ಸಿಬಿ ಚಿಂತನೆ

17ನೇ ಆವೃತ್ತಿಯ ಐಪಿಎಲ್ ನಂತರ ಮುಂಬರುವ ಸೀಸನ್​ಗೆ ಕ್ರಿಕೆಟ್ ಪ್ರೇಮಿಗಳು ಭಾರೀ ಕುತೂಹಲದಿಂದ ಕಾಯುತ್ತಿದ್ದಾರೆ. 18ನೇ ಆವೃತ್ತಿ ಆರಂಭಕ್ಕೂ ಮುನ್ನ ನಡೆಯುವ ಮೆಗಾ ಹರಾಜಿಗೆ ಸ್ಟಾರ್ ಆಟಗಾರರೇ ಬರಲಿದ್ದು, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ರಿಷಭ್ ಪಂತ್, ರೋಹಿತ್​ ಶರ್ಮಾ​ ತಮ್ಮ ತಂಡಗಳನ್ನು ತೊರೆದು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಇವರ ಸಾಲಿಗೆ ಮತ್ತೊಬ್ಬ ತಾರಾ ಕ್ರಿಕೆಟಿಗ ಸೇರ್ಪಡೆಗೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ ಫಾಸ್ಟ್ ಬೌಲರ್​ ಜಸ್ಪ್ರೀತ್ ಬುಮ್ರಾ ಅವರು ಫ್ರಾಂಚೈಸಿ ತೊರೆಯಲು ನಿರ್ಧರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 2024ರ ಐಪಿಎಲ್​ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಕುರಿತು ಅಸಮಾಧಾನ ಹೊಂದಿದ್ದ ಬುಮ್ರಾಗೆ ಟೀಮ್ ಮ್ಯಾನೇಜ್ಮೆಂಟ್ ನಿರ್ಧಾರಗಳು ಸಹ ಖುಷಿ ಕೊಟ್ಟಿರಲಿಲ್ಲ. ಈ ನಿಟ್ಟಿನಲ್ಲಿ ಬೌಲಿಂಗ್​ನಲ್ಲಿ ಎಂಐ ಆಧಾರಸ್ಥಂಭವಾಗಿದ್ದ ಬುಮ್ರಾ ಅವರು ಇದೀಗ ಮುಂಬೈ ತೊರೆಯಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.

ಇದರ ನಡುವೆ ಬುಮ್ರಾ, ಆಕ್ಷನ್​ನಲ್ಲಿ ಕಾಣಿಸಿಕೊಂಡರೆ ಬೃಹತ್ ಮೊತ್ತ ನೀಡಿ ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಲವು ತೋರಿದೆ ಎಂದು ವರದಿಗಳು ತಿಳಿಸಿವೆ. ಬರೋಬ್ಬರಿ 30 ಕೋಟಿ ಬಿಡ್ ಸಲ್ಲಿಸಿಯಾದರೂ ತಂಡಕ್ಕೆ ಕರೆಸಿಕೊಳ್ಳಬೇಕೆಂದು ಫ್ರಾಂಚೈಸಿ ಪಣ ತೊಟ್ಟಿದೆ ಎಂದು ಕ್ರಿಕೆಟ್ ಅಡಿಕ್ಟರ್ ಹಿಂದಿ ವೆಬ್​ಸೈಟ್ ವರದಿಯಲ್ಲಿ ಉಲ್ಲೇಖಿಸಿವೆ. 17 ಸೀಸನ್​ಗಳಿಂದಲೂ ವೇಗದ ಬೌಲಿಂಗ್ ಕೊರತೆ ಎದುರಿಸುತ್ತಿರುವ ಆರ್​ಸಿಬಿ, ಬುಮ್ರಾ ಖರೀದಿಸುವ ಮೂಲಕ ಆ ವಿಭಾಗ ಬಲಪಡಿಸಲು ಯೋಚಿಸಿದೆ.

ವಿಶ್ವದ ನಂಬರ್ 1 ಬೌಲರ್

ಜಸ್ಪ್ರೀತ್ ಬುಮ್ರಾ ಆಧುನಿಕ ಕ್ರಿಕೆಟ್​ನ ಸಾರ್ವಕಾಲಿಕ ಶ್ರೇಷ್ಠ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 3 ಸ್ವರೂಪಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವ ಬುಮ್ರಾ, ಎಂತಹದ್ದೇ ಬ್ಯಾಟರ್​​ಗಳನ್ನು ಪೆವಿಲಿಯನ್​ಗಟ್ಟುವಲ್ಲಿ ನಿಪುಣರು. ಇತ್ತೀಚೆಗೆ 2024ರ ಟಿ20 ವಿಶ್ವಕಪ್‌ ಟೂರ್ನಿಯಲ್ಲೂ ಬುಮ್ರಾ, ಮ್ಯಾಜಿಕ್ ನಡೆಸಿದ್ದರು. 8 ಪಂದ್ಯಗಳಲ್ಲಿ 15 ವಿಕೆಟ್​ಗಳೊಂದಿಗೆ ಸರಣಿ ಶ್ರೇಷ್ಠ ಪ್ರಶಸ್ತಿಗೆ ಗೆದ್ದರು. ಸೋಲುವ ಪಂದ್ಯಗಳನ್ನೂ ಗೆದ್ದುಕೊಟ್ಟಿದ್ದರು.

ಐಪಿಎಲ್ 2024ರಲ್ಲೂ ಅತ್ಯುತ್ತಮ ಬೌಲಿಂಗ್

2024ರ ಐಪಿಎಲ್​​ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಲು ಪರದಾಡಿತ್ತು. 5 ಬಾರಿ ಚಾಂಪಿಯನ್ ಆಗಿರುವ ತಂಡವು ಲೀಗ್​​ನಿಂದಲೇ ಹೊರಬಿತ್ತು. ಆದರೆ ಬುಮ್ರಾ ಪ್ರದರ್ಶನದಲ್ಲಿ ಯಾವುದೇ ಕೊರತೆ ಇರಲಿಲ್ಲ. ಟೂರ್ನಿಯುದ್ದಕ್ಕೂ ಬುಮ್ರಾ ಮುಂಬೈ ಪರ ಅದ್ಭುತ ಬೌಲಿಂಗ್ ಮಾಡಿದರು. ವೇಗದ ಬೌಲರ್ 13 ಪಂದ್ಯಗಳಲ್ಲಿ 20 ವಿಕೆಟ್ ಪಡೆದರು. ಅವರ ಎಕಾನಮಿ ರೇಟ್​ ಕೇವಲ 6.48 ಆಗಿತ್ತು.

ಬುಮ್ರಾ ಐಪಿಎಲ್ ವೃತ್ತಿಜೀವನ

2013ರಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದ ಬುಮ್ರಾ, ಅಂದಿನಿಂದ ಮುಂಬೈ ಇಂಡಿಯನ್ಸ್ ಪರವೇ ಆಡುತ್ತಿದ್ದಾರೆ. ಐಪಿಎಲ್​ನಲ್ಲಿ ಬುಮ್ರಾ ವಿಕೆಟ್ ಖಾತೆ ತೆರೆದಿದ್ದು, ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಿ. 11 ವರ್ಷಗಳ ಕಾಲ ತಂಡದೊಂದಿಗೆ ಸಂಬಂಧ ಹೊಂದಿರುವ ವೇಗಿ, 133 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಕೇವಲ 7.3 ಎಕಾನಮಿ ಹೊಂದಿದ್ದಾರೆ. ಒಟ್ಟಾರೆ 165 ವಿಕೆಟ್ ಪಡೆದಿರುವ ಬುಮ್ರಾ, ಐಪಿಎಲ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Whats_app_banner