ಅದಕ್ಕಾಗಿ ಒಲಿಂಪಿಕ್ಸ್ ಕ್ರೀಡಾಗ್ರಾಮ ತೊರೆದಿದ್ದ ಬ್ರೆಜಿಲ್ ಈಜುಗಾರ್ತಿಗೆ ಶಿಕ್ಷೆ; ಅಷ್ಟು ಹೇಳಿದರೂ ನಿಯಮ ಗಾಳಿಗೆ ತೂರಿದ್ರು
ಕನ್ನಡ ಸುದ್ದಿ  /  ಕ್ರೀಡೆ  /  ಅದಕ್ಕಾಗಿ ಒಲಿಂಪಿಕ್ಸ್ ಕ್ರೀಡಾಗ್ರಾಮ ತೊರೆದಿದ್ದ ಬ್ರೆಜಿಲ್ ಈಜುಗಾರ್ತಿಗೆ ಶಿಕ್ಷೆ; ಅಷ್ಟು ಹೇಳಿದರೂ ನಿಯಮ ಗಾಳಿಗೆ ತೂರಿದ್ರು

ಅದಕ್ಕಾಗಿ ಒಲಿಂಪಿಕ್ಸ್ ಕ್ರೀಡಾಗ್ರಾಮ ತೊರೆದಿದ್ದ ಬ್ರೆಜಿಲ್ ಈಜುಗಾರ್ತಿಗೆ ಶಿಕ್ಷೆ; ಅಷ್ಟು ಹೇಳಿದರೂ ನಿಯಮ ಗಾಳಿಗೆ ತೂರಿದ್ರು

Ana Carolina Vieira: ಅನಾ ಕೆರೊಲಿನಾ ವಿಯೆರಾ ತನ್ನ ಗೆಳೆಯ ಮತ್ತು ಸಹ ಸಹ ಆಟಗಾರ ಗೇಬ್ರಿಯಲ್ ಸ್ಯಾಂಟೋಸ್ ಅವರೊಂದಿಗೆ ಕ್ರೀಡಾ ಗ್ರಾಮ ತೊರೆದ ಕಾರಣ ಪ್ಯಾರಿಸ್ ಒಲಿಂಪಿಕ್ಸ್​ನಿಂದ ಹೊರಹಾಕಲಾಗಿದೆ.

ಕ್ರೀಡಾಗ್ರಾಮ ತೊರೆದಿದ್ದ ಬ್ರೆಜಿಲ್ ಈಜುಗಾರ್ತಿ ಒಲಿಂಪಿಕ್ಸ್​ನಿಂದ ಔಟ್; ಅಷ್ಟು ಹೇಳಿದರೂ ನಿಯಮ ಗಾಳಿಗೆ ತೂರಿದ್ರು
ಕ್ರೀಡಾಗ್ರಾಮ ತೊರೆದಿದ್ದ ಬ್ರೆಜಿಲ್ ಈಜುಗಾರ್ತಿ ಒಲಿಂಪಿಕ್ಸ್​ನಿಂದ ಔಟ್; ಅಷ್ಟು ಹೇಳಿದರೂ ನಿಯಮ ಗಾಳಿಗೆ ತೂರಿದ್ರು

ಪ್ಯಾರಿಸ್ ಒಲಿಂಪಿಕ್ಸ್‌ 2024 ಕ್ರೀಡಾಕೂಟದ ನಿಮಯಗಳನ್ನು ಉಲ್ಲಂಘಿಸಿದ ಬ್ರೆಜಿಲ್ ಈಜುಗಾರ್ತಿ ಅನಾ ಕೆರೊಲಿನಾ ವಿಯೆರಾ ಅವರನ್ನು ಮೆಗಾ ಈವೆಂಟ್​ನಿಂದ ಹೊರ ಹಾಕಲಾಗಿದೆ. ತನ್ನ ಗೆಳೆಯ ಹಾಗೂ ಸಹ ಆಟಗಾರ ಗೇಬ್ರಿಯಲ್ ಸ್ಯಾಂಟೋಸ್ ಅವರೊಂದಿಗೆ ಕ್ರೀಡಾ ಗ್ರಾಮ ತೊರೆದು ಐಫೆಲ್ ಟವರ್‌ಗೆ ಭೇಟಿ ನೀಡಿದ್ದಾರೆ. ಯಾವುದೇ ಅನುಮತಿ ಪಡೆಯದ ಈ ಜೋಡಿಗೆ ಈಗ ಶಿಕ್ಷೆ ನೀಡಲಾಗಿದೆ.

ಒಲಿಂಪಿಕ್ಸ್​ ನಿಯಮಗಳ ಪ್ರಕಾರ ಅನುಮತಿ ಇಲ್ಲದೆ ಕ್ರೀಡಾಪಟುಗಳಿಗೆ ನಿರ್ಮಿಸಿದ ಕ್ರೀಡಾ ಗ್ರಾಮವನ್ನು ತೊರೆಯುವಂತಿಲ್ಲ. ಆದರೆ ಜೋಡಿ ಹಕ್ಕಿಗಳು ಒಲಿಂಪಿಕ್ಸ್​​ ನಿಮಯ ಗಾಳಿಗೆ ತೂರಿ, ಪ್ರೇಮನಗರಿಯಲ್ಲಿ ಕೈಕೈ ಹಿಡಿದು ಸುತ್ತಾಟ ನಡೆಸಿದ್ದಾರೆ. ರಾತ್ರೋರಾತ್ರಿ ಯಾರಿಗೂ ಗೊತ್ತಿಲ್ಲದೆ ಕ್ರೀಡಾಗ್ರಾಮ ತೊರೆದಿದ್ದಾರೆ. ಇದೀಗ ಈ ಪ್ರೇಮಿಗಳು ಸಿಕ್ಕಿ ಬಿದ್ದಿದ್ದು ಸರಿಯಾದ ಶಿಕ್ಷೆಗೆ ಗುರಿಯಾಗಿದ್ದಾರೆ. ಕ್ರೀಡಾ ಪ್ರೇಮಿಗಳು ಟೀಕಿಸಿದ್ದಾರೆ.

ಈಜುಗಾರ್ತಿ ಅನಾ ಕೆರೊಲಿನಾ ಅವರನ್ನು ಕ್ರೀಡಾಕೂಟದಿಂದ ಹೊರ ಹಾಕಿ ಕಠಿಣ ಶಿಕ್ಷೆ ನೀಡಲಾಗಿದ್ದರೆ, ಗೆಳೆಯ ಗೇಬ್ರಿಯಲ್ ಸ್ಯಾಂಟೋಸ್ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಈತನೂ ಬ್ರೆಜಿಲಿಯನ್ ಈಜು ತಂಡದ ಭಾಗವಾಗಿದ್ದಾರೆ. ಜುಲೈ 27ರ ಶನಿವಾರ ಬ್ರೆಜಿಲ್ ತಂಡದೊಂದಿಗೆ 4x100 ಮೀಟರ್ಸ್ ಫ್ರೀಸ್ಟೈಲ್ ರಿಲೇಯಲ್ಲಿ ಸ್ಪರ್ಧಿಸುವುದಕ್ಕೂ ಮುನ್ನಾ ದಿನ ಜುಲೈ 26ರ ಶುಕ್ರವಾರ ರಾತ್ರಿ ಅನುಮತಿಯಿಲ್ಲದೆ ಗ್ರಾಮ ತೊರೆದಿದ್ದರು.

ಈ ಘಟನೆಯು ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ದಿನ ಮತ್ತು ಅವರ ಸ್ಪರ್ಧೆಯ ಮುನ್ನಾ ದಿನದ ರಾತ್ರಿಯ ನಡೆದಿದ್ದು, ವಿಯೆರಾ ಅವರು ಪರಸ್ಪರ ತಬ್ಬಿಕೊಂಡಿರುವ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದಾಗ ಬೆಳಕಿಗೆ ಬಂದಿತು. ಬ್ರೆಜಿಲ್ ಪುರುಷರ ಮತ್ತು ಮಹಿಳೆಯರ 4x100 ಮೀ ಫ್ರೀಸ್ಟೈಲ್ ರಿಲೇ ತಂಡಗಳ ಭಾಗವಾಗಿದ್ದರು. ಆದಾಗ್ಯೂ, ಘಟನೆಯ ನಂತರ, ಎರಡೂ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾದವು.

ವಿಯೆರಾ ಅಹಂಕಾರದಿಂದ ವರ್ತನೆ

ವರದಿಗಳ ಪ್ರಕಾರ, ಬ್ರೆಜಿಲಿಯನ್ ಅಧಿಕಾರಿಗಳು ಪ್ರಶ್ನಿಸಿದ ವೇಳೆ ವಿಯೆರಾ ಅಗೌರವಯುತ, ಅಹಂಕಾರ ಮತ್ತು ಅನುಚಿತವಾಗಿ ವರ್ತಿಸಿದರು. ಹಾಗಾಗಿ ಬ್ರೆಜಿಲಿಯನ್ ಒಲಿಂಪಿಕ್ ಸಮಿತಿಯು, ಆಕೆ ಪ್ರತಿಕ್ರಿಯಿಸಿದ ರೀತಿಗೆ ಮತ್ತು ನಡೆಗೆ ಕೋಪಗೊಂಡು ಮನೆಗೆ ಕಳುಹಿಸಲು ನಿರ್ಧರಿಸಿತು. ಮತ್ತೊಂದೆಡೆ, ಸ್ಯಾಂಟೋಸ್ ಕ್ಷಮೆಯಾಚಿಸಿದ ಕಾರಣ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಮತ್ತೊಮ್ಮೆ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

ಜುಲೈ 26ರ ಶುಕ್ರವಾರ ಅನುಮತಿ ಇಲ್ಲದೆ ಒಲಿಂಪಿಕ್ ಕ್ರೀಡಾ ಗ್ರಾಮ ತೊರೆದಿದ್ದಕ್ಕಾಗಿ ಇಬ್ಬರು ಕ್ರೀಡಾಪಟುಗಳನ್ನು ಶಿಕ್ಷಿಸಲು ಸಿಒಬಿ ನಿರ್ಧರಿಸಿದೆ. ಹೀಗಾಗಿ, ಗೇಬ್ರಿಯಲ್ ಸ್ಯಾಂಟೋಸ್ ಅವರಿಗೆ ಎಚ್ಚರಿಕೆಯೊಂದಿಗೆ ಶಿಕ್ಷೆ ವಿಧಿಸಲಾಯಿತು. ಅಥ್ಲೀಟ್ ಅನಾ ಕೆರೊಲಿನಾ ವಿಯೆರಾ ಅವರನ್ನು ಕ್ರೀಡಾಕೂಟದಿಂದ ಹೊರಹಾಕಲಾಗಿದೆ. ಆಕೆ ಬ್ರೆಜಿಲ್​ಗೆ ಮರಳಲಿದ್ದಾರೆ ಎಂದು ಬ್ರೆಜಿಲಿಯನ್ ಕಾನ್ಫೆಡರೇಶನ್ ಆಫ್ ಅಕ್ವಾಟಿಕ್ ಸ್ಪೋರ್ಟ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಸ್ಥಾನದೇಶ (ಜು.30ರ ಅಂತ್ಯಕ್ಕೆ)ಚಿನ್ನಬೆಳ್ಳಿಕಂಚುಒಟ್ಟು
1ಜಪಾನ್72413
2ಚೀನಾ66214
3ಫ್ರಾನ್ಸ್(ಆತಿಥೇಯ)58417
4ಆಸ್ಟ್ರೇಲಿಯಾ5409
5ದಕ್ಷಿಣ ಕೊರಿಯಾ53311
6ಯುನೈಟೆಡ್ ಸ್ಟೇಟ್ಸ್381021
7ಗ್ರೇಟ್ ಬ್ರಿಟನ್35311
8ಇಟಲಿ2338
9ಕೆನಡಾ2125
10ಹಾಂಗ್ ಕಾಂಗ್201

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.