T20 World Cup India Squad: Check T20 World Cup India Squad 2024 Player List for the T20 World Cup 2024 on HT Kannada
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವರ್ಲ್ಡ್‌ಕಪ್  /  ವಿಶ್ವಕಪ್ ಭಾರತ ತಂಡ

ICC T20 ಕ್ರಿಕೆಟ್ ವಿಶ್ವಕಪ್ 2024 ತಂಡಗಳು


" ಟಿ20 ವಿಶ್ವಕಪ್ 2024ರಲ್ಲಿ ಈ ಬಾರಿ 20 ತಂಡಗಳು ಭಾಗವಹಿಸುತ್ತಿರುವುದು ನಿಮಗೆ ಗೊತ್ತೇ ಇದೆ. ಅವುಗಳಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಯುಎಸ್ಎ, ಕೆನಡಾ, ಸ್ಕಾಟ್ಲೆಂಡ್, ಐರ್ಲೆಂಡ್, ನಮೀಬಿಯಾ, ಉಗಾಂಡಾ, ಪಪುವಾ ನ್ಯೂಗಿನಿಯಾ, ನೇಪಾಳ, ಒಮನ್, ನೆದರ್ಲೆಂಡ್ಸ್‌ ತಂಡಗಳಿವೆ. ಈ ಮೆಗಾ ಟೂರ್ನಮೆಂಟ್‌ಗಾಗಿ ಎಲ್ಲಾ ತಂಡಗಳು ಈಗಾಗಲೇ ತಮ್ಮ ತಂಡವನ್ನು ಪ್ರಕಟಿಸಿವೆ. ನ್ಯೂಜಿಲೆಂಡ್ ಎಲ್ಲರಿಗಿಂತ ಮೊದಲು ಟಿ20 ವಿಶ್ವಕಪ್‌ಗೆ ತನ್ನ ತಂಡವನ್ನು ಪ್ರಕಟಿಸಿತು. ನಂತರ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಭಾರತ... ಹೀಗೆ ಒಂದೊಂದೇ ದೇಶಗಳು ತಮ್ಮ ತಂಡಗಳನ್ನು ಪ್ರಕಟಿಸಿದವು. ಏಪ್ರಿಲ್ 30 ರಂದು ಟೀಂ ಇಂಡಿಯಾ ವಿಶ್ವಕಪ್‌ಗೆ ತನ್ನ ತಂಡವನ್ನು ಪ್ರಕಟಿಸಿತು. 15 ಸದಸ್ಯರ ತಂಡಕ್ಕೆ ರೋಹಿತ್ ಶರ್ಮಾ ನಾಯಕನಾಗಿದ್ದರೆ, ಹಾರ್ದಿಕ್ ಪಾಂಡ್ಯ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಮತ್ತೊಬ್ಬ ಹಿರಿಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ತಂಡದಲ್ಲಿದ್ದಾರೆ. ಕೆ.ಎಲ್.ರಾಹುಲ್, ರಿಂಕು ಸಿಂಗ್ ಅವರಂಥವರಿಗೆ ತಂಡದಲ್ಲಿ ಸ್ಥಾನ ಸಿಗಲಿಲ್ಲ. ರಿಷಬ್ ಪಂತ್ ಮತ್ತು ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್‌ಗಳಾಗಿದ್ದಾರೆ. ಜಡೇಜಾ, ಚಾಹಲ್, ಕುಲದೀಪ್ ಮತ್ತು ಅಕ್ಷರ್ ಪಟೇಲ್ ರೂಪದಲ್ಲಿ ನಾಲ್ವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಲಾಯಿತು. ಬುಮ್ರಾ, ಸಿರಾಜ್, ಅರ್ಷದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ವೇಗದ ಬೌಲಿಂಗ್‌ನ ಭಾರವನ್ನು ಹೊತ್ತಿದ್ದಾರೆ. ರೋಹಿತ್, ವಿರಾಟ್, ಯಶಸ್ವಿ, ಸೂರ್ಯಕುಮಾರ್ ಮತ್ತು ಶಿವಂ ದುಬೆ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.

ಟಿ20 ವಿಶ್ವ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಕುಲದೀಪ್ ಯಾದವ್, ಯಜುವೇಂದ್ರ ಚಹಾಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮೀಸಲು ಆಟಗಾರರು: ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್, ಅವೇಶ್ ಖಾನ್

ಆಸ್ಟ್ರೇಲಿಯಾ ಟಿ20 ವಿಶ್ವಕಪ್ ತಂಡ

ಮಿಚೆಲ್ ಮಾರ್ಷ್ (ನಾಯಕ), ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮಾ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಮ್ ಝಂಪಾ

ಅಮೆರಿಕ ಟಿ20 ವಿಶ್ವಕಪ್ ತಂಡ

ಮೊನಿಕ್ ಪಟೇಲ್ (ನಾಯಕ, ವಿಕೆಟ್ ಕೀಪರ್), ಆ್ಯರನ್ ಜೋನ್ಸ್ (ಉಪನಾಯಕ), ಆಂಡ್ರಿಸ್ ಗೌಸ್, ಕೋರಿ ಆಂಡರ್ಸನ್, ಅಲಿ ಖಾನ್, ಹರ್ಮೀತ್ ಸಿಂಗ್, ಜೆಸ್ಸಿ ಸಿಂಗ್, ಮಿಲಿಂದ್ ಕುಮಾರ್, ನಿಸರ್ಗ್ ಪಟೇಲ್, ನಿತೀಶ್ ಕುಮಾರ್, ನೊಶುತೋಷ್ ಕೆಂಜಿಗಿ, ಸೌರಭ್ ನೇತ್ರವಾಲ್ಕರ್, ಶಾಡ್ಲಿ ವಾನ್, ಸ್ಟೀವನ್, ಟೇಲರ್, ಶಯಾನ್ ಜಹಾಂಗೀರ್.

ದಕ್ಷಿಣ ಆಫ್ರಿಕಾ ತಂಡ

ಐಡೆನ್ ಮಾರ್ಕ್ರಾಮ್, ಒಟ್ನೀಲ್ ಬಾರ್ಟ್‌ಮ್ಯಾನ್, ಜೆರಾಲ್ಡ್ ಕೊಟ್ಜಿಯಾ, ಡಿ ಕಾಕ್, ಬೌರ್ನ್ ಫಾರ್ಚೂನ್, ರೆಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಎನ್ರಿಚ್ ನೋಕಿಯಾ, ಕಗಿಸೊ ರಬಾಡಾ, ರಯಾನ್ ರಿಕೆಲ್ಟನ್, ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್

ಇಂಗ್ಲೆಂಡ್ ತಂಡ

ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಜೋಫ್ರಾ ಆರ್ಚರ್, ಬೈರ್‌ಸ್ಟೋ, ಹ್ಯಾರಿ ಬ್ರೂಕ್, ಸ್ಯಾಮ್ ಕರ್ರಾನ್, ಬೆನ್ ಡಕೆಟ್, ಟಾಮ್ ಹಾರ್ಟ್ಲಿ, ವಿಲ್ ಜ್ಯಾಕ್ಸ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಆದಿಲ್ ರಶೀದ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ, ಮಾರ್ಕ್ ವುಡ್

ನ್ಯೂಜಿಲೆಂಡ್ ತಂಡ

ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಟ್ರೆಂಟ್ ಬೌಲ್ಟ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಧಿ, ಟಿಮ್ ಸೌಧಿ "


  • India
  • Rohit Sharma
    Rohit SharmaBatsman
  • Suryakumar Yadav
    Suryakumar YadavBatsman
  • Virat Kohli
    Virat KohliBatsman
  • Yashasvi Jaiswal
    Yashasvi JaiswalBatsman
  • Axar Patel
    Axar PatelAll-Rounder
  • Hardik Pandya
    Hardik PandyaAll-Rounder
  • Ravindra Jadeja
    Ravindra JadejaAll-Rounder
  • Shivam Dube
    Shivam DubeAll-Rounder
  • Rishabh Pant
    Rishabh PantWicket Keeper
  • Sanju Samson
    Sanju SamsonWicket Keeper
  • Arshdeep Singh
    Arshdeep SinghBowler
  • Jasprit Bumrah
    Jasprit BumrahBowler
  • Kuldeep Yadav
    Kuldeep YadavBowler
  • Mohammed Siraj
    Mohammed SirajBowler
  • Yuzvendra Chahal
    Yuzvendra ChahalBowler

ಇತರ ತಂಡಗಳ ವಿವರ ಪರಿಶೀಲಿಸಿ

ಟಿ20 ವಿಶ್ವಕಪ್ FAQs

ಪ್ರ. T20 ವಿಶ್ವಕಪ್ 2024 ರಲ್ಲಿ ಒಟ್ಟು ಎಷ್ಟು ತಂಡಗಳು ಭಾಗವಹಿಸುತ್ತಿವೆ?

ಉ: T20 ವಿಶ್ವಕಪ್ 2024 ರಲ್ಲಿ ಒಟ್ಟು 20 ತಂಡಗಳು ಭಾಗವಹಿಸುತ್ತಿವೆ.

ಪ್ರ: T20 ವಿಶ್ವಕಪ್ 2024 ರಲ್ಲಿ ಯಾವೆಲ್ಲ ತಂಡಗಳು ಪಾಲ್ಗೊಳ್ಳುತ್ತಿವೆ?

ಉ: ಭಾರತದ ಜೊತೆಗೆ ಇಂಗ್ಲೆಂಡ್ (ಹಾಲಿ ಚಾಂಪಿಯನ್), ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಯುಎಸ್ಎ, ಕೆನಡಾ, ಸ್ಕಾಟ್ಲೆಂಡ್, ಐರ್ಲೆಂಡ್, ನಮೀಬಿಯಾ, ಉಗಾಂಡಾ, ಪಪುವಾ ನ್ಯೂಗಿನಿಯಾ, ನೇಪಾಳ, ಓಮನ್, ನೆದರ್ಲೆಂಡ್‌ ಟಿ20 ವಿಶ್ವಕಪ್ 2024 ರಲ್ಲಿ ಪಾಲ್ಗೊಳ್ಳುತ್ತಿವೆ.

ಪ್ರ. 2024ರ T20 ವಿಶ್ವಕಪ್‌ಗೆ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದೆಯೇ?

ಉ: ಭಾರತ ತಂಡವು ಏಪ್ರಿಲ್ 30 ರಂದು T20 ವಿಶ್ವಕಪ್ 2024 ಗಾಗಿ ಆಟಗಾರರ ತಂಡವನ್ನು ಪ್ರಕಟಿಸಿತು. 15 ಸದಸ್ಯರ ತಂಡವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ.

ಪ್ರ: T20 ವಿಶ್ವಕಪ್ 2024 ರಲ್ಲಿ ಟೀಮ್ ಇಂಡಿಯಾದ ನಾಯಕ ಮತ್ತು ಉಪನಾಯಕ ಯಾರು?

ಉ: ಟಿ20 ವಿಶ್ವಕಪ್ 2024 ರಲ್ಲಿ ಟೀಮ್ ಇಂಡಿಯಾ ತಂಡದ ನಾಯಕರಾಗಿ ರೋಹಿತ್ ವರ್ಮಾ ಮತ್ತು ಉಪನಾಯಕರಾಗಿ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ.