ಬಾಕ್ಸಿಂಗ್ ಡೇ ಟೆಸ್ಟ್ ಇತಿಹಾಸದಲ್ಲಿ ಭಾರತದ್ದು ಕಳಪೆ ದಾಖಲೆ; ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು!
ಕನ್ನಡ ಸುದ್ದಿ  /  ಕ್ರಿಕೆಟ್  /  ಬಾಕ್ಸಿಂಗ್ ಡೇ ಟೆಸ್ಟ್ ಇತಿಹಾಸದಲ್ಲಿ ಭಾರತದ್ದು ಕಳಪೆ ದಾಖಲೆ; ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು!

ಬಾಕ್ಸಿಂಗ್ ಡೇ ಟೆಸ್ಟ್ ಇತಿಹಾಸದಲ್ಲಿ ಭಾರತದ್ದು ಕಳಪೆ ದಾಖಲೆ; ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು!

South Africa vs India 1st Test: ಭಾರತ ತನ್ನ ಮೊದಲ ಬಾಕ್ಸಿಂಗ್ ಡೇ ಟೆಸ್ಟ್​​ ಪಂದ್ಯವನ್ನಾಡಿದ್ದು 1985ರಲ್ಲಿ. ಅಂದಿನಿಂದ 14 ಬಾಕ್ಸಿಂಗ್ ಡೇ ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಆದರೆ ಭಾರತ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು.

ಬಾಕ್ಸಿಂಗ್ ಡೇ ಟೆಸ್ಟ್ ಇತಿಹಾಸದಲ್ಲಿ ಭಾರತದ್ದು ಕಳಪೆ ದಾಖಲೆ.
ಬಾಕ್ಸಿಂಗ್ ಡೇ ಟೆಸ್ಟ್ ಇತಿಹಾಸದಲ್ಲಿ ಭಾರತದ್ದು ಕಳಪೆ ದಾಖಲೆ.

ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡಗಳ (South Africa vs India 1st Test) ನಡುವೆ ಡಿಸೆಂಬರ್ 26ರಂದು ಬಾಕ್ಸಿಂಗ್ ಡೇ ಟೆಸ್ಟ್ ಪ್ರಾರಂಭವಾಗಲಿದೆ. ಈ ಪಂದ್ಯ ಸೆಂಚುರಿಯನ್​ನ ಸೂಪರ್​ಸ್ಪೋರ್ಟ್ಸ್​​ ಪಾರ್ಕ್​ನಲ್ಲಿ (SuperSport Park, Centurion) ನಡೆಯಲಿದೆ. ಸೌತ್ ಆಫ್ರಿಕಾದಲ್ಲಿ ಇದುವರೆಗೂ ಒಂದು ಟೆಸ್ಟ್​ ಸರಣಿಯನ್ನೂ ಗೆಲ್ಲದ ಭಾರತ ಈ ಬಾರಿ ಹೊಸ ಮೈಲಿಗಲ್ಲು ನಿರ್ಮಿಸಲು ಭರ್ಜರಿ ತಯಾರಿ ನಡೆಸುತ್ತಿದೆ.

ಆದರೆ, ಬಾಕ್ಸಿಂಗ್ ಡೇ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಟೀಮ್ ಇಂಡಿಯಾ ಹೇಳಿಕೊಳ್ಳುವಷ್ಟು ಪ್ರದರ್ಶನ ನೀಡಲಿಲ್ಲ. ಭಾರತ ತನ್ನ ಮೊದಲ ಬಾಕ್ಸಿಂಗ್ ಡೇ ಪಂದ್ಯವನ್ನಾಡಿದ್ದು 1985ರಲ್ಲಿ. ಅಂದಿನಿಂದ ಒಟ್ಟು 14 ಬಾಕ್ಸಿಂಗ್ ಡೇ ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಆದರೆ ಭಾರತ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು ಎಂಬುದು ಹೆಚ್ಚು ಬೇಸರದ ತರಿಸಿದೆ.

ಬಾಕ್ಸಿಂಗ್ ಡೇ ದಾಖಲೆ ಹೇಗಿದೆ?

ಬಾಕ್ಸಿಂಗ್ ಡೇ ಟೆಸ್ಟ್​​ಗಳಲ್ಲಿ ಈರೆಗೆ ಟೀಮ್ ಇಂಡಿಯಾ ಗೆದ್ದಿರುವುದು 4 ಪಂದ್ಯಗಳಲ್ಲಿ ಮಾತ್ರ. 8ರಲ್ಲಿ ಸೋತಿರುವ ಭಾರತ 2 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. 2021-22ರ ಪ್ರವಾಸದಲ್ಲಿ ಕೊಹ್ಲಿ ನೇತೃತ್ವದಲ್ಲಿ ಭಾರತ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಸೌತ್ ಆಫ್ರಿಕಾ ಗೆದ್ದುಕೊಂಡಿತ್ತು. ಇದೀಗ ಅಂತಹದ್ದೇ ಗೆಲುವನ್ನು ದಾಖಲಿಸುವ ವಿಶ್ವಾಸದಲ್ಲಿದೆ ರೋಹಿತ್ ಪಡೆ.

ಬಾಕ್ಸಿಂಗ್ ಡೇ ಟೆಸ್ಟ್​​ಗಳಲ್ಲಿ ಟೀಮ್ ಇಂಡಿಯಾ ಫಲಿತಾಂಶ

  1. ಆಸ್ಟ್ರೇಲಿಯಾ vs ಭಾರತ (1985): ಮೆಲ್ಬೋರ್ನ್​ನಲ್ಲಿ ಜರುಗಿದ್ದ ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು. ಇದು ಭಾರತದ ಮೊದಲ ಬಾಕ್ಸಿಂಗ್ ಡೇ ಪಂದ್ಯವಾಗಿತ್ತು.
  2. ಭಾರತ vs ವೆಸ್ಟ್ ಇಂಡೀಸ್ (1987): ಕೋಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆದಿದ್ದ ಈ ಪಂದ್ಯವೂ​ ಡ್ರಾನಲ್ಲಿ ಕೊನೆಗೊಂಡಿತ್ತು.
  3. ಆಸ್ಟ್ರೇಲಿಯಾ vs ಭಾರತ (1991): ಮೆಲ್ಬೋರ್ನ್‌ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು.
  4. ಸೌತ್ ಆಫ್ರಿಕಾ vs ಭಾರತ (1992): ಪೋರ್ಟ್​ ಎಲಿಜಬೆತ್​ನಲ್ಲಿ ಜರುಗಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 9 ವಿಕೆಟ್‌ಗಳ ಅಮೋಘ ಜಯ ದಾಖಲಿಸಿತ್ತು.
  5. ಸೌತ್ ಆಫ್ರಿಕಾ vs ಭಾರತ (1996): ಡರ್ಬನ್​ನಲ್ಲಿ ಈ ಪಂದ್ಯ ನಡೆದಿತ್ತು. 328 ರನ್‌ಗಳಿಂದ ಭಾರತವನ್ನು ಸೌತ್ ಆಫ್ರಿಕಾ ಮಣಿಸಿತ್ತು.
  6. ನ್ಯೂಜಿಲೆಂಡ್ vs ಭಾರತ (1998): ಕಿವೀಸ್​ 4 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ವೆಲ್ಲಿಂಗ್ಟನ್​ನಲ್ಲಿ ಜರುಗಿತ್ತು.
  7. ಆಸ್ಟ್ರೇಲಿಯಾ vs ಭಾರತ (1999): ಟೀಮ್ ಇಂಡಿಯಾ ವಿರುದ್ಧ ಆಸೀಸ್​ ಮತ್ತೊಂದು ಜಯ ಸಾಧಿಸಿತ್ತು. ಮೆಲ್ಬೋರ್ನ್​ನಲ್ಲಿ ಜರುಗಿದ್ದ ಈ ಪಂದ್ಯದಲ್ಲಿ ಆಸೀಸ್​ 180 ರನ್‌ಗಳಿಂದ ಗೆದ್ದಿತ್ತು.
  8. ಆಸ್ಟ್ರೇಲಿಯಾ vs ಭಾರತ (2003): ಮೆಲ್ಬೋರ್ನ್​ನಲ್ಲಿ ಈ ಪಂದ್ಯ ನಡೆಯಿತು. ಆಸ್ಟ್ರೇಲಿಯಾ 9 ವಿಕೆಟ್‌ಗಳ ಜಯ ಸಾಧಿಸಿತ್ತು.
  9. ಸೌತ್ ಆಫ್ರಿಕಾ vs ಭಾರತ (2006): ಸೌತ್ ಆಫ್ರಿಕಾ 174 ರನ್‌ಗಳ ಗೆಲುವು ಸಾಧಿಸಿತ್ತು. ಡರ್ಬನ್​ನಲ್ಲಿ ಈ ಪಂದ್ಯ ನಡೆದಿತ್ತು.
  10. ಆಸ್ಟ್ರೇಲಿಯಾ vs ಭಾರತ (2007): 337 ರನ್‌ಗಳಿಂದ ಆಸ್ಟ್ರೇಲಿಯಾ ಜಯ ಸಾಧಿಸಿತ್ತು.
  11. ದಕ್ಷಿಣ ಆಫ್ರಿಕಾ vs ಭಾರತ (2010): 87 ರನ್​ಗಳಿಂದ ಟೀಮ್ ಇಂಡಿಯಾ ಜಯ ಸಾಧಿಸಿತ್ತು.
  12. ಆಸ್ಟ್ರೇಲಿಯಾ vs ಭಾರತ (2018): 87 ರನ್‌ಗಳಿಂದ ಭಾರತ ತಂಡವು ಗೆದ್ದಿತ್ತು.
  13. ಆಸ್ಟ್ರೇಲಿಯಾ vs ಭಾರತ (2020): ಭಾರತ ತಂಡವು 8 ವಿಕೆಟ್​ಗಳ ಗೆಲುವು ದಾಖಲಿಸಿತ್ತು.
  14. ಸೌತ್ ಆಫ್ರಿಕಾ vs ಭಾರತ (2021): ಟೀಮ್ ಇಂಡಿಯಾ 113 ರನ್‌ಗಳ ಜಯ ಸಾಧಿಸಿತ್ತು.
  15. ಸೌತ್ ಆಫ್ರಿಕಾ vs ಭಾರತ (2023): ?

Whats_app_banner