Breaking News: ಕರ್ನಾಟಕ ಲೋಕಸಭೆ ಬಿಜೆಪಿ ಪಟ್ಟಿ ಪ್ರಕಟ, ಪ್ರತಾಪಸಿಂಹ, ನಳಿನ್ ಔಟ್ , ಪಟ್ಟಿ ಇಲ್ಲಿದೆ
ಬಿಜೆಪಿ ಲೋಕಸಭೆ ಚುನಾವಣೆಯ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು ಕರ್ನಾಟಕದ ಕ್ಷೇತ್ರಗಳಿಗೂ ಹೆಸರು ಪ್ರಕಟಿಸಿದೆ.
ರು ದೆಹಲಿ: ಬಿಜೆಪಿಯು ಲೋಕಸಭೆ ಚುನಾವಣೆ 2024ಕ್ಕೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ಕರ್ನಾಟಕದಿಂದಲೂ ಸ್ಪರ್ಧೆ ಮಾಡುವವರ ಪಟ್ಟಿಯನ್ನು ಈ ಬಾರಿ ಪ್ರಕಟಿಸಲಾಗಿದೆ. ಇದರಲ್ಲಿ ಮೈಸೂರಿನಿಂದ ಹಾಲಿ ಸಂಸದ ಪ್ರತಾಪಸಿಂಹ, ಮಂಗಳೂರಿನಿಂದ ನಳಿನ್ ಕುಮಾರ್ ಕಟೀಲು ಅವರಿಗೆ ಟಿಕೆಟ್ ಕೈ ತಪ್ಪಿದೆ. ಮೈಸೂರಿನಲ್ಲಿ ರಾಜವಂಶಸ್ಥ ಯದುವೀರ್‌ಗೆ ಮಣೆ ಹಾಕಲಾಗಿದೆ.
ಚಿಕ್ಕಮಗಳೂರು ಉಡುಪಿಯಲ್ಲಿ ವಿರೋಧ ಎದುರಿಸಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ವರ್ಗಾಯಿಸಲಾಗಿದೆ. ಚಿಕ್ಕಮಗಳೂರು ಉಡುಪಿ ಕ್ಷೇತ್ರಕ್ಕೆ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸಪೂಜಾರಿ ಅವರಿಗೆ ಅವಕಾಶ ನೀಡಲಾಗಿದೆ.
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರಿಗೂ ಈ ಪಟ್ಟಿಯಲ್ಲಿ ಅವಕಾಶ ಸಿಕ್ಕಿಲ್ಲ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೆಸರೂ ಇಲ್ಲ. ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರ ಪುತ್ರನಿಗೂ ಹಾವೇರಿಯಿಂದ ಟಿಕೆಟ್ ನೀಡಿಲ್ಲ. ಬದಲಿಗೆ ಮಾಜಿ ಸಿ.ಎಂ.ಬಸವರಾಜ ಬೊಮ್ಮಾಯಿಗೆ ಮಣೆ ಹಾಕಲಾಗಿದೆ.
ಬೆಳಗಾವಿ, ಕೆನರಾ, ರಾಯಚೂರು. ಚಿಕ್ಕಬಳ್ಳಾಪುರ. ಚಿತ್ರದುರ್ಗ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿಲ್ಲ.
ಕೋಲಾರ, ಮಂಡ್ಯ, ಹಾಸನ ಕ್ಷೇತ್ರಗಳು ಜೆಡಿಎಸ್‌ಗೆ ನೀಡಲಾಗಿದೆ.
ಹಾಲಿ ಸದಸ್ಯರಲ್ಲಿ ಕೊಪ್ಪಳದ ಕರಡಿ ಸಂಗಣ್ಣ, ಬಳ್ಳಾರಿಯ ದೇವೇಂದ್ರಪ್ಪ, ಬೆಂಗಳೂರು ಉತ್ತರದ ಸದಾನಂದಗೌಡ, ಚಾಮರಾಜನಗರದ ವಿ.ಶ್ರೀನಿವಾಸಪ್ರಸಾದ್, ತುಮಕೂರಿನ ಜಿ.ಎಸ್.ಬಸವರಾಜು, ಮೈಸೂರಿನ ಪ್ರತಾಪಸಿಂಹ, ಮಂಗಳೂರಿನ ನಳಿನ್ ಕುಮಾರ್ ಕಟೀಲ್‌ಗೆ ಟಿಕೆಟ್ ಸಿಕ್ಕಿಲ್ಲ.
ಯಾರಿಗೆ ಎಲ್ಲಿಗೆ
ಬೀದರ್ - ಭಗವಂತ ಖೂಬಾ
ಕಲಬುರಗಿ- ಡಾ.ಉಮೇಶ್ ಜಾಧವ್
ಚಿಕ್ಕೋಡಿ- ಅಣ್ಣಾ ಸಾಹೇಬ್ ಜೊಲ್ಲೆ
ಬಳ್ಳಾರಿ- ಬಿ.ಶ್ರೀರಾಮುಲು
ಮೈಸೂರು- ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಚಾಮರಾಜನಗರ- ಎಸ್.ಬಾಲರಾಜ್
ಬೆಂಗಳೂರು ಉತ್ತರ- ಶೋಭಾ ಕರಂದ್ಲಾಜೆ
ಬೆಂಗಳೂರು ದಕ್ಷಿಣ- ತೇಜಸ್ವಿ ಸೂರ್ಯ
ಬೆಂಗಳೂರು ಕೇಂದ್ರ- ಪಿ.ಸಿ.ಮೋಹನ್
ಬಾಗಲಕೋಟೆ- ಪಿ.ಸಿ.ಗದ್ದಿಗೌಡರ್
ವಿಜಯಪುರ- ರಮೇಶ್ ಜಿಗಜಿಣಗಿ
ಶಿವಮೊಗ್ಗ- ಬಿ.ವೈ.ರಾಘವೇಂದ್ರ
ಚಿಕ್ಕಮಗಳೂರು ಉಡುಪಿ- ಕೋಟಾ ಶ್ರೀನಿವಾಸ ಪೂಜಾರಿ
ದಾವಣಗೆರೆ- ಗಾಯತ್ರಿ ಸಿದ್ದೇಶ್ವರ
ಮಂಗಳೂರು-ಕ್ಯಾಪ್ಟನ್ ಬ್ರಿಜೇಶ್ ಚೌಟಾ
ಬೆಂಗಳೂರು ಗ್ರಾಮಾಂತರ- ಡಾ.ಸಿ.ಎನ್.ಮಂಜುನಾಥ್
ತುಮಕೂರು- ವಿ.ಸೋಮಣ್ಣ
ಕೊಪ್ಪಳ-ಡಾ.ಬಸವರಾಜ ಕ್ಯಾವಟರ್
ಹಾವೇರಿ- ಬಸವರಾಜ ಬೊಮ್ಮಾಯಿ
ಧಾರವಾಡ- ಪ್ರಲ್ಹಾದ ಜೋಶಿ