Annayya Serial: ಪಾರು ಎಲ್ಲರನ್ನೂ ಬಿಟ್ಟು ಹೋಗ್ತಾಳೆ ಎಂಬ ದುಃಖದಲ್ಲಿ ಶಿವು; ಅತ್ತಿಗೆಗಾಗಿ ಕಣ್ಣೀರಿಟ್ಟ ನಾದಿನಿಯರು
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಪಾರು ಎಲ್ಲರನ್ನೂ ಬಿಟ್ಟು ಹೋಗ್ತಾಳೆ ಎಂಬ ದುಃಖದಲ್ಲಿ ಶಿವು; ಅತ್ತಿಗೆಗಾಗಿ ಕಣ್ಣೀರಿಟ್ಟ ನಾದಿನಿಯರು

Annayya Serial: ಪಾರು ಎಲ್ಲರನ್ನೂ ಬಿಟ್ಟು ಹೋಗ್ತಾಳೆ ಎಂಬ ದುಃಖದಲ್ಲಿ ಶಿವು; ಅತ್ತಿಗೆಗಾಗಿ ಕಣ್ಣೀರಿಟ್ಟ ನಾದಿನಿಯರು

ಅಣ್ಣಯ್ಯ ಧಾರಾವಾಹಿಯಲ್ಲಿ ಎಲ್ಲರನ್ನೂ ಬಿಟ್ಟು ದೂರದ ದೇಶಕ್ಕೆ ಹೋಗಲು ಪಾರು ಸಿದ್ಧವಾಗಿದ್ದಾಳೆ. ಇದರಿಂದ ಶಿವುಗೆ ದುಃಖ ಆಗಿದೆ. ಆದರೆ ಅವನು ಯಾರ ಬಳಿಯೂ ಇದನ್ನು ಹೇಳಿಕೊಂಡಿಲ್ಲ. ಪಾರುಗೆ ಶಿವು ಬಗ್ಗೆ ಅನುಮಾನ ಬಂದಿದೆ.

ಪಾರು ಎಲ್ಲರನ್ನೂ ಬಿಟ್ಟು ಹೋಗ್ತಾಳೆ ಎಂಬ ದುಃಖದಲ್ಲಿ ಶಿವು
ಪಾರು ಎಲ್ಲರನ್ನೂ ಬಿಟ್ಟು ಹೋಗ್ತಾಳೆ ಎಂಬ ದುಃಖದಲ್ಲಿ ಶಿವು

ಅಣ್ಣಯ್ಯ ಧಾರಾವಾಹಿಯಲ್ಲಿ ಎಲ್ಲರೂ ಜಗುಲಿಯಲ್ಲಿ ಕೂತು ಮಾತಾಡ್ತಾ ಇರ್ತಾರೆ. ಎಲ್ಲರೂ ಅತ್ತಿಗೆ ಮನೆ ಬಿಟ್ಟು ಹೋಗ್ತಾರೆ ಎಂದು ತುಂಬಾ ಬೇಸರ ಮಾಡಿಕೊಂಡಿದ್ದಾರೆ. ಹೀಗಿರುವಾಗ ಅಣ್ಣಯ್ಯನಿಗೆ ಆದ ದುಃಖವಂತೂ ಹೇಳತೀರದು ಯಾಕೆಂದರೆ ಅವನು ಪಾರುವನ್ನು ಅಷ್ಟು ಪ್ರೀತಿಸುತ್ತಾನೆ. ಅವಳು ಈ ಮನೆಯಲ್ಲಿ ಇಲ್ಲದ ದಿನಗಳನ್ನು ಅವನ ಬಳಿ ನೆನಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಷ್ಟು ದಿನ ಎಲ್ಲವೂ ಅಂದುಕೊಂಡಂತೆ ನಡೆದು ಶಿವು ಮನೆಯನ್ನು ಪಾರ್ವತಿ ಸೇರಿದ್ದರೂ ಇನ್ನಷ್ಟು ಸಂಕಷ್ಟವೇ ಅಡಗಿದೆ.

ಇದರ ಸೂಚನೆ ಅವನಿಗೆ ಮೊದಲಿನಿಂದಲೂ ಇದ್ದ ಕಾರಣ ಅಷ್ಟಾಗಿ ಏನನ್ನೂ ಅವನು ವ್ಯಕ್ತಪಡಿಸುತ್ತಿಲ್ಲ. ಪಾರುಗೆ ಏನೆಲ್ಲ ತಿಂಡಿ ಇಷ್ಟವೋ ಆ ಎಲ್ಲ ತಿಂಡಿಯನ್ನು ಅಂಗಡಿಯಿಂದ ತಂದು ಕೊಡುತ್ತಾನೆ. ಪಾರು ಅವನಿಂದ ಅದೆಲ್ಲವನ್ನೂ ಸ್ವೀಕರಿಸುತ್ತಾಳೆ. ಅದಾದ ಮೇಲೆ ಅವನು ತುಂಬಾ ಹಣ ಕೂಡ ಕೊಡ್ತಾನೆ. ಇಷ್ಟೊಂದು ಹಣ ಎಲ್ಲಿಂದ ಬಂತು ಮಾವ? ಎಂದು ಅವಳು ಪ್ರಶ್ನೆ ಮಾಡುತ್ತಾಳೆ. ಆದರೆ ಅವನು ಉತ್ತರಿಸುವುದಿಲ್ಲ.

ಪಾರುಗೆ ಗೊತ್ತಾಯ್ತಾ ಶಿವು ಪ್ರೀತಿ?

ಇನ್ನು ತಂಗಿಯರ ಹತ್ತಿರ ಶಿವು ನಿಮ್ಮ ಅತ್ತಿಗೆಗೆ ಏನೆಲ್ಲ ಇಷ್ಟವೋ ಅದೆಲ್ಲವನ್ನೂ ಮಾಡಿ ಬಡಿಸಿ ಎಂದು ಹೇಳುತ್ತಾನೆ. ಅದನ್ನು ಕೇಳಿ ಅವರಿಗೂ ಬೇಸರ ಆಗುತ್ತದೆ. “ನಾಳೆ ಅವಳು ಹೋಗ್ತಾಳೆ” ಎಂದು ಅವನು ಆಡಿದ ಮಾತೇ ಎಲ್ಲರಿಗೂ ಬೇಸರ ತಂದಿರುತ್ತದೆ. ಪಾರುಗೂ ಬೇಸರ ಇದೆ. ಆದರೆ ತೋರಿಸಿಕೊಳ್ಳುತ್ತಿಲ್ಲ. ಇನ್ನು ಎಂದಿನಂತೆ ಶಿವು ಹೋಗಿ ಮರದ ಬಳಿ ಮಾತಾಡ್ತಾನೆ. ನಿನಗೆ ನಾವೆಲ್ಲ ನೆಮ್ಮದಿಯಾಗಿರೋದೂ ಬೇಕಾಗಿಲ್ಲ ಅಲ್ವಾ? ಎಂದು ಪ್ರಶ್ನೆ ಮಾಡುತ್ತಾನೆ. ಆಗ ಅಲ್ಲಿಗೆ ಪಾರು ಬಂದು “ನೀನು ಒಂದು ವಿಷಯದಲ್ಲಿ ಸೋತೆ ಮಾವ” ಅಂತಾಳೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕು.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಪಾರು ಸಿದ್ದಾರ್ಥನ ಗುಂಗಿನಲ್ಲೇ ಮುಳುಗಿದ್ದಾಳೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner