ವರ್ಕ್‌ ಫ್ರಮ್‌ ಮಾಡ್ಲಾ ಸರ್‌ ಇವತ್ತು? ಬೇಡ, ಆಫೀಸ್‌ ಇರೋದು 8ನೇ ಮಹಡಿಯಲ್ಲಿ; ಬೆಂಗಳೂರು ಮಳೆಯಲ್ಲಿ ಡ್ಯಾನಿಶ್ ಸೇಟ್ ಕಾಮಿಡಿ ವೈರಲ್‌
ಕನ್ನಡ ಸುದ್ದಿ  /  ಮನರಂಜನೆ  /  ವರ್ಕ್‌ ಫ್ರಮ್‌ ಮಾಡ್ಲಾ ಸರ್‌ ಇವತ್ತು? ಬೇಡ, ಆಫೀಸ್‌ ಇರೋದು 8ನೇ ಮಹಡಿಯಲ್ಲಿ; ಬೆಂಗಳೂರು ಮಳೆಯಲ್ಲಿ ಡ್ಯಾನಿಶ್ ಸೇಟ್ ಕಾಮಿಡಿ ವೈರಲ್‌

ವರ್ಕ್‌ ಫ್ರಮ್‌ ಮಾಡ್ಲಾ ಸರ್‌ ಇವತ್ತು? ಬೇಡ, ಆಫೀಸ್‌ ಇರೋದು 8ನೇ ಮಹಡಿಯಲ್ಲಿ; ಬೆಂಗಳೂರು ಮಳೆಯಲ್ಲಿ ಡ್ಯಾನಿಶ್ ಸೇಟ್ ಕಾಮಿಡಿ ವೈರಲ್‌

ಬೆಂಗಳೂರು ಮಳೆಯಿಂದ ನೀರು ತುಂಬಿರುವ ರಸ್ತೆಯಿಂದ ಸಾಕಷ್ಟು ಜನರಿಗೆ ತೊಂದರೆಯಾಗಿದೆ. ವಿಶೇಷವಾಗಿ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವವರು ಈ ಸಮಯದಲ್ಲಿ ವರ್ಕ್‌ ಫ್ರಮ್‌ ಹೋಮ್‌ಗಾಗಿ ಹಂಬಲಿಸುತ್ತಿದ್ದಾರೆ. ಇದೇ ಸಮಯದಲ್ಲಿ ಹಂಬಲ್‌ ಪೊಲಿಟೀಷಿಯನ್‌ ಖ್ಯಾತಿಯ ಕಾಮಿಡಿಯನ್‌ ಡ್ಯಾನಿಶ್‌ ಶೆಟ್ಟಿ ಕಾಮಿಡಿ ವೈರಲ್‌ ಆಗಿದೆ.

ಬೆಂಗಳೂರು ಮಳೆಯಲ್ಲಿ ಡ್ಯಾನಿಶ್ ಸೇಟ್ ಕಾಮಿಡಿ ವೈರಲ್‌
ಬೆಂಗಳೂರು ಮಳೆಯಲ್ಲಿ ಡ್ಯಾನಿಶ್ ಸೇಟ್ ಕಾಮಿಡಿ ವೈರಲ್‌

ಬೆಂಗಳೂರು ಮಳೆಯಲ್ಲಿ ಡ್ಯಾನಿಶ್ ಸೇಟ್ ಕಾಮಿಡಿ: ಹಂಬಲ್‌ ಪೊಲಿಟೀಷಿಯನ್‌ ನೋಗ್‌ರಾಜ್‌, ಫ್ರೆಂಚ್‌ ಬಿರಿಯನಿ, ಒನ್‌ಕಟ್‌ ಟು ಕಟ್‌, ಸೋಲ್ಡ್‌, 777 ಚಾರ್ಲಿ, ಮಲೈಕೊಟೈ ವಾಲಿಬಾನ್‌ ಮುಂತಾದ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದಿರುವ ಡ್ಯಾನಿಶ್‌ ಸೇಟ್‌ ಸೋಷಿಯಲ್‌ ಮೀಡಿಯಾದಲ್ಲೂ ಸಖತ್‌ ಆಕ್ಟಿವ್‌ ಆಗಿದ್ದಾರೆ. ಇದೀಗ ಬೆಂಗಳೂರು ಮಳೆಯ ಕುರಿತು ಇವರು ಕಾಮಿಡಿ ವಿಡಿಯೋ ಮಾಡಿದ್ದು, ಮಳೆಯ ತೊಂದರೆಗಳ ನಡುವೆಯೂ ಜನರ ಮುಖದಲ್ಲಿ ನಗು ತರಿಸಿದೆ.

ಬೆಂಗಳೂರು ಮಳೆಯಲ್ಲಿ ರಸ್ತೆಗಳು, ಮನೆಗಳು, ಕಟ್ಟಡಗಳಿಗೆ ನೀರು ತುಂಬಿ ಜನರು ಪರದಾಡುತ್ತಿದ್ದಾರೆ. ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ ಸಾಮಾನ್ಯ. ಇಂತಹ ಸ್ಥಿತಿಯಲ್ಲಿ ಮನೆಯಿಂದ ಆಫೀಸ್‌ಗೆ ಹೋಗಲು ಅರ್ಧ ದಿನ ಬೇಕು ಎನ್ನುವಂತಹ ಪರಿಸ್ಥಿತಿ ಇದೆ. ಈ ಸಮಯದಲ್ಲಿ ಸಾಕಷ್ಟು ಕಂಪನಿಗಳು ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ಗೆ ಅವಕಾಶ ನೀಡುತ್ತಿವೆ. ಕೆಲವು ಕಂಪನಿಗಳು ಎಷ್ಟು ಕಷ್ಟವಾದರೂ ಆಫೀಸ್‌ಗೆ ಬಂದು ಕೆಲಸ ಮಾಡಿ ಎನ್ನುತ್ತಿವೆ.

ಬೆಂಗಳೂರು ಮಳೆಯ ಕಾರಣದಿಂದ ಪ್ರತಿದಿನ ಉದ್ಯೋಗಿಗಳು ಎದ್ದೇಳುವಾಗಲೂ ಇವತ್ತು ವರ್ಕ್‌ ಫ್ರಮ್‌ ಹೋಮ್‌ ಅಥವಾ ಆಫೀಸ್‌ ಎಂಬ ಗೊಂದಲದಲ್ಲಿ ಇರಬಹುದು. ಹೊರಗೆ ತುಸು ಮಳೆ ಕಾಣಿಸಿದರೆ "ಇವತ್ತು ಬಾಸ್‌ನಲ್ಲಿ ವರ್ಕ್‌ ಫ್ರಮ್‌ ಹೋಮ್‌ ಕೇಳೋಣ ಎಂದುಕೊಳ್ಳುತ್ತಾರೆ. ಇನ್ನು ಕೆಲವರು ತಾವು ಹಾಯಾಗಿ ಮನೆಯಲ್ಲಿ ಕುಳಿತುಕೊಂಡರೆ ಕಿರಿಯ ಉದ್ಯೋಗಿಗಳನ್ನು ಆಫೀಸ್‌ಗೆ ಹೋಗುವಂತೆ ಹೇಳುತ್ತಿದ್ದಾರೆ. ಇಂತಹ ಹಲವು ಘಟನೆಗಳಿಗೆ ಕನ್ನಡಿ ಹಿಡಿಯುವಂತೆ ನಟ ಡ್ಯಾನಿಶ್‌ ಸೇಟ್‌ ಕಾಮಿಡಿ ವಿಡಿಯೋವನ್ನು ಎಕ್ಸ್‌ನಲ್ಲಿ (ಹಳೆಯ ಟ್ವಿಟ್ಟರ್‌) ಹಂಚಿಕೊಂಡಿದ್ದಾರೆ.

ಬೆಂಗಳೂರು ಮಳೆ: ಡ್ಯಾನಿಶ್‌ ಸೇಟ್‌ ಕಾಮಿಡಿ

ಉದ್ಯೋಗಿ: "ಹೊರಗೆ ತುಂಬಾ ಮಳೆ ಬರ್ತಾ ಇದೆ ಸರ್‌, ಇವತ್ತು ವರ್ಕ್‌ ಫ್ರಮ್‌ ಹೋಮ್‌ ಮಾಡ್ಲಾ" (ಉದ್ಯೋಗಿ ವೇಷದಲ್ಲಿ ಡ್ಯಾನಿಶ್‌ ಸೇಟ್‌)

ಅದಕ್ಕೆ ಬಾಸ್‌ ಡ್ಯಾನಿಶ್‌ ಸೇಟ್‌ "ನೋ" ಎನ್ನುತ್ತಾರೆ. "ಏನು ನೋ, ನಮ್ಮ ಮನೆಯ ಕೆಳಗೆ ನೀರು ಹರಿಯುತ್ತಿದೆ" ಎನ್ನುತ್ತಾರೆ ಉದ್ಯೋಗಿ.

ಬಾಸ್‌: "ನಿನ್ನ ಸಿವಿಯಲ್ಲಿ ಹೆಚ್ಚುವರಿ ಚಟುವಟಿಕೆ ವಿಭಾಗದಲ್ಲಿ ನನಗೆ ಸ್ವಿಮ್ಮಿಂಗ್‌ ಇಷ್ಟ ಎಂದು ಬರೆದಿದ್ದೀ. ಈಜಾಡುತ್ತ ಬಾ"

ಉದ್ಯೋಗಿ: "ಸರ್‌... ನನ್ನ ಮನೆಯಲ್ಲಿ ವೈಫೈ ಇದೆ, ನಾನು ಲಾಗಿನ್‌ ಆಗಿ ಕೆಲಸ ಮಾಡುವೆ" ಎಂದು ಉದ್ಯೋಗಿ ಹೇಳುತ್ತಾರೆ.

ಬಾಸ್‌: "ಅದಕ್ಕಾಗಿಯೇ, ನೀನು ಇಲ್ಲಿಗೆ ಬಾ, ನಮ್ಮ ಆಫೀಸ್‌ನಲ್ಲೂ ವೈಫೈ ಇದೆ, ನಮ್ಮಲ್ಲಿ ಫರ್ನಿಚರ್‌, ಪ್ಯಾಂಟ್ರಿ, ಟೇಬಲ್‌ ಟೆನ್ನಿಸ್‌ ಎಲ್ಲಾ ಇವೆ. ನಾವು ರಿಯಲ್‌ ಎಸ್ಟೆಟ್‌ ಮೇಲೆ ನಿಮಗಾಗಿ ಹೂಡಿಕೆ ಮಾಡಿದ್ದೇವೆ. ಹೀಗಾಗಿ ನೀನು ಇಲ್ಲಿಗೆ ಬರಲೇಬೇಕು" ಎನ್ನುತ್ತಾರೆ ಬಾಸ್‌.

ಉದ್ಯೋಗಿ: "ಸರ್‌, ವಾಟ್‌ ಟೈಮ್‌ ಲಾಗಿನ್‌, ಅಲ್ಲಿಗೆ ಬರಲು ಎರಡು ಗಂಟೆ ಬೇಕು" ಎನ್ನುತ್ತಾರೆ ಉದ್ಯೋಗಿ.

ಬಾಸ್‌: "ಅದಕ್ಕೆ ಹೇಳೋದು, ಈಗಲೇ ಹೊರಡು, ಸರಿಯಾದ ಸಮಯಕ್ಕೆ ತಲುಪುವೆ" ಎನ್ನುತ್ತಾರೆ.

ಉದ್ಯೋಗಿ: "ಸರ್‌ ನನ್ನ ಮಕ್ಕಳೂ ಇವತ್ತು ಸ್ಕೂಲ್‌ಗೆ ಹೋಗ್ತಾ ಇಲ್ಲ"

ಬಾಸ್‌: "ಸರ್‌ಪ್ರೈಸ್‌, ನಿನ್ನ ಫ್ಯಾಮಿಲಿಯನ್ನೂ ಇವತ್ತು ಇಲ್ಲಿಗೆ ಕರೆದುಕೊಂಡು ಬಾ"

ಉದ್ಯೋಗಿ: "ಸರ್‌, ಟೆಕ್‌ ಪಾರ್ಕ್‌ನಲ್ಲಿ ನೀರು ನುಗ್ಗಿ ನೆರೆ ಬಂದಿರುವ ಫೋಟೋಗಳು ಸೋಷಿಯಲ್‌ಮೀಡಿಯಾದಲ್ಲಿ ಹರಿದಾಡ್ತಾ ಇವೆ"

ಬಾಸ್‌: "ಪ್ರವಾಹ ಇರುವುದು ಡೌನ್‌ಫ್ಲೋರ್‌ನಲ್ಲಿ ಮಾ, ನಮ್ಮ ಆಫೀಸ್‌ ಇರೋದು 8ನೇ ಫ್ಲೋರ್‌ನಲ್ಲಿ"

ಉದ್ಯೋಗಿ: "ಸರಿ ಸರ್‌, ಹಾಗಾದರೆ, ಆಫೀಸ್‌ ಕ್ಯಾಬ್‌ ಕಳುಹಿಸಿ"

ಬಾಸ್‌: "ಆಗೋಲ್ಲಮ್ಮ, ನಮ್ಮ ಟ್ರಾವೆಲ್‌ ವೆಂಡರ್‌ ಹೇಳಿದ್ದಾರೆ, ಇವತ್ತು ಎಲ್ಲಾ ಕ್ಯಾಬ್‌ ಡ್ರೈವರ್‌ಗಳು ವರ್ಕ್‌ ಫ್ರಮ್‌ ಹೋಮ್‌ ಮಾಡ್ತಾರಂತೆ"

ಉದ್ಯೋಗಿ ಫೋನ್‌ ಇಟ್ಟು ಎಷ್ಟು ಸಾಧ್ಯವೋ ಅಷ್ಟು ಬಯ್ದು ಆಫೀಸ್‌ಗೆ ಹೋಗುತ್ತಾನೆ.

ಉದ್ಯೋಗಿ: "ಹಾಯ್‌ ಸರ್‌, ನಾನು ಆಫೀಸ್‌ನಲ್ಲಿ ಇದ್ದೇನೆ. ಎಲ್ಲಿದ್ದೀರಿ ನೀವು" ಎಂದು ಉದ್ಯೋಗಿ ಶಾಂತವಾಗಿ ಕೇಳುತ್ತಾನೆ.

ಬಾಸ್‌: "ನಾನು ಮನೆಯಲ್ಲಿದ್ದೇನೆ ಕಣಮ್ಮ, ನನ್ನ ಬಾಸ್‌ ಹೇಳಿದ್ರು, ಸೀನಿಯರ್‌ ಮ್ಯಾನೇಜ್ಮೆಂಟ್‌ ಆಫೀಸ್‌ಗೆ ಹೋಗೋದು ಬೇಡ, ಹೊರಗೆ ಸುರಕ್ಷಿತವಾಗಿಲ್ಲ. ಅದಕ್ಕೆ ವರ್ಕ್‌ ಫ್ರಮ್‌ ಹೋಮ್‌ ಮಾಡ್ತಾ ಇದ್ದೇನೆ"

ಉದ್ಯೋಗಿ: %%%$$### ಎಂದು ಬಯ್ಯುತ್ತಾರೆ.

ಡ್ಯಾನಿಶ್ ಸೇಟ್ ಅವರು ಕನ್ನಡ ನಟ, ನಿರೂಪಕರಾಗಿ ಜನಪ್ರಿಯತೆ ಪಡೆದಿದ್ದಾರೆ. ಇವರು ನಟಿಸಿರುವ ಹಂಬಲ್‌ ಪೊಲಿಟೀಷಿಯನ್‌ ನೋಗ್‌ರಾಜ್‌ ಸಾಕಷ್ಟು ಜನಪ್ರಿಯತೆ ಪಡೆದಿತ್ತು. ಫಿವರ್‌ ಎಫ್‌ಎಂನಲ್ಲಿ ರೇಡಿಯೋ ಜಾಕಿಯಾಗಿದ್ದ ಇವರು ಬಳಿಕ ಪ್ರೊ ಕಬಡ್ಡಿ ಲೀಗ್‌, ಕ್ರಿಕೆಟ್‌ ವರ್ಲ್ಡ್‌ ಕಪ್‌ ಕೂಡ ಹೋಸ್ಟ್‌ ಮಾಡಿದ್ದಾರೆ. ಸ್ಟಾರ್‌ ಸುವರ್ಣದಲ್ಲಿ ನೀನು ಭಲೇ ಕಿಲಾಡಿ ನಿರೂಪಣೆಯನ್ನೂ ಮಾಡಿದ್ದಾರೆ. ಹಂಬಲ್‌ ಪೊಲಿಟೀಷಿಯನ್‌ ನೋಗ್‌ರಾಜ್‌, ಫ್ರೆಂಚ್‌ ಬಿರಿಯನಿ, ಒನ್‌ಕಟ್‌ ಟು ಕಟ್‌, ಸೋಲ್ಡ್‌, 777 ಚಾರ್ಲಿ, ಮಲೈಕೊಟೈ ವಾಲಿಬಾನ್‌ ಮುಂತಾದ ಸಿನಿಮಾಗಳಲ್ಲಿ, ವೆಬ್‌ ಸರಣಿಗಳಲ್ಲಿ ನಟಿಸಿದ್ದಾರೆ.

Whats_app_banner