ಕನ್ನಡ ಸುದ್ದಿ  /  ಮನರಂಜನೆ  /  ಸಂಗೀತಾ ಶೃಂಗೇರಿಗೆ ಹುಟ್ಟುಹಬ್ಬದ ಸಂಭ್ರಮ; ಡ್ರೋನ್‌ ಪ್ರತಾಪ್‌ಗೆ ರಾಖಿ ಕಟ್ಟಿ ಕಾಲಿಗೆ ಬಿದ್ದು ನಮಸ್ಕರಿಸಿದ 777 ಚಾರ್ಲಿ ಚೆಲುವೆ

ಸಂಗೀತಾ ಶೃಂಗೇರಿಗೆ ಹುಟ್ಟುಹಬ್ಬದ ಸಂಭ್ರಮ; ಡ್ರೋನ್‌ ಪ್ರತಾಪ್‌ಗೆ ರಾಖಿ ಕಟ್ಟಿ ಕಾಲಿಗೆ ಬಿದ್ದು ನಮಸ್ಕರಿಸಿದ 777 ಚಾರ್ಲಿ ಚೆಲುವೆ

ಸ್ಯಾಂಡಲ್‌ವುಡ್‌ ನಟಿ ಸಂಗೀತಾ ಶೃಂಗೇರಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿಗಳು ಸೇರಿದಂತೆ ಸಾಕಷ್ಟು ಜನರು ಭಾಗಿಯಾಗಿದ್ದಾರೆ. ಡ್ರೋನ್‌ ಪ್ರತಾಪ್‌ ಅವರು ಸಂಗೀತಾಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಸಂಗೀತಾ ಶೃಂಗೇರಿಗೆ ಹುಟ್ಟುಹಬ್ಬದ ಸಂಭ್ರಮ
ಸಂಗೀತಾ ಶೃಂಗೇರಿಗೆ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು: ಕನ್ನಡ ನಟಿ ಸಂಗೀತಾ ಶೃಂಗೇರಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಬಿಗ್‌ಬಾಸ್‌ ಸ್ಪರ್ಧಿಗಳು ಭಾಗಿಯಾಗಿದ್ದಾರೆ. ವಿನಯ್‌ ಗೌಡ, ನಮ್ರತಾ ಗೌಡ, ನೀತು ವನಜಾಕ್ಷಿ, ರಕ್ಷಕ್‌ ಬುಲೆಟ್‌ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಡ್ರೋನ್‌ ಪ್ರತಾಪ್‌ ಕೂಡ ಸಂಗೀತಾ ಶೃಂಗೇರಿಗೆ ಆತ್ಮೀಯವಾದ ಶುಭಾಶಯ ತಿಳಿಸಿದ್ದಾರೆ. ಸಂಗೀತಾ ಶೃಂಗೇರಿ ಹುಟ್ಟುಹಬ್ಬಕ್ಕೆ ಮನೆಯವರು ತುಂಬಾ ಸುಂದರವಾದ ಸ್ಥಳದಲ್ಲಿ ಕೇಕ್‌ ಕಟ್ಟಿಂಗ್‌ ಕಾರ್ಯಕ್ರಮ ಇಟ್ಟುಕೊಂಡು ಚಾರ್ಲಿ ಚೆಲುವೆಗೆ ಸರ್‌ಪ್ರೈಸ್‌ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಂಗೀತಾ ಶೃಂಗೇರಿಗೆ ನಿನ್ನೆ ಅಂದರೆ ಮೇ 13ರಂದು ಹುಟ್ಟುಹಬ್ಬದ ಸಂಭ್ರಮ. 1996ರ ಮೇ 13ರಂದು ಜನಿಸಿದ ಇವರಿಗೆ ಈಗ 28 ವರ್ಷ. ಇವರ ಹುಟ್ಟುಹಬ್ಬಕ್ಕಾಗಿ ನೀಲಿ, ಬಿಳಿಬಣ್ಣದ ಥೀಮ್‌ನಲ್ಲಿ ಕೇಕ್‌ ತಯಾರಿಸಲಾಗಿತ್ತು. ಹುಟ್ಟುಹಬ್ಬದ ಪಾರ್ಟಿಯಲ್ಲಿ ತಂದೆ, ತಾಯಿ, ಅಣ್ಣ, ಅತ್ತಿಗೆ ಸೇರಿದಂತೆ ಕುಟುಂಬಸ್ಥರು ಭಾಗಿಯಾಗಿದ್ದರು.

ಡ್ರೋನ್‌ ಪ್ರತಾಪ್‌ಗೆ ಆರತಿ ಮಾಡಿದ ಸಂಗೀತಾ

ಸಂಗೀತಾ ಶೃಂಗೇರಿ ಮನೆಗೆ ಹುಟ್ಟುಹಬ್ಬದಂದು ಆಗಮಿಸಿದ ಡ್ರೋನ್‌ ಪ್ರತಾಪ್‌ಗೆ ವಿಶೇಷವಾದ ಸ್ವಾಗತ ನೀಡಲಾಗಿದೆ. ಅಕ್ಕ ತಮ್ಮನಂತೆ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸಿದ್ದ ಇವರಿಬ್ಬರು ಈಗಲೂ ಇದೇ ರೀತಿಯ ಸಂಬಂಧ ಮುಂದುವರೆಸಿದ್ದಾರೆ. ಮನೆಗೆ ತಮ್ಮ ಬಂದ ಖುಷಿಯಲ್ಲಿ ಸಂಗೀತಾ ಶೃಂಗೇರಿ ಆರತಿ ಬೆಳಗಿ ಸ್ವಾಗತಿಸಿದ್ದಾರೆ. ಕೈಗೆ ರಾಖಿಯನ್ನೂ ಕಟ್ಟಿ ಸಂಭ್ರಮಿಸಿದ್ದಾರೆ. ಈ ಸಮಯದಲ್ಲಿ ಸಹೋದರನ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವದ ಪಡೆಯುವ ವ್ಯರ್ಥ ಪ್ರಯತ್ನವನ್ನೂ ಮಾಡಿದ್ದಾರೆ. ಇದೇ ರೀತಿ ಸಂಗೀತಾರ ಆಶೀರ್ವಾದ ಪಡೆಯುವ ಡ್ರೋನ್‌ ಪ್ರಯತ್ನವೂ ವ್ಯರ್ಥವಾಗಿದೆ. ಇಬ್ಬರ ಸ್ನೇಹ ಪ್ರೀತಿಯ ಮೇಲೆ ಯಾರ್ ಕೆಟ್ಟ ಕಣ್ಣು ಬೀಳದೆ ಇರಲಿ ಅಕ್ಕ ತಮ್ಮ ಸದಾ ನಗುತ್ತಾ ಇರಿ ಎಂದು ಫ್ಯಾನ್ಸ್‌ ಶುಭಹಾರೈಸಿದ್ದಾರೆ.ಈ ಸಂಭ್ರಮದ ವಿಡಿಯೋ ಕೆಳಗಿದೆ ನೋಡಿ.

ಸಂಗೀತಾ ಶೃಂಗೇರಿ ಪರಿಚಯ

ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಸಂಗೀತಾ ಶೃಂಗೇರಿ ಅವರು ರಿಷಬ್‌ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾದ ಮೂಲಕ ಹೆಚ್ಚು ಜನಪ್ರಿಯತೆ ಪಡೆದರು. ಬಿಗ್‌ಬಾಸ್‌ ಕನ್ನಡ ಸೀಸನ್‌ ಮೂಲಕ ಹೆಚ್ಚಿನ ಜನರಿಗೆ ಹತ್ತಿರವಾದರು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಸಂಗೀತಾ ಅವರು ಹರಹರ ಮಹಾದೇವ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಎ ಪ್ಲಸ್‌ ಎಂಬ ಸಿನಿಮಾದ ಮೂಲಕ ಸಂಗೀತಾ ಶೃಂಗೇರಿ ಸ್ಯಾಂಡಲ್‌ವುಡ್‌ ಪ್ರವೇಶಿಸಿದರು. ಸಾಲಗಾರರ ಸಹಕಾರ ಸಂಘ, 777 ಚಾರ್ಲಿ, ಶಿವಾಜಿ ಸುರತ್ಕಲ್‌ 2 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಮಾರಿಗೋಲ್ಡ್‌ ಎಂಬ ಸಿನಿಮಾದಲ್ಲಿ ದಿಗಂತ್‌ ಜತೆ ನಟಿಸಿದ್ದರು.

ಸಂಗೀತಾ ಶೃಂಗೇರಿ ಸಿಕ್ಸ್‌ಪ್ಯಾಕ್‌ ಗುಟ್ಟು

ಸ್ಯಾಂಡಲ್‌ವುಡ್‌ ನಟಿ ಸಂಗೀತಾ ಶೃಂಗೇರಿಗೆ ಬಹುಕಾಲದಿಂದ ಸಿಕ್ಸ್‌ ಪ್ಯಾಕ್‌ ಹೊಂದಿರಬೇಕು ಎಂಬ ಕನಸಿತ್ತಂತೆ. ಸುಮಾರು 2 ತಿಂಗಳ ಕಾಲ ಕಠಿಣ ಪರಿಶ್ರಮದಿಂದ ಮತ್ತು ವೃತ್ತಿಪರ ತರಬೇತುದಾರರ ನೆರವಿನಿಂದ ಇವರು ಸಿಕ್ಸ್‌ ಪ್ಯಾಕ್‌ ತನ್ನದಾಗಿಸಿಕೊಂಡರಂತೆ.. ಜೀವನಶೈಲಿ ಬದಲಾವಣೆ, ಆಹಾರ ಕ್ರಮದಲ್ಲಿನ ಬದಲಾವಣೆಯು ಇವರ ಫಿಟ್ನೆಸ್‌ ಮತ್ತು ಮೈಕಾಂತಿಯ ಗುಟ್ಟು ಎಂದು ತಿಳಿಯಬಹುದು. ಸಂಗೀತಾ ಶೃಂಗೇರಿಯ ಡಯೆಟ್‌ ಪ್ಲ್ಯಾನ್‌ ಮತ್ತು ವರ್ಕೌಟ್‌ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಬಯಸುವವರು ಇಲ್ಲಿ ಕ್ಲಿಕ್‌ ಮಾಡಬಹುದು.

IPL_Entry_Point