ಕೊಳೆಯಾದ ಸ್ಕೂಲ್‌, ಆಫೀಸ್‌ ಬ್ಯಾಗ್ ತೊಳೆಯದೇ ಐದೇ ನಿಮಿಷದಲ್ಲಿ ಸ್ವಚ್ಛ ಮಾಡಲು ಇಲ್ಲಿದೆ ಸಿಂಪಲ್ ಟ್ರಿಕ್ಸ್, ಟ್ರೈ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕೊಳೆಯಾದ ಸ್ಕೂಲ್‌, ಆಫೀಸ್‌ ಬ್ಯಾಗ್ ತೊಳೆಯದೇ ಐದೇ ನಿಮಿಷದಲ್ಲಿ ಸ್ವಚ್ಛ ಮಾಡಲು ಇಲ್ಲಿದೆ ಸಿಂಪಲ್ ಟ್ರಿಕ್ಸ್, ಟ್ರೈ ಮಾಡಿ

ಕೊಳೆಯಾದ ಸ್ಕೂಲ್‌, ಆಫೀಸ್‌ ಬ್ಯಾಗ್ ತೊಳೆಯದೇ ಐದೇ ನಿಮಿಷದಲ್ಲಿ ಸ್ವಚ್ಛ ಮಾಡಲು ಇಲ್ಲಿದೆ ಸಿಂಪಲ್ ಟ್ರಿಕ್ಸ್, ಟ್ರೈ ಮಾಡಿ

ಮಕ್ಕಳ ಸ್ಕೂಲ್ ಬ್ಯಾಗ್ ಇರಲಿ ಅಥವಾ ನಮ್ಮ ಆಫೀಸ್ ಬ್ಯಾಗ್ ಇರಲಿ ಬಹಳ ಬೇಗ ಕೊಳೆಯಾಗುತ್ತವೆ. ಇದರಿಂದ ಗಲೀಜಾಗಿ ಕಾಣುತ್ತವೆ. ಹಾಗಂತ ಪ್ರತಿ ಬಾರಿ ಬ್ಯಾಗ್ ತೊಳೆಯಲು ಸಾಧ್ಯವಿಲ್ಲ. ಬ್ಯಾಗ್ ಅನ್ನು ತೊಳೆಯದೇ ಕ್ಲೀನ್ ಮಾಡುವ ಒಂದಿಷ್ಟು ತಂತ್ರಗಳು ಇಲ್ಲಿವೆ ನೋಡಿ, ಇದು ನಿಮಗೂ ಉಪಯೋಗಕ್ಕೆ ಬರಬಹುದು.

ಆಫೀಸ್, ಸ್ಕೂಲ್ ಬ್ಯಾಗ್ ಸ್ವಚ್ಛ ಮಾಡುವ ಟಿಪ್ಸ್
ಆಫೀಸ್, ಸ್ಕೂಲ್ ಬ್ಯಾಗ್ ಸ್ವಚ್ಛ ಮಾಡುವ ಟಿಪ್ಸ್

ಮಕ್ಕಳ ಸ್ಕೂಲ್ ಬ್ಯಾಗ್ ಆಗಿರಲಿ ನಾವು ಬಳಸುವ ಆಫೀಸ್ ಬ್ಯಾಗ್ ಆಗಿರಲಿ ಪ್ರತಿದಿನ ಬಳಸುವುದು ಕೊಳೆ, ಧೂಳು ತಾಕಿ ಬೇಗನೆ ಕೊಳೆಯಾಗುತ್ತದೆ. ಕೆಲವೇ ದಿನಗಳಲ್ಲಿ ಗಲೀಜಾಗಿ ಕಾಣಲು ಆರಂಭವಾಗುತ್ತದೆ. ಇದರಿಂದ ಪದೇ ಪದೇ ತೊಳೆಯಬೇಕಾಗುತ್ತದೆ. ಹೀಗೆ ತೊಳೆಯುವುದರಿಂದ ಬ್ಯಾಗ್ ಬೇಗ ಹಾಳಾಗುತ್ತದೆ, ಬಣ್ಣ ಡಲ್ ಆಗುತ್ತದೆ ಎಂಬ ಚಿಂತೆಯೂ ಕಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಬ್ಯಾಗ್ ಅನ್ನು ತೊಳೆಯದೇ ಸ್ವಚ್ಛ ಮಾಡುವ ಬಗ್ಗೆ ಯೋಚಿಸಬೇಕು. ತೊಳೆಯದೇ ಸ್ವಚ್ಛ ಮಾಡುವುದು ಹೇಗೆ ಎಂದು ನಿಮಗೆ ಅನ್ನಿಸಬಹುದು, ಆದರೆ ಇದು ಸಾಧ್ಯ. ಈ ತಂತ್ರಗಳ ಮೂಲಕ ಬ್ಯಾಗ್ ತೊಳಯದೇ ಅದನ್ನು ಸ್ವಚ್ಛ ಮಾಡಬಹುದು.

ಸ್ಕೂಲ್‌, ಆಫೀಸ್‌ ಬ್ಯಾಗ್ ತೊಳೆಯದೇ ಸ್ವಚ್ಛ ಮಾಡುವುದು ಹೇಗೆ?

ನಿಮ್ಮ ಬ್ಯಾಗ್‌ನಲ್ಲಿ ಮೊಂಡುತನದ ಕಲೆ ಇದ್ದರೆ ಅದು ತುಂಬಾ ಅಸಹ್ಯವಾಗಿ ಕಾಣುತ್ತದೆ. ಇದನ್ನು ತೆಗೆದು ಹಾಕಲು ನೀವು ತುಂಬಾ ಸುಲಭವಾದ ಟ್ರಿಕ್ ಅನ್ನು ಅಳವಡಿಸಿಕೊಳ್ಳಬಹುದು. ಇದಕ್ಕಾಗಿ, ಒಂದು ಬಟ್ಟಲಿನಲ್ಲಿ ಸ್ವಲ್ಪ ಡಿಟರ್ಜೆಂಟ್ ಅಥವಾ ಸೋಪ್ ದ್ರಾವಣವನ್ನು ಹಾಕಿ. ಈಗ ಈ ಸೋಪ್ ದ್ರಾವಣದಲ್ಲಿ ಡಸ್ಟರ್ ಬಟ್ಟೆಯನ್ನು ಅದ್ದಿ. ಈ ಬಟ್ಟೆಯಿಂದ ಬ್ಯಾಗ್ ಅನ್ನು ಉಜ್ಜುವ ಮೂಲಕ ಚೀಲದ ಮೇಲಿನ ಮೊಂಡುತನದ ಕಲೆಗಳನ್ನು ಸುಲಭವಾಗಿ ತೆಗೆದು ಹಾಕಬಹುದು. ಈ ಟ್ರಿಕ್ ಮೂಲಕ, ನಿಮ್ಮ ಬ್ಯಾಗ್‌ ತೊಳೆಯದೆ ಮೊಂಡುತನದ ಕಲೆಗಳನ್ನು ಸುಲಭವಾಗಿ ತೆಗೆದು ಹಾಕಬಹುದು.

ಬ್ಯಾಗ್ ವಾಸನೆ ನಿವಾರಿಸುವುದು ಹೀಗೆ?

ಹಲವು ಬಾರಿ ಒಂದಿಷ್ಟು ದಿನಗಳ ಕಾಲ ಬ್ಯಾಗ್ ತೊಳೆಯದೇ ಇದ್ದಾಗ ಒಂದು ರೀತಿಯ ವಾಸನೆ ಬರಲು ಆರಂಭವಾಗುತ್ತದೆ. ಈ ವಾಸನೆ ಬಾರದಂತೆ ತಡೆಯಲು ಬ್ಯಾಗ್ ತೊಳೆಯಬೇಕು ಎಂದೇನಿಲ್ಲ. ನಿಂಬೆರಸ ಹಾಗೂ ವಾಷಿಂಗ್‌ ಪೌಡರ್ ಮಿಶ್ರಣ ಮಾಡಿದ ನೀರಿನಲ್ಲಿ ಒಂದು ಬಟ್ಟೆ ಅದ್ದಿ, ಈ ಬಟ್ಟೆಯಿಂದ ಬ್ಯಾಗ್ ಒಳಗೆ ಚೆನ್ನಾಗಿ ಒರೆಸಿ. ನಂತರ ಬಿಸಿಲಿನಲ್ಲಿ ಒಣಗಿಸಿ. ಇದರಿಂದ ಬ್ಯಾಗ್‌ನ ದುರ್ವಾಸನೆ ಸಾಕಷ್ಟು ಕಡಿಮೆಯಾಗುತ್ತದೆ.

ಬ್ರಷ್‌ನಿಂದ ಸ್ವಚ್ಛ ಮಾಡಿ

ನಿಮ್ಮ ಶಾಲೆ ಅಥವಾ ಆಫೀಸ್ ಬ್ಯಾಗ್ ಧೂಳು, ಕೊಳೆಯಿಂದ ಕೂಡಿದ್ದರೆ ಅದು ತುಂಬಾ ಕೆಟ್ಟದಾಗಿ ಕಾಣುತ್ತದೆ. ಹಾಗಿದ್ದಾಗ ಬಟ್ಟೆ ಉಜ್ಜುವ ಬ್ರಷ್‌ನಿಂದ ನೇರವಾಗಿ ಬ್ಯಾಗ್‌ ಅನ್ನು ಉಜ್ಜುವ ಮೂಲಕ ಸ್ವಚ್ಛ ಮಾಡಬಹುದು. ಇದರಿಂದ ಬ್ಯಾಗ್ ಮೇಲಿನ ಕಲೆ, ಧೂಳು ಸುಲಭವಾಗಿ ಸ್ವಚ್ಛವಾಗುತ್ತದೆ.

ಪ್ರತಿದಿನ ಆಫೀಸ್ ಹೋಗೋರಿಗೆ ಬ್ಯಾಗ್ ತೊಳೆದು ಒಣಗಿಸಲು ಸಮಯವಿಲ್ಲ ಎನ್ನುವವರಿಗೆ ಈ ಟಿಪ್ಸ್ ಬೆಸ್ಟ್. ಇದರಿಂದ ಸುಲಭವಾಗಿ ಬ್ಯಾಗ್ ಸ್ವಚ್ಛ ಮಾಡಬಹುದು. ಬ್ಯಾಗ್ ಒಣಗೊಲ್ಲ ಅನ್ನೋ ಚಿಂತೆನೂ ಇರಲ್ಲ. 

 

Whats_app_banner