ಬೆಂಗಳೂರು ಮಳೆ, ಜಲಾವೃತ ರಸ್ತೆಗಳ ಫೋಟೋ ವಿಡಿಯೋಗಳು ವೈರಲ್ ಆಗ್ತಾ ಇದ್ರೆ, ಇಲ್ಲಿ ಅಂಥದ್ದೇನೂ ಇಲ್ಲ ಅಂತಿದ್ದಾರೆ ಈ ಭಾಗದ ಬೆಂಗಳೂರಿಗರು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಮಳೆ, ಜಲಾವೃತ ರಸ್ತೆಗಳ ಫೋಟೋ ವಿಡಿಯೋಗಳು ವೈರಲ್ ಆಗ್ತಾ ಇದ್ರೆ, ಇಲ್ಲಿ ಅಂಥದ್ದೇನೂ ಇಲ್ಲ ಅಂತಿದ್ದಾರೆ ಈ ಭಾಗದ ಬೆಂಗಳೂರಿಗರು

ಬೆಂಗಳೂರು ಮಳೆ, ಜಲಾವೃತ ರಸ್ತೆಗಳ ಫೋಟೋ ವಿಡಿಯೋಗಳು ವೈರಲ್ ಆಗ್ತಾ ಇದ್ರೆ, ಇಲ್ಲಿ ಅಂಥದ್ದೇನೂ ಇಲ್ಲ ಅಂತಿದ್ದಾರೆ ಈ ಭಾಗದ ಬೆಂಗಳೂರಿಗರು

ಸದ್ಯ ಬೆಂಗಳೂರು ಅಂದಾಕ್ಷಣ ನೆನಪಾಗೋದು ಮಳೆ ಮತ್ತು ಜಲಾವೃತ್ತ ರಸ್ತೆಗಳು. ಸೋಷಿಯಲ್ ಮೀಡಿಯಾಗಳಲ್ಲಿ ಅಷ್ಟೊಂದು ವಿಡಿಯೋ, ಫೋಟೋಗಳು ತುಂಬಿಕೊಂಡಿವೆ. ಹೀಗೆ, ಬೆಂಗಳೂರು ಮಳೆ, ಜಲಾವೃತ ರಸ್ತೆಗಳ ಫೋಟೋ ವಿಡಿಯೋಗಳು ವೈರಲ್ ಆಗ್ತಾ ಇದ್ರೆ, ಇಲ್ಲಿ ಅಂಥದ್ದೇನೂ ಇಲ್ಲ ಅಂತಿದ್ದಾರೆ ಈ ಭಾಗದ ಬೆಂಗಳೂರಿಗರು. ಇದು ಯಾವ ಪ್ರದೇಶ ಅನ್ನೋ ಕುತೂಹಲವೆ? ಈ ವಿವರ ಗಮನಿಸಿ.

ಬೆಂಗಳೂರು ಮಳೆ, ಜಲಾವೃತ ರಸ್ತೆಗಳ ಫೋಟೋ ವಿಡಿಯೋಗಳು ವೈರಲ್ ಆಗ್ತಾ ಇದ್ರೆ, ಇಲ್ಲಿ ಅಂಥದ್ದೇನೂ ಇಲ್ಲ ಅಂತಿದ್ದಾರೆ ಈ ಭಾಗದ ಬೆಂಗಳೂರಿಗರು, (ಸಾಂದರ್ಭಿಕ ಚಿತ್ರ)
ಬೆಂಗಳೂರು ಮಳೆ, ಜಲಾವೃತ ರಸ್ತೆಗಳ ಫೋಟೋ ವಿಡಿಯೋಗಳು ವೈರಲ್ ಆಗ್ತಾ ಇದ್ರೆ, ಇಲ್ಲಿ ಅಂಥದ್ದೇನೂ ಇಲ್ಲ ಅಂತಿದ್ದಾರೆ ಈ ಭಾಗದ ಬೆಂಗಳೂರಿಗರು, (ಸಾಂದರ್ಭಿಕ ಚಿತ್ರ) (ANI)

ಬೆಂಗಳೂರು: ಭಾರಿ ಮಳೆಯಾಗುತ್ತಿದ್ದಾಗ ಬೆಂಗಳೂರಿನ ವಿವಿಧೆಡೆ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಪ್ರವಾಹ ಪರಿಸ್ಥಿತಿ ಕಂಡುಬಂದಿತ್ತು. ರಸ್ತೆಗಳು ಜಲಾವೃತವಾಗಿದ್ದವು. ನಗರವಾಸಿಗಳ ಈ ಅನುಭವಗಳು ಸಾಮಾಜಿಕ ತಾಣಗಳಲ್ಲಿ ಭರಪೂರ ಚರ್ಚೆಗೆ ಒಳಗಾಗಿರುವಾಗಲೇ, ವಿಶೇಷವಾಗಿ ಹೊರ ವರ್ತುಲ ರಸ್ತೆ, ಮಾನ್ಯತಾ ಟೆಕ್ ಪಾರ್ಕ್ ಮತ್ತು ಇತರೆ ಐಟಿ ಬಿಟಿ ಪಾರ್ಕ್‌ಗಳ ಸಂಕಷ್ಟಗಳ ವಿಚಾರ ಗಮನ ಸೆಳೆದಿತ್ತು. ಆದರೆ ಬೆಂಗಳೂರಿನ ಇನ್ನೊಂದು ಭಾಗ ಅತ್ಯಂತ ತಣ್ಣಗಿತ್ತು. ಅಲ್ಲಿಯವರ ಬಳಿ ಬೆಂಗಳೂರು ಮಳೆ ಬಗ್ಗೆ ವಿಚಾರಿಸಿದರೆ, "ಇಲ್ಲಿ ಅಂಥದ್ದೇನೂ ಇಲ್ಲ ಅಂತಿದ್ದಾರೆ ಈ ಭಾಗದ ಬೆಂಗಳೂರಿಗರು. ಹೌದು, ಬಸವನಗುಡಿ, ಇಂದಿರಾನಗರ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ಅದೃಷ್ಟವಶಾತ್‌ ಭಾರಿ ಮಳೆ, ನೀರು ತುಂಬಿದ ರಸ್ತೆಗಳ ಸಂಕಷ್ಟ ಎದುರಾಗಿರಲಿಲ್ಲ.

ಹಳೆ ಬೆಂಗಳೂರು ಬೆಸ್ಟ್ ಕಣ್ರೀ…

ಸೋಷಿಯಲ್ ಮೀಡಿಯಾದಲ್ಲಿ ಹಳೆ ಬೆಂಗಳೂರಿನ ನಿವಾಸಿಯೊಬ್ಬರು ಸ್ಟೇಟಸ್ ಹಾಕಿಕೊಂಡಿದ್ದು, ಬಸವನಗುಡಿ ವಿದ್ಯಾಪೀಠ ಭಾಗದಲ್ಲಿ ಒಂದೇ ಒಂದು ರಸ್ತೆ ಕೂಡ ಜಲಾವೃತವಾಗಿಲ್ಲ. ಏನಿದ್ರೂ ಹಳೆ ಬೆಂಗಳೂರು ಬೆಸ್ಟ್ ಎಂದು ಹೇಳಿಕೊಂಡಿದ್ದಾರೆ. ಇದೇ ರೀತಿ ಭಾವನೆಗಳನ್ನು ಇನ್ನೂ ಅನೇಕರು ಹಂಚಿಕೊಂಡಿದ್ದು, ಅವರು ಅವರ ಸುತ್ತಮುತ್ತಲಿನ ಪ್ರದೇಶದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಇಂದಿರಾನಗರ ನಿವಾಸಿಯೊಬ್ಬರು, "ಇಂದಿರಾನಗರ ವಿಶೇಷ: ಇಡೀ ದಿನ ಮಳೆಯಾಗುತ್ತಿದೆ. ಆದರೆ ಇಂದಿರಾನಗರದ ನಮ್ಮ ಮನೆಗೆ ನೀರು ನುಗ್ಗಿಲ್ಲ" ಎಂದಿದ್ದಾರೆ. ನಗರದ ಕೆಲವು ಭಾಗಗಳಲ್ಲಿ, ನಿರ್ದಿಷ್ಟವಾಗಿ ಟೆಕ್-ಕೇಂದ್ರಿತ ಪ್ರದೇಶಗಳಲ್ಲಿ ಮೂಲಸೌಕರ್ಯದ ಕೊರತೆಯ ಕಾರಣ ಮಳೆಯನ್ನು ನಿಭಾಯಿಸಲು ಕಷ್ಟವಾಗಿದೆ. ಇದನ್ನು ತೋರಿಸುವ ವೀಡಿಯೊಗಳು ಆನ್‌ಲೈನ್‌ನಲ್ಲಿ ಗಮನಸೆಳೆದಿವೆ.

ಶೇಕಡ 80ರಷ್ಟು ಹಳೆ ಬೆಂಗಳೂರಿಗೆ ಸಮಸ್ಯೆ ಆಗಿಲ್ಲ…

ಇಂದಿರಾ ನಗರವಷ್ಟೇ ಅಲ್ಲ, ಶೇಕಡ 80ರಷ್ಟು ಹಳೆ ಬೆಂಗಳೂರಿಗೆ ಯಾವುದೇ ಸಮಸ್ಯೆ ಆಗಿಲ್ಲ. ನೀರು ನಿಂತು ಜನಜೀವನ ಅಸ್ತವ್ಯಸ್ತವಾಗಿಲ್ಲ. ಪೂರ್ವ ಬೆಂಗಳೂರು ಮತ್ತು ಹೆಬ್ಬಾಳ ಸುತ್ತಮುತ್ತಲಿನ ಕೆಲವು ಪ್ರದೇಶಗಳಲ್ಲಿ ಈ ಸಮಸ್ಯೆ ಆಗಿದೆ ಎಂದು ಇನ್ನೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ಧಾರೆ.

ಜಯನಗರವೂ ಅಷ್ಟೆ. ಇಡೀ ದಿನ ಮಳೆ ನೋಡುತ್ತ ಕುಳಿತಿದ್ದೆವು. ಮಳೆಯಿಂದಾಗಿ ಅಥವಾ ಇನ್ಯಾವುದೇ ಸಮಸ್ಯೆ ನಮಗೆ ಆಗಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

“ಹಳೆ ಬೆಂಗಳೂರು ಭಾಗದಲ್ಲಿ ಪ್ರವಾಹ ದೊಡ್ಡ ಸಮಸ್ಯೆ ಅಲ್ಲ. ವಿಜಯನಗರದ ಬಳಿ ವಾಸಿಸುತ್ತಿದ್ದು, ಒಮ್ಮೆಯೂ ಈ ರೀತಿ ಸಮಸ್ಯೆ ಎದುರಾಗಿಲ್ಲ. ಪೂರ್ವ ಬೆಂಗಳೂರು ಕೆರೆಗಳಿರುವ ಜೌಗು ಪ್ರದೇಶವಾಗಿತ್ತು. ಸರಿಯಾದ ಯೋಜನೆ ಇಲ್ಲದೇ ನಗರವನ್ನು ನಿರ್ಮಿಸಲು ಆ ಪ್ರದೇಶವನ್ನು ಬಳಸಿಕೊಂಡಿರುವುದೇ ದೊಡ್ಡ ಪ್ರಮಾದ ಎಂದು ಮತ್ತೊಬ್ಬ ಬಳಕೆದಾರರು ಟೀಕಿಸಿದ್ದಾರೆ.

ಈ ಅಸಮಾನತೆಯು ಬೆಂಗಳೂರು ನಗರ ಯೋಜನೆ ಮತ್ತು ಮೂಲಸೌಕರ್ಯ ನಿರ್ವಹಣೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕ ಬಳಕೆದಾರರು ಒಳಚರಂಡಿ ವ್ಯವಸ್ಥೆಗಳ ಪರಿಣಾಮಕಾರಿ ನಿರ್ವಹಣೆ ಮತ್ತು ನೀರಿನ ಸಂಪನ್ಮೂಲಗಳ ನಿರ್ವಹಣೆಯನ್ನು ಪ್ರಶ್ನಿಸುತ್ತಿದ್ದಾರೆ. ಎಲ್ಲ ನೆರೆಹೊರೆಗಳಲ್ಲಿ ಸಮಾನವಾದ ಅಭಿವೃದ್ಧಿಯ ಅಗತ್ಯವನ್ನು ಒತ್ತಿಹೇಳುತ್ತಿದ್ದಾರೆ.

ಕೆಲವು ನಿವಾಸಿಗಳು ಗೊಂದಲದ ನಡುವೆ ತಮ್ಮ ಅದೃಷ್ಟ ಹೇಳಿಕೊಂಡರೆ, ಇತರರು ನಗರದ ಮೂಲಸೌಕರ್ಯ ನ್ಯೂನತೆಗಳ ಭಾರವನ್ನು ಹೊಂದಿರುವಂತೆ ತೋರುವ ಕೆಲವು ಪ್ರದೇಶಗಳ ಸ್ಪಷ್ಟ ನಿರ್ಲಕ್ಷ್ಯದ ಬಗ್ಗೆ ಹತಾಶೆಯನ್ನು ವ್ಯಕ್ತಪಡಿಸಿರುವುದು ಕಂಡುಬಂದಿದೆ.

"ಹೆಚ್ಚಿನ ಜನಸಾಂದ್ರತೆ ಮತ್ತು ದೊಡ್ಡ ರಸ್ತೆಗಳಲ್ಲಿ ಅತಿಕ್ರಮಣ ಹೊಂದಿರುವ ಹಲವಾರು ದೊಡ್ಡ ದೊಡ್ಡ ಕಟ್ಟಡಗಳು ಸಮಸ್ಯೆಯಾಗಿದೆ" ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

"ಹಳೆಯ ಬೆಂಗಳೂರು ಸರಿಯಾದ ರೀತಿಯಲ್ಲಿ ಬಿಬಿಎಂಪಿ ಬೆಂಬಲ, ಉತ್ತಮ ರಸ್ತೆಗಳು, ಉತ್ತಮವಾಗಿ ನಿರ್ವಹಿಸಲ್ಪಟ್ಟ ಉದ್ಯಾನಗಳನ್ನು ಪಡೆಯುತ್ತ ಬಂದಿದೆ. ಮಹದೇವಪುರ - ನಗರಕ್ಕೆ ಬಹಳಷ್ಟು ದುಡ್ಡು ತಂದುಕೊಟ್ಟರೂ, ಪ್ರಯೋಜನವಿಲ್ಲ. ಅದರ ಸುತ್ತಮುತ್ತಲಿನ ಬಹುತೇಕ ಹಳ್ಳಿಗಳು ಹೆಚ್ಚಿನ ವೆಚ್ಚದ ಅಪಾರ್ಟ್‌ಮೆಂಟ್‌ಗಳಾಗಿ ರೂಪಾಂತರಗೊಂಡಿವೆ. ಬಿಬಿಎಂಪಿ ಈ ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ವಿಜೇತ್ ಕುಮಾರ್ ಟೀಕಿಸಿದ್ದಾರೆ.

Whats_app_banner