Bigg Boss: ಕಟ್ಟು ಕಥೆಗಳಿಂದಲೇ ಬಿಗ್ ಬಾಸ್ ಸ್ಪರ್ಧಿಗಳ ನೆಮ್ಮದಿ ಕೆಡಿಸಿದ ಚೈತ್ರಾ ಕುಂದಾಪುರ ಅವರಿಗೆ ಕಿಚ್ಚ ಸುದೀಪ್ ಇಟ್ಟ ಹೊಸ ಹೆಸರಿದು
Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಈ ವಾರದ ಪಂಚಾಯ್ತಿಯಲ್ಲಿ ಚೈತ್ರಾ ಕುಂದಾಪುರ ಅವರು ಹಾಟ್ ಟಾಪಿಕ್ ಆಗಿದ್ದಾರೆ. ಮನೆಮಂದಿಗೆ ಕಟ್ಟು ಕಥೆ ಹೇಳಿ ತಲೆಕೆಡಿಸಿದ್ದಕ್ಕೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಿಂದ ಆಸ್ಪತ್ರೆಗೆ ಹೋಗಿ ಮರಳಿ ಬಂದ ಚೈತ್ರಾ ಕುಂದಾಪುರ ತಾನು ಹೊಸ ವಿಷಯಗಳನ್ನು, ಮನೆಯ ಹೊರಗಡೆ ಏನಾಗುತ್ತಿದೆ ಎಂಬುದನ್ನು ಮನೆಯವರಿಗೆ ಹೇಳುತ್ತಿದ್ದೇನೆ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಆದರೆ ಅವರಿಗೆ ತಿಳಿದ ವಿಷಯಗಳನ್ನು ಇನ್ನೊಬ್ಬರ ಬಳಿ ಹಂಚಿಕೊಳ್ಳುವ ಹಾಗಿಲ್ಲ ಎಂದು ಬಿಗ್ ಬಾಸ್ ಆದೇಶ ನೀಡಿದ ಮೇಲೂ ಚೈತ್ರಾ ಅವರು ಕಥೆಯ ರೂಪದಲ್ಲಿ ಇಂಡೈರೆಕ್ಟ ಆಗಿ ಹೇಳಿದ್ದಾರೆ. ಮನೆಯವರಿಗೂ ತಮ್ಮ ಬಗ್ಗೆ ಹೊರಗಡೆ ಜನರಿಗೆ ಯಾವ ರೀತಿ ಅಭಿಪ್ರಾಯ ಇದೆ ಎಂಬ ಸಹಜ ಕುತೂಹಲ ಇತ್ತು. ಆ ಕಾರಣಕ್ಕಾಗಿ ಎಲ್ಲರೂ ಅವರ ಹತ್ತಿರ ಬಂದು ಮಾತನಾಡಿದ್ದರು.
ಇನ್ನು ಅದಾದ ನಂತರದಲ್ಲಿ ಚೈತ್ರಾ ಒಂದೆರಡು ಕಥೆ ಹೇಳುತ್ತಾರೆ. ಆ ಕಥೆಯ ಪ್ರಕಾರ ಮನೆಯ ಎಲ್ಲಾ ಸದಸ್ಯರನ್ನು ಬಿಂಬಿಸುತ್ತಾ ಸಾಗುತ್ತಾರೆ. ಉಗ್ರಂ ಮಂಜು ಅವರನ್ನು ಅಜ್ಜಿ ಎಂದು ಬಿಂಬಿಸಿ ಒಂದು ಚಿಕನ್ ಕಥೆ ಹೇಳುತ್ತಾರೆ. ಒಂದೂರಲ್ಲಿ ಅಜ್ಜಿ ಇದ್ರು, ಆ ಅಜ್ಜಿ ತನ್ನ ಮೊಮ್ಮಕ್ಕಳಿಗೆ ದಿನವೂ ರುಚಿಯಾದ ಚಿಕನ್ ಮಾಡಿ ಕೊಡ್ತಿದ್ರು, ಅವರ ಮೊಮ್ಮಕ್ಕಳೂ ಮೊದಲು ಇಷ್ಟಪಟ್ಟು ತಿಂತಾ ಇದ್ರು, ಆದ್ರೆ ಅಜ್ಜಿ ತಾನು ಮಾಡಿರೋ ಚಿಕನ್‌ನಾ ಊರಲ್ಲಿರೋ ಯಾರಿಗೂ ಕೊಡ್ತಾ ಇರಲಿಲ್ಲ. ಆದ್ರೆ ಆ ಮೊಮ್ಮಕ್ಕಳಿಗೂ ನಂತರ ಚಿಕನ್ ಇಷ್ಟ ಆಗದೇ ಹೋಯ್ತು, ಕೊನೆಗೊಂದು ದಿನ ಅಜ್ಜಿ ಸತ್ತೋದ್ಲು ಮೊಕ್ಕಳು ಖುಷಿಯಾದ್ರು ಎಂದು ಹೇಳುತ್ತಾರೆ. ಆಗ ಉಗ್ರಂ ಮಂಜು ಅವರಿಗೆ ಇದು ತನ್ನ ಹಾಗೂ ಮೋಕ್ಷಿತಾ, ಗೌತಮಿ ಕಥೆ ಎಂದು ಅನಿಸುತ್ತದೆ.
ಇದೇ ರೀತಿ ತ್ರಿವಿಕ್ರಂ ಅವರ ಬಗ್ಗೆ ಕೂಡ ಒಂದು ರಾಜನ ಹಾಗೂ ಮಂತ್ರಿಯ ಕಥೆಯನ್ನು ಹೇಳುತ್ತಾರೆ. ಈ ರೀತಿ ಒಂದಾದ ಮೇಲೆ ಒಂದು ಕಥೆಯನ್ನು ಹೇಳುತ್ತಾ ಎಲ್ಲರ ತಲೆಯಲ್ಲಿ ಹುಳ ಬಿಟ್ಟ ಕಾರಣ ಸುದೀಪ್ ಅವರಿಗೆ ಕೋಪ ಬಂದಿರುತ್ತದೆ. ಅವರು ಕೋಪ ಮಾಡಿಕೊಂಡಿರುವುದಕ್ಕೂ ಒಂದು ಕಾರಣ ಇತ್ತು, ಯಾಕೆಂದರೆ ಬಿಗ್ ಬಾಸ್ ವಾರ್ನಿಂಗ್ ನೀಡಿದ ಮೇಲೂ ಚೈತ್ರಾ ಈ ರೀತಿ ಮಾಡಿರುವುದು ಅವರ ಕೋಪಕ್ಕೆ ಕಾರಣವಾಗಿತ್ತು. ಅದಾದ ನಂತರದಲ್ಲಿ ಸುದೀಪ್ ಅವರೂ ಕೂಡ ಒಂದು ನೀತಿ ಕಥೆಯನ್ನು ಹೇಳುತ್ತಾರೆ.
ಅಮರ ಚಿತ್ರ ಕಥಾ
ನಂತರ ಚೈತ್ರಾ ಅವರಿಗೆ ಒಂದು ಹೆಸರಿಡುತ್ತಾರೆ. ಅಮರ ಚಿತ್ರ ಕಥಾ ಎಂದು. ಯಾಕೆ ಈ ರೀತಿ ಹೆಸರನ್ನು ಸೂಚಿಸಿದ್ದಾರೆ ಎಂದು ಮೊದಲು ಯಾರಿಗೂ ತಿಳಿದಿರಲಿಲ್ಲ. ಆ ನಂತರ ಸುದೀಪ್ ಅವರ ಬೈಗುಳ ಕೇಳಿ ಎಲ್ಲರಿಗೂ ಅರ್ಥವಾಗುತ್ತದೆ.