ಬೇರೆ ಟೈಮ್‌ನಲ್ಲಂತೂ ನೆಮ್ಮದಿ ಕೊಡಲ್ಲ, ಊಟ ಮಾಡುವಾಗಾದ್ರೂ ನೆಮ್ಮದಿ ಕೊಡಿ ಎಂದ ಭವ್ಯಾ ಗೌಡ; ಜಗದೀಶ್ ವಿರುದ್ಧ ಫುಲ್ ಗರಂ
ಭವ್ಯಾ ಗೌಡ ಅವರು ಊಟ ಮಾಡುವ ಸಂದರ್ಭದಲ್ಲಿ ಜಗದೀಶ್ ಅವರಿಗೆ ನೀವು ಬೇರೆ ಟೈಮಲ್ಲಂತೂ ನೆಮ್ಮದಿ ಕೊಡೋದಿಲ್ಲ. ಊಟ ಮಾಡುವಾಗಲಾದರೂ ನೆಮ್ಮದಿ ಕೊಡಿ ಎಂದು ಹೇಳುತ್ತಾರೆ. ಆ ಮಾತಿಗೆ ಜಗದೀಶ್ ಟ್ರಿಗರ್ ಆಗುತ್ತಾರೆ.

ಬಿಗ್ ಬಾಸ್ ಸೀಸನ್ 11ರದಲ್ಲಿ ದಿನೇ ದಿನೇ ಸ್ಪರ್ಧಿಗಳ ಕಾದಾಟ ಜಾಸ್ತಿ ಆಗ್ತಾ ಇದೆ. ಅದೇ ಪ್ರಕಾರ ಈಗ ಊಟದ ಸಮಯದಲ್ಲೊಂದು ಚಿಕ್ಕ ವಾಗ್ವಾದ ಆಗಿದೆ. ಲಾಯರ್ ಜಗದೀಶ್ ಆಡುವ ಮಾತುಗಳನ್ನು ಸಹಿಸೋಕೆ ಆಗೋದಿಲ್ಲ ಎನ್ನುವವರು ಹಲವರಿದ್ದಾರೆ. ಇಂದು ಕೂಡ ಅದೇ ರೀತಿ ಒಂದು ಸನ್ನಿವೇಶ ಎದುರಾಗಿದೆ.
ಪನೀರ್ ಬಟರ್ ಮಸಾಲಾ ಮತ್ತು ರೋಟಿ ಬೇಕು ಎಂದು ಲಾಯರ್ ಜಗದೀಶ್ ಹಂಸ ಅವರಿಗೆ ಹೇಳಿದ್ದಾರೆ. ಅದಕ್ಕೆ ಹಂಸ ಅವರಿಗೆ ಕಿರಿಕಿರಿಯಾಗಿದೆ. ಯಾಕೆ ಇವರು ಯಾವಾಗಲೂ ಏನಾದರೂ ಒಂದು ಆಗದೇ ಹೋದ ಕೆಲಸ ಹೇಳುತ್ತಾ ಎಲ್ಲರನ್ನು ಕೆಣಕುತ್ತಾ ಇರುತ್ತಾರೆ ಎಂದು ಮಾತನಾಡಿಕೊಂಡಿದ್ದಾರೆ. ತಾನು ಎಲ್ಲಾ ಕಡೆ ಕಾಣಿಸಿಕೊಳ್ಳಬೇಕು, ಒಂದಲ್ಲ ಒಂದು ರೀತಿಯಲ್ಲಿ ನೋಟಿಸ್ ಆಗಲೇಬೇಕು ಎಂಬುದು ಲಾಯರ್ ಜಗದೀಶ್ ಮನಸಿನಲ್ಲಿದೆ ಎಂಬುದು ಈಗ ಎಲ್ಲರಿಗೂ ಅರ್ಥ ಆಗುತ್ತಿದೆ. ಯಾಕೆ ಈ ರೀತಿ ಆಡ್ತಿದ್ಧಾರೆ ಇವರು ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.
ಕೋಪ ಮಾಡಿಕೊಂಡ ಭವ್ಯಾ ಗೌಡ
ಇನ್ನು ಭವ್ಯಾ ಗೌಡ ಅವರು ಊಟ ಮಾಡುವ ಸಂದರ್ಭದಲ್ಲಿ ಜಗದೀಶ್ ಅವರಿಗೆ ನೀವು ಬೇರೆ ಟೈಮಲ್ಲಂತೂ ನೆಮ್ಮದಿ ಕೊಡೋದಿಲ್ಲ. ಊಟ ಮಾಡುವಾಗಲಾದರೂ ನೆಮ್ಮದಿ ಕೊಡಿ ಎಂದು ಹೇಳುತ್ತಾರೆ. ಆ ಮಾತಿಗೆ ಜಗದೀಶ್ ಟ್ರಿಗರ್ ಆಗುತ್ತಾರೆ. ಅವರ ಮಾತನ್ನು ಕೇಳಿ ಸಿಟ್ಟಾಗಿ ಭವ್ಯಾ ಇನ್ನೂ ಹೆಚ್ಚು ಕೂಗಾಡುತ್ತಾರೆ. ಬೆಳಿಗ್ಗೆ ಐದು ಗಂಟೆಯಿಂದ ಕೇಳ್ತ ಇದೀನಿ ನಾನು ಎಂದು ಜಗದೀಶ್ ಹೇಳುತ್ತಾರೆ.
ಆದರೆ ಭವ್ಯಾ ಗೌಡ ಅವರು “ನಮಗೆ ಇಲ್ಲಿ ಬಿಗ್ ಬಾಸ್ ಐದು ಗಂಟೆಗೆ ಎಳಲು ಹೇಳಿಲ್ಲ” ಎಂದು ಹೇಳುತ್ತಾರೆ. ಹೀಗೆ ಒಬ್ಬರಿಗಿಂತ ಒಬ್ಬರು ಜೋರಾಗಿ ಕೂಗಾಡಲು ಆರಂಭಿಸುತ್ತಾರೆ. ಅವರ ಮಾತು ತಾರಕಕ್ಕೇರುತ್ತದೆ. ಆಗ ತುಂಬಾ ತೊಂದರೆ ಆಗ್ತಿದೆ, ನನಗೆ ಇದು ನನ್ನ ಮನೆ ಎಂದು ಭವ್ಯಾ ಗೌಡ ಹೇಳುತ್ತಾರೆ.
ನಾನು ಮಾತಾಡಿದ್ದು ನಿನ್ನ ಹತ್ರ ಅಲ್ಲ. ನಾನು ಮಾತಾಡಿದ್ದು ಕ್ಯಾಪ್ಟನ್ ಹಂಸ ಹತ್ರ ಎಂದು ಜಗದೀಶ್ ಇನ್ನಷ್ಟು ಚೀರುತ್ತಾರೆ. ಗದರಿಸಬೇಡಿ, ಸ್ವಲ್ಪ ನಿಧಾನಕ್ಕೆ ಮಾತಾಡಿ ಎಂದು ಭವ್ಯಾ ಗೌಡ ಹೇಳುತ್ತಾರೆ. ಆದರೆ ಜಗದೀಶ್ ಯಾರ ಮಾತನ್ನೂ ಕೇಳುವುದಿಲ್ಲ. ತಮ್ಮ ಮನಸಿಗೆ ಬಂದ ರೀತಿಯಲ್ಲಿ ಜೋರು ಜೋರಾಗಿ ಮಾತಾಡ್ತಾ ಇರ್ತಾರೆ. ಅವರನ್ನು ಕಂಡರೆ ಅರ್ಧಕ್ಕರ್ಧ ಮನೆಯವರಿಗೆ ಆಗೋದಿಲ್ಲ.
ಹಂಸ ಅವರನ್ನು ರೇಗಿಸೋದೇ ಕೆಲಸ
ಇನ್ನು ಹಂಸ ಅವರನ್ನು ಕಾಡಬೇಕು ಎಂದೇ ಸುಮಾರು ಮಾತುಗಳನ್ನು ಜಗದೀಶ್ ಆಡುತ್ತಾರೆ. ಈ ಹಿಂದೆ ಹಂಸ ಅವರ ಜೊತೆ ಸಲುಗೆ ಬೆಳೆಸಲು ಕೂಡ ಅವರು ಸರ್ಕಸ್ ಮಾಡಿದ್ದರು. ಯಾವ ಕ್ಷಣಕ್ಕೆ ಯಾವ ರೀತಿ ಬೇಕಾದರೂ ಅವರು ಬದಲಾಗುತ್ತಾರೆ ಎಂದು ಹಲವರು ಕಾಮೆಂಟ್ ಮಾಡುತ್ತಿದ್ಧಾರೆ. ನನ್ನತ್ರ ಮಾತಾಡೋದಕ್ಕೆ ನೀನ್ಯಾರು ಎಂದು ಇಬ್ಬರೂ ಪರಸ್ಪರ ಕೇಳಿಕೊಂಡಿದ್ದಾರೆ.