Bigg Boss Telugu 8: ತೆಲುಗು ಬಿಗ್‌ ಬಾಸ್‌ ಗೆದ್ದ ಕನ್ನಡಿಗ ನಿಖಿಲ್‌ಗೆ ಸಿಕ್ಕ ಸಂಭಾವನೆ ಅಷ್ಟಿಷ್ಟಲ್ಲ!
ಕನ್ನಡ ಸುದ್ದಿ  /  ಮನರಂಜನೆ  /  Bigg Boss Telugu 8: ತೆಲುಗು ಬಿಗ್‌ ಬಾಸ್‌ ಗೆದ್ದ ಕನ್ನಡಿಗ ನಿಖಿಲ್‌ಗೆ ಸಿಕ್ಕ ಸಂಭಾವನೆ ಅಷ್ಟಿಷ್ಟಲ್ಲ!

Bigg Boss Telugu 8: ತೆಲುಗು ಬಿಗ್‌ ಬಾಸ್‌ ಗೆದ್ದ ಕನ್ನಡಿಗ ನಿಖಿಲ್‌ಗೆ ಸಿಕ್ಕ ಸಂಭಾವನೆ ಅಷ್ಟಿಷ್ಟಲ್ಲ!

Bigg Boss Telugu 8: ಬಿಗ್‌ ಬಾಸ್‌ ತೆಲುಗು ಸೀಸನ್‌ 8ಕ್ಕೆ ತೆರೆಬಿದ್ದಿದೆ. ರಾಮ್‌ಚರಣ್‌ ತೇಜ ಅತಿಥಿಯಾಗಿ ಆಗಮಿಸಿ, ವಿಜೇತರು ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ ಈ ಸೀಸನ್‌ನ ವಿಜೇತರಾಗಿ ಕರ್ನಾಟಕ ಮೂಲದ ನಿಖಿಲ್‌ ಹೊರಹೊಮ್ಮಿದ್ದಾರೆ. ಅವರಿಗೆ ಅಷ್ಟೇ ದೊಡ್ಡ ಪ್ರಮಾಣದ ಮೊತ್ತವೂ ಸಿಕ್ಕಿದೆ.

ತೆಲುಗು ಬಿಗ್‌ ಬಾಸ್‌ ಗೆದ್ದ ಕನ್ನಡಿಗ ನಿಖಿಲ್‌ಗೆ ಸಿಕ್ಕ ಸಂಭಾವನೆ ಅಷ್ಟಿಷ್ಟಲ್ಲ
ತೆಲುಗು ಬಿಗ್‌ ಬಾಸ್‌ ಗೆದ್ದ ಕನ್ನಡಿಗ ನಿಖಿಲ್‌ಗೆ ಸಿಕ್ಕ ಸಂಭಾವನೆ ಅಷ್ಟಿಷ್ಟಲ್ಲ

Bigg Boss Telugu 8 Winner: ಬಿಗ್ ಬಾಸ್ ತೆಲುಗು ಸೀಸನ್ 8ಕ್ಕೆ ತೆರೆಬಿದ್ದಿದೆ. ಕರ್ನಾಟಕ ಮೂಲದ ನಟ ನಿಖಿಲ್‌ ಮಳಿಯಕ್ಕಲ್ ಈ ಸೀಸನ್‌ನ ವಿಜೇತರಾಗಿ ಹೊರಹೊಮ್ಮಿದ್ದಾರೆ. ಟಾಲಿವುಡ್‌ ನಟ ರಾಮ್ ಚರಣ್, ಫಿನಾಲೆ ವೇದಿಕೆಗೆ ಅತಿಥಿಯಾಗಿ ಆಗಮಿಸಿ ಬಿಗ್ ಬಾಸ್ 8 ತೆಲುಗು ವಿಜೇತರನ್ನು ಘೋಷಿಸಿದರು. ಗೌತಮ್‌ ಕೃಷ್ಣ ರನ್ನರ್‌ ಅಪ್‌ ಆದರೆ, ನಬೀಲ್‌ ಎರಡನೇ ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಈ ಹಿಂದಿನ ಸೀಸನ್‌ಗಳಿಗಿಂತಲೂ ಅತ್ಯಧಿಕ ಕ್ಯಾಶ್‌ ಪ್ರೈಸ್‌ ತಮ್ಮದಾಗಿಸಿಕೊಂಡರು ವಿಜೇತ ಸ್ಪರ್ಧಿ ನಿಖಿಲ್.‌

ಕರ್ನಾಟಕದ ಮೈಸೂರಿನ ಮೂಲಕ ನಿಖಿಲ್ ಮಳಿಯಕ್ಕಲ್ ತೆಲುಗಿನ ‘ಗೋರಿಂಟಕು’ ಧಾರಾವಾಹಿ ಮೂಲಕ ತೆಲುಗು ನಾಡಿನಲ್ಲಿ ಮನೆಮಾತಾದರು. ಅದಕ್ಕೂ ಮೊದಲು ಕನ್ನಡದಲ್ಲಿ ಊಟಿ ಹೆಸರಿನ ಸಿನಿಮಾದಲ್ಲಿಯೂ ನಟಿಸಿದ್ದರು. ಆದರೆ, ಅವರಿಗೆ ತೆಲುಗು ಕಿರುತೆರೆ ಫೇಮ್‌ ತಂದುಕೊಟ್ಟಿತು. ಆ ಖ್ಯಾತಿಯ ಮೂಲಕವೇ ಬಿಗ್ ಬಾಸ್ ಮನೆಗೂ ಎಂಟ್ರಿ ಕೊಟ್ಟು ಫೈನಲ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಹಾಗಾದರೆ, ವಿಜೇತ ನಿಖಿಲ್‌ಗೆ ಸಿಕ್ಕ ಬಹುಮಾನ ಏನೇನು? ಎಂಬ ಕುತೂಹಲ ಮೂಡಿದೆ. ಅದಕ್ಕೂ ಉತ್ತರ ಸಿಕ್ಕಿದೆ. ಬಿಗ್ ಬಾಸ್ ವಿಜೇತರಿಗೆ ಬಹುಮಾನದ ಮೊತ್ತ 55 ರೂ ಲಕ್ಷ ಸಿಕ್ಕಿದೆ. ಮಾರುತಿ ಸುಜುಕಿ ಅವರ ಹೊಚ್ಚ ಹೊಸ ಡಿಜೈರ್ ಕಾರು ಉಡುಗೊರೆಯಾಗಿ ನೀಡಲಾಗಿದೆ. ಈ ಕಾರಿನ ಬೆಲೆ ಸುಮಾರು ರೂ. 6.79 ಲಕ್ಷದ್ದಾಗಿದೆ.

ಒಟ್ಟಾರೆ ಬಹುಮಾನ ಕೋಟಿ ಸನಿಹ..

55 ಲಕ್ಷ ನಗದು ಬಹುಮಾನದ ಜೊತೆಗೆ, ಕಾರಿನ ಮೌಲ್ಯ 6.79 ಲಕ್ಷವಿದೆ. ಅದೇ ರೀತಿ ಬಿಗ್‌ ಬಾಸ್‌ ಮನೆಯಲ್ಲಿ ಒಂದು ದಿನಕ್ಕೆ ಸಂಭಾವನೆ ರೂಪದಲ್ಲಿ ನಿಖಿಲ್‌ ಅವರಿಗೆ 32,143 ಸಿಕ್ಕಿದೆ. ವಾರಕ್ಕೆ 2ಲಕ್ಷ 25 ಸಾವಿರ ಆಗುತ್ತದೆ. ಒಟ್ಟು 15 ವಾರಗಳ ಕಾಲ ನಿಖಿಲ್‌ ಮನೆಯಲ್ಲಿದ್ದು ವಿಜೇತರಾಗಿದ್ದಾರೆ. ಅಲ್ಲಿಗೆ ಸಂಭಾವನೆಯೇ 33 ಲಕ್ಷ 75 ಸಾವಿರ ಆಗಿದೆ. ಎಲ್ಲವನ್ನು ಸೇರಿಸಿದರೆ, 95 ಲಕ್ಷ ಮೊತ್ತವಾಗಿದೆ. ಈ ಒಟ್ಟಾರೆ ಹಣದಲ್ಲಿ ನಿಖಿಲ್‌ಗೆ 55 ಲಕ್ಷ ಮಾತ್ರ ಸಿಗಲಿದೆಯೇ ಅಥವಾ 15 ವಾರಗಳ ಸಂಭಾವನೆಯೂ ಸಿಗಲಿದೆಯೇ ಎಂಬುದಕ್ಕೆ ಸದ್ಯಕ್ಕೆ ಉತ್ತರವಿಲ್ಲ.

ಒಂದು ವೇಳೆ ಬಿಗ್ ಬಾಸ್ ಬಹುಮಾನದ ಮೊತ್ತ, ಕಾರಿನ ಬೆಲೆ ಮತ್ತು ಸಂಭಾವನೆ ಎಲ್ಲವೂ ನಿಖಿಲ್‌ಗೆ ಸಿಕ್ಕಿದ್ದೇ ಆದರೆ, ಇಷ್ಟೊಂದು ದೊಡ್ಡ ಬಹುಮಾನ ಗೆದ್ದ ಮೊದಲ ತೆಲುಗು ಬಿಗ್‌ಬಾಸ್‌ ಸ್ಪರ್ಧಿಯಾಗಲಿದ್ದಾರೆ.

Whats_app_banner