2025ರ ಶುಭಾಶಯಗಳು: ದಿನಗಳು ಉರುಳಲಿ, ಪ್ರೀತಿ ಹೆಚ್ಚಾಗುತ್ತಲೇ ಇರಲಿ: ಹೊಸ ವರ್ಷಕ್ಕೆ ನಿಮ್ಮ ಪ್ರೇಯಸಿಗೆ ಈ ರೀತಿ ಶುಭ ಕೋರಿ
ಕನ್ನಡ ಸುದ್ದಿ  /  ಜೀವನಶೈಲಿ  /  2025ರ ಶುಭಾಶಯಗಳು: ದಿನಗಳು ಉರುಳಲಿ, ಪ್ರೀತಿ ಹೆಚ್ಚಾಗುತ್ತಲೇ ಇರಲಿ: ಹೊಸ ವರ್ಷಕ್ಕೆ ನಿಮ್ಮ ಪ್ರೇಯಸಿಗೆ ಈ ರೀತಿ ಶುಭ ಕೋರಿ

2025ರ ಶುಭಾಶಯಗಳು: ದಿನಗಳು ಉರುಳಲಿ, ಪ್ರೀತಿ ಹೆಚ್ಚಾಗುತ್ತಲೇ ಇರಲಿ: ಹೊಸ ವರ್ಷಕ್ಕೆ ನಿಮ್ಮ ಪ್ರೇಯಸಿಗೆ ಈ ರೀತಿ ಶುಭ ಕೋರಿ

New Year 2025 Wishes: ಯಾವುದೇ ಶುಭ ಸಮಾರಂಭ ಇರಲಿ, ಖುಷಿಯ ವಿಚಾರವಾಗಲಿ ಆತ್ಮೀಯರಿಗೆ ಅಭಿನಂದನೆ ಸಲ್ಲಿಸುವುದು, ಶುಭಾಶಯ ಕೋರುವುದು ಸಾಮಾನ್ಯ. ಹೊಸ ವರ್ಷ ಬರುತ್ತಿದೆ. ನೀವು ನಿಮ್ಮ ಪ್ರೇಯಸಿಗೆ ವಿಭಿನ್ನವಾಗಿ ಶುಭ ಕೋರಬೇಕು ಎಂದುಕೊಂಡಲ್ಲಿ ಇಲ್ಲಿ ಕೆಲವು ಸುಂದರ ಸಾಲುಗಳಿವೆ. ವಾಟ್ಸಾಪ್‌ ಸಂದೇಶ ಅಥವಾ ಗ್ರೀಟಿಂಗ್‌ ಕಾರ್ಡ್‌ ಮೂಲಕ ನಿಮ್ಮ ಚೆಲುವೆಗೆ ಶುಭ ಕೋರಿ

ನಿಮ್ಮ ಪ್ರೇಯಸಿಗೆ ಹೊಸ ವರ್ಷದ ಶುಭಾಶಯ ಹೀಗೆ ಕೋರಿ
ನಿಮ್ಮ ಪ್ರೇಯಸಿಗೆ ಹೊಸ ವರ್ಷದ ಶುಭಾಶಯ ಹೀಗೆ ಕೋರಿ (PC: Canva)

2025ರ ಶುಭಾಶಯಗಳು: ದಿನಗಳು ಕಳೆಯುತ್ತಿವೆ, ವರ್ಷಗಳು ಉರುಳುತ್ತಿವೆ. ಮೊನ್ನೆ ಮೊನ್ನೆಯಷ್ಟೇ 2024ನ್ನು ಸ್ವಾಗತಿಸಿದ್ದೇವೆ ಎನಿಸುತ್ತಿದೆ. ಅಷ್ಟರಲ್ಲಿ ಒಂದು ವರ್ಷ ಮುಗಿದು ಹೊಸ ವರ್ಷ ಬರುತ್ತಿದೆ. 2025 ನ್ನು ಸ್ವಾಗತಿಸಲು ಇನ್ನು 15 ದಿನಗಳಷ್ಟೇ ಬಾಕಿ ಉಳಿದಿದೆ. ಹಿಂದೂಗಳಿಗೆ ಹೊಸ ವರ್ಷ ಎಂದರೆ ಅದು ಯುಗಾದಿ, ಆದರೂ ಇಂಗ್ಲೀಷ್‌ ಕ್ಯಾಲೆಂಡರ್‌ ಪ್ರಕಾರ ಜನವರಿ 1ನ್ನು ಕೂಡಾ ಹೊಸ ವರ್ಷವನ್ನಾಗಿ ಆಚರಿಸುತ್ತಾ ಬರಲಾಗಿದೆ.

ಹೊಸ ವರ್ಷ ಬರುತ್ತಿದ್ದಂತೆ ಪಾರ್ಟಿ, ಪ್ರವಾಸ, ರೆಸ್ಯುಲೂಷನ್‌ ಸೇರಿದಂತೆ ನಾನಾ ವಿಚಾರಗಳ ಬಗ್ಗೆ ಪ್ಲ್ಯಾನ್‌ ಮಾಡಲಾಗುತ್ತದೆ. ಹೋಟೆಲ್‌, ರೆಸಾರ್ಟ್‌ಗಳಲ್ಲಿ ಹೊಸ ವರ್ಷ ಆಚರಿಸಲು ಈಗಲೇ ತಯಾರಿ ನಡೆದಿದೆ. ಡಿಸೆಂಬರ್‌ 31 ಮಧ್ಯರಾತ್ರಿ 12 ದಾಟುತ್ತಿದ್ದಂತೆ ಜನರು ಪಟಾಕಿ ಸಿಡಿಸಿ ಹರ್ಷೋದ್ಗಾರದಿಂದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಹೊಸ ಹೊಸ ಕನಸುಗಳು, ಗುರಿಗಳನ್ನು ಇಟ್ಟುಕೊಂಡು ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ನಿಮ್ಮ ಬದುಕಲ್ಲಿ ಸಂತೋಷವೇ ತುಂಬಿರಲಿ ಎಂದು ಆತ್ಮೀಯರಿಗೆ ಹಾರೈಸುತ್ತಾರೆ. ಹಾಗಾದರೆ ಈ ಹೊಸ ವರ್ಷಕ್ಕೆ ಮೊದಲು ಯಾರಿಗೆ ಶುಭ ಕೋರಬೇಕು ಎಂದುಕೊಂಡಿದ್ದೀರ? ಹೊಸ ವರ್ಷದ ಆಚರಣೆಯಲ್ಲಿ ನಿಮ್ಮ ಪ್ರೇಯಸಿ ನಿಮ್ಮೊಂದಿಗೆ ಇದ್ದರೆ ಅಥವಾ ಅವರು ನಿಮ್ಮಿಂದ ದೂರ ಇದ್ದರೆ ಈ ರೀತಿ ಶುಭ ಕೋರಬಹುದು.

ಪ್ರೇಯಸಿಗೆ ಹೊಸ ವರ್ಷದ ಶುಭಾಶಯಗಳು

  • ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ, ಹಿಂದೆಂದಿಗಿಂತ ನಿನ್ನ ಮೇಲೆ ಪ್ರೀತಿ ಇನ್ನಷ್ಟು ಹೆಚ್ಚಾಗುತ್ತಿದೆ, ನಮ್ಮಿಬ್ಬರ ಬಂಧ ಇನ್ನಷ್ಟು ಗಟ್ಟಿಯಾಗಲಿ, ನನ್ನ ಪ್ರಿಯತಮೆಗೆ ಹೊಸ ವರ್ಷದ ಶುಭಾಶಯಗಳು.

ಇದನ್ನೂ ಓದಿ:  ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಹೇಗಿರುತ್ತೆ? ನಗರದ ಈ ಪ್ರದೇಶಗಳಲ್ಲಿ ನಡೆಯುತ್ತೆ ಅದ್ಧೂರಿ ಸಂಭ್ರಮಾಚರಣೆ

  • ಈ ವರ್ಷದ ಪ್ರತಿ ದಿನ, ಪ್ರತಿ ಕ್ಷಣ ನಿನ್ನೊಂದಿಗೆ ಇರಲು, ನಿನ್ನನ್ನು ಖುಷಿಯಾಗಿಡುವುದೇ ನನ್ನ ಹೊಸ ವರ್ಷದ ರೆಸ್ಯುಲೂಷನ್‌, ಹೊಸ ವರ್ಷದ ಶುಭ ಹಾರೈಕೆಗಳು ಚೆಲುವೆ.
  • ನಿಮ್ಮೊಂದಿಗೆ ಆಚರಿಸುವ ಪ್ರತಿ ಹೊಸ ವರ್ಷವೂ ಒಂದು ಜೀವಮಾನದ ಸಂತೋಷದಂತೆ. ಇಬ್ಬರೂ ಜೊತೆ ಸೇರಿ ಇನ್ನೊಂದು ಹೊಸ ಅಧ್ಯಾಯ ಆರಂಭಿಸೋಣ, ಈ ಹೊಸ ವರ್ಷ ನಿನ್ನ ಬಾಳಲ್ಲಿ ಎಲ್ಲಾ ಸುಖ , ಸಂತೋಷ ತರಲಿ, ನಿನ್ನ ಜೀವನ ಖುಷಿಯಿಂದ ಕೂಡಿರಲಿ ಸುಂದರಿ.
  • ನಿನ್ನ ಪ್ರಕಾಶವಾದ ಆ ಕಣ್ಣುಗಳ ಮುಂದೆ ಹೊಸ ವರ್ಷದ ಹೊಳಪೂ ಮಂಕಾಗಿದೆ. ನೀನು ನನ್ನ ಜೊತೆಗಿರುವ ಪ್ರತಿದಿನವೂ ನನಗೆ ಹೊಸ ವರ್ಷವೇ ನನ್ನ ಮನದನ್ನೆ, ನಿನ್ನ ಎಲ್ಲಾ ಕನಸುಗಳೂ ನನಸಾಗಲಿ.
  • ಬಣ್ಣ ಬಣ್ಣದ ಪಟಾಕಿಗಳು ರಾತ್ರಿ ಆಕಾಶವನ್ನು ಬೆಳಗುವಂತೆ, ನೀನು ನನ್ನ ಬದುಕೆಂಬ ಜಗತ್ತನ್ನು ಬೆಳಗುತ್ತಲೇ ಇರು, ನನ್ನ ಮನದ ಅರಸಿಗೆ ಹೊಸ ವರ್ಷದ ಶುಭಾಶಯಗಳು.
  • ವರ್ಷದ 365 ದಿನಗಳು, 8,670 ಗಂಟೆಗಳು, 52 ವಾರಗಳು, 525,600 ನಿಮಿಷಗಳು, 31 536 000 ಸೆಕೆಂಡುಗಳು ಸೇರಿದಂತೆ ನಿನ್ನ ಜೀವನದ ಪ್ರತಿ ಕ್ಷಣವೂ ಸಂತೋಷವೇ ತುಂಬಿರಲಿ, ಹೊಸ ವರ್ಷ ಇನ್ನಷ್ಟು ಖುಷಿ ನೀಡಲಿ.

ಇದನ್ನೂ ಓದಿ: ಹೊಸ ವರ್ಷಕ್ಕೆ ಮಾಡಿ ಹೊಸ ಸಂಕಲ್ಪ; ಆರೋಗ್ಯ ಭಾಗ್ಯಕ್ಕೆ ಆಹಾರದಲ್ಲಿ ಈ 10 ಶಿಸ್ತು ಅನುದಿನವಿರಲಿ

  • ಕ್ಯಾಲೆಂಡರ್ ಬದಲಾದರೂ ನಿನ್ನ ಮೇಲಿನ ಪ್ರೀತಿ ಎಂದಿಗೂ ಹೀಗೇ ಇರುತ್ತದೆ ನನ್ನ ಹೃದಯ ಸಾಮ್ರಾಜ್ಯದ ಒಡತಿಗೆ ಹೊಸ ವರ್ಷ ಹೊಸ ಹುರುಪನ್ನು ತುಂಬಲಿ.
  • ವರ್ಷಕ್ಕೊಂದು ರೆಸ್ಯುಲೂಷನ್‌ ಏಕೆ ಪ್ರಿಯತಮೆ, ನೀನು ನನಗೆ ಸಿಕ್ಕಾಗಿನಿಂದ ಜೀವನದ ಕೊನೆ ಕ್ಷಣದವರೆಗೂ ನಿನಗೆ ಖುಷಿಯ ಕ್ಷಣಗಳನ್ನು ನೀಡುವುದೇ ನನ್ನ ಲೈಫ್‌ ಟೈಮ್‌ ರೆಸ್ಯುಲೂಷನ್‌ ಮೈ ಲವ್‌.
  • 2025 ವರ್ಷವನ್ನು ವಿಶೇಷಗೊಳಿಸಿದ ಮಹಿಳೆಗೆ ತುಂಬು ಹೃದಯದ ಧನ್ಯವಾದಗಳು, ಪ್ರೀತಿ ಹೆಚ್ಚಾಗಲಿ ಮಿಲಿಯನ್‌ ನೆನಪುಗಳು ಹೃದಯ ತುಂಬಲಿ, ಹೊಸ ವರ್ಷ ನಿನ್ನ ಪಾಲಿಗೆ ತರಲಿ ಹರುಷ ಪ್ರಿಯತಮೆ.
  • ಹೊಸ ವರ್ಷವೆಂಬ ಖಾಲಿ ಪುಸ್ತಕದಲ್ಲಿ, ನಾನು ಲೇಖನಿಯಾಗಿ ನಿನಗಾಗಿ ಸುಂದರ ಕಥೆಯೊಂದನ್ನು ಬರೆಯಲು ಕಾಯುತ್ತಿದ್ದೇನೆ ನನ್ನ ಪ್ರೀತಿಯೇ, 2025 ನಿನ್ನ ಬದುಕೆಲ್ಲಾ ಬಂಗಾರವಾಗಿರಲಿ ಎಂದು ಹೃದಯಪೂರ್ವಕವಾಗಿ ಹಾರೈಸುತ್ತೇನೆ.

ಈ ರೀತಿ ವಾಟ್ಸಾಪ್‌ ಸಂದೇಶ ಅಥವಾ ಗ್ರೀಟಿಂಗ್‌ ಕಾರ್ಡ್‌ ಮೂಲಕ ನಿಮ್ಮ ಪ್ರಿಯತಮೆಗೆ ಶುಭ ಕೋರಿದರೆ ಆಕೆ ಖುಷಿಯಾಗುವುದು ಖಂಡಿತ.

 

Whats_app_banner