ಇದು ರಾಷ್ಟ್ರಮಟ್ಟದ ಚರ್ಚೆ ಎಂದು ಗೊತ್ತಿರಲಿಲ್ಲ; ತನ್ನ ಉಡುಗೆ ಬಗ್ಗೆ ಟ್ರೋಲ್‌ ಮಾಡಿದವರಿಗೆ ಖಡಕ್ ಉತ್ತರ ನೀಡಿದ ಸ್ವರಾ ಭಾಸ್ಕರ್‌
ಕನ್ನಡ ಸುದ್ದಿ  /  ಮನರಂಜನೆ  /  ಇದು ರಾಷ್ಟ್ರಮಟ್ಟದ ಚರ್ಚೆ ಎಂದು ಗೊತ್ತಿರಲಿಲ್ಲ; ತನ್ನ ಉಡುಗೆ ಬಗ್ಗೆ ಟ್ರೋಲ್‌ ಮಾಡಿದವರಿಗೆ ಖಡಕ್ ಉತ್ತರ ನೀಡಿದ ಸ್ವರಾ ಭಾಸ್ಕರ್‌

ಇದು ರಾಷ್ಟ್ರಮಟ್ಟದ ಚರ್ಚೆ ಎಂದು ಗೊತ್ತಿರಲಿಲ್ಲ; ತನ್ನ ಉಡುಗೆ ಬಗ್ಗೆ ಟ್ರೋಲ್‌ ಮಾಡಿದವರಿಗೆ ಖಡಕ್ ಉತ್ತರ ನೀಡಿದ ಸ್ವರಾ ಭಾಸ್ಕರ್‌

ನಟಿ ಸ್ವರಾ ಭಾಸ್ಕರ್ ಅವರ ಇತ್ತೀಚಿನ ವೈರಲ್ ಫೋಟೋದ ಬಗ್ಗೆ ಸ್ವರಾ ಭಾಸ್ಕರ್ ತಾವೇ ಸ್ವತಃ ರಿಯಾಕ್ಟ್ ಮಾಡಿದ್ದಾರೆ. ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುವ ವಿಷಯ ಎಂದು ಗೊತ್ತಿರಲಿಲ್ಲ ಎಂದಿದ್ದಾರೆ.

ತನ್ನ ಉಡುಗೆ ಬಗ್ಗೆ ಟ್ರೋಲ್‌ ಮಾಡಿದವರಿಗೆ ಖಡಕ್ ಉತ್ತರ ನೀಡಿದ ಸ್ವರಾ ಭಾಸ್ಕರ್‌
ತನ್ನ ಉಡುಗೆ ಬಗ್ಗೆ ಟ್ರೋಲ್‌ ಮಾಡಿದವರಿಗೆ ಖಡಕ್ ಉತ್ತರ ನೀಡಿದ ಸ್ವರಾ ಭಾಸ್ಕರ್‌

ನಟಿ ಸ್ವರಾ ಭಾಸ್ಕರ್ ಅವರ ಇತ್ತೀಚಿನ ಚಿತ್ರಗಳು ವೈರಲ್ ಆಗುತ್ತಿದ್ದಂತೆ ತುಂಬಾ ಟ್ರೋಲ್ ಮಾಡಲಾಗಿದೆ. ಅವರು ಈ ಹಿಂದೆ ಇದ್ದ ರೀತಿಗೂ ಮತ್ತು ಈಗಿರುವ ರೀತಿಗೂ ಹೋಲಿಕೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಕಳೆದ ಒಂದು ವಾರದಿಂದಲೂ ಸುದ್ದಿಯಲ್ಲಿದ್ದಾರೆ. ಇದಕ್ಕೆ ಅವರ ತೂಕ ಏರಿಕೆಯೇ ಕಾರಣ. ಮೌಲಾನಾ ಸಜ್ಜದ್ ನೊಮಾನಿ ಅವರೊಂದಿಗಿನ ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಮುಸ್ಲಿಂ ಧರ್ಮಗುರುಗಳು ಮಹಿಳೆಯರ ಹಕ್ಕುಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರಿಂದ ಕೆಲವರು ಅವರನ್ನು ಧರ್ಮಗುರುವನ್ನು ಭೇಟಿ ಮಾಡಿದ್ದಕ್ಕಾಗಿ ಕೂಡ ಟೀಕೆ ಮಾಡಿದ್ದರು.

ಅದೇ ಸಮಯದಲ್ಲಿ, ಕೆಲವರು ನಟಿಯ ಉಡುಗೆ ಹಾಗೂ ಅವರ ಜೀವನಶೈಲಿಯ ಬಗ್ಗೆ ಕೂಡ ಕೆಟ್ಟದಾಗಿ ಬಾಡಿಶೇಮಿಂಗ್‌ ರೂಪದಲ್ಲಿ ಕಾಮೆಂಟ್ ಮಾಡಿದ್ದಾರೆ. ಫಹಾದ್ ಅಹ್ಮದ್ ಅವರನ್ನು ಮದುವೆಯಾದ ನಂತರ ಅವರ ಜೀವನಶೈಲಿಯಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂದು ಈ ಫೋಟೋ ನೋಡಿದರೆ ಅರ್ಥವಾಗುತ್ತದೆ ಎಂದು ಕೆಲವರು ಇದಕ್ಕೆ ಧರ್ಮದ ಬಣ್ಣವನ್ನೂ ಬಳಿದರೂ. ಈ ರೀತಿಯಾಗಿ ಸ್ವರಾ ಭಾಸ್ಕರ್ ಅವರು ತುಂಬಾ ಟ್ರೋಲ್ ಆಗುತ್ತಿದ್ದಾರೆ.

ಮೊದಲು ಹೇಗೆ ಬದುಕುತ್ತಿದ್ದಳು ಈಗ ತಲೆಗೆ ಸ್ಕಾರ್ಫ್ ಹಾಕಿಕೊಳ್ಳಲು ಶುರುಮಾಡಿದ್ದಾಳೆ ನೋಡಿ ಎಂದು ಸಹ ಕಾಮೆಂಟ್ ಮಾಡಿದವರಿದ್ದಾರೆ. ಧರ್ಮ ಗುರುಗಳ ಬಳಿ ಹೋದಾಗ ಯಾವ ರೀತಿ ನಿಯಮ ಪಾಲನೆ ಮಾಡಬೇಕೋ ಆ ರೀತಿ ಇದ್ದಾಳಷ್ಟೇ ಎಂದು ಇನ್ನು ಕೆಲವರು ಸಹಕಾರ ನೀಡುವ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಆದರೆ ಈ ರೀತಿ ಪಾಸಿಟಿವ್ ಕಾಮೆಂಟ್‌ಗಳು ತೀರಾ ಕಡಿಮೆಯಾಗಿವೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ಸ್ವರಾ ಭಾಸ್ಕರ್ ನೆಟ್ಟಿಗರಿಗೆ ಉತ್ತರ ನೀಡಿದ್ದಾರೆ.

ಅವರು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವುದು ಹೀಗೆ “ಮದುವೆಯ ನಂತರ, ನನ್ನ ಉಡುಗೆ (ವಿಚಿತ್ರ!) ಬಗ್ಗೆ ರಾಷ್ಟ್ರಮಟ್ಟದ ಚರ್ಚೆ ನಡೆಯುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಸಗಣಿ ಹುಳಗಳಿಗೆ ತಿನ್ನಲು ಇಲ್ಲಿ ಇನ್ನಷ್ಟಿದೆ. ಸಂಪ್ರದಾಯವಾದಿ ಮುಸ್ಲಿಂ ಪತಿ ಎಂಬ ನಿಮ್ಮ ಸ್ಟೀರಿಯೊಟೈಪ್‌ಗೆ ನನ್ನ ಪತಿ ಫಹಾದ್ ಅಹ್ಮದ್ ಹೊಂದಿಕೆಯಾಗುವುದಿಲ್ಲ ಕ್ಷಮಿಸಿ” ಎಂದಿದ್ದಾರೆ.

Whats_app_banner