Kargil Vijay Diwas ಪ್ರಯುಕ್ತ ಒಟಿಟಿಯಲ್ಲಿ ನೋಡಬಹುದಾದ ನೆಲದ ಯೋಧರ ವೀರಗಾಥೆ ಕುರಿತ ಸಿನಿಮಾಗಳು
ಕನ್ನಡ ಸುದ್ದಿ  /  ಮನರಂಜನೆ  /  Kargil Vijay Diwas ಪ್ರಯುಕ್ತ ಒಟಿಟಿಯಲ್ಲಿ ನೋಡಬಹುದಾದ ನೆಲದ ಯೋಧರ ವೀರಗಾಥೆ ಕುರಿತ ಸಿನಿಮಾಗಳು

Kargil Vijay Diwas ಪ್ರಯುಕ್ತ ಒಟಿಟಿಯಲ್ಲಿ ನೋಡಬಹುದಾದ ನೆಲದ ಯೋಧರ ವೀರಗಾಥೆ ಕುರಿತ ಸಿನಿಮಾಗಳು

25ನೇ ಕಾರ್ಗಿಲ್‌ ವಿಜಯ್‌ ದಿವಸದ ಪ್ರಯುಕ್ತ ಬಾಲಿವುಡ್‌ನಲ್ಲಿ ಕಾರ್ಗಿಲ್‌ ಯುದ್ಧದ ಹಿನ್ನೆಲೆಯಲ್ಲಿ ತೆರೆಕಂಡ ಚಿತ್ರಗಳ ವಿವರ ಇಲ್ಲಿದೆ. ಯಾವ ಒಟಿಟಿಯಲ್ಲಿ ಈ ದೇಶಪ್ರೇಮದ ಕುರಿತ ಸಿನಿಮಾಗಳನ್ನು ವೀಕ್ಷಣೆ ಮಾಡಬಹುದು ಎಂಬ ಮಾಹಿತಿಯೂ ಇಲ್ಲಿದೆ.

Kargil Vijay Diwas ಪ್ರಯುಕ್ತ ಒಟಿಟಿಯಲ್ಲಿ ನೋಡಬಹುದಾದ ನೆಲದ ಯೋಧರ ವೀರಗಾಥೆ ಕುರಿತ ಸಿನಿಮಾಗಳು
Kargil Vijay Diwas ಪ್ರಯುಕ್ತ ಒಟಿಟಿಯಲ್ಲಿ ನೋಡಬಹುದಾದ ನೆಲದ ಯೋಧರ ವೀರಗಾಥೆ ಕುರಿತ ಸಿನಿಮಾಗಳು

Kargil Vijay Diwas: ಕಾರ್ಗಿಲ್‌ ಯುದ್ಧ ಇತಿಹಾಸದ ಪುಟ ಸೇರಿದ ಮಹೋನ್ನತ ಹೋರಾಟ ಮತ್ತು ಗೆಲುವಿನ ಕಥೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದ ಕಾಳಗದಲ್ಲಿ ಸಾವಿರಾರು ಭಾರತೀಯ ಸೈನಿಕರ ಬಲಿದಾನದ ಬಳಿಕ 1999ರ ಜುಲೈ 26ರಂದು ಭಾರತ ಸೇನೆ ಗೆದ್ದು ಬೀಗಿತ್ತು. ಆ ತ್ಯಾಗ ಬಲಿದಾನದ ದಿನವೇ ಕಾರ್ಗಿಲ್‌ ವಿಜಯ್‌ ದಿವಸ್.‌ ಇದೀಗ ಬರೋಬ್ಬರಿ ಆ ವಿಜಯಕ್ಕೆ 25 ವರ್ಷಗಳು. ಈ ನೆನಪಿನಲ್ಲಿ ಕಾರ್ಗಿಲ್‌ ಕುರಿತ ಬಂದ ಕೆಲ ಸಿನಿಮಾಗಳ ಮಾಹಿತಿ ಇಲ್ಲಿದೆ.

ಶೇರ್‌ಷಾ

ವಿಕ್ರಮ್‌ ಬಾತ್ರಾ ಅವರ ಸಾಹಸದ ಕುರಿತು ಮೂಡಿಬಂದ ಸಿನಿಮಾ ಶೇರ್‌ಷಾ. ಕಾರ್ಗಿಲ್ ಯುದ್ಧದಲ್ಲಿ ಹತರಾದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಕಥೆಯನ್ನಾಧರಿಸಿ ಈ ಚಿತ್ರ ಮೂಡಿಬಂದಿತ್ತು. ಮರಣೋತ್ತರ ಶೌರ್ಯ ಪ್ರಶಸ್ತಿ ಪರಮವೀರ ಚಕ್ರ ನೀಡಿ, ಶೇರ್‌ಷಾ ಎಂಬ ಬಿರುದನ್ನೂ ವಿಕ್ರಮ್‌ ಬಾತ್ರಾಗೆ ನೀಡಲಾಗಿತ್ತು. ಆ ಬಿರುದನ್ನೇ ಸಿನಿಮಾ ಶೀರ್ಷಿಕೆಯಾಗಿ ತೆರೆಗೆ ತಂದಿದ್ದರು ನಿರ್ದೇಶಕ ವಿಷ್ಣುವರ್ಧನ್‌. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. 2021ರ ಆಗಸ್ಟ್‌ 12ರಂದು ನೇರವಾಗಿ ಅಮೆಜಾನ್‌ ಪ್ರೈಂ ಒಟಿಟಿಯಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು.

'ಗುಂಜನ್ ಸಕ್ಸೇನಾ: ಕಾರ್ಗಿಲ್ ಗರ್ಲ್‌'

2020 ರಲ್ಲಿ ತೆರೆಕಂಡ 'ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್' ಚಿತ್ರ ಕೂಡ ಕಾರ್ಗಿಲ್‌ ಯುದ್ಧವನ್ನು ಆಧರಿಸಿದ ಚಿತ್ರ. ಈ ಚಿತ್ರವು ಕಾರ್ಗಿಲ್ ಯುದ್ಧದ ಸಮಯದಲ್ಲಿ ದೇಶವನ್ನು ರಕ್ಷಿಸಲು ಸೇವೆ ಸಲ್ಲಿಸಿದ ಭಾರತೀಯ ವಾಯುಪಡೆಯ ಪೈಲಟ್ ಗುಂಜನ್ ಸಕ್ಸೇನಾ ಅವರ ಜೀವನವನ್ನು ಆಧರಿಸಿದೆ. ಚಿತ್ರದಲ್ಲಿ ಗುಂಜನ್ ಸಕ್ಸೇನಾ ಪಾತ್ರವನ್ನು ಜಾನ್ವಿ ಕಪೂರ್ ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಅವರೊಂದಿಗೆ ಪಂಕಜ್ ತ್ರಿಪಾಠಿ ಮತ್ತು ಅಂಗದ್ ಬೇಡಿ ಕೂಡ ಕಾಣಿಸಿಕೊಂಡಿದ್ದರು. ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ವೀಕ್ಷಿಸಬಹುದು.

'ಲಕ್ಷ್ಯ'

2004 ರಲ್ಲಿ ಬಿಡುಗಡೆಯಾದ ಈ ಚಿತ್ರವು ಕಾರ್ಗಿಲ್ ಯುದ್ಧದ ಐತಿಹಾಸಿಕ ಘಟನೆಗಳನ್ನು ಆಧರಿಸಿದ ಕಾಲ್ಪನಿಕ ಕಥೆಯಾಗಿದೆ. ಚಿತ್ರದಲ್ಲಿ, ಹೃತಿಕ್ ರೋಷನ್ ಲೆಫ್ಟಿನೆಂಟ್ ಕರಣ್ ಶೇರಿಗಲ್ ಪಾತ್ರವನ್ನು ನಿರ್ವಹಿಸಿದ್ದಾರೆ. ಭಯೋತ್ಪಾದಕರ ವಿರುದ್ಧ ದೇಶವನ್ನು ಹೇಗೆ ಕಾಪಾಡುತ್ತಾನೆ, ಹೇಗೆ ಸೇನಾ ತಂಡವನ್ನು ಮುನ್ನಡೆಸಿ ವಿಜಯದತ್ತ ಸಾಗುತ್ತಾನೆ ಎಂಬುದೇ ಈ ಸಿನಿಮಾದ ಕಥೆ. ಈ ಚಿತ್ರವನ್ನು ಫರ್ಹಾನ್ ಅಖ್ತರ್ ನಿರ್ದೇಶಿಸಿದ್ದಾರೆ. ಹೃತಿಕ್ ಹೊರತಾಗಿ ಪ್ರೀತಿ ಜಿಂಟಾ, ಅಮಿತಾಬ್ ಬಚ್ಚನ್, ಬೊಮನ್ ಇರಾನಿ, ಓಂ ಪುರಿ ಸೇರಿ ಹಲವು ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಅಮೆಜಾನ್‌ ಪ್ರೈಂ ಒಟಿಟಿಯಲ್ಲಿ ವೀಕ್ಷಿಸಬಹುದು.

'ಎಲ್ಒಸಿ ಕಾರ್ಗಿಲ್'

ಎಲ್ಒಸಿ ಕಾರ್ಗಿಲ್‌ 2003ರಲ್ಲಿ ಬಿಡುಗಡೆಯಾದ ಸಿನಿಮಾ. ಕಾರ್ಗಿಲ್ ಹಿನ್ನೆಲೆಯಲ್ಲಿಯೇ ಸಾಗುವ ಈ ಸಿನಿಮಾ, ಪಾಕಿಸ್ತಾನಿ ಸೈನ್ಯದ ವಿರುದ್ಧ ವಿಜಯ ಸಾಧಿಸಲು ಭಾರತೀಯ ಸೈನಿಕರು ನಡೆಸಿದ ಹೋರಾಟವನ್ನು ತೋರಿಸುತ್ತದೆ. ಈ ಸಿನಿಮಾ ಭಾರತೀಯ ಸೇನೆಯ ಯಶಸ್ವಿ ಆಪರೇಷನ್ ವಿಜಯ್ ಅನ್ನು ಆಧರಿಸಿದೆ. ಸಂಜಯ್ ದತ್, ಅಜಯ್ ದೇವಗನ್, ಸೈಫ್ ಅಲಿ ಖಾನ್, ಅಭಿಷೇಕ್ ಬಚ್ಚನ್, ಸುನಿಲ್ ಶೆಟ್ಟಿ, ಮನೋಜ್ ಬಾಜಪೇಯಿ ಮುಂತಾದ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಅಮೆಜಾನ್‌ ಪ್ರೈಂ ಒಟಿಟಿಯಲ್ಲಿ ವೀಕ್ಷಿಸಬಹುದು.

ಧೂಪ್‌

ಬಾಲಿವುಡ್‌ನ 'ಧೂಪ್' ಸಿನಿಮಾ ಕೂಡ ಕಾರ್ಗಿಲ್ ಯುದ್ಧದ ಹಿನ್ನೆಲೆಯ ಚಿತ್ರವಾಗಿದೆ. ಕಾರ್ಗಿಲ್‌ ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಸೈನಿಕರ ಕುಟುಂಬಗಳನ್ನು ಆಧರಿಸಿದ ಚಿತ್ರ ಇದಾಗಿದೆ. ಸಂಜಯ್ ಕಪೂರ್, ಗುಲ್ ಪನಾಗ್, ಓಂ ಪುರಿ ಮತ್ತು ರೇವತಿ ಮುಂತಾದ ನಟರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಟಿ ಗುಲ್ ಪನಾಗ್ ಈ ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಈ ಚಿತ್ರ 2003ರಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಈ ಸಿನಿಮಾವನ್ನು ಅಮೆಜಾನ್‌ ಪ್ರೈಂ ಒಟಿಟಿಯಲ್ಲಿ ವೀಕ್ಷಿಸಬಹುದು.

Whats_app_banner