Mr and Mrs Mahi OTT: ಜಾನ್ವಿ ಕಪೂರ್ ರಾಜ್ ಕುಮಾರ್ ರಾವ್ ನಟನೆಯ ಮಿಸ್ಟರ್ ಅಂಡ್ ಮಿಸೆಸ್ ಮಹಿ ಸಿನಿಮಾ ಒಟಿಟಿಗೆ; ಎಲ್ಲಿ, ಯಾವಾಗ?
Mr And Mrs Mahi OTT Release: ಜಾನ್ವಿ ಕಪೂರ್ ಮತ್ತು ರಾಜ್ ಕುಮಾರ್ ರಾವ್ ಅಭಿನಯದ ಮಿಸ್ಟರ್ ಅಂಡ್ ಮಿಸೆಸ್ ಮಹಿ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ನೀವು ಈ ಚಲನಚಿತ್ರವನ್ನು ಯಾವಾಗ ಮತ್ತು ಎಲ್ಲಿ ನೋಡಬಹುದು. ಇಲ್ಲಿದೆ ವಿವರ.
ಬೆಂಗಳೂರು: ಜಾನ್ವಿ ಕಪೂರ್ ಮತ್ತು ರಾಜ್ ಕುಮಾರ್ ರಾವ್ ಅವರ ರೊಮ್ಯಾಂಟಿಕ್ ಸ್ಪೋರ್ಟ್ಸ್ ಡ್ರಾಮಾ ಚಿತ್ರ ಮಿಸ್ಟರ್ ಅಂಡ್ ಮಿಸೆಸ್ ಮಹಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಮಿಸ್ಟರ್ ಅಂಡ್ ಮಿಸೆಸ್ ಮಹಿ ಈ ವರ್ಷ ಮೇ 31ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದ ಕುರಿತು ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ನೀವಿನ್ನೂ ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಿಲ್ಲದೆ ಇದ್ದರೆ ಆನ್‌ಲೈನ್‌ನಲ್ಲಿ ಕುಳಿತು ವೀಕ್ಷಿಸಬಹುದು.
ಮಿಸ್ಟರ್ ಅಂಡ್ ಮಿಸೆಸ್ ಮಹಿ ಒಟಿಟಿ ಬಿಡುಗಡೆ ದಿನಾಂಕ
ವರದಿಗಳ ಪ್ರಕಾರ ಜಾನ್ವಿ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ನಟನೆಯ ಈ ಸಿನಿಮಾ ಜುಲೈ 26, 2024 ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಅಂದರೆ ನಾಳೆಯೇ ರಿಲೀಸ್ ಆಗಲಿದೆ. ಈ ಚಿತ್ರದ ಸ್ಟ್ರೀಮಿಂಗ್ ಫ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ನಿಖಿಲ್ ಮಲ್ಹೋತ್ರಾ ಅವರೊಂದಿಗೆ ಶರಣ್ ಶರ್ಮಾ ಈ ಕ್ರೀಡಾ ನಾಟಕಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಚಿತ್ರದ ಕಥೆ ಏನು?
ಈ ಚಿತ್ರವು ಮಹೇಂದ್ರ ಮತ್ತು ಮಹಿಮಾ ಎಂಬ ದಂಪತಿಗಳ ಕಥೆಯಾಗಿದೆ. ಈ ಇಬ್ಬರ ಜೀವನದಲ್ಲಿ ಕ್ರಿಕೆಟ್ ಪ್ರೀತಿ ಇರುತ್ತದೆ. ಮಹೇಂದ್ರ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸಲು ವಿಫಲರಾಗಿದ್ದಾರೆ. ಕ್ರಿಕೆಟ್‌ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಇವರಿಗೆ ಹೆಂಡತಿಯ ಪ್ರೋತ್ಸಾಹ ದೊರಕುತ್ತದೆ. ಈ ಚಿತ್ರವು ನಿಮ್ಮನ್ನು ನಗಿಸುತ್ತದೆ, ಅಳಿಸುತ್ತದೆ ಮತ್ತು ನಿಮ್ಮನ್ನು ಭಾವನೆಗಳಿಂದ ತುಂಬುತ್ತದೆ.
ಚಿತ್ರದ ಪಾತ್ರವರ್ಗ
ಜಾನ್ವಿ ಕಪೂರ್ ಈ ಚಿತ್ರದಲ್ಲಿ ಮಹಿಮಾ ಪಾತ್ರವನ್ನು ನಿರ್ವಹಿಸಿದ್ದಾರೆ. ರಾಜ್ ಕುಮಾರ್ ರಾವ್ ಮಹೇಂದ್ರ ಪಾತ್ರವನ್ನು ನಿರ್ವಹಿಸಿದ್ದಾರೆ. ಕುಮುದ್ ಮಿಶ್ರಾ, ರಾಜೇಶ್ ಶರ್ಮಾ ಮತ್ತು ಸಿಕಂದರ್ ಅಗರ್ವಾಲ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಚಲನಚಿತ್ರಗಳ ಡೇಟಾಬೇಸ್ ತಾಣ ಐಎಂಡಿಬಿಯಲ್ಲಿ 6.5 ರೇಟಿಂಗ್ ದೊರಕಿದೆ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 51.40 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸುಮಾರು 40 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಿಸಲಾಗಿದೆ.
ಸಿನಿಮಾ ವಿಮರ್ಶೆ
ಮಿಸ್ಟರ್ ಆಂಡ್ ಮಿಸೆಸ್ ಮಹಿ ಸಿನಿಮಾ "ವಿನ್ನರ್". ರಾಜ್‌ಕುಮಾರ್ ರಾವ್ ಮತ್ತು ಜಾನ್ವಿ ಕಪೂರ್ ಕೆಮೆಸ್ಟ್ರಿ ವರ್ಕೌಟ್ ಆಗಿದೆ. ಕುಟುಂಬ ಸಮೇತ ನೋಡಬಹುದಾದ ಸಿನಿಮಾ. ದ್ವಿತೀಯಾರ್ಧ ಉತ್ತಮ. ಮೊದಲಾರ್ಧದಲ್ಲಿ ಸಂಗೀತ ಗಮನ ಸೆಳೆಯುತ್ತದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ವೀಕ್ಷಕರೊಬ್ಬರು ವಿಮರ್ಶೆ ಬರೆದಿದ್ದಾರೆ. "ಈ ಸಿನಿಮಾದಲ್ಲಿ ಊಹಿಸಬಹುದಾದ ವಿಷಯಗಳು ಸಾಕಷ್ಟು ಇವೆ. ಇದರ ಸ್ಕ್ರಿನ್‌ಪ್ಲೇ ಉತ್ತಮವಾಗಿಲ್ಲ. ಇದರಲ್ಲಿ ಕ್ರಿಕೆಟ್ ಅತ್ಯಂತ ದುರ್ಬಲ ಅಂಶ. ರಾಜ್‌ಕುಮಾರ್ ನಟನೆ ಓಕೆ. ಜಾನ್ವಿ ಕಪೂರ್ ನಟನೆ ಇನ್ನಷ್ಟು ಬೇಕಿತ್ತು. ಸಂಗೀತ ಉತ್ತಮವಾಗಿದೆ"ಎಂದು ಇನ್ನೊಬ್ಬರು ವಿಮರ್ಶಿಸಿದ್ದಾರೆ.