ಕನ್ನಡ ಸುದ್ದಿ  /  Entertainment  /  Bollywood News Actress Rakul Preet Singh And Producer Jackky Bhagnani Are Married Mnk

ಗೋವಾದಲ್ಲಿ ನೆರವೇರಿತು ನಟಿ ರಾಕುಲ್ ಪ್ರೀತ್‌ -ಜಾಕಿ ಭಗ್ನಾನಿ ಕಲ್ಯಾಣ; ಬಾಲಿವುಡ್‌ನಿಂದ ಯಾರೆಲ್ಲ ಬಂದಿದ್ರು?

ರಾಕುಲ್‌ ಪ್ರೀತ್‌ ಮತ್ತು ಜಾಕಿ ಭಗ್ನಾನಿ ಮದುವೆ ಸಮಾರಂಭವು ಸೌತ್‌ ಗೋವಾದ ಐಟಿಸಿ ಗ್ರ್ಯಾಂಡ್ ರೆಸಾರ್ಟ್‌ನಲ್ಲಿ ಇಂದು (ಫೆ. 21) ಅದ್ಧೂರಿಯಾಗಿ ನೆರವೇರಿತು. ಈ ಮದುವೆಯಲ್ಲಿ ಬಾಲಿವುಡ್‌ ಸೇರಿ ಸೌತ್‌ನ ಸಿನಿಮಾ ಸ್ನೇಹಿತರು ಭಾಗವಹಿಸಿದ್ದರು.

ಗೋವಾದಲ್ಲಿ ನೆರವೇರಿತು ನಟಿ ರಾಕುಲ್ ಪ್ರೀತ್‌ -ಜಾಕಿ ಭಗ್ನಾನಿ ಕಲ್ಯಾಣ; ಬಾಲಿವುಡ್‌ನಿಂದ ಯಾರೆಲ್ಲ ಬಂದಿದ್ರು?
ಗೋವಾದಲ್ಲಿ ನೆರವೇರಿತು ನಟಿ ರಾಕುಲ್ ಪ್ರೀತ್‌ -ಜಾಕಿ ಭಗ್ನಾನಿ ಕಲ್ಯಾಣ; ಬಾಲಿವುಡ್‌ನಿಂದ ಯಾರೆಲ್ಲ ಬಂದಿದ್ರು?

Rakul Preet Singh Jackky Bhagnani Marriage: ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿರ್ಮಾಪಕ ಜಾಕಿ ಭಗ್ನಾನಿ ಜತೆ ಬಹುಕಾಲದ ಪ್ರೀತಿಗೆ ಇದೀಗ ಅಧಿಕೃತವಾಗಿ ಮದುವೆ ಮುದ್ರೆ ಬಿದ್ದಿದೆ. ಕಳೆದ ಮೂರು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಇಂದು (ಫೆಬ್ರವರಿ 21) ಗೋವಾದಲ್ಲಿ ಅದ್ಧೂರಿಯಾಗಿ ಕಲ್ಯಾಣ ನೆರವೇರಿದೆ.

ರಾಕುಲ್‌ ಪ್ರೀತ್‌ ಮತ್ತು ಜಾಕಿ ಭಗ್ನಾನಿ ಮದುವೆ ಸಮಾರಂಭವು ಸೌತ್‌ ಗೋವಾದ ಐಟಿಸಿ ಗ್ರ್ಯಾಂಡ್ ರೆಸಾರ್ಟ್‌ನಲ್ಲಿ ಬುಧವಾರ ಅದ್ಧೂರಿಯಾಗಿ ನೆರವೇರಿತು. ಈ ಮದುವೆಯಲ್ಲಿ ಬಾಲಿವುಡ್‌ನ ಸಿನಿಮಾ ಸ್ನೇಹಿತರಾದ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ಆಯುಷ್ಮಾನ್ ಖುರಾನಾ, ಅರ್ಜುನ್ ಕಪೂರ್, ಡೇವಿಡ್ ಧವನ್ ಸೇರಿ ಇತರ ಕೆಲವು ಚಿತ್ರರಂಗದ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ರಾಕುಲ್ ಮತ್ತು ಜಾಕಿ ಅವರ ಕುಟುಂಬದವರೂ ಮತ್ತು ಆಪ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಪಂಜಾಬಿಯ ಆನಂದ್‌ ಕರಜ್ ಮತ್ತು ಸಿಂಧಿ ಸಂಪ್ರದಾಯದಂತೆ ರಾಕುಲ್ ಪ್ರೀತ್‌ ಮತ್ತು ಜಾಕಿ ಭಗ್ನಾನಿ ಮದುವೆ ನಡೆದಿದೆ. ಈ ಜೋಡಿಯ ಮದುವೆಗೆ ಫೋನ್‌ ಬಳಕೆ ನಿಷೇಧಿಸಲಾಗಿತ್ತು. ಹಾಗಾಗಿ ಮದುವೆಯ ಯಾವುದೇ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹೊರಬಿದ್ದಿಲ್ಲ. ಇತ್ತ ಫೆಬ್ರವರಿ 19ರಿಂದಲೇ ಗೋವಾದ ಐಟಿಸಿ ಗ್ರ್ಯಾಂಡ್‌ನಲ್ಲಿ ಈ ಜೋಡಿಯ ವಿವಾಹ ಪೂರ್ವ ತಯಾರಿ ಶುರುವಾಗಿತ್ತು. ಮಂಗಳವಾರ ಸಂಗೀತ ಕಾರ್ಯಕ್ರಮ ನಡೆದರೆ, ಇಂದು ಮದುವೆ ಶಾಸ್ತ್ರಗಳು ನೆರವೇರಿವೆ.

ರಾಕುಲ್ ಪ್ರೀತ್ ಸಿಂಗ್ - ಜಾಕಿ ಭಗ್ನಾನಿ ಕಳೆದ ಮೂರು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ. ಇಬ್ಬರು ಕಾಮನ್ ಫ್ರೆಂಡ್ ಮೂಲಕ ಭೇಟಿಯಾಗಿ ಬಳಿಕ ಪ್ರೇಮಿಗಳಾದರು. 2021ರ ಅಕ್ಟೋಬರ್‌ನಲ್ಲಿ ಇಬ್ಬರೂ ಪ್ರೀತಿಸುತ್ತಿದ್ದೇವೆ ಎಂದು ರಾಕುಲ್ ತಮ್ಮ ಹುಟ್ಟುಹಬ್ಬದಂದು ಬಹಿರಂಗಪಡಿಸಿದ್ದರು. ಅದಾದ ಬಳಿಕ ಸಾಕಷ್ಟು ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ರಾಕುಲ್ ಪ್ರೀತ್ ಸಿಂಗ್ ಸದ್ಯ ಇಂಡಿಯನ್ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಮಲ್ ಹಾಸನ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವನ್ನು ನಿರ್ದೇಶಕ ಶಂಕರ್ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಇಂಡಿಯನ್ 2 ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. ಈ ಚಿತ್ರ ಇದೇ ವರ್ಷವೇ ಬಿಡುಗಡೆಯಾಗಲಿದೆ.

ಬಾಲಿವುಡ್‌ನಲ್ಲೂ ರಾಕುಲ್ ಕೈಯಲ್ಲಿ ಮತ್ತೊಂದು ಚಿತ್ರವಿದೆ. ಜಾಕಿ ಭಗ್ನಾನಿ ನಿರ್ಮಾಣದ ಬಡೇ ಮಿಯಾ ಚೋಟೆ ಮಿಯಾ ಸಿನಿಮಾ ಸಹ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಪೃಥ್ವಿರಾಜ್ ಸುಕುಮಾರನ್, ಸೋನಾಕ್ಷಿ ಸಿನ್ಹಾ ಮತ್ತು ಮಾನುಷಿ ಚಿಲ್ಲರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಲಿ ಅಬ್ಬಾಸ್ ಜಾಫರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

IPL_Entry_Point