ಕನ್ನಡ ಸುದ್ದಿ  /  ಮನರಂಜನೆ  /  ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಅವರು ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಬ್ಯಾಂಡೇಜ್‌ ಕಟ್ಟಿರುವ ಕೈಯಲ್ಲಿಯೇ ಭಾಗಿಯಾಗಿ ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾರೆ. ಕಾನ್‌ ಚಿತ್ರೋತ್ಸವದಿಂದ ವಾಪಸ್‌ ಬಂದ ತಕ್ಷಣ ಇವರ ಕೈಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ
ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ

ಬೆಂಗಳೂರು: ಕರ್ನಾಟಕ ಮೂಲದ ಬಾಲಿವುಡ್‌ ಬೆಡಗಿ ಐಶ್ವರ್ಯಾ ರೈ ಬಚ್ಚನ್‌ ಈ ಬಾರಿಯ 77ನೇ ಕಾನ್‌ ಚಿತ್ರೋತ್ಸವದಲ್ಲಿ ಕೈಗೆ ಬ್ಯಾಂಡೇಜ್‌ ಕಟ್ಟಿಕೊಂಡೇ ಭಾಗಿಯಾಗಿದ್ದರು. ಇಷ್ಟು ಮಾತ್ರವಲ್ಲದೆ ಅದ್ಧೂರಿ ಉಡುಗೆ ತೊಟ್ಟು ಬ್ಯಾಂಡೇಜ್‌ ಜತೆಯೇ ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ್ದರು. ಫ್ರೆಂಚ್‌ ರೈವರಾದಲ್ಲಿ ಈಕೆ ಗಾಯಗೊಂಡ ಕೈಯಲ್ಲಿಯೇ ಭಾಗಿಯಾಗಿರುವುದು ಇವರ ವೃತ್ತಿಪರತೆಗೆ ಸಾಕ್ಷಿ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಇದೀಗ ಹಿಂದೂಸ್ತಾನ್‌ ಟೈಮ್ಸ್‌ ಇವರ ಕೈನ ಗಾಯದ ಕುರಿತು ಎಕ್ಸ್‌ಕ್ಲೂಸಿವ್‌ ಮಾಹಿತಿ ಪಡೆದುಕೊಂಡಿದೆ. ಫಿಲ್ಮ್‌ ಫೆಸ್ಟಿವಲ್‌ನಿಂದ ಇವರು ಹಿಂತುರುಗಿದ ತಕ್ಷಣ ಐಶ್ವರ್ಯಾ ರೈ ಕೈಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಟ್ರೆಂಡಿಂಗ್​ ಸುದ್ದಿ

"ಕಳೆದ ವೀಕೆಂಡ್‌ನಲ್ಲಿ ಐಶ್ವರ್ಯಾ ರೈ ಅವರ ಮಣಿಕಟ್ಟಿಗೆ ಗಾಯವಾಯಿತು. ಪ್ರತಿವರ್ಷದಂತೆ ಈ ವರ್ಷವೂ ಕಾನ್ಸ್‌ ಚಿತ್ರೋತ್ಸವದಲ್ಲಿ ಭಾಗಿಯಾಗಲೇಬೇಕೆಂದು ನಿರ್ಧರಿಸಿದರು. ಗಾಯವಿದ್ದರೂ ವೃತ್ತಿಪರ ಬದ್ಧತೆ ಪೂರ್ಣಗೊಳಿಸಿದರು. ಕಾನ್ಸ್‌ಗೆ ಆಗಮಿಸಿದರು. ತಜ್ಞರು ಮತ್ತು ವೈದ್ಯರ ಜತೆ ಚರ್ಚಿಸಿದ ಬಳಿಕವೇ ಫ್ರಾನ್ಸ್‌ಗೆ ಹೋಗಿದ್ದಾರೆ. ಶೀಘ್ರದಲ್ಲಿ ಇವರ ಕೈಗೆ ಮತ್ತೊಂದು ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಕಾನ್ಸ್‌ನಿಂದ ಹಿಂತುರುಗಿದ ಬಳಿಕ ಮುಂದಿನ ವಾರದ ನಂತರ ಆಕೆಯ ಕೈಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ" ಎಂದು ನಟಿಯ ಆಪ್ತ ಮೂಲಗಳು ಮಾಹಿತಿ ನೀಡಿವೆ.

ಐಶ್ವರ್ಯಾ ರೈ ಬಚ್ಚನ್‌ ಅವರು ತನ್ನ ಮಗಳು ಆರಾಧ್ಯ ಬಚ್ಚನ್‌ ಜತೆ ಚಲನಚಿತ್ರೋತ್ಸವಕ್ಕೆ ಹೋಗಿದ್ದಾರೆ. ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ತನ್ನ ವಿನೂತನ ಉಡುಗೆ ಮೂಲಕ ಐಶ್ವರ್ಯಾ ಎಲ್ಲರ ಗಮನ ಸೆಳೆದಿದ್ದಾರೆ. ಫಾಲ್ಗುಣಿ ಮತ್ತು ಶಾನೆ ಫಿಕಾಕ್‌ ಕ್ರಿಯೇಷನ್ಸ್‌ ವಿನ್ಯಾಸದ ಉಡುಗೆಯನ್ನು ತೊಟ್ಟಿದ್ದರು. ಮೊದಲು ಕಪ್ಪು, ಬಿಳಿ ಮತ್ತು ಚಿನ್ನದ ಬಣ್ಣದ ಗೌನ್‌ ತೊಟ್ಟಿದ್ದರು. ಎರಡನೇ ಉಡುಗೆಯು ಟಾರ್ಕ್ಯೂಸ್‌ ಮತ್ತು ಸಿಲ್ವರ್‌ ಫ್ರಾಂಗಿ ಗೌನ್‌ ಆಗಿತ್ತು. ಈ ಗಾಯದಲ್ಲೂ ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಭಾಗಿಯಾಗಿರುವುದಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಫ್ಯಾನ್ಸ್‌ ಅಭಿನಂದಿಸುತ್ತಿದ್ದಾರೆ. ಜತೆಗೆ, ಇಂತಹ ಪ್ರಮುಖ ಕಾರ್ಯಕ್ರಮಕ್ಕೆ ತನ್ನ ಮಗಳನ್ನು ಜತೆಗೆ ಕರೆದೊಯ್ಯುವ ಇವರ ಮಮತೆಗೂ ಎಂದಿನಂತೆ ಮೆಚ್ಚುಗೆ ವ್ಯಕ್ತವಾಗಿದೆ.

ಐಶ್ವರ್ಯಾ ರೈ 2002ರಲ್ಲಿ ನಡೆದ ಕಾನ್‌ ಚಲನಚಿತ್ರೋತ್ಸವದಲ್ಲಿ ನೀತಾ ಲುಲ್ಲಾ ವಿನ್ಯಾಸದ ಸೀರೆಯಲ್ಲಿ ಮೊದಲ ಬಾರಿಗೆ ಹೆಜ್ಜೆ ಹಾಕಿದ್ದರು. ನಟ ಶಾರುಖ್ ಖಾನ್ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಐಶ್ವರ್ಯಾ ರೈ ಕಾನ್ಸ್‌ ಚಿತ್ರೋತ್ಸವಕ್ಕೆ ಬಂದಿದ್ದರು. ಅಂದಿನಿಂದ ಪ್ರತಿವರ್ಷ ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಭಾಗವಹಿಸುವ ಸಂಪ್ರದಾಯ ಹೊಂದಿದ್ದಾರೆ. ಲೋರಿಯಲ್‌ ಪ್ಯಾರಿಸ್‌ ಬ್ರಾಂಡ್‌ನ ಪ್ರತಿನಿಧಿಗಳಲ್ಲಿ ಒಬ್ಬರಾಗಿ ಈ ಕಾನ್‌ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಟಿ20 ವರ್ಲ್ಡ್‌ಕಪ್ 2024