Article 370: ಯಾಮಿ ಗೌತಮ್‌, ಪ್ರಿಯಾಮಣಿ ನಟನೆಯ ಆರ್ಟಿಕಲ್‌ 370 ಸಿನಿಮಾಕ್ಕೆ ಗಲ್ಫ್‌ನಲ್ಲಿ ನಿಷೇಧ
ಕನ್ನಡ ಸುದ್ದಿ  /  ಮನರಂಜನೆ  /  Article 370: ಯಾಮಿ ಗೌತಮ್‌, ಪ್ರಿಯಾಮಣಿ ನಟನೆಯ ಆರ್ಟಿಕಲ್‌ 370 ಸಿನಿಮಾಕ್ಕೆ ಗಲ್ಫ್‌ನಲ್ಲಿ ನಿಷೇಧ

Article 370: ಯಾಮಿ ಗೌತಮ್‌, ಪ್ರಿಯಾಮಣಿ ನಟನೆಯ ಆರ್ಟಿಕಲ್‌ 370 ಸಿನಿಮಾಕ್ಕೆ ಗಲ್ಫ್‌ನಲ್ಲಿ ನಿಷೇಧ

Article 370: ಸಂಕೀರ್ಣ ಸಾಮಾಜಿಕ-ರಾಜಕೀಯ ಭೂಮಿಕೆಯಲ್ಲಿ ತಯಾರಾದ ಆರ್ಟಿಕಲ್‌ 370 ಸಿನಿಮಾಕ್ಕೆ ಗಲ್ಫ್‌ ದೇಶಗಳಲ್ಲಿ ನಿಷೇಧದ ಬಿಸಿ ತಟ್ಟಿದೆ. ಈ ಸಿನಿಮಾದಲ್ಲಿ ಯಾಮಿ ಗೌತಮ್‌, ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಯಾಮಿ ಗೌತಮ್‌, ಪ್ರಿಯಾಮಣಿ ನಟನೆಯ ಆರ್ಟಿಕಲ್‌ 370 ಸಿನಿಮಾಕ್ಕೆ ಗಲ್ಫ್‌ನಲ್ಲಿ ನಿಷೇಧ
ಯಾಮಿ ಗೌತಮ್‌, ಪ್ರಿಯಾಮಣಿ ನಟನೆಯ ಆರ್ಟಿಕಲ್‌ 370 ಸಿನಿಮಾಕ್ಕೆ ಗಲ್ಫ್‌ನಲ್ಲಿ ನಿಷೇಧ

ಆರ್ಟಿಕಲ್‌ 370 ಎನ್ನುವುದು ಯಾಮಿ ಗೌತಮ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಾಜಕೀಯ ಥ್ರಿಲ್ಲರ್‌ ಸಿನಿಮಾ. ಇದೀಗ ಈ ಚಲನಚಿತ್ರಕ್ಕೆ ಗಲ್ಪ್‌ ದೇಶಗಳಲ್ಲಿ ನಿಷೇಧ ಹೇರಲಾಗಿದೆ. ಆರ್ಟಿಕಲ್‌ 370 ಸಿನಿಮಾವು ಭಾರತ ಮತ್ತು ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಭಾರೀ ಯಶಸ್ಸು ಕಾಣುತ್ತಿದೆ. ಈ ಸಿನಿಮಾದ ಕುರಿತು ಹೊಗಳಿಕೆ ಮತ್ತು ನಿರೀಕ್ಷಿತ ಟೀಕೆಗಳೂ ಕೇಳಿ ಬರುತ್ತಿವೆ. ಇದೇ ಸಮಯದಲ್ಲಿ ಆರ್ಟಿಕಲ್‌ 370ಗೆ ಗಲ್ಪ್‌ ದೇಶಗಳಲ್ಲಿ ಹೇರಿರುವ ನಿಷೇಧದ ಕುರಿತು ಹಿಂದಿ ಚಿತ್ರರಂಗಕ್ಕೆ ಆಘಾತವಾಗಿದೆ. ಎಲ್ಲೆಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿರುವ ಭಾರತದ ಸಿನಿಮಾವನ್ನು ಗಲ್ಫ್‌ ದೇಶದ ಜನರಿಗೆ ನೋಡುವ ಅವಕಾಶ ದೊರಕದು.

ಈ ಸಿನಿಮಾವು ಸಂಕೀರ್ಣ ಸಾಮಾಜಿಕ-ರಾಜಕೀಯ ಭೂದೃಶ್ಯದ ಚೌಕಟ್ಟಿನೊಳಗಿನ ವಿಷಯಗಲನ್ನು ಒಳಗೊಂಡಿದೆ. ಕಾಶ್ಮೀರದಲ್ಲಿ ಈ ಕಾಯಿದೆ ನಿಷೇಧಿಸುವ ಅವಶ್ಯಕತೆ ಏಕೆ ಬಂತು ಇತ್ಯಾದಿ ವಿಚಾರಗಳ ಕುರಿತು ಸಿನಿಮಾ ಬೆಳಕು ಚೆಲ್ಲುತ್ತದೆ. ಆದರೆ, ಈ ಸಿನಿಮಾದ ಕುರಿತು ಗಲ್ಫ್ ರಾಷ್ಟ್ರಗಳಲ್ಲಿ ಈ ಸಿನಿಮಾಕ್ಕೆ ನಿಷೇಧ ಹೇರಿರುವುದು ಅಚ್ಚರಿದಾಯಕವಾಗಿದೆ. ಅಲ್ಲಿ ಪ್ರವಾಸೋದ್ಯಮಕ್ಕೆ ಭಾರತದ ಕೊಡುಗೆ ಸಾಕಷ್ಟಿದೆ. ಅಲ್ಲಿ ಸಾಕಷ್ಟು ಭಾರತೀಯ ಚಲನಚಿತ್ರಗಳು ಶೂಟಿಂಗ್‌ ಆಗುತ್ತಿವೆ. ಆದರೆ, ಅಲ್ಲಿ ಭಾರತದ ಸಿನಿಮಾಗಳ ಪ್ರವೇಶಕ್ಕೆ ತೊಂದರೆಗಳು ಮುಂದುವರೆದಿವೆ. ಸೆನ್ಸಾರ್‌ಶಿಪ್‌ ಮತ್ತು ಸೀಮಿತ ಸಾಂಸ್ಕೃತಿಕ ವಿನಿಮಯದ ಪ್ರವೃತ್ತಿಗಳು ಇದಕ್ಕೆ ಕಾರಣ ಎಂದು ವಿಶ್ಲೇಷಕರು ಹೇಳಿದ್ದಾರೆ.

370 ನೇ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವುದರ ಸುತ್ತ ಈ ಸಿನಿಮಾದ ಕಥೆಯಿದೆ. ಯಾಮಿ ಇಲ್ಲಿ ಝೂನಿ ಹಕ್ಸರ್ ಎಂಬ ಗುಪ್ತಚರ ಅಧಿಕಾರಿಯಾಗಿ ನಟಿಸಿದ್ದಾರೆ. ಆಗಸ್ಟ್ 5, 2019 ರಂದು ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ನೀಡಿದ್ದ 370 ನೇ ವಿಧಿಯನ್ನು ರದ್ದುಗೊಳಿಸಿತು ಮತ್ತು ಅದನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು.

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮುವಿನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಆರ್ಟಿಕಲ್ 370 ಚಿತ್ರದ ಬಗ್ಗೆ ಉಲ್ಲೇಖಿಸಿದ್ದರು. ಆರ್ಟಿಕಲ್ 370 ಕುರಿತ ಸಿನಿಮಾ ಇದೇ ವಾರ ಬಿಡುಗಡೆಯಾಗಲಿದೆ ಎಂದು ಕೇಳಿದ್ದೇನೆ. ಜನರಿಗೆ ಸರಿಯಾದ ಮಾಹಿತಿ ಸಿಗಲು ಈ ಸಿನಿಮಾ ನೆರವಾಗಲಿದೆ ಎಂದುಕೊಂಡಿದ್ದೇನೆ ಎಂದಿದ್ದರು. "ನಿಮ್ಮೆಲ್ಲರ ನಿರೀಕ್ಷೆಯನ್ನು ಈ ಸಿನಿಮಾ ತಲುಪಲಿದೆ. ನೀವು ನಮ್ಮ ಸಿನಿಮಾದ ಕುರಿತು ಮಾತನಾಡಿರುವುದು ನಮಗೆ ದೊರಕಿರುವ ಅಪೂರ್ವ ಗೌರವ" ಎಂದು ಯಾಮಿ ಹೇಳಿದ್ದರು.

ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಫೈಟರ್‌ ಸಿನಿಮಾಕ್ಕೆ ಯುಎಇ ಹೊರತುಪಡಿಸಿ ಇತರೆ ಎಲ್ಲಾ ಗಲ್ಫ್‌ ದೇಶಗಳಲ್ಲಿ ನಿಷೇಧ ಹೇರಲಾಗಿತ್ತು.

ಆರ್ಟಿಕಲ್‌ 370 ಸಿನಿಮಾ

ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದನೆ ಮತ್ತು ಭ್ರಷ್ಟಾಚಾರದ ಮೇಲೆ ಈ ಸಿನಿಮಾ ಬೆಳಕು ಚೆಲ್ಲುತ್ತದೆ. ಇಂಟಲಿಜೆನ್ಸ್‌ ಆಫೀಸರ್‌ ಆಗಿ ಈ ಸಿನಿಮಾದಲ್ಲಿ ಯಾಮಿ ನಟಿಸಿದ್ದಾರೆ. ಆರ್ಟಿಕಲ್‌ 370 ರದ್ದತಿಗೆ ಕಾರಣವಾದ ಅಂಶಗಳ ಕುರಿತು ಈ ಸಿನಿಮಾ ಮಾತನಾಡುತ್ತದೆ. ಕಾಶ್ಮೀರ ಮಿಷನ್‌ಗಾಗಿ ಎನ್‌ಐಎಗೆ ಯಾಮಿ ನೇಮಕವಾಗುತ್ತಾರೆ. ಈ ಸಿನಿಮಾದಲ್ಲಿ ಪ್ರಿಯಾಮಣಿ ಮತ್ತು ಯಾಮಿ ಇಬ್ಬರು ಮಹಿಳೆಯರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಾಶ್ಮೀರ್‌ ಫೈಲ್ಸ್‌ ಸಿನಿಮಾ ಬಿಡುಗಡೆಯಾಗಿ ಎರಡು ವರ್ಷ ಕಳೆದ ಬಳಿಕ ಬಿಡುಗಡೆಯಾದ ಆದಿತ್ಯ ಸುಹಾಸ್ ಜಂಭಾಲೆ ನಿರ್ದೇಶನದ ಆರ್ಟಿಕಲ್ 370 ಚಿತ್ರವು ಈ ವಿಧಿಯ ರದ್ದತಿಯ ಸಂಪೂರ್ಣ ವಿವರ ನೀಡುತ್ತದೆ.

Whats_app_banner