Amruthadhaare: ಮಲ್ಲಿಯನ್ನು ಮನೆ ತುಂಬಿಸಿಕೊಳ್ಳದ ಶಕುಂತಲಾದೇವಿ, ಗೆಟೌಟ್‌ ಅಂದ ಜೈದೇವ್‌; ನ್ಯಾಯ ಕೊಡಿಸಿದ ಭೂಮಿಕಾ ಗೌತಮ್‌ಗೆ ಹೊಸ ಸವಾಲು
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಮಲ್ಲಿಯನ್ನು ಮನೆ ತುಂಬಿಸಿಕೊಳ್ಳದ ಶಕುಂತಲಾದೇವಿ, ಗೆಟೌಟ್‌ ಅಂದ ಜೈದೇವ್‌; ನ್ಯಾಯ ಕೊಡಿಸಿದ ಭೂಮಿಕಾ ಗೌತಮ್‌ಗೆ ಹೊಸ ಸವಾಲು

Amruthadhaare: ಮಲ್ಲಿಯನ್ನು ಮನೆ ತುಂಬಿಸಿಕೊಳ್ಳದ ಶಕುಂತಲಾದೇವಿ, ಗೆಟೌಟ್‌ ಅಂದ ಜೈದೇವ್‌; ನ್ಯಾಯ ಕೊಡಿಸಿದ ಭೂಮಿಕಾ ಗೌತಮ್‌ಗೆ ಹೊಸ ಸವಾಲು

Amruthadhaare Kannada Serial: ಮಲ್ಲಿ ಮತ್ತು ಜೈದೇವ್‌ ವಿವಾಹ ನಡೆಯುತ್ತದೆ. ಜೈದೇವ್‌ ತಾಳಿ ಕಟ್ಟುತ್ತಾನೆ. ಮದುವೆ ಮುಗಿದ ಬಳಿಕ ಪಾರ್ಥ ಮತ್ತು ಅಪೇಕ್ಷಾ ಖುಷಿಯಿಂದ ಕುಣಿಯುತ್ತಾರೆ. ಶಕುಂತಲಾದೇವಿ ರೋಷಗೊಂಡಿದ್ದಾರೆ. ಮಲ್ಲಿಯನ್ನು ಮನೆಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ.

Amruthadhaare: ಮಲ್ಲಿಯನ್ನು ಮನೆ ತುಂಬಿಸಿಕೊಳ್ಳದ ಶಕುಂತಲಾದೇವಿ, ಗೆಟೌಟ್‌ ಅಂದ ಜೈದೇವ್‌
Amruthadhaare: ಮಲ್ಲಿಯನ್ನು ಮನೆ ತುಂಬಿಸಿಕೊಳ್ಳದ ಶಕುಂತಲಾದೇವಿ, ಗೆಟೌಟ್‌ ಅಂದ ಜೈದೇವ್‌

Amruthadhaare Serial: ಶಕುಂತಲಾದೇವಿಯ ಯಾವುದೇ ವಿರೋಧ ಲೆಕ್ಕಿಸದೆ ಗೌತಮ್‌ ಮಲ್ಲಿಯ ಪರ ನಿಲ್ಲುತ್ತಾನೆ. ಜೈದೇವ್‌ ಕೆನ್ನೆಗೂ ಏಟು ನೀಡುತ್ತಾನೆ. ನಿನ್ನ ಆಟವನ್ನು ಸಿಟಿಟಿವಿಯಲ್ಲಿ ನೋಡಿರುವೆ ಎನ್ನುತ್ತಾನೆ. ಹಳೆಯ ಘಟನೆ ನೆನಪಿಸಿಕೊಂಡ ಬಳಿಕ ಶಕುಂತಲಾದೇವಿ ಮೌನವಾಗುತ್ತಾಳೆ. ಝೀ ಕನ್ನಡದ ಅಮೃತಧಾರೆ ಧಾರಾವಾಹಿಯ ಸೋಮವಾರದ ಸಂಚಿಕೆಯಲ್ಲಿ ಮಲ್ಲಿ ಮತ್ತು ಜೈದೇವ್‌ ವಿವಾಹ ನಡೆಯುತ್ತಿದೆ. ಜೈದೇವ್‌ ಮದುವೆ ಕಾರ್ಯಕ್ರಮಗಳು ಆರಂಭವಾಗಿವೆ. ಭೂಮಿಕ ಫಲಪುಷ್ಪ ತಂದಾಗ ಶಕುಂತಲಾದೇವಿಯಲ್ಲಿ ರೋಷ ಕಾಣಿಸುತ್ತದೆ. ಮಲ್ಲಿ ಮದುವೆಯಾಗುವ ಸಮಯದಲ್ಲಿ ತಾತನ ಮುಖದಲ್ಲಿ ನೆಮ್ಮದಿ ಕಾಣಿಸುತ್ತದೆ. ಗಟ್ಟಿ ಮೇಳ ಎಂದಾಗ ಜೈದೇವ್‌ ಆತಂಕಕ್ಕೆ ಒಳಗಾಗುತ್ತಾನೆ. ಮಲ್ಲಿ ಕೈಮುಗಿಯುತ್ತಾಳೆ. ಜೈದೇವ್‌ ತಾಳಿ ಕಟ್ಟುತ್ತಾನೆ. ಎಲ್ಲರೂ ಅಕ್ಷತೆ ಹಾಕಿ ಹಾರೈಸುತ್ತಾರೆ. ಮಲ್ಲಿ ತಾಳಿಯನ್ನು ಕಣ್ಣಿಗೆ ಒತ್ತಿಕೊಳ್ಳುತ್ತಾಳೆ. ಅಪೇಕ್ಷಾ ಪಾರ್ಥನನ್ನು ನೋಡಿ ಮುಗುಳುನಗುತ್ತಾಳೆ. ಮಲ್ಲಿ ಭೂಮಿಕಾಳಿಗೆ ಕೈಮುಗಿಯುತ್ತಾಳೆ. ಭೂಮಿಕಾ ಗೌತಮ್‌ಗೆ ಥ್ಯಾಂಕ್ಸ್‌ ಎನ್ನುತ್ತಾನೆ. ಜೈದೇವ್‌ ರೋಷದಿಂದ ಭೂಮಿಕಾಳನ್ನು ನೋಡುತ್ತಾನೆ. ಹೀಗೆ ಪಟಾಪಟ್‌ ಎಂದು ಎಲ್ಲವೂ ನಡೆದುಬಿಡುತ್ತದೆ.

ಕುಣಿದು ಕುಪ್ಪಳಿಸಿದ ಪಾರ್ಥ ಅಪೇಕ್ಷಾ

ಪಾರ್ಥ ಖುಷಿಯಿಂದ ಡ್ಯಾನ್ಸ್‌ ಮಾಡುತ್ತಾ ಇರುತ್ತಾನೆ. ಅದನ್ನು ಅಪೇಕ್ಷಾ ನೋಡುತ್ತಾಳೆ. ಅವಳೂ ಖುಷಿಗೊಂಡು ಡ್ಯಾನ್ಸ್‌ ಮಾಡುತ್ತಾಳೆ. ಒಟ್ಟಾರೆ ಇವರಿಬ್ಬರ ಸಂಭ್ರಮ ಹೇಳತೀರದು. ಹೀಗೆ ತಾವು ಡ್ಯಾನ್ಸ್‌ ಮಾಡುತ್ತಿರುವುದನ್ನು ಇವರಿಬ್ಬರು ನೋಡುತ್ತಾರೆ. ಅತ್ತಿಗೆ ತಂಗಿ ಎಷ್ಟು ಖುಷಿಯಾಗ್ತ ಇದೆ ಎಂದು ಹೇಳುತ್ತಾನೆ ಪಾರ್ಥ. "ಹೇಳು ಮೈದುನ ಡಿಸ್ಟ್ರೆನ್ಸ್‌ ಮೇಂಟೆನ್ಸ್‌ ಮಾಡು" ಎಂದೆಲ್ಲ ಹೇಳಿ ಅಪೇಕ್ಷಾ ಕಿಚಾಯಿಸುತ್ತಾಳೆ. ನಾನು ನಿಮ್ಮ ಲವರ್‌ ಅಲ್ವ ಎಂದಾಗ "ಅದು ಆ ಕಾಲದಲ್ಲಿ" ಎನ್ನುತ್ತಾಳೆ. ಒಂದು ಸಲ ಅತ್ತಿಗೆ ಎಂದ ಬಳಿಕ ಮುಗೀತು ಅದೇ ರೀತಿ ನೋಡಬೇಕು ಎಂದೆಲ್ಲ ಹೇಳುತ್ತಾನೆ. ಹೀಗೆಲ್ಲ ಒಬ್ಬರನ್ನೊಬ್ಬರನ್ನು ಗೋಳಾಡಿಸ್ತಾರೆ. ಒಟ್ಟಾರೆ ಇಬ್ಬರು ಖುಷಿಯಾಗಿರುವುದಂತೂ ಸತ್ಯ.

ಕ್ಷಮೆ ಕೇಳಿದ ಭೂಮಿಕಾ

ಮತ್ತೊಂದೆಡೆ ಮದುವೆ ಮಂಟಪದಲ್ಲಿ ಒಬ್ಬಳೇ ರೋಷದಲ್ಲಿ ಶಕುಂತಲಾದೇವಿ ಕುಳಿತಿದ್ದಾಳೆ. ನಡೆದ ಘಟನೆಗಳು ನೆನಪಿಗೆ ಬರುತ್ತವೆ. ಭೂಮಿಕಾ ಹೇಳಿರುವ ಮಾತುಗಳನ್ನು ನೆನಪಿಸಿಕೊಳ್ಳುತ್ತಾಳೆ. ಗೌತಮ್‌ ಹೇಳಿದ ಮಾತುಗಳೂ ನೆನಪಾಗುತ್ತವೆ. ಜೈದೇವ್‌ ಕೆನ್ನೆಗೆ ಹೊಡೆದ ಘಟನೆಯನ್ನೂ ನೆನಪಿಸಿಕೊಳ್ಳುತ್ತಾಳೆ. ಜತೆಗೆ ಗೌತಮ್‌ ಹೇಳಿದ ಮಾತನ್ನೂ ನೆನಪಿಸಿಕೊಳ್ಳುತ್ತಾಳೆ. ಆ ಸಮಯದಲ್ಲಿ ಭೂಮಿಕಾ ಅಲ್ಲಿಗೆ ಬಂದು ಕ್ಷಮಾಪಣೆ ಕೇಳುತ್ತಾಳೆ. "ಯಾವ ತಾಯಿಯೂ ತನ್ನ ಮಕ್ಕಳನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡಲ್ಲ. ಅವಳ ಪಾಲಿಗೆ ಮಕ್ಕಳೇ ಪ್ರಪಂಚ ಆಗಿರ್ತಾರೆ. ನಿಮ್ಮ ಮಕ್ಕಳು ಹೀಗೆ ಮಾಡಿದ್ರೆ ಆಕೆ ನಂಬೊಲ್ಲ. ತನ್ನ ಮಕ್ಕಳು ತಪ್ಪು ಮಾಡಲು ಸಾಧ್ಯವಿಲ್ಲ ಎಂದುಕೊಳ್ಳುತ್ತಾಳೆ. ಮಕ್ಕಳ ಮೇಲಿನ ಪ್ರೀತಿ ಅವಳನ್ನು ಆ ಮಟ್ಟಕ್ಕೆ ತಂದುಬಿಡುತ್ತದೆ. ಎಷ್ಟೇ ಮುಚ್ಚಿಟ್ಟರೂ ಸತ್ಯ ಸುಳ್ಳಾಗೊಲ್ಲ. ಒಂದಲ್ಲ ಒಂದು ದಿನ ಅದು ಆಚೆ ಬಂದೇ ಬಿಡುತ್ತದೆ. ನಾನು ಮಾಡುತ್ತಿರುವುದು ತಪ್ಪು, ನಿಮಗೆ ನೋವು ಆಗಿದೆ ಅಂತ ಗೊತ್ತು. ಒಂದು ದಿನ ನಿಮಗಿದು ಅರಿವಾಗುತ್ತಿದೆ. ನಿಮ್ಮ ಮನಸ್ಸನ್ನು ನೋಯಿಸಿದೆ. ನಿಮಗೆ ಬೇಜಾರಾಗಿದೆ" ಎಂದು ತಲೆಬಾಗಿ ಪಾದಮುಟ್ಟಿ ಕ್ಷಮಾಪಣೆ ಕೇಳುತ್ತಾಳೆ.

ಶಕುಂತಲಾದೇವಿ ಧಗಧಗ

ಭೂಮಿಕಾ ಹೋದ ಬಳಿಕ ಶಕುಂತಲಾದೇವಿ ಮನಸ್ಸಲ್ಲಿಯೇ "ದ್ವೇಷದ ನುಡಿಗಳನ್ನುʼ ಆಡುತ್ತಾಳೆ. "ನನ್ನ ಮನೆಯವರು ಹೋದಾಗ್ಲು ನನಗೆ ಇಷ್ಟು ಬೇಜಾರಾಗಿ ಇರಲಿಲ್ಲ. ಇವತ್ತು ನಾನು ಎಲ್ಲವನ್ನೂ ಕಳೆದುಕೊಂಡೆ ಅನಿಸ್ತ ಇದ್ದೆ. ಇಷ್ಟು ವರ್ಷದಲ್ಲಿ ಅಪ್ಪಿತಪ್ಪಿ ಗೌತಮ್‌ ನನ್ನನ್ನು ಮಲತಾಯಿ ಎಂದಿರಲಿಲ್ಲ. ಇವತ್ತು ಇಂಡೈರೆಕ್ಟ್‌ ಆಗಿ ಎಲ್ಲರ ಮುಂದೆ ನನ್ನನ್ನು ಮಲತಾಯಿ ಅಂದ. ಇಷ್ಟೆಲ್ಲ ಆಗಿರೊದು, ಇವ್ಲಿಂದ. ಈ ಭೂಮಿಕಾಳಿಂದ" ಎಂದು ನೆನಪಿಸಿಕೊಳ್ಳುತ್ತಾಳೆ. "ಇವಳನ್ನು ನನ್ನ ಮನೆಯ ಸೊಸೆಯಾಗಿ ತಂದ್ರೆ ನಾನು ಹೇಳಿದ್ದನ್ನು ಕೇಳ್ಕೊಂಡು ಇರ್ತಾಳೆ ಅಂದ್ಕೊಂಡೆ. ಇವಳು ನನ್ನಿಂದ ಎತ್ತರಕ್ಕೆ ಬೆಳೀತಾ ಇದ್ದಾಳೆ. ಇನ್ನು ಮುಂದೆ ಗೌತಮ್‌ ಜತೆ ಹೇಗೆ ಸುಖವಾಗಿ ಸಂಸಾರ ಮಾಡ್ತಾಳೆ ಅಂತ ನಾನು ನೋಡ್ತಿನಿ" ಎಂದು ಶಕುಂತಲಾ ಮನಸ್ಸಲ್ಲಿಯೇ ಶಪಥ ಹಾಕುತ್ತಾಳೆ.

ಮಲ್ಲಿಗೆ ಮನೆಗೆ ನೋ ಎಂಟ್ರಿ

ಜೈದೇವ್‌ ಮಲ್ಲಿ ಜತೆ ಮನೆ ಪ್ರವೇಶಿಸುತ್ತಾನೆ. ಮಲ್ಲಿಗೆ ಆರತಿ ಬೆಳಗುವಾಗ "ನಿಲ್ಸಿ" ಎಂದು ಶಕುಂತಲಾದೇವಿ ಹೇಳುತ್ತಾಳೆ. ಯಾರನ್ನು ಕೇಳಿ ಇವಳನ್ನು ಮನೆ ತುಂಬಿಸಿಕೊಳ್ತಾ ಇದ್ದೀರಾ ಎಂದು ಕೇಳುತ್ತಾಳೆ. ಇದು ನಾನು ಇಷ್ಟಪಟ್ಟು ಮಾಡಿಸಿರೋ ಮದುವೆ ಅಲ್ಲ. ಇಷ್ಟದ ವಿರುದ್ಧವಾಗಿ ಆದ ಮದುವೆಯಿದು. ಅಂದ್ಮೆಲೆ ಯಾರೂ ಯಾರನ್ನು ಮನೆ ತುಂಬಿಸಿಕೊಳ್ಳುವ ಅಗತ್ಯವಿಲ್ಲ ಎನ್ನುತ್ತಾಳೆ. ನಾನಂತು ಇವಳನ್ನು ಮನೆ ತುಂಬಿಸಿಕೊಳ್ಳಲು ತಯಾರಿಲ್ಲ. ನಿನಗೆ ಮಾತ್ರ ಈ ಮನೆಯಲ್ಲಿ ಜಾಗವಿಲ್ಲ ಎಂದು ಮಲ್ಲಿಗೆ ಹೇಳುತ್ತಾಳೆ. ನನ್ನ ಮಗ ನಿನಗೆ ತಾಳಿ ಕಟ್ಟಿರಬಹುದು. ನಾನು ಮಾತ್ರ ನಿನ್ನನ್ನು ಸೊಸೆ ಅಂತ ಒಪ್ಪಿಕೊಳ್ಳುವುದಿಲ್ಲ. ಈ ಮನೆಯಲ್ಲಿ ನಿನಗೆ ಜಾಗ ಇಲ್ಲ ಎನ್ನುತ್ತಾಳೆ ಶಂಕುತಲಾ ಹೇಳುತ್ತಾರೆ. "ಭೂಮಿಕಾ ಅಕ್ಕನೋರು ಈ ಮನೆ ನಿನಗೆ ಸೇರಿದ್ದು ಅಂದಿದ್ದಾರೆ" ಎನ್ನುತ್ತಾಳೆ ಮಲ್ಲಿ. "ನನಗೆ ಎದುರು ಉತ್ತರ ನೀಡ್ತಿಯಾ" ಎಂದು ಶಕುಂತಲಾ ಹೇಳ್ತಾರೆ. ಮನೆಯಲ್ಲಿ ಅತ್ತೆ ಸೊಸೆ ಜಗಳಕ್ಕೆ ಮುನ್ನುಡಿಯಾಗುವ ಸೂಚನೆ ದೊರಕಿದೆ. "ದುಡ್ಡಿನ ಆಸೆಗಾಗಿ ಈ ಮದುವೆಯಾದೆ. ನೀನು ಇರಬೇಕಾದ ಜಾಗ ಇಲ್ಲಿ ಅಲ್ಲ. ಅಲ್ಲಿ" ಎಂದು ಮನೆಗೆ ಎಂಟ್ರಿ ನೀಡುವುದಿಲ್ಲ. ಮಲ್ಲಿ ಜೈದೇವ್‌ ಹತ್ತಿರ ಬರುತ್ತಾಳೆ. ನನ್ನ ಮುಖ ಏನು ನೋಡ್ತಿಯಾ, ಅಮ್ಮ ಹೇಳಿದ್ದು ಕೇಳಿಸ್ತಲ್ವ. ಗೆಟೌಟ್‌ ಅನ್ನುತ್ತಾನೆ ಜೈದೇವ್‌. ಮಲ್ಲಿ ಕಣ್ಣೀರ ಕೋಡಿ ಹರಿಯುತ್ತದೆ. ಮನೆ ಪ್ರವೇಶಿಸದೆ ಹೊರನಡೆಯುತ್ತಾಳೆ. ಕ್ವಾಟ್ರಾಸ್‌ಗೆ ಹೋದಾಗ ಅಜ್ಜ ಬರುತ್ತಾರೆ. ಅಜ್ಜ ಮತ್ತು ಮೊಮ್ಮಗಳ ಮಾತು ನಡೆಯುತ್ತದೆ.

ಭೂಮಿಕಾ ಗೌತಮ್‌ಗೆ ಹೊಸ ಸವಾಲು

ಮನೆಗೆ ಗೌತಮ್‌ ಮತ್ತು ಭೂಮಿಕಾ ಬರುತ್ತಾರೆ. ಮನೆಯ ಮುಂದೆ ಸೇರು ಹಾಗೆಯೇ ಇದೆ ಅಲ್ವ. ಮಲ್ಲಿಯನ್ನು ಮನೆ ತುಂಬಿಸಿಲ್ವ ಎಂದುಕೊಳ್ಳುತ್ತಾರೆ. ಅಶ್ವಿನಿಯನ್ನು ಕೇಳಿದಾಗ "ಅಮ್ಮನಿಗೆ ಈ ಮದುವೆ ಇಷ್ಟ ಇರಲಿಲ್ಲ ಅಲ್ವ. ಅದಕ್ಕೆ ಮಲ್ಲಿಯನ್ನು ತಾತನ ಮನೆಗೆ ಕಳುಹಿಸಿದ್ದಾರೆ" ಎಂದು ಹೇಳುತ್ತಾನೆ. "ಮಲ್ಲಿಗೆ ನ್ಯಾಯ ಕೊಡಿಸಲು ಹೋಗಿ ಈ ಮನೆಯ ನೆಮ್ಮದಿ ಹಾಳಾಗ್ತ ಇದೆ" ಎಂದು ಭೂಮಿಕಾ ಹೇಳುತ್ತಾಳೆ. "ನಿಮ್ಮನ್ನು ನೀವು ಹೊಣೆ ಮಾಡಿಕೊಳ್ಳಬೇಡಿ. ಬೇಜಾರು ಮಾಡಬೇಡಿ" ಎಂದು ಗೌತಮ್‌ ಹೇಳುತ್ತಾನೆ. ನಾನು ಅಮ್ಮನಲ್ಲಿ ಮಾತನಾಡ್ತಿನಿ. ನೀನು ಮಲ್ಲಿಯನ್ನು ಕರೆದುಕೊಂಡು ಬಾ ಎಂದು ಗೌತಮ್‌ ಹೇಳುತ್ತಾನೆ. ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)
ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್‌: ಜೈದೇವ್‌
ಚಂದನ್‌: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)
ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner