Kantara Panjurli: ಕಾಂತಾರ ಪಂಜುರ್ಲಿ ಅಬ್ಬರ; ವರಾಹರೂಪಂ ಶಿವದೂತ ಪಂಜುರ್ಲಿ ನೋಡಿ ಬೆಂಗಳೂರಿಗರಿಗೆ ಗೂಸ್‌ಬಂಪ್ಸ್‌-sandalwood news rishab shetty kantara movie like panjurli scene in shivadutha panjurli yakshagana bangalore pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Kantara Panjurli: ಕಾಂತಾರ ಪಂಜುರ್ಲಿ ಅಬ್ಬರ; ವರಾಹರೂಪಂ ಶಿವದೂತ ಪಂಜುರ್ಲಿ ನೋಡಿ ಬೆಂಗಳೂರಿಗರಿಗೆ ಗೂಸ್‌ಬಂಪ್ಸ್‌

Kantara Panjurli: ಕಾಂತಾರ ಪಂಜುರ್ಲಿ ಅಬ್ಬರ; ವರಾಹರೂಪಂ ಶಿವದೂತ ಪಂಜುರ್ಲಿ ನೋಡಿ ಬೆಂಗಳೂರಿಗರಿಗೆ ಗೂಸ್‌ಬಂಪ್ಸ್‌

Kantara Panjurli: ರಿಷಬ್‌ ಶೆಟ್ಟಿ ನಟನೆಯ ಕಾಂತಾರ ಸಿನಿಮಾದ ಪಂಜುರ್ಲಿಯನ್ನು ನೆನಪಿಸುವಂತೆ ಶಿವದೂತ ಪಂಜುರ್ಲಿ ಯಕ್ಷಗಾನದಲ್ಲಿ ಹಲವು ದೃಶ್ಯಗಳಿವೆ. ಬೆಂಗಳೂರಿನಲ್ಲಿ ನಡೆದ ಕರಾವಳಿ ಉತ್ಸವದಲ್ಲಿ ಈ ಯಕ್ಷಗಾನ ನೋಡಿದ ಪ್ರೇಕ್ಷಕರು ಕಾಂತಾರದ ಗೂಸ್‌ಬಂಪ್ಸ್‌ಗೆ ಒಳಗಾಗಿದ್ದಾರೆ.

Kantara Panjurli: ಕಾಂತಾರ ಪಂಜುರ್ಲಿ ಅಬ್ಬರ; ಬೆಂಗಳೂರಿನಲ್ಲಿ ಶಿವದೂತ ಪಂಜುರ್ಲಿ ಯಕ್ಷಗಾನ
Kantara Panjurli: ಕಾಂತಾರ ಪಂಜುರ್ಲಿ ಅಬ್ಬರ; ಬೆಂಗಳೂರಿನಲ್ಲಿ ಶಿವದೂತ ಪಂಜುರ್ಲಿ ಯಕ್ಷಗಾನ

ರಿಷಬ್‌ ಶೆಟ್ಟಿ ಕಾಂತಾರ 2 ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದಾರೆ. ಕಾಂತಾರ ಸಿನಿಮಾ ಬಂದ ಬಳಿಕ ಯಕ್ಷಗಾನ, ನಾಟಕ ಸೇರಿದಂತೆ ವಿವಿಧ ಮನರಂಜನಾ ಪ್ರಕಾರಗಳಲ್ಲಿ ಕಾಂತಾರ ಸಿನಿಮಾದ ಪ್ರಭಾವ ಕಾಣಿಸಿತ್ತು. ಬೆಂಗಳೂರಿನಲ್ಲಿ ಈ ಭಾನುವಾರ (ಫೆಬ್ರವರಿ 25) ನಡೆದ ಕರಾವಳಿ ಉತ್ಸವದಲ್ಲಿ "ಶಿವದೂತ ಪಂಜುರ್ಲಿ" ಯಕ್ಷಗಾನ ನಡೆದಿತ್ತು. ಕಳೆದ ವರ್ಷದಿಂದಲೇ ಈ ಯಕ್ಷಗಾನ ನಾಡಿನೆಲ್ಲೆಡೆ ಪ್ರದರ್ಶನಗೊಂಡು ಜನರ ಗಮನ ಸೆಳೆದಿದೆ. ಕರಾವಳಿ ಉತ್ಸವದ ಕಾರ್ಯಕ್ರಮದಲ್ಲಿ ನೆರೆದ ಪ್ರೇಕ್ಷಕರಿಗೆ, ಯಕ್ಷಗಾನ ಕಲಾರಸಿಕರಿಗೆ ಈ ಯಕ್ಷಗಾನವು ಕಾಂತಾರ ಸಿನಿಮಾವನ್ನು ಮತ್ತೆ ನೆನಪಿಸಿದೆ.

ಕಾಂತಾರ ನೆನಪಿಸಿದ ಶಿವದೂತ ಪಂಜುರ್ಲಿ ಯಕ್ಷಗಾನ

ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ, ನಡೂರು ಮಂದರ್ತಿಯವರ ಈ ಶಿವದೂತ ಪಂಜುರ್ಲಿ ಯಕ್ಷಗಾನದ ಪ್ರಮುಖ ದೃಶ್ಯ ಕಾಂತಾರ ಸಿನಿಮಾದಿಂದ ಪ್ರೇರೇಪಣೆ ಪಡೆದಿದೆ. ಈ ದೃಶ್ಯದಲ್ಲಿ "ವೋ... ವೋ.... ವೋ..."ಎಂಬ ಪಂಜುರ್ಲಿಯ ಧ್ವನಿ ಕಾಂತಾರದ ಪಡಿಯಚ್ಚು. ಭಾಗವತರ ಕಂಚಿನ ಕಂಠದಲ್ಲಿ ಮೂಡಿಬಂದ "ವರಹಾರೂಪಂ" ಹಾಡು ಕೂಡ ಕಾಂತಾರದ್ದೇ. ಹಲವು ನಿಮಿಷಗಳ ಕಾಲ ಸ್ಟೇಜ್‌ ನಡುವೆಯೋ "ವೋ..." ಎಂದು ಅಬ್ಬರಿಸುತ್ತ ಪಂಜುರ್ಲಿ ಬಂದಾಗ ಕಾಂತಾರ ಸಿನಿಮಾದಂತೆಯೇ ಗೋಸ್‌ಬಂಪ್ಸ್‌ ಆಗುತ್ತದೆ.

ಶಿವದೂತ ಪಂಜುರ್ಲಿ ಕಥೆ

ಶಿವದೂತ ಪಂಜುರ್ಲಿಯಲ್ಲಿ ಇರುವುದು ರಿಷಬ್‌ ಶೆಟ್ಟಿ ಕಾಂತಾರದ ಸಿನಿಮಾದ ಕಥೆಯಲ್ಲ. ಇಲ್ಲಿ ಇರುವುದು ಪಂಜುರ್ಲಿ ದೈವವು ಭೂಮಿಗೆ ಅವತರಿಸುವಂತಹ ದೃಶ್ಯ. ಒಬ್ಬ ರಾಜ ಇರುತ್ತಾನೆ. ಪತ್ನಿಯನ್ನು ಕಳೆದುಕೊಂಡರೂ ತನ್ನ ಪ್ರಜೆಗಳ ಸುಖಕ್ಕಾಗಿ ನಗುಮುಖದಲ್ಲಿ ಇರುತ್ತಾನೆ. ವನ್ಯಜೀವಿಗಳ ಕಾಟ ಅತಿಯಾದಗ ಬೇಟೆಗೆ ಕಾಡಿಗೆ (ಕಾಂತಾರಕ್ಕೆ) ಹೋಗುತ್ತಾನೆ. ಇನ್ನೊಂದೆಡೆ ಅಜ್ಜ ಮತ್ತು ಮಗಳು ಇರುತ್ತಾರೆ. ಅಜ್ಜನಿಗೆ ಕನಸಲ್ಲಿ ಆರಾಧ್ಯ ದೈವ ಪಂಜುರ್ಲಿ ಕಾಣಿಸಿರುತ್ತದೆ. ಕಾಂತಾರದಲ್ಲಿರುವ ಪಂಜುರ್ಲಿಯ ಗುಡಿಯನ್ನು ಹಲವು ವರ್ಷದಿಂದ ಸ್ಚಚ್ಛ ಮಾಡದೆ ಇರುವ ಕುರಿತು ತಿಳಿಸುತ್ತದೆ. ಅದನ್ನು ಸ್ವಚ್ಛ ಮಾಡುವಂತೆ ತಿಳಿಸುತ್ತದೆ.

ಮೊದಲು ಕಾಂತಾರ(ಕಾಡು)ಕ್ಕೆ ಅಜ್ಜ ಹೋಗುತ್ತಾನೆ. ಅಡುಗೆ ಸಿದ್ಧಪಡಿಸಿ ಆಮೇಲೆ ಅಲ್ಲಿಗೆ ಮಗಳು ಬರುವಳಿದ್ದಾಳೆ. ಕಾಡು ಪ್ರಾಣಿಗಳ ಬೇಟೆಯಾಡಲು ಬಂದ ರಾಜನಿಗೆ ವ್ಯಾಘ್ರನ ಘರ್ಜನೆ ಕೇಳಿಸುತ್ತದೆ. ಈ ಸಮಯದಲ್ಲಿ ವೋ.... ಎಂಬ ಅಬ್ಬರ ಕೇಳುತ್ತದೆ. ಪ್ರೇಕ್ಷಕರಿಗೆ ರಿಷಬ್‌ ಶೆಟ್ಟಿಯ ಕಾಂತಾರ ಸಿನಿಮಾ ನೆನಪಿಗೆ ಬರಲೇಬೇಕು. ಕೈಯಲ್ಲಿ ದೊಂದಿ ಹಿಡಿದುಕೊಂಡು ವರಹಾರೂಪಿ ಪಂಜುರ್ಲಿ ಬರುತ್ತದೆ. ಇದೇ ಸಮಯದಲ್ಲಿ ಭಾಗವತರು "ವರಹಾರೂಂ" ಹಾಡನ್ನೂ ಹಾಡುತ್ತಾರೆ. ಯಕ್ಷಗಾನದಲ್ಲಿ ಭೂತಕೋಲ ಕಾಣಿಸುತ್ತದೆ. ಸ್ಟೇಜ್‌ ನಡುವಿನಿಂದ ಎರಡು ದೊಂದಿ (ದೀವಟಿಗೆ) ಹಿಡಿದುಕೊಂಡು ಪಂಜುರ್ಲಿ ದೈವ ಅಬ್ಬರಿಸುತ್ತದೆ. ಕಾಂತಾರದ ಪಂಜುರ್ಲಿಯಂತೆಯೇ ಪ್ರೇಕ್ಷಕರಿಗೆ ರೋಮಾಂಚನ ಉಂಟುಮಾಡುತ್ತದೆ.

ಇದೇ ಸಮಯದಲ್ಲಿ ತಾತಾ ಬಂದು ಆ ರಾಜನನ್ನು ಹುಲಿಯಿಂದ ರಕ್ಷಿಸುತ್ತಾನೆ. ಆ ಸಮಯದಲ್ಲಿ ತಾತಾನ ಮಗಳೂ ಆಗಮಿಸುತ್ತಾಳೆ. ಆ ಸಮಯದಲ್ಲಿ ತಾತಾ ಗಾಯಗೊಂಡಿರುತ್ತಾನೆ. ಮುಂದೆನಾಗುತ್ತದೆ, ಮಗಳ ಕಥೆ ಏನಾಗುತ್ತದೆ, ರಾಜ ಏನು ಮಾಡುತ್ತಾನೆ, ಪಂಜುರ್ಲಿ ಸ್ಟೋರಿ ಏನು ಇತ್ಯಾದಿ ತಿಳಿಯಲು ಬಯಸುವವರು ಅವಕಾಶ ಸಿಕ್ಕಾಗ ಶಿವದೂತ ಪಂಜುರ್ಲಿ ಯಕ್ಷಗಾನ ನೋಡಬಹುದು.

ಶಿವದೂತ ಗುಳಿಗೆ ನಾಟಕ, ಶಿವದೂತ ಪಂಜುರ್ಲಿ ಯಕ್ಷಗಾನಗಳಲ್ಲಿ ಕಾಂತಾರ ನೆನಪಿಗೆ ಬರುವಂತಹ ದೃಶ್ಯಗಳು ಇವೆ. ಶಿವದೂತ ಗುಳಿಗೆ ಎನ್ನುವುದ ಕಾಂತಾರ ಸಿನಿಮಾಕ್ಕಿಂತ ಮೊದಲೇ ಪ್ರದರ್ಶನ ಕಾಣುತ್ತಿದ್ದ ನಾಟಕ. ಇತ್ತೀಚೆಗೆ ಯಕ್ಷಗಾನ, ಸಿನಿಮಾ, ನಾಟಕಗಳಲ್ಲಿ ತುಳುನಾಡಿನ ಭೂತಾರಾಧನೆಯನ್ನು ತೋರಿಸುವುದರ ಕುರಿತು ಆಕ್ಷೇಪ, ಹೋರಾಟವೂ ಆರಂಭವಾಗಿದೆ. ಇದೇ ಸಮಯದಲ್ಲಿ ಸಿನಿಮಾ ಪ್ರೇಮಿಗಳು ರಿಷಬ್‌ ಶೆಟ್ಟಿ ನಟನೆಯ ಕಾಂತಾರ ಚಾಪ್ಟರ್‌ 1ಕ್ಕೆ ಬಹುನಿರೀಕ್ಷೆಯಿಂದ ಕಾಯುತ್ತಿದ್ದಾರೆ.

mysore-dasara_Entry_Point