ಕನ್ನಡ ಸುದ್ದಿ  /  ಮನರಂಜನೆ  /  Disha Patani: ಕಲ್ಕಿ ಪ್ರಭಾಸ್‌ ಜತೆ ಡೇಟಿಂಗ್‌ ಮಾಡ್ತಾ ಇದ್ದಾರ ದಿಶಾ ಪಟಾನಿ; ವದಂತಿಯ ಬೆಂಕಿಗೆ ತುಪ್ಪ ಸುರಿದ ಟ್ಯಾಟೂ

Disha Patani: ಕಲ್ಕಿ ಪ್ರಭಾಸ್‌ ಜತೆ ಡೇಟಿಂಗ್‌ ಮಾಡ್ತಾ ಇದ್ದಾರ ದಿಶಾ ಪಟಾನಿ; ವದಂತಿಯ ಬೆಂಕಿಗೆ ತುಪ್ಪ ಸುರಿದ ಟ್ಯಾಟೂ

Disha Patani tattoo: ಬಾಲಿವುಡ್‌ ನಟಿ ದಿಶಾ ಪಟಾನಿ ಅವರು ಕಲ್ಕಿ ಸಿನಿಮಾ ನಟ ಪ್ರಭಾಸ್‌ ಜತೆ ಡೇಟಿಂಗ್‌ನಲ್ಲಿದ್ದಾರ? ದಿಶಾ ಪಟಾನಿ ಇತ್ತೀಚೆಗೆ ತನ್ನ ತೋಳಿನ ಮೇಲೆ 'ಪಿಡಿ' ಹಚ್ಚೆ ಹಾಕಿಸಿಕೊಂಡಿದ್ದರು. ಕಲ್ಕಿ 2898 ಎಡಿ ನಟ ಪ್ರಭಾಸ್‌ ಜತೆ ಇವರು ಡೇಟಿಂಗ್‌ನಲ್ಲಿದ್ದಾರೆಯೇ ಎಂಬ ಸಂದೇಹವನ್ನೂ ಈ ಟ್ಯಾಟೂ ಹೆಚ್ಚಿಸಿದೆ.

Disha Patani: ಕಲ್ಕಿ ಪ್ರಭಾಸ್‌ ಜತೆ ಡೇಟಿಂಗ್‌ ಮಾಡ್ತಾ ಇದ್ದಾರ ದಿಶಾ ಪಟಾನಿ
Disha Patani: ಕಲ್ಕಿ ಪ್ರಭಾಸ್‌ ಜತೆ ಡೇಟಿಂಗ್‌ ಮಾಡ್ತಾ ಇದ್ದಾರ ದಿಶಾ ಪಟಾನಿ

ಬೆಂಗಳೂರು: ಬಾಲಿವುಡ್‌ನ ದಿಶಾ ಪಟಾನಿ ಎಂಬ ಚೆಲುವೆ ಬಗ್ಗೆ ಬಹುತೇಕರಿಗೆ ಗೊತ್ತು. ಕಲ್ಕಿ, ಯೋಧ, ಭಾಗಿ 2, ಎಂಎಸ್‌ ಧೋನಿ- ದಿ ಅನ್‌ಟೋಲ್ಡ್‌ ಸ್ಟೋರಿ, ಏಕ್‌ ವಿಲನ್‌ ರಿಟರ್ನ್ಸ್‌, ಮಲಾಂಗ್‌ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಪ್ರತಿಭಾನ್ವಿತ ನಟಿ. ಟೈಗರ್ ಶ್ರಾಫ್ ಅವರೊಂದಿಗಿನ ಬ್ರೇಕಪ್ ನಂತರ, ದಿಶಾ ಪಟಾನಿ ಅವರ ಡೇಟಿಂಗ್ ಜೀವನದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ. ಇತ್ತೀಚೆಗೆ ತನ್ನ ತೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡ ಬಳಿಕ ಅನೇಕ ಊಹಾಪೋಹಗಳು ಎದ್ದಿವೆ.

ಟ್ರೆಂಡಿಂಗ್​ ಸುದ್ದಿ

ದಿಶಾ ಟ್ಯಾಟೂ ಮೇಲೆ ಸಂದೇಹ

ಇತ್ತೀಚೆಗೆ ಸೆಲೆಬ್ರಿಟಿಗಳ ಫೋಟೋ ಕ್ಲಿಕ್ಕಿಸುವ ಸ್ವತಂತ್ರ ಫೋಟೋಗ್ರಾಫರ್‌ಗಳಾದ ಪಾಪರಾಜಿಗಳು ದಿಶಾ ಪಟಾನಿ ಫೋಟೋ ಕ್ಲಿಕ್‌ ಮಾಡಿದ್ದಾರೆ. ಚಿಟ್ಟೆ ವಿನ್ಯಾಸದ ನೀಲಿ ಟ್ಯಾಂಕ್‌ ಟಾಪ್‌ ಧರಿಸಿದ ಇವರ ಫೋಟೋ ವೈರಲ್‌ ಆಗಿತ್ತು. ಬಿಳಿ ಪ್ಯಾಂಟ್‌, ಬಿಳಿ ಕೈಚೀಲ, ಗಾಢ ಬಣ್ಣದ ಗ್ಲಾಸ್‌ಗಳಿಂದ ಸೂಪರ್‌ ಆಗಿ ಕಾಣಿಸುತ್ತಿದ್ದರು. ಆದರೆ, ಹೆಚ್ಚಿನವರು ಆಕೆಯ ಎಡಗೈಯಲ್ಲಿರುವ ಟ್ಯಾಟೂವನ್ನು ಗಮನಿಸಿದ್ದರು. ಅದರಲ್ಲಿ ಸರಳವಾಗಿ "ಪಿಡಿ" ಎಂದು ಬರೆದಿತ್ತು. ಅನೇಕ ಜನರು ಈ ಪಿಡಿ ಎಂದರೆ ಏನು ಎಂದು ಊಹಿಸಲಾರಂಭಿಸಿದರು.

ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಜನರು ತಮ್ಮ ಊಹೆಗಳನ್ನು ಹರಿಯಬಿಟ್ಟರು. ಇದು ಕಲ್ಕಿ 2898 ಎಡಿ ಸಿನಿಮಾದ ನಟ ಪ್ರಭಾಸ್‌ ಮತ್ತು ದಿಶಾ ಪಟಾನಿಯ ಮೊದಲಾಕ್ಷರಗಳು ಎಂದು ಊಹೆ ಮಾಡಿದ್ದಾರೆ. ಇವರಿಬ್ಬರು ಡೇಟಿಂಗ್‌ ಮಾಡುತ್ತಿರಬಹುದು ಎಂದು ವದಂತಿಗಳು ಹೆಚ್ಚಾಗಿವೆ.

ತನ್ನ ಮತ್ತು ಪ್ರಭಾಸ್‌ ಬಗ್ಗೆ ಈ ಹಚ್ಚೆ ಇಷ್ಟೊಂದು ವದಂತಿ ಹರಡುತ್ತಿರುವ ಸಂದರ್ಭದಲ್ಲಿ ದಿಶಾ ಸುಮ್ಮನಿರಲಿಲ್ಲ. ಬೆಂಕಿಗೆ ಇನ್ನಷ್ಟು ಅಗ್ಗಿಷ್ಟಿಕೆ ಹಾಕಿ ಹಾಕಿದ್ದಾರೆ. ದಿಶಾ ಪಟಾನಿ ಅವರು ಇನ್‌ಸ್ಟಾಗ್ರಾಂನಲ್ಲಿ ಹಚ್ಚೆ ಚಿತ್ರ ಹಂಚಿಕೊಂಡಿದ್ದಾರೆ. "ನನ್ನ ಟ್ಯಾಟೂ ಬಗ್ಗೆ ಇಷ್ಟೊಂದು ಕುತೂಹಲ ಉಂಟಾಗಿರುವುದನ್ನು ನೋಡಿ ಸಂತೋಷವಾಗಿದೆ. ಸಂತೋಷ. ಏನೆಂದು ತಿಳಿದುಕೊಳ್ಳಿ. ಕ್ಲೌಡ್‌ನೈನ್‌" ಎಂದು ಪೋಸ್ಟ್‌ ಮಾಡಿದ್ದಾರೆ.

ದಿಶಾ ಪಟಾನಿ ಇತ್ತೀಚೆಗೆ ಯೋಧಾ, ಏಕ್‌ ವಿಲನ್‌ ರಿಟರ್ನ್ಸ್‌, ರಾಧೆ, ಭಾಗಿ 3, ಮಲಾಂಗ್‌, ಭಾರತ್‌, ವೆಲ್‌ಕಂ ಟು ನ್ಯೂಯಾರ್ಕ್‌, ಎಂಎಸ್‌ ಧೋನಿ: ದಿ ಅನ್‌ಟೋಲ್ಡ್‌ ಸ್ಟೋರಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ ದಿಶಾ ಪಟಾನಿ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತ ಅಭಿಮಾನಿಗಳನ್ನು ಖುಷಿಪಡಿಸುತ್ತಿರುತ್ತಾರೆ.

ದಿಶಾ ಪಟಾಣಿ ತೆಲುಗಿನ ಲೋಫರ್‌ ಸಿನಿಮಾದ ಮೂಲಕ ಸಿನಿಜಗತ್ತಿಗೆ ಕಾಲಿಟ್ಟರು. 2015ರಲ್ಲಿ ಲೋಫರ್‌ ಸಿನಿಮಾದಲ್ಲಿ ವರುಣ್‌ ತೇಜ್‌ ಜತೆ ನಟಿಸಿದರು. ನೀರಜ್‌ ಪಾಂಡೆಯ ಎಂಎಸ್‌ ಧೋನಿ ಸಿನಿಮಾ ಇವರಿಗೆ ದೊಡ್ಡ ಬ್ರೇಕ್‌ ನೀಡಿತು.

ದಿಶಾ ಅಲೆಕ್ಸಾಂಡರ್ ಅಲೆಕ್ಸ್ ಇಲಿಕ್ ಅವರೊಂದಿಗೆ ಸುತ್ತಾಡುತ್ತಿರುವುದನ್ನು ಸಾಕಷ್ಟು ಜನರು ಈ ಹಿಂದೆ ಗಮನಿಸಿದ್ದರು. ಆದರೆ, ಇವರಿಬ್ಬರು ಇತ್ತೀಚೆಗೆ ಎಲ್ಲೂ ಕ್ಯಾಮೆರಾ ಕಣ್ಣಿಗೆ ಬಿದ್ದಿಲ್ಲ. ಇವರಿಬ್ಬರು ತಮ್ಮ ಸಂಬಂಧವನ್ನು ದೃಢೀಕರಿಸಿಲ್ಲ ಅಥವಾ ನಿರಾಕರಿಸಿಲ್ಲ. ಅಲೆಕ್ಸಾಂಡರ್‌ಗಿಂತ ಮೊದಲು ದಿಶಾ ತನ್ನ ಬಾಘಿ 3 ಸಹನಟ ಟೈಗರ್ ಶ್ರಾಫ್ ಅವರೊಂದಿಗೆ ದೀರ್ಘ ಸಂಬಂಧವನ್ನು ಹೊಂದಿದ್ದರು.

ಇತ್ತೀಚೆಗೆ ಅಕ್ಷಯ್ ಕುಮಾರ್ ಅವರ ನಿವಾಸದಲ್ಲಿ ದಿಶಾ ಒಟ್ಟಿಗೆ ವಾಲಿಬಾಲ್ ಆಡುತ್ತಿದ್ದರು.. ಕುತೂಹಲಕಾರಿ ಸಂಗತಿಯೆಂದರೆ, ಅಕ್ಷಯ್ ಇತ್ತೀಚೆಗೆ ಅಲಿ ಅಬ್ಬಾಸ್ ಜಾಫರ್ ಅವರ ಆಕ್ಷನ್ ಕಾಮಿಡಿ ಬಡೇ ಮಿಯಾ ಚೋಟೆ ಮಿಯಾದಲ್ಲಿ ಟೈಗರ್ ಶ್ರಾಫ್‌ ಅವರೊಂದಿಗೆ ಸಿನಿ ಪರದೆ ಹಂಚಿಕೊಂಡಿದ್ದರು. ಅಕ್ಷಯ್ ಈಗ ಸಾಹಸ ಹಾಸ್ಯ ಚಿತ್ರ ವೆಲ್ಕಮ್ ಬ್ಯಾಕ್ ಚಿತ್ರದಲ್ಲಿ ಬಿಝಿ ಇದ್ದಾರೆ. ಈ ಚಿತ್ರದಲ್ಲಿ ದಿಶಾ ಪಟಾನಿ ಕೂಡ ನಟಿಸಿದ್ದಾರೆ. ವೆಲ್ಕಂ ಬ್ಯಾಕ್‌ ಜತೆಗೆ ದಿಶಾ ಅವರು ಕಂಗುವಾ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.