Bollywood News: UT 69 ಟ್ರೇಲರ್‌ ರಿಲೀಸ್‌: ತಮ್ಮದೇ ಜೀವನಾಧಾರಿತ ಸಿನಿಮಾದಲ್ಲಿ ಹೀರೋ ಆದ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ
ಕನ್ನಡ ಸುದ್ದಿ  /  ಮನರಂಜನೆ  /  Bollywood News: Ut 69 ಟ್ರೇಲರ್‌ ರಿಲೀಸ್‌: ತಮ್ಮದೇ ಜೀವನಾಧಾರಿತ ಸಿನಿಮಾದಲ್ಲಿ ಹೀರೋ ಆದ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ

Bollywood News: UT 69 ಟ್ರೇಲರ್‌ ರಿಲೀಸ್‌: ತಮ್ಮದೇ ಜೀವನಾಧಾರಿತ ಸಿನಿಮಾದಲ್ಲಿ ಹೀರೋ ಆದ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ

UT 69 Trailer Released: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಅರೆಸ್ಟ್‌ ಆಗಿದ್ದ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ, ತಮ್ಮ ಜೀವನ ಆಧಾರಿತ ಸಿನಿಮಾ UT 69 ರಲ್ಲಿ ನಟಿಸಿದ್ದಾರೆ. ಚಿತ್ರದ ಟ್ರೇಲರ್‌ ಬುಧವಾರ ರಿಲೀಸ್‌ ಆಗಿದೆ.

UT 69 ಟ್ರೇಲರ್‌ ರಿಲೀಸ್‌
UT 69 ಟ್ರೇಲರ್‌ ರಿಲೀಸ್‌ (PC: SVS Studios)

UT 69 Trailer Released: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ನಟನೆಯ UT 69 ಟ್ರೇಲರ್‌ ರಿಲೀಸ್‌ ಆಗಿದೆ. ಇದೇ ಮೊದಲ ಬಾರಿಗೆ ರಾಜ್‌ ಕುಂದ್ರಾ ನಟನೆಗೆ ಇಳಿದಿದ್ದಾರೆ. ಇದು ರಾಜ್‌ ಕುಂದ್ರಾ ಜೀವನ ಆಧಾರಿತ ಸಿನಿಮಾವಾಗಿದ್ದರಿಂದ ತಮ್ಮ ಸಿನಿಮಾದಲ್ಲಿ ಸ್ವತ: ರಾಜ್‌ಕುಂದ್ರಾ ತಮ್ಮದೇ ಪಾತ್ರ ಮಾಡಿದ್ದಾರೆ. ಅಶ್ಲೀಲ ವಿಡಿಯೋ ಪ್ರಕರಣಕ್ಕೆ ರಾಜ್‌ ಕುಂದ್ರಾ ಅರೆಸ್ಟ್‌ ಆದ ವಿಚಾರವನ್ನು ಚಿತ್ರದಲ್ಲಿ ಹೈಲೈಟ್‌ ಮಾಡಲಾಗಿದೆ.

UT 69 ಟ್ರೇಲರ್‌ ಕಾರ್ಯಕ್ರಮದಲ್ಲಿ ಮಾಸ್ಕ್‌ ತೆಗೆದ ರಾಜ್‌ ಕುಂದ್ರಾ

ಬುಧವಾರ ಮುಂಬೈನ ಖಾಸಗಿ ಹೋಟೆಲ್‌ವೊಂದರಲ್ಲಿ UT 69 ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದೆ. ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಅರೆಸ್ಟ್‌ ಆಗಿ ಬೇಲ್‌ ಪಡೆದು ಹೊರ ಬಂದಾಗಿನಿಂದ ರಾಜ್‌ ಕುಂದ್ರಾ, ಮಾಸ್ಕ್‌ ಧರಿಸಿ ಓಡಾಡುತ್ತಿದ್ದರು. ಗಣೇಶ ಹಬ್ಬದ ಆಚರಣೆಯಲ್ಲೂ ರಾಜ್‌ ಕುಂದ್ರಾ ಮಾಸ್ಕ್‌ ಬಿಟ್ಟಿರಲಿಲ್ಲ. ಆದರೆ UT 69 ಟ್ರೇಲರ್‌ ರಿಲೀಸ್‌ ಟ್ರೇಲರ್‌ ಕಾರ್ಯಕ್ರಮದಲ್ಲಿ ರಾಜ್‌ ಕುಂದ್ರಾ ಮಾಧ್ಯಮಗಳ ಮುಂದೆ ಅಧಿಕೃತವಾಗಿ ಮಾಸ್ಕ್‌ ತೆಗೆದಿದ್ದಾರೆ. ನನಗೆ ಮಾಧ್ಯಮಗಳ ಕಣ್ಣೀಗೆ ಬೀಳುವುದು ಇಷ್ಟವಿರಲಿಲ್ಲ. ಅರೆಸ್ಟ್‌ ಆದಾಗಿನಿಂದ ಕೆಲವು ಮಾಧ್ಯಮಗಳು ನನ್ನನ್ನು ಬಹಳ ಕೆಟ್ಟವನನ್ನಾಗಿ ಬಿಂಬಿಸುತ್ತಿವೆ. ನಾನು ತೆಗೆದದ್ದು ಅಶ್ಲೀಲ ವಿಡಿಯೋಗಳಲ್ಲ ಬೋಲ್ಡ್‌ ವಿಡಿಯೋಗಳು. ಆದರೂ ನಾನು ತಪ್ಪಿತಸ್ಥನಾದೆ. ನಾನು ತಪ್ಪು ಮಾಡಿದ್ದೇನೆ ಎಂದಾದರೆ ನೀವು ನನ್ನ ಬಗ್ಗೆ ಮಾತನಾಡಿ, ಅದರೆ ನನ್ನ ಹೆಂಡತಿ ಮಕ್ಕಳ ಬಗ್ಗೆ ನೆಗೆಟಿವ್‌ ಆಗಿ ಮಾತನಾಡುವುದು ತಪ್ಪು ಎಂದು ಹೇಳಿಕೊಂಡು ರಾಜ್‌ ಕುಂದ್ರ ಭಾವುಕರಾದರು.

ಅಶ್ಲೀಲ ವಿಡಿಯೋ ಪ್ರಕರಣವೇ ಹೈಲೈಟ್

ಇನ್ನು ಟ್ರೇಲರ್‌ ನೋಡಿ ಬಾಲಿವುಡ್‌ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್‌ ಕುಂದ್ರಾ ಅರೆಸ್ಟ್‌ ಆದ ನಂತರ ಟಿವಿಗಳಲ್ಲಿ ಬ್ರೇಕಿಂಗ್‌ ತೋರಿಸಿದಂತೆ ಟ್ರೇಲರ್‌ ಆರಂಭದಲ್ಲಿ ತೋರಿಸಲಾಗಿದೆ. ಆರ್ಥರ್‌ ಜೈಲಿನ ಬಗ್ಗೆ ನಾನು ಕೇಳಿದ್ದೆ, ಟಿವಿಯಲ್ಲಿ ನೋಡಿದ್ದೆ ಆದರೆ ಇಲ್ಲಿಗೆ ಬರುತ್ತೇನೆಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ ಎಂದುಕೊಂಡು ಚಿತ್ರದ ನಾಯಕ ಜೈಲಿಗೆ ಹೋಗುತ್ತಾನೆ. ಜೈಲಿನಲ್ಲಿ ಪೊಲೀಸ್‌ ಅಧಿಕಾರಿಗಳು, ರಾಜ್‌ ಕುಂದ್ರಾಗೆ ಹಲ್ಲು ಉಜ್ಜಲು ಬ್ರಷ್‌ ನೀಡುವುದಿಲ್ಲ, ಬದಲಿಗೆ ಕೈಯ್ಯಲ್ಲಿ ಬ್ರಷ್‌ ಮಾಡಲು ಹೇಳುತ್ತಾರೆ. ಜೈಲಿನ ಊಟ, ಅಲ್ಲಿ ಅನುಭವಿಸುವ ತೊಂದರೆ ಎಲ್ಲವನ್ನೂ ಟ್ರೇಲರ್‌ನಲ್ಲಿ ತೋರಿಸಲಾಗಿದೆ.‌

ಶೆಹನವಾಜ್‌ ಆಲಿ ನಿರ್ದೇಶನದ ಸಿನಿಮಾ

UT 69 ಚಿತ್ರವನ್ನು ಎಸ್‌ವಿಎಸ್‌ ಸ್ಟುಡಿಯೋಸ್‌ ಬ್ಯಾನರ್‌ ಅಡಿ ಶೆಹನವಾಜ್‌ ಆಲಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನವೆಂಬರ್‌ 3 ರಂದು ತೆರೆ ಕಾಣುತ್ತಿದೆ. ಅಶ್ಲೀಲ ವಿಡಿಯೋಗಳನ್ನು ರೆಕಾರ್ಡ್‌ ಮಾಡಿ ಆಪ್‌ಗಳ ಮೂಲಕ ರಾಜ್‌ ಕುಂದ್ರಾ ವಿತರಣೆ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ 2021 ಜುಲೈನಲ್ಲಿ ರಾಜ್‌ ಕುಂದ್ರಾ ಅರೆಸ್ಟ್‌ ಆಗಿದ್ದರು. ಅದೇ ವರ್ಷ ಸೆಪ್ಟೆಂಬರ್‌ಲ್ಲಿ ಬೇಲ್‌ ಪಡೆದು ಹೊರ ಬಂದಿದ್ದರು.

Whats_app_banner