Chanakya Niti: ಇತರರ ಮುಂದೆ ಈ ವಿಚಾರಗಳನ್ನು ಎಂದಿಗೂ ಮಾತನಾಡದಿರಿ, ಇದರಿಂದ ಭವಿಷ್ಯದಲ್ಲಿ ತೊಂದರೆ ಖಚಿತ; ಚಾಣಕ್ಯರ ಸಲಹೆ
ಆಚಾರ್ಯ ಚಾಣಕ್ಯರು ಜೀವನಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಹೇಳಿದ್ದಾರೆ. ಅವರ ತತ್ವಗಳನ್ನು ಅಳವಡಿಸಿಕೊಂಡರೆ ಬದುಕಿನಲ್ಲಿ ಎಂದಿಗೂ ಸೋಲಾಗಲು ಸಾಧ್ಯವಿಲ್ಲ. ಚಾಣಕ್ಯರು ತಿಳಿಸಿದ ಮಾರ್ಗದಲ್ಲಿ ನಡೆದರೆ ಯಶಸ್ಸು ಖಂಡಿತ ನಮ್ಮದಾಗುತ್ತದೆ. ಚಾಣಕ್ಯರ ನೀತಿಗಳು ಬದುಕಿಗೆ ಮಾರ್ಗದರ್ಶಿಯಾಗುವುದು ಸುಳ್ಳಲ್ಲ.
ಆಚಾರ್ಯ ಚಾಣಕ್ಯರು ಮಹಾನ್ ಅರ್ಥಶಾಸ್ತ್ರಜ್ಞ, ತಂತ್ರಜ್ಞ ಮತ್ತು ತತ್ವಜ್ಞಾನಿ. ಅವರನ್ನು ಲೋಕಜ್ಞಾನಿ ಎಂದರೂ ತಪ್ಪಾಗಲಿಕ್ಕಿಲ್ಲ. ಇವರು ಬದುಕಿನ ಕುರಿತ ಹಲವು ವಿಚಾರಗಳನ್ನು ಅರಿತವರಾಗಿದ್ದರು. ಚಾಣಕ್ಯರು ಬದುಕಿನ ಕುರಿತ ಸಮಗ್ರ ವಿಚಾರವನ್ನು ನೀತಿಶಾಸ್ತ್ರ ಎಂಬ ಪುಸ್ತಕದಲ್ಲಿ ಬರೆದಿದ್ದರು. ಇದನ್ನು ‘ಚಾಣಕ್ಯ ನೀತಿ‘ ಎಂದು ಕರೆಯಲಾಗುತ್ತದೆ. ಚಾಣಕ್ಯರ ನೀತಿಶಾಸ್ತ್ರದಲ್ಲಿನ ತತ್ವಗಳು ಜನರ ಜೀವನವನ್ನು ಸುಧಾರಿಸುವ ಕೆಲಸ ಮಾಡುತ್ತವೆ. ಚಾಣಕ್ಯರು ತೋರಿಸಿದ ಮಾರ್ಗವನ್ನು ಅನುಸರಿಸುವುದರಿಂದ ಯಾವುದೇ ವ್ಯಕ್ತಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ.
ಚಾಣಕ್ಯರ ಪ್ರಕಾರ ಈ ಕೆಲವು ವಿಷಯಗಳನ್ನು ನಾವು ಎಂದಿಗೂ ಬೇರೆಯವರೊಂದಿಗೆ ಹಂಚಿಕೊಳ್ಳಬಾರದು. ಈ ರೀತಿಯ ವಿಚಾರಗಳನ್ನು ಹಂಚಿಕೊಂಡರೆ ನಮಗೆ ಭವಿಷ್ಯದಲ್ಲಿ ತೊಂದರೆ ಖಚಿತ. ಇದು ನಮಗೆ ಚಿಕ್ಕ ಸಮಸ್ಯೆ ಎನ್ನಿಸಿದರೂ ಈ ಸಮಸ್ಯೆಗಳಿಂದ ಭವಿಷ್ಯಕ್ಕೆ ಅಪಾಯ ಖಚಿತ. ಹಾಗಾದರೆ ಚಾಣಕ್ಯರು ಯಾವ ವಿಚಾರವನ್ನು ಹಂಚಿಕೊಳ್ಳಬಾರದು ಎಂದು ಹೇಳಿದ್ದಾರೆ ನೋಡಿ.
ಬೇರೆಯವರು ಹೇಳಿದ ರಹಸ್ಯ
ಯಾರಾದರೂ ನಿಮ್ಮನ್ನು ನಂಬಿ ನಿಮಗೆ ಏನಾದರೂ ರಹಸ್ಯವನ್ನು ಹೇಳಿದ್ದರೆ, ಅದನ್ನು ನೀವು ಬೇರೆಯವರಿಗೆ ಹೇಳಬಾರದು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಹೀಗೆ ಮಾಡುವುದರಿಂದ ವ್ಯಕ್ತಿಯು ನಿಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾನೆ. ಭವಿಷ್ಯದಲ್ಲಿ ನಾನು ನಿಮ್ಮೊಂದಿಗೆ ಏನನ್ನೂ ಹಂಚಿಕೊಳ್ಳುವುದಿಲ್ಲ. ಅಲ್ಲದೇ ಈ ರೀತಿ ಮಾಡಿರುವುದು ಬೇರೆಯವರಿಗೆ ತಿಳಿದರೆ ಅವರು ನಿಮ್ಮೊಂದಿಗೆ ವಿಚಾರಗಳನ್ನು ಹೇಳಿಕೊಳ್ಳಲು ಹಿಂಜರಿಯುತ್ತಾರೆ.
ಭವಿಷ್ಯದ ಯೋಜನೆಗಳು
ಚಾಣಕ್ಯ ನೀತಿಯ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಭವಿಷ್ಯದ ಯೋಜನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು. ಯೋಜನೆಯನ್ನು ನಿಮ್ಮ ಕುಟುಂಬ ಮತ್ತು ನಿಕಟ ಜನರೊಂದಿಗೆ ಮಾತ್ರ ಹಂಚಿಕೊಳ್ಳಬೇಕು. ನಿಮ್ಮ ಭವಿಷ್ಯದ ಯೋಜನೆಗಳನ್ನು ತಿಳಿದವರು ನಿಮ್ಮ ದಾರಿ ತಪ್ಪಿಸಬಹುದು. ಅಲ್ಲದೇ ನಿಮ್ಮ ಯೋಜನೆಯನ್ನು ಹಾಳು ಮಾಡಬಹುದು.
ನಿಮ್ಮ ದೌರ್ಬಲ್ಯವನ್ನು ಯಾರಿಗೂ ಹೇಳದಿರಿ
ಮನುಷ್ಯ ತನ್ನ ದೌರ್ಬಲ್ಯಗಳನ್ನು ಬೇರೆಯವರಿಗೆ ಹೇಳಬಾರದು ಎಂದು ಚಾಣಕ್ಯ ಹೇಳುತ್ತಾರೆ. ನೀವು ಈ ರೀತಿ ವರ್ತಿಸಿದರೆ ಅದು ನಿಮಗೆ ಅಪಾಯಕಾರಿಯಾಗಬಹುದು. ಭವಿಷ್ಯದಲ್ಲಿ ಜನರು ನಿಮ್ಮ ದೌರ್ಬಲ್ಯದ ಲಾಭವನ್ನು ಪಡೆಯಬಹುದು. ನಿಮ್ಮ ದೌರ್ಬಲ್ಯವನ್ನು ಎಂದಿಗೂ ನಿಮ್ಮಲ್ಲಿಯೇ ಮುಚ್ಚಿಟ್ಟುಕೊಳ್ಳಿ.
ಆರ್ಥಿಕ ಸ್ಥಿತಿಯ ಬಗ್ಗೆ ಯಾರಿಂದಿಗೂ ಹಂಚಿಕೊಳ್ಳದಿರಿ
ಚಾಣಕ್ಯರ ಪ್ರಕಾರ ನಾವು ನಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬಾರದು. ನಮ್ಮಲ್ಲಿ ಹಣ ಇರಲಿ, ಹಣ ಇಲ್ಲದೇ ಇರಲಿ ನಮ್ಮ ಹಣಕಾಸಿನ ವಿಚಾರವನ್ನು ಬೇರೆಯವರೊಂದಿಗೆ ಹಂಚಿಕೊಳ್ಳವುದು ಭವಿಷ್ಯಕ್ಕೆ ಅಪಾಯಕಾರಿ. ಇದರಿಂದ ಜನರು ನಿಮ್ಮನ್ನು ಬಳಸಿಕೊಳ್ಳಬಹುದು.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)
ವಿಭಾಗ