OTT Releases This Week: ಒಟಿಟಿಯಲ್ಲಿ ಈ ವಾರ 32 ಸಿನಿಮಾಗಳು, ಡಾಲಿ ಧನಂಜಯ್ ನಟನೆಯ ಈ ಚಿತ್ರವೂ ವೀಕ್ಷಣೆಗೆ ಲಭ್ಯ
OTT Movies Releasing This Week: ಒಟಿಟಿಯಲ್ಲಿ ಈ ವಾರ ಹತ್ತಾರು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಸ್ಟ್ರೀಮಿಂಗ್ ಆರಂಭಿಸಲಿವೆ. ಆ ಪೈಕಿ ಡಾಲಿ ಧನಂಜಯ್ ಮತ್ತು ಸತ್ಯದೇವ್ ನಟನೆಯ ಜಿಬ್ರಾ ಸಿನಿಮಾ ಸಹ ಒಟಿಟಿಗೆ ಆಗಮಿಸುತ್ತಿದೆ. ಇಲ್ಲಿದೆ 32 ಸಿನಿಮಾಗಳ ಸಂಪೂರ್ಣ ಪಟ್ಟಿ.
OTT Movies Releasing This Week: ಒಟಿಟಿಯಲ್ಲಿ ಈ ವಾರ ಒಂದಲ್ಲ ಎರಡಲ್ಲ ಬರೋಬ್ಬರಿ 32 ಸಿನಿಮಾಗಳು ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಲಿವೆ. ಡಾಲಿ ಧನಂಜಯ್, ಸತ್ಯದೇವ ನಟನೆಯ ಕ್ರೈಂ ಥ್ರಿಲ್ಲರ್ ಜಿಬ್ರಾ ಸಿನಿಮಾದಿಂದ ಹಿಡಿದು, ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳ ಜತೆಗೆ ಇನ್ನೂ ಹತ್ತು ಹಲವು ವಿಶೇಷ ಕಂಟೆಂಟ್‌ನ ಸಿನಿಮಾ, ವೆಬ್‌ಸಿರೀಸ್‌ಗಳ ಆಗಮನವಾಗುತ್ತಿದೆ. ಹಾಗಾದರೆ ಈ ವಾರ ಯಾವ ಒಟಿಟಿಯಲ್ಲಿ ಯಾವೆಲ್ಲ ಸಿನಿಮಾ ವೀಕ್ಷಣೆ ಮಾಡಬಹುದು ಎಂಬ ವಿವರ ಇಲ್ಲಿದೆ.
ನೆಟ್‌ಫ್ಲಿಕ್ಸ್ ಒಟಿಟಿ
- ರೋನಿ ಚಿಂಗ್ (ಇಂಗ್ಲಿಷ್ ಸಿನಿಮಾ)- ಡಿಸೆಂಬರ್ 17
- ಆರನ್ ರಾಡ್ಜರ್ಸ್: ಎನಿಗ್ಮಾ (ಇಂಗ್ಲಿಷ್ ವೆಬ್ ಸರಣಿ) - ಡಿಸೆಂಬರ್ 17
- ಜೂಲಿಯಾ ಸ್ಟೆಪ್ಪಿಂಗ್ ಸ್ಟೋನ್ಸ್ (ಇಂಗ್ಲಿಷ್ ಸಿನಿಮಾ) - ಡಿಸೆಂಬರ್
- ಮನ ಮ್ಯಾನ್ (ಥಾಯ್ ಸಿನಿಮಾ) - ಡಿಸೆಂಬರ್ 18
- ದಿಲಾನ್ 1983 (ಇಂಡೋನೇಷ್ಯಾ ಸಿನಿಮಾ)- ಡಿಸೆಂಬರ್ 19
- ದಿ ಡ್ರ್ಯಾಗನ್ ಪ್ರಿನ್ಸ್ (ಇಂಗ್ಲಿಷ್ ವೆಬ್ ಸರಣಿ)- ಡಿಸೆಂಬರ್ 19
- ವರ್ಜಿನ್ ರಿವರ್- ಸೀಸನ್ 6 (ಇಂಗ್ಲಿಷ್ ವೆಬ್ ಸರಣಿ)- ಡಿಸೆಂಬರ್ 19
- ಫೆರ್ರಿ 2 (ಡಚ್ ಸಿನಿಮಾ)- ಡಿಸೆಂಬರ್ 20
- ದಿ ಸಿಕ್ಸ್ ಟ್ರಿಪಲ್ ಎಯ್ಟ್ (ಇಂಗ್ಲಿಷ್ ಚಿತ್ರ)- ಡಿಸೆಂಬರ್ 20
- ಉಂಜುಲೋ (ಇಂಗ್ಲಿಷ್ ಸಿನಿಮಾ)- ಡಿಸೆಂಬರ್ 20
- ಯುನಿವರ್ಸೊ ಡುಬೀಜ್ (ಇಂಗ್ಲಿಷ್ ವೆಬ್ ಸರಣಿ)- ಡಿಸೆಂಬರ್ 20
- ಫೇಮಸ್ (ಹಿಂದಿ ಚಿತ್ರ)- ಡಿಸೆಂಬರ್ 20
- ಸ್ಪೈ ಎಕ್ಸ್ ಫ್ಯಾಮಿಲಿ ಕೋಡ್ ವೈಟ್ (ಅನಿಮೇಷನ್ ಮೂವಿ)- ಡಿಸೆಂಬರ್ 21
- ದಿ ಫೋರ್ಜ್ (ಇಂಗ್ಲಿಷ್ ಚಿತ್ರ)- ಡಿಸೆಂಬರ್ 22
ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಒಟಿಟಿಗೆ ಬರಲಿದೆ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಮುರಾ'; ಮನೆಯಲ್ಲೇ ಕುಳಿತು ನೋಡಿ
ಜಿಯೋ ಸಿನೆಮಾ ಒಟಿಟಿ
- ಟ್ವಿಸ್ಟರ್ಸ್ (ಇಂಗ್ಲಿಷ್ ಚಿತ್ರ)- ಡಿಸೆಂಬರ್
- 18 ಲಾಯ್ಡ್ (ಇಂಗ್ಲಿಷ್ ವೆಬ್ ಸರಣಿ)- ಡಿಸೆಂಬರ್ 19
- ಮೂನ್ ವಾಕ್ (ಹಿಂದಿ ವೆಬ್ ಸರಣಿ)- ಡಿಸೆಂಬರ್ 20
- ಪಿಯಾ ಪರ್ದೇಶಿಯಾ (ಮರಾಠಿ ಚಿತ್ರ)- ಡಿಸೆಂಬರ್
20
ಅಮೆಜಾನ್ ಪ್ರೈಮ್ ಒಟಿಟಿ
- ಗರ್ಲ್ಸ್ ವಿಲ್ ಬಿ ಗರ್ಲ್ಸ್ (ಹಿಂದಿ ರೊಮ್ಯಾಂಟಿಕ್ ಡ್ರಾಮಾ ಫಿಲ್ಮ್)- ಡಿಸೆಂಬರ್ 18
- ಬೀಸ್ಟ್ ಗೇಮ್ಸ್ (ಇಂಗ್ಲಿಷ್ ವೆಬ್ ಸರಣಿ)- ಡಿಸೆಂಬರ್ 19
ಇದನ್ನೂ ಓದಿ: ಭಾರತದಲ್ಲಿ ಇಂದಿನ ಟಾಪ್ 10 ಒಟಿಟಿ ಸಿನಿಮಾಗಳು ಯಾವುವು? ಪ್ರೈಮ್ ವಿಡಿಯೋದಲ್ಲಿ 9ನೇ ಸ್ಥಾನಕ್ಕೆ ಸರಿದ ರಜನಿಕಾಂತ್ ಚಿತ್ರ
ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಒಟಿಟಿ
- ಒ ಕಮಾನ್ ಆಲ್ ಯೆ ಫೇತ್‌ಫುಲ್ (ಇಂಗ್ಲಿಷ್ ಸಿನಿಮಾ)- ಡಿಸೆಂಬರ್ 17
- ವಾಟ್ ಇಫ್ ಸೀಸನ್ 3 (ಮಾರ್ವೆಲ್ ಇಂಗ್ಲಿಷ್ ವೆಬ್ ಸರಣಿ) - ಡಿಸೆಂಬರ್ 22
ಪಲೋಟಿಸ್ 90s ಕಿಡ್ಸ್ (ಮಲಯಾಳಂ ಚಿತ್ರ) - ಮನೋರಮಾ- ಡಿಸೆಂಬರ್ 20
ಸೆಂಟಿಮೆಂಟಲ್ (ಬಂಗಾಳಿ ಚಿತ್ರ) - ಬುಕ್ ಮೈ ಶೋ - ಡಿಸೆಂಬರ್ 20
ಕ್ಯೂಬಿಕಲ್ಸ್ ಸೀಸನ್ 4 (ಹಿಂದಿ ವೆಬ್ ಸರಣಿ) - ಸೋನಿ ಲಿವ್ ಒಟಿಟಿ - ಡಿಸೆಂಬರ್ 20
ಲೀಲಾ ವಿನೋದಂ (ತೆಲುಗು ರೊಮ್ಯಾಂಟಿಕ್ ಕಾಮಿಡಿ ಮೂವಿ)- ಡಿಸೆಂಬರ್ 19 - ಈಟಿವಿ ವಿನ್
ಜೀಬ್ರಾ (ತೆಲುಗು ಕ್ರೈಮ್ ಥ್ರಿಲ್ಲರ್ ಮೂವಿ)- ಡಿಸೆಂಬರ್ 20 - ಆಹಾ ಒಟಿಟಿ
32 ಸಿನಿಮಾ, ವೆಬ್‌ಸಿರೀಸ್‌ಗಳು
ಈ ವಾರ ಸಿನಿಮಾ ಮತ್ತು ವೆಬ್ ಸರಣಿಗಳು ಸೇರಿದಂತೆ ಒಟ್ಟು 32 ಕಂಟೆಂಟ್‌ಗಳು ಒಟಿಟಿಯಲ್ಲಿ ಬಿಡುಗಡೆ ಆಗಲಿವೆ. ಈ ಪೈಕಿ ಕನ್ನಡದಲ್ಲಿ ಧನಂಜಯ್ ಮತ್ತು ಸತ್ಯದೇವ್ ನಟನೆಯ ಜೀಬ್ರಾ (ಕನ್ನಡ ಡಬ್ಬಿಂಗ್) ಮತ್ತು ತೆಲುಗಿನ ಲೀಲಾ ವಿನೋದಮ್ ಸಿನಿಮಾಗಳು ಕುತೂಹಲ ಮೂಡಿಸಿವೆ.