Seetha Rama Serial: ನಿಜಬಣ್ಣ ಬಯಲಾಗೋ ಮುನ್ನವೇ, ಸೀತಾಳನ್ನು ಹುಚ್ಚಾಸ್ಪತ್ರೆಗೆ ಸೇರಿಸುವ ಭಾರ್ಗವಿ ಪ್ಲಾನ್ ಠುಸ್!
Seetha Rama Serial December 18th Episode: ಸೀತಾ ರಾಮ ಧಾರಾವಾಹಿಯಲ್ಲಿ ಸೀತಾಳನ್ನು ಹುಚ್ಚಾಸ್ಪತ್ರೆಗೆ ಸೇರಿಸೋ ಪ್ಲಾನ್ ಮಾಡಿದ್ದಾಳೆ ಭಾರ್ಗವಿ. ಆದರೆ, ಆ ಪ್ಲಾನ್ ಠುಸ್ ಆಗಿದೆ. ಸೀತಾಳನ್ನು ಗೊತ್ತಿರೋ ಸೈಕಿಯಾಟ್ರಿಸ್ಟ್ ಬಳಿ ಕರೆದೊಯ್ದಿದ್ದಾನೆ ರಾಮ್.
Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಅನಿರೀಕ್ಷಿತ ತಿರುವಿನಲ್ಲಿ ಸೀತಾ ಮಾನಸಿಕವಾಗಿ ಕುಗ್ಗಿ ಹೋಗಿದ್ದಾಳೆ. ಸಿಹಿ ಇಲ್ಲದ ಮೇಲೆ ಹುಚ್ಚಿ ರೀತಿಯಲ್ಲಿ ವರ್ತಿಸುತ್ತಿದ್ದಾಳೆ ಸೀತಾ. ಸಿಹಿ ಬದುಕಿಲ್ಲ ಅನ್ನೋ ಕಹಿ ಸತ್ಯ ತಿಳಿಯದ ಸೀತಾ, ಗೊಂಬೆಯೊಂದನ್ನು ತನ್ನ ಸಿಹಿಯೆಂದು ಭಾವಿಸಿದ್ದಾಳೆ. ಇತ್ತ ರಾಮ ಸೀತಾಳ ಸ್ಥಿತಿ ಕಂಡು ಒಳಗೊಳಗೆ ನರಳುತ್ತಿದ್ದಾನೆ. ಇನ್ನೊಂದು ಕಡೆ, ಭಾರ್ಗವಿ ತನ್ನ ಆಟ ಮುಂದುವರಿಸಿದ್ದಾಳೆ. ಇತ್ತ ಸಿಹಿ ಬದುಕಿಲ್ಲದ ಸೀರಿಯಲ್ ನೋಡಲು ವೀಕ್ಷಕರಿಗೂ ಅದೇ ಬೇಸರ ಕಾಡುತ್ತಿದೆ.
ಅಪಘಾತದಲ್ಲಿ ಸಿಹಿ ಸಾವನ್ನಪ್ಪಿದ್ದಾಳೆ. ಆ ಕ್ಷಣವೇ ಆಕೆಯ ಆತ್ಮ ಸೀತಾಳನ್ನೇ ಹಿಂಬಾಲಿಸುತ್ತಿದೆ. ಹೋದಲ್ಲಿ ಬಂದಲ್ಲಿ ಸೀತಮ್ಮ ನಾನಿಲ್ಲೇ ಇದ್ದೇನೆ ಎನ್ನುತ್ತಿದೆ ಸಿಹಿ ಆತ್ಮ. ಆದರೆ, ಅಪಘಾತವಾದ ಬೆನ್ನಲ್ಲೇ ಸೀತಾಳಿಗೆ ಬುದ್ಧಿಬ್ರಮಣೆಯಾಗಿದೆ. ಸಿಹಿ ಇಲ್ಲದ ನೋವು ಆಕೆಗೆ ಗೊತ್ತಿಲ್ಲದೇ ಹೋದರೂ, ಗೊಂಬೆಗೆ ಮಗಳ ಪ್ರೀತಿ ತೋರಿಸುತ್ತಿದ್ದಾಳೆ. ಈ ನಡುವೆಯೇ ಆಕೆಯ ವರ್ತನೆಗೆ ಭಾರ್ಗವಿ ಹೊರತುಪಡಿಸಿ ದೇಸಾಯಿ ಮನೆ ಮಂದಿಯೂ ಕಳವಳದಲ್ಲಿದ್ದಾರೆ. ರಾಮ ಶತಾಯಗತಾಯ ಸೀತಾ ಮೊದಲಿನಂತಾಗಬೇಕೆಂದು ಹೋರಾಡುತ್ತಿದ್ದಾನೆ.
ಹುಚ್ಚಾಸ್ಪತ್ರೆ ಸೇರ್ತಾಳಾ ಸೀತಾ
ಮಾವಯ್ಯ ಸೂರ್ಯ ಪ್ರಕಾಶನ ಮುಂದೆ ಬಂದ ಭಾರ್ಗವಿ, ಸೀತಾಳ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಹೀಗೆ ಆದರೆ ಮುಂದೆ ಏನು ಗತಿ ಎಂದು ಹೇಳಿದ್ದಾಳೆ. ಭಾರ್ಗವಿ ಮಾತಿಗೆ ಉತ್ತರಿಸಿದ ಮಾವಯ್ಯ, ಅವಳು ತನ್ನದೇ ಆದ ಕಲ್ಪನಾ ಲೋಕದಲ್ಲಿ ಇದ್ದಾಳೆ. ಅದರಲ್ಲಿಯೇ ಖುಷಿ ಕಾಣುತ್ತಿದ್ದಾಳೆ. ಅದರಿಂದ ನಮಗೇನು ಸಮಸ್ಯೆ ಇಲ್ಲ ಎಂದಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಭಾರ್ಗವಿ, ಮೆಂಟಲ್ ಆಸ್ಪತ್ರೆಗೆ ಸೀತಾಳನ್ನು ಅಡ್ಮಿಟ್ ಮಾಡೋಣ್ವಾ ಎಂದಿದ್ದಾಳೆ. ಮಧ್ಯಪ್ರವೇಶಿಸಿದ ರಾಮ್, ಆಕೆ ಎಲ್ಲೂ ಹೋಗುವುದು ಬೇಡ. ಒಳ್ಳೆಯ ಸೈಕಿಯಾಟ್ರಿಸ್ಟ್ ಸಿಕ್ಕಿದ್ದಾರೆ. ಅಲ್ಲಿಯೇ ಅವಳನ್ನು ಮೊದಲಿಮ ರೀತಿ ಮಾಡ್ತಿನಿ ಎಂದಿದ್ದಾನೆ. ಅಲ್ಲಿಗೆ ಭಾರ್ಗವಿ ಪ್ಲಾನ್ ಉಲ್ಟಾ ಹೊಡೆದಿದೆ.
ಭಾರ್ಗವಿ ಪ್ಲಾನ್ ಏನು?
ಸಿಹಿ ಇಲ್ಲ ಅನ್ನೋ ಸತ್ಯ ಸೀತಾಗೆ ಗೊತ್ತಿಲ್ಲ. ಆಕೆ ಇದೀಗ ನೆನಪಿನ ಶಕ್ತಿ ಕಳೆದುಕೊಂಡಿದ್ದಾಳೆ. ಹೇಗಾದ್ರೂ ಮಾಡಿ, ಸೀತಾಳನ್ನು ತನಗೆ ಗೊತ್ತಿರೋ ಆಸ್ಪತ್ರೆಗೆ ಅಡ್ಮಿಟ್ ಮಾಡಿಸಿದ್ರೆ, ಅಲ್ಲಿ ಸೀತಾಳ ಆರೋಗ್ಯವನ್ನು ಮತ್ತಷ್ಟು ಹಾಳು ಮಾಡೋ ಪ್ಲಾನ್ ಭಾರ್ಗವಿಯದ್ದು. ಇತ್ತ ಸಿಹಿ ಸಾವಿಗೂ ಮುನ್ನ ಸೀತಾಳ ಬಳಿ ವಾಣಿ ಅಜ್ಜಿಯನ್ನು ಕೊಂದಿದ್ದೇ ಭಾರ್ಗವಿ ಎಂದು ಹೇಳಿದ್ದಳು. ಇದು ಸೀತಾಗೂ ಶಾಕ್ ನೀಡಿತ್ತು. ಒಂದು ವೇಳೆ ಸೀತಾಗೆ ಹಿಂದಿನ ನೆನಪಿನ ಶಕ್ತಿ ಮರಳಿದರೆ, ಸೀತಾ ರಾಮ ಸೀರಿಯಲ್‌ನ ಓಟ ಮತ್ತಷ್ಟು ಚುರುಕಾಗಲಿದೆ.
ವೀಕ್ಷಕ ವಲಯದಲ್ಲಿ ಬೇಸರ
ಸೀತಾ ರಾಮ ಸೀರಿಯಲ್ ಲಯ ತಪ್ಪುತ್ತಿದೆ ಎಂಬ ಬೇಸರ ವೀಕ್ಷಕ ವಲಯದಲ್ಲಿದೆ. ಈ ಸೀರಿಯಲ್‌ನ ಪ್ರೋಮೋ, ಪೋಸ್ಟ್‌ಗಳಿಗೆ ವೀಕ್ಷಕರು ಬೇಸರದಲ್ಲಿಯೇ ಕಾಮೆಂಟ್ ಹಾಕುತ್ತಿದ್ದಾರೆ. ಸಿಹಿಯನ್ನ ಕಳೆದುಕೊಂಡ ಕಹಿ ಸತ್ಯ ಸೀತಾಗೆ ನೆನಪಾದ್ರೆ, ಭಾರ್ಗವಿ ಕಥೆ ಏನು ಎಂಬ ಹೊಸ ಪೋಸ್ಟ್ ಶೇರ್ ಮಾಡಿದೆ ಜೀ ಕನ್ನಡ. ಈ ಪೋಸ್ಟ್‌ಗೆ ಬಗೆಬಗೆ ಕಾಮೆಂಟ್ ಸಂದಾಯವಾಗಿವೆ. "ಇನ್ಮೇಲೆ ಈ ಸೀರಿಯಲ್ ನೋಡಲ್ಲ ಎಂದು ಕೆಲವರು ಹೇಳಿದರೆ, ಭಾರ್ಗವಿನ ಮೆರೆಸಬೇಕು ಅಂತ ನೀವು ನಿರ್ಧಾರ ಮಾಡಿದಿರಾ.. ಇನ್ನು ಹೀರೋ ಹೀರೋಯಿನ್‌ಗೆ ಬೆಲೆ ಎಲ್ಲಿದೆ?, ಪಾಪಿ ಚಿರಾಯು ಏನು ಆಗಲ್ಲ ಎನ್ನುತ್ತಿದ್ದಾರೆ.
ಸೀತಾ ರಾಮ ಧಾರಾವಾಹಿ ಪಾತ್ರವರ್ಗ
ನಿರ್ದೇಶಕ: ಮಧುಸೂಧನ್
ಗಗನ್ ಚಿನ್ನಪ್ಪ: ಶ್ರೀರಾಮ (ನಾಯಕ)
ವೈಷ್ಣವಿ ಗೌಡ: ಸೀತಾ (ನಾಯಕ)
ರೀತು ಸಿಂಗ್: ಸಿಹಿ (ಸೀತಾ ಮಗಳು)
ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)
ಭಾರ್ಗವಿ: ಪೂಜಾ ಲೋಕೇಶ್ (ಶ್ರೀರಾಮನ ಚಿಕ್ಕಮ್ಮ)
ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್ ದೇಸಾಯಿ (ಶ್ರೀರಾಮನ ತಾತ)
ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)
ವಿಕಾಸ್ ಕಾರ್‌ಗೋಡ್: ಲಾಯರ್ ರುದ್ರಪ್ರತಾಪ್
ಸತೀಶ್ ಚಂದ್ರ: ಚರಣ್. ಡಿ
ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್ (ಶ್ರೀರಾಮನ ಚಿಕ್ಕಪ್ಪ)
ಜಯದೇವ್ ಮೋಹನ್: ಸತ್ಯಜೀತ್ (ಶ್ರೀರಾಮನ ಚಿಕ್ಕಪ್ಪ)