Bombay jayashree: ವಿದೇಶದಲ್ಲಿ ಗಾಯಕಿ ಬಾಂಬೆ ಜಯಶ್ರೀಗೆ ಬ್ರೈನ್‌ ಹ್ಯಾಮರೇಜ್‌; ಸದ್ಯ ಆರೋಗ್ಯ ಸ್ಥಿತಿ ಸ್ಥಿರ
ಕನ್ನಡ ಸುದ್ದಿ  /  ಮನರಂಜನೆ  /  Bombay Jayashree: ವಿದೇಶದಲ್ಲಿ ಗಾಯಕಿ ಬಾಂಬೆ ಜಯಶ್ರೀಗೆ ಬ್ರೈನ್‌ ಹ್ಯಾಮರೇಜ್‌; ಸದ್ಯ ಆರೋಗ್ಯ ಸ್ಥಿತಿ ಸ್ಥಿರ

Bombay jayashree: ವಿದೇಶದಲ್ಲಿ ಗಾಯಕಿ ಬಾಂಬೆ ಜಯಶ್ರೀಗೆ ಬ್ರೈನ್‌ ಹ್ಯಾಮರೇಜ್‌; ಸದ್ಯ ಆರೋಗ್ಯ ಸ್ಥಿತಿ ಸ್ಥಿರ

Bombay Jayashree: ಸಂಗೀತ ಕಾರ್ಯಕ್ರಮಕ್ಕಾಗಿ ವಿದೇಶ ಪ್ರವಾಸದಲ್ಲಿದ್ದ ಗಾಯಕಿ ಬಾಂಬೆ ಜಯಶ್ರೀ ಹೋಟೆಲ್‌ನಲ್ಲಿ ಪ್ರಜ್ಞಾಹೀನಸ್ಥಿತಿಯಲ್ಲಿ ಪತ್ತೆಯಾಗಿದ್ದರು, ಅವರಿಗೆ ಬ್ರೈನ್‌ ಹ್ಯಾಮರೇಜ್‌ ಆಗಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನುತ್ತಿವೆ ಮೂಲಗಳು.

ಬಾಂಬೆ ಜಯಶ್ರೀ
ಬಾಂಬೆ ಜಯಶ್ರೀ

ಪದ್ಮಶ್ರೀ ಪುರಸ್ಕೃತ ಗಾಯಕಿ ಬಾಂಬೆ ಜಯಶ್ರೀ ಇಂದು (ಮಾರ್ಚ್‌ 24) ಹೋಟೆಲ್‌ವೊಂದರಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಬ್ರಿಟನ್‌ ಪ್ರವಾಸದಲ್ಲಿದ್ದ ಜಯಶ್ರೀ ಅಲ್ಲಿನ ಹೋಟೆಲ್‌ ಒಂದರಲ್ಲಿ ತಂಗಿದ್ದರು. ಈ ವೇಳೆ ಹೋಟೆಲ್‌ ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದಿದ್ದು ಇವರನ್ನು ತಕ್ಷಣಕ್ಕೆ ಆಸ್ಪತ್ರೆ ಸಾಗಿಸಲಾಗಿತ್ತು, ಇವರಿಗೆ ಬ್ರೈನ್‌ ಹ್ಯಾಮರೇಜ್‌ (ಮೆದುಳಿನ ರಕ್ತಸ್ರಾವ) ಆಗಿತ್ತು.

ಮೂಲಗಳ ಪ್ರಕಾರ ತಕ್ಷಣಕ್ಕೆ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗಿದೆ ಎನ್ನಲಾಗಿದೆ. ಸದ್ಯ ಅವರು ಅಪಾಯದ ಸ್ಥಿತಿ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ.

ಜಯಶ್ರೀ ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಅವರ ಆರೋಗ್ಯದ ಕುರಿತು ಸ್ಟೋರಿ ಪೋಸ್ಟ್‌ ಮಾಡಲಾಗಿದೆ.

ʼಯುಕೆಯಲ್ಲಿ ಬಾಂಬೆ ಜಯಶ್ರೀ ಅವರಿಗೆ ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು. ಅವರು ತಮ್ಮ ಸಂಗೀತ ಕಚೇರಿಗಾಗಿ ವಿದೇಶ ಪ್ರವಾಸದಲ್ಲಿದ್ದರು. ಈ ವೇಳೆ ಹೋಟೆಲ್‌ನಲ್ಲಿ ಅವರು ಪ್ರಜ್ಞೆ ತಪ್ಪಿ ಬಿದಿದ್ದರು. ತತ್‌ಕಾಲಕ್ಕೆ ದೊರೆತ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಎನ್‌ಎಚ್‌ಎಸ್‌ನ ಎಲ್ಲಾ ಸಿಬ್ಬಂದಿ ಹಾಗೂ ಅವರ ಜೊತೆಗಿದ್ದ ಎಲ್ಲಾ ಕಲಾವಿದರಿಗೂ ಧನ್ಯವಾದʼ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ʼಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಇನ್ನೂ ಕೆಲವು ದಿನ ಅವರಿಗೆ ವಿಶ್ರಾಂತಿ ಬೇಕುʼ ಎಂದಿದೆ.

ಅವರ ಆಪ್ತಮೂಲಗಳ ಪ್ರಕಾರ ʼಜಯಶ್ರೀ ಅವರಿಗೆ ಕಳೆದ ರಾತ್ರಿ ಕುತ್ತಿಗೆಯ ಬಳಿ ನೋವಿತ್ತು, ಅಲ್ಲದೆ ಅವರು ತೀರಾ ಬಳಲಿದಂತಿದ್ದರು. ಅಲ್ಲದೆ ನೋವಿನ ಬಗ್ಗೆ ಹೇಳಿಕೊಂಡಿದ್ದರುʼ ಎನ್ನಲಾಗಿದೆ.

ಇಂದು ಬೆಳಿಗ್ಗೆ ಉಪಾಹಾರ ಸೇವನೆ ಹಾಗೂ ಮಧ್ಯಾಹ್ನದ ಊಟಕ್ಕೆ ಅವರು ಬಾರದೇ ಇದ್ದಾಗ ಕೋಣೆ ಹೋಗಿ ನೋಡಿದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದ್ಯೊಯಲಾಗಿತ್ತು. ಚಿಕಿತ್ಸೆಯ ಹಂತ ಪೂರ್ಣಗೊಂಡ ಬಳಿಕ ಅವರನ್ನು ಚೆನ್ನೈಗೆ ಕರೆತರಲಾಗುವುದು ಎಂಬ ಅಂಶವನ್ನೂ ಮೂಲಗಳು ತಿಳಿಸಿವೆ.

ಬಾಂಬೆ ಜಯಶ್ರೀ ತಮಿಳು, ಕನ್ನಡ, ತೆಲುಗು, ಮಲೆಯಾಳಂ, ಹಿಂದಿ ಹಾಡುಗಳಿಗೆ ದನಿಯಾಗಿದ್ದಾರೆ.

ಈ ಸಿನಿಮಾ ಸುದ್ದಿಗಳನ್ನೂ ಓದಿ

Chiru sarja: ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ ಚಿರಂಜೀವಿ ಸರ್ಜಾ ಕೊನೆಯ ಸಿನಿಮಾ; ಬಿಡುಗಡೆಯ ಹಂತದಲ್ಲಿ ʼರಾಜಮಾರ್ತಾಂಡʼ

ತಮ್ಮ ನಟನಾ ಕೌಶಲದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದ, ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಸರ್ಜಾ ಬಾಳುವ ಮೊದಲೇ ಬಾಡಿ ಹೋದವರು. 2009ರಲ್ಲಿ ʼವಾಯುಪುತ್ರʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಈ ನಟ 2020ರವರೆಗೆ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸುವ ಕನಸು ಕಂಡಿದ್ದ ಇವರ ಬಾಳು ಅರ್ಧಕ್ಕೆ ಅಂತ್ಯವಾಗಿತ್ತು, ಇವರು ನಟಿಸಬೇಕಿದ್ದ ಸಿನಿಮಾಗಳೂ ಕೂಡ.

Aaram Aravinda Swamy: 'ಆರಾಮ್ ಅರವಿಂದ್ ಸ್ವಾಮಿ’ ಮೆಚ್ಚಿದ ಅಶ್ವಿನಿ ಪುನೀತ್ ರಾಜ್‌ಕುಮಾರ್.. ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ನಟ ಅನೀಶ್ ತೇಜೇಶ್ವರ್, ನಿರ್ದೇಶಕ ಅಭಿಷೇಕ್ ಶೆಟ್ಟಿ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾ ‘ಆರಾಮ್ ಅರವಿಂದ್ ಸ್ವಾಮಿ’. ಇದೀಗ ಈ ರೊಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ.

Whats_app_banner