Dhanya Ramkumar: ನಿಮ್ಮ ಊರಿಗೆ ನೀವು ರಫ್‌ ಎಂಟ್ರಿ ಕೊಟ್ಟಿದ್ದೀರಿ... ಸಲ್ಮಾನ್ ಯೂಸುಫ್ ಖಾನ್‌ಗೆ ಧನ್ಯಾ ರಾಮ್‌ಕುಮಾರ್‌ ಕ್ಲಾಸ್‌
ಕನ್ನಡ ಸುದ್ದಿ  /  ಮನರಂಜನೆ  /  Dhanya Ramkumar: ನಿಮ್ಮ ಊರಿಗೆ ನೀವು ರಫ್‌ ಎಂಟ್ರಿ ಕೊಟ್ಟಿದ್ದೀರಿ... ಸಲ್ಮಾನ್ ಯೂಸುಫ್ ಖಾನ್‌ಗೆ ಧನ್ಯಾ ರಾಮ್‌ಕುಮಾರ್‌ ಕ್ಲಾಸ್‌

Dhanya Ramkumar: ನಿಮ್ಮ ಊರಿಗೆ ನೀವು ರಫ್‌ ಎಂಟ್ರಿ ಕೊಟ್ಟಿದ್ದೀರಿ... ಸಲ್ಮಾನ್ ಯೂಸುಫ್ ಖಾನ್‌ಗೆ ಧನ್ಯಾ ರಾಮ್‌ಕುಮಾರ್‌ ಕ್ಲಾಸ್‌

''ನನಗೆ ಕನ್ನಡ ಬರದಿದ್ದರೂ ಬಂದಷ್ಟು ಕನ್ನಡದಲ್ಲೇ ಅವರಿಗೆ ಉತ್ತರಿಸುತ್ತಿದ್ದೆ. ಆದರೆ ಅವರು ನನ್ನ ಪಾಸ್‌ಪೋರ್ಟ್‌ ನೋಡಿ, ನೀವು ಹುಟ್ಟಿ ಬೆಳೆದದ್ದು ಬೆಂಗಳೂರು. ಆದರೂ ಕನ್ನಡ ಬರುವುದಿಲ್ಲವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಸಲ್ಮಾನ್‌ ಯೂಸುಫ್‌ ಖಾನ್‌ ವಿಡಿಯೋಗೆ ಗರಂ ಆದ ಧನ್ಯಾ ರಾಮ್‌ಕುಮಾರ್
ಸಲ್ಮಾನ್‌ ಯೂಸುಫ್‌ ಖಾನ್‌ ವಿಡಿಯೋಗೆ ಗರಂ ಆದ ಧನ್ಯಾ ರಾಮ್‌ಕುಮಾರ್ ()

ಬಾಲಿವುಡ್‌ ಕೊರಿಯೋಗ್ರಾಫರ್‌, ಡ್ಯಾನ್ಸರ್‌ ಸಲ್ಮಾನ್ ಯೂಸುಫ್ ಖಾನ್ ಇತ್ತೀಚೆಗೆ ಹಂಚಿಕೊಂಡಿರುವ ವಿಡಿಯೋ ಕನ್ನಡಿಗರನ್ನು ಕೆರಳಿಸಿದೆ. ರಾಷ್ಟ್ರಭಾಷೆ ಹಿಂದಿ ಎಂಬ ಮಾತುಗಳು ಮತ್ತೆ ಕನ್ನಡಿಗರ ಕಣ್ಣು ಕೆಂಪಾಗಿಸಿವೆ. ಸ್ಯಾಂಡಲ್‌ವುಡ್‌ ನಟಿ ಧನ್ಯಾ ರಾಮ್‌ ಕುಮಾರ್‌ ಕೂಡಾ ಸಲ್ಮಾನ್ ಯೂಸುಫ್ ಖಾನ್ ವಿಡಿಯೋಗೆ ಕಮೆಂಟ್‌ ಮಾಡಿ, ಹಿಂದಿ ಖಂಡಿತ ರಾಷ್ಟ್ರಭಾಷೆ ಅಲ್ಲ ಎಂದು ಹೇಳುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

ಏನಿದು ಘಟನೆ?

ಇತ್ತೀಚೆಗೆ ಸಲ್ಮಾನ್ ಯೂಸುಫ್ ಖಾನ್, ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದಾರೆ. ಈ ಸಮಯದಲ್ಲಿ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಯೂಸುಫ್ ಖಾನ್ ಬಳಿ ಕನ್ನಡದಲ್ಲೇ ಮಾತನಾಡಿದ್ದಾರೆ. ಈ ವಿಚಾರವನ್ನು ಕೊರಿಯೋಗ್ರಾಫರ್‌ ಏರ್‌ಪೋರ್ಟ್‌ನಲ್ಲೇ ವಿಡಿಯೋ ಮಾಡಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.

''ನನಗೆ ಕನ್ನಡ ಬರದಿದ್ದರೂ ಬಂದಷ್ಟು ಕನ್ನಡದಲ್ಲೇ ಅವರಿಗೆ ಉತ್ತರಿಸುತ್ತಿದ್ದೆ. ಆದರೆ ಅವರು ನನ್ನ ಪಾಸ್‌ಪೋರ್ಟ್‌ ನೋಡಿ, ನೀವು ಹುಟ್ಟಿ ಬೆಳೆದದ್ದು ಬೆಂಗಳೂರು. ಆದರೂ ಕನ್ನಡ ಬರುವುದಿಲ್ಲವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಹುಟ್ಟಿ, ಬೆಳೆದ ಮಾತ್ರಕ್ಕೆ ಕನ್ನಡ ಮಾತನಾಡಬೇಕು ಎಂದೇನಿಲ್ಲ. ನಾನು ಬೇರೆ ಬೇರೆ ದೇಶಗಳಿಗೆ ಟ್ರಾವೆಲ್‌ ಮಾಡುತ್ತಿದ್ದೇನೆ. ನಾನು ಸೌದಿಯಲ್ಲೂ ಬೆಳೆದಿದ್ದೇನೆ. ರಾಷ್ಟ್ರಭಾಷೆ ಹಿಂದಿ. ಅಷ್ಟು ಮಾತನಾಡಿದರೆ ಸಾಕಲ್ಲವೇ. ಪ್ರಧಾನಿ ನರೇಂದ್ರ ಮೋದಿಗೆ ಕನ್ನಡ ಬರುತ್ತಾ? ಎಂದು ವಿಮಾನ ನಿಲ್ದಾಣದ ಅಧಿಕಾರಿ ಬಳಿ ಕೇಳಿದ್ದಾಗಿ'' ಯೂಸುಫ್‌ ಖಾನ್‌ ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಕನ್ನಡಿಗರು ಡ್ಯಾನ್ಸರ್‌ನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಬುದ್ಧಿ ಹೇಳಿ ಕಮೆಂಟ್‌ ಮಾಡುತ್ತಿದ್ದಾರೆ.

ಧನ್ಯಾ ರಾಮ್‌ಕುಮಾರ್‌ ಕಮೆಂಟ್
ಧನ್ಯಾ ರಾಮ್‌ಕುಮಾರ್‌ ಕಮೆಂಟ್

ಸ್ಯಾಂಡಲ್‌ವುಡ್‌ ನಟಿ ಧನ್ಯಾ ರಾಮ್‌ ಕುಮಾರ್‌ ಕೂಡಾ ಈ ವಿಡಿಯೋಗೆ ಕಮೆಂಟ್‌ ಮಾಡಿದ್ಧಾರೆ. ''ದಯವಿಟ್ಟು ಕ್ಷಮಿಸಿ, ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ. ನೀವು ಮಾತನಾಡುತ್ತಿರುವ ರೀತಿ ತಪ್ಪು . ಬೆಂಗಳೂರಿಗೆ ಯಾರೇ ಬಂದರು, ಕನ್ನಡ ಕಲಿಯಲು ಪ್ರಯತ್ನಿಸುತ್ತಾರೆ. ನಿಮ್ಮನ್ನು ಬೆಂಗಳೂರಿಗ ಎಂದು ಹೇಳಿಕೊಳ್ಳುವ ನೀವು, ಕನ್ನಡ ಕಲಿಯುವ ಪ್ರಯತ್ನ ಏಕೆ ಮಾಡುವುದಿಲ್ಲ. ನೀವು ನಿಮ್ಮದೇ ಸ್ವಂತ ನಗರಕ್ಕೆ ರಫ್‌ ಎಂಟ್ರಿ ಕೊಟ್ಟಿದ್ದೀರಿ'' ಎಂದು ಧನ್ಯಾ ಕಮೆಂಟ್‌ ಮಾಡಿದ್ದಾರೆ. ಧನ್ಯಾ ಜೊತೆಗೆ ಇತರ ನೆಟಿಜನ್ಸ್‌ ಕೂಡಾ ಸಲ್ಮಾನ್‌ ಯೂಸುಫ್‌ ಖಾನ್‌ ವಿರುದ್ಧ ಕಮೆಂಟ್‌ ಮಾಡಿ ''ಕನ್ನಡ ಬರಲ್ಲ ಅಂದ್ರೆ ಎಲ್ಲಿಂದ ಬಂದೆ ಅಲ್ಲಿಗೆ ಹೋಗು ಮತ್ತೆ ಕರ್ನಾಟಕಕ್ಕೆ ಬರಬೇಡ'' ಎಂದು ಕೋಪದಿಂದ ಕಮೆಂಟ್‌ ಮಾಡುತ್ತಿದ್ದಾರೆ.

Whats_app_banner