ನಾ ನಿನಗೆ ನೀ ನನಗೆ, ಬೇಡ ಬೇರೆ ಏನು; ಕನ್ನಡ ಸಾಂಗ್ ಲಿರಿಕ್ಸ್‌ ಹುಡುಕುತ್ತಿದ್ದರೆ ಇಲ್ಲಿದೆ ನೋಡಿ ಸಾಹಿತ್ಯ- ಮರ್ಯಾದೆ ಪ್ರಶ್ನೆ ಸಿನಿಮಾದ ಹಾಡು
ಕನ್ನಡ ಸುದ್ದಿ  /  ಮನರಂಜನೆ  /  ನಾ ನಿನಗೆ ನೀ ನನಗೆ, ಬೇಡ ಬೇರೆ ಏನು; ಕನ್ನಡ ಸಾಂಗ್ ಲಿರಿಕ್ಸ್‌ ಹುಡುಕುತ್ತಿದ್ದರೆ ಇಲ್ಲಿದೆ ನೋಡಿ ಸಾಹಿತ್ಯ- ಮರ್ಯಾದೆ ಪ್ರಶ್ನೆ ಸಿನಿಮಾದ ಹಾಡು

ನಾ ನಿನಗೆ ನೀ ನನಗೆ, ಬೇಡ ಬೇರೆ ಏನು; ಕನ್ನಡ ಸಾಂಗ್ ಲಿರಿಕ್ಸ್‌ ಹುಡುಕುತ್ತಿದ್ದರೆ ಇಲ್ಲಿದೆ ನೋಡಿ ಸಾಹಿತ್ಯ- ಮರ್ಯಾದೆ ಪ್ರಶ್ನೆ ಸಿನಿಮಾದ ಹಾಡು

ನಾ ನಿನಗೆ ನೀ ನನಗೆ, ಬೇಡ ಬೇರೆ ಏನು; ಕನ್ನಡ ಸಾಂಗ್ ಲಿರಿಕ್ಸ್‌ ಮತ್ತೆ ಮತ್ತೆ ಕೇಳಬೇಕು ಎನ್ನುವಂತಿದೆ. ಈ ಹಾಡಿನ ಎಲ್ಲ ಸಾಲುಗಳು ಬಹಳ ಅರ್ಥಪೂರ್ಣವಾಗಿದೆ. ಕಣ್ಮುಚ್ಚಿ ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡಿನ ಸಾಲುಗಳು ಇಲ್ಲೇ ಇದೆ ಗಮನಿಸಿ.

ನಾ ನಿನಗೆ ನೀ ನನಗೆ, ಬೇಡ ಬೇರೆ ಏನು; ಕನ್ನಡ ಸಾಂಗ್ ಲಿರಿಕ್ಸ್‌
ನಾ ನಿನಗೆ ನೀ ನನಗೆ, ಬೇಡ ಬೇರೆ ಏನು; ಕನ್ನಡ ಸಾಂಗ್ ಲಿರಿಕ್ಸ್‌

ಕನ್ನಡದ ಸಿನಿಮಾ ‘ಮರ್ಯಾದೆ ಪ್ರಶ್ನೆ’ ಸಿನಿಮಾದಲ್ಲಿ ಬರುವ ಎರಡನೇ ಹಾಡು ‘ನಾ ನಿನಗೆ, ನೀ ನನಗೆ ಬೇಡ ಬೇರೆ ಏನು’ ತುಂಬಾ ವೈರಲ್ ಆಗಿದೆ. ಎಲ್ಲರ ವಾಟ್ಸಾಪ್‌ ಸ್ಟೇಟಸ್‌ಗಳಲ್ಲೂ ಇದೇ ಹಾಡು ಗುನುಗುತ್ತಿದೆ. ಇದರ ಸಾಹಿತ್ಯವನ್ನು ಜನರು ನೆಚ್ಚಿಕೊಂಡಿದ್ದಾರೆ. ಯಾವುದೇ ವಿಡಿಯೋ ಇಲ್ಲದೇ ಸುಮ್ಮನೆ ಕುಳಿತು ಕೇಳಬೇಕು ಎಂದೆನಿಸುವ ಹಾಡು ಇದು. ರಾಗ ಸಂಯೋಜನೆ ಹಾಗೂ ಇದರಲ್ಲಿನ ಸಾಹಿತ್ಯಕ್ಕೆ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಆ ಹಾಡಿನ ಸಾಲುಗಳು ಇಲ್ಲೇ ಇದೆ ನೋಡಿ

ಸಾಹಿತ್ಯ:

ನಾ ನಾನಾಗುವೆ ನಿನ್ನ ಜೊತೆ

ನೀ ನೀನಾಗಲು ಚಂದ ಕತೆ

ಒಂದೆ ಬಾರಿ ನಾ ಸೋತೆ ನಿನಗೆ

ನೂರು ಗೆಲುವ ತಂದೆ ನನಗೆ…

ನಡೆಯಲು ನಾನೀಗ ನೀನೇನೆ ದಾರಿ ದೀಪ

ಬದುಕಲು ಬೇಕಿಲ್ಲ ಬೇರೆ ನೆಪ..…

ಏನಿದೆ ನನ್ನಲ್ಲಿ ನಿನ್ನ ವಿನಹ

ನೀ ಬೇಕು ಸನಿಹ.…

ನಾ ನಿನಗೆ ನೀ ನನಗೆ

ಬೇಡ ಬೇರೆ ಏನು ..

ನಾ ನಿನಗೆ ನೀ ನನಗೆ

ಬೇಡ ಬೇರೆ ಏನು

ನನ್ನ ಲೋಕ ನೀನು

(ಚರಣ)

ನಗು ನಗು ನಿನ್ನ ಈ ನಗು

ನನ್ನೆಲ್ಲಾ ನೋವಿಗೂನು ಮದ್ದಾಗಿದೆ

ದಿನಾ ದಿನ ನಿನ್ನ ನೋಡುತ

ನನ್ನೆಲ್ಲ ಆಗು ಹೋಗು ಮುದ್ದಾಗಿದೆ

ಮಾತು ಮೌನವನ್ನು ಮೀರಿ ನಿನ್ನ

ಜೀವ ಆಡೊ ಭಾಷೆ ಇನ್ನು ಚೆನ್ನ ..

ಕನಸಿಗೆ ನಿನ್ನಿಂದ ಬಂತೀಗ ಒಂದು ರೂಪ

ಉಸಿರಿನ ತುಂಬಾನು ನಿಂದೆ ಜಪ…

ಏನಿದೆ ನನ್ನಲ್ಲಿ ನಿನ್ನ ವಿನಹ

ನೀ ಬೇಕು ಸನಿಹ.

ನಾ ನಿನಗೆ ನೀ ನನಗೆ

ಬೇಡ ಬೇರೆ ಏನು…

ನಾ ನಿನಗೆ ನೀ ನನಗೆ

ಬೇಡ ಬೇರೆ ಏನು

ನನ್ನ ಲೋಕ ನೀನು..

ಸಂಗೀತ: ಅರ್ಜುನ್ ರಾಮು

ಗಾಯಕರು: ವಾಸುಕಿ ವೈಭವ್ ಮತ್ತು ಶ್ರೀಲಕ್ಷ್ಮಿ ಬೆಳ್ಮಣ್ಣು

ಸಾಹಿತ್ಯ: ಪ್ರಮೋದ್ ಮರವಂತೆ

ಗಿಟಾರ್: ಕೆಬಾ ಜೆರೆಮಿಯಾ

ಪಿಟೀಲು: ನಾರಾಯಣ ಶರ್ಮಾ

ಮ್ಯೂಸಿಕ್ ಪ್ರೊಗ್ರಾಮಿಂಗ್ ಮತ್ತು ಸಂಯೋಜನೆ: ಅನೂಪ್ ಆರ್ ನಾಯರ್, ಅರ್ಜುನ್ ರಾಮು

ರೆಕಾರ್ಡಿಂಗ್ ಎಂಜಿನಿಯರ್ಸ್: ಮಂಜುನಾಥ್ ನಾಯ್ಡು, ಹರಿಹರನ್

Whats_app_banner